ರಾಘವೇಂದ್ರ ಅಡಿಗ ಎಚ್ಚೆನ್.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮರ ಸಾರಿದ್ದಾರೆ. ಸತತ ನಿಂದನೆಗಳಿಗೆ ಕಾನೂನಿನ ಮೂಲಕವೇ ಉತ್ತರ ನೀಡಲು ಅವರು ಸಜ್ಜಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಬಂದಿರುವ ಅಸಭ್ಯ ಕಮೆಂಟ್‌ಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಜಯಲಕ್ಷ್ಮಿ, 150ಕ್ಕೂ ಹೆಚ್ಚು ಸ್ಕ್ರೀನ್‌ಶಾಟ್‌ಗಳೊಂದಿಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ

WhatsApp-Image-2025-12-24-at-2.49.56-PM-499x1024

ದೂರು ನೀಡುವ ಮುನ್ನವೇ ಕಿಡಿಗೇಡಿಗಳ ಕಮೆಂಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮಿ, ಅಶ್ಲೀಲ ಸಂದೇಶಗಳನ್ನು ಬಹಿರಂಗಪಡಿಸಿದ್ದಾರೆ. ಮಹಿಳೆಯ ಬಗ್ಗೆ ಇಂತಹ ಭಾಷೆ ಬಳಸುವ ಮಾನಸಿಕ ಅಸ್ವಸ್ಥರಿಗೆ ಪಾಠ ಕಲಿಸುವುದು ಅನಿವಾರ್ಯ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ದರ್ಶನ್ ಪ್ರಕರಣದ ಪರ-ವಿರೋಧ ಚರ್ಚೆಗಳ ನಡುವೆ ವಿಜಯಲಕ್ಷ್ಮಿ ಅವರನ್ನು ಗುರಿಯಾಗಿಸಿ ಟ್ರೋಲ್ ಮಾಡಲಾಗುತ್ತಿತ್ತು. ಅಭಿಮಾನದ ಹೆಸರಿನಲ್ಲಿ ಮಿತಿಮೀರಿ ವರ್ತಿಸಿರುವ ಕಿಡಿಗೇಡಿಗಳ ಐಡಿ ವಿವರಗಳನ್ನು ವಿಜಯಲಕ್ಷ್ಮಿ ಪೊಲೀಸರಿಗೆ ಸಲ್ಲಿಸಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ