ನೀವು ಸಹ ನಿಮ್ಮ ಚರ್ಮನ್ನು ಹೆಲ್ದಿ ಬೆಟರ್ಆಗಿಸಲು ಬಯಸಿದರೆ, ಇಲ್ಲಿನ ಸಲಹೆಗಳನ್ನು ಅಗತ್ಯ ಅನುಸರಿಸಿ……!

ನ್ಯೂಟ್ರಿಶನ್‌ ನಿಂದ ನಮ್ಮ ಚರ್ಮದ ಹೆಲ್ತ್ ಗೆ ಹೆಚ್ಚಿನ ಲಾಭವಿದೆ. ಹೀಗಾಗಿ ವಿಟಮಿನ್ಸ್ ಸ್ಕಿನ್‌ ಬೂಸ್ಟಿಂಗ್‌ ಸಪ್ಲಿಮೆಂಟ್ಸ್ ಈ ನಿಟ್ಟಿನಲ್ಲಿ ಬಲು ಸಹಕಾರಿ. ಏಕೆಂದರೆ ಇವು ಚರ್ಮಕ್ಕೆ ಬಿಲ್ದಿಂಗ್‌ ಬ್ಲಾಕ್ಸ್ ಆಗಿ ಕೆಲಸ ಮಾಡುತ್ತವೆ. ಇವು ಹಾನಿಗೊಳಗಾದ ಚರ್ಮವನ್ನು ಬೇಗನೆ ಸುಧಾರಿಸಲು ಬಹಳ ಸಹಾಯ ಮಾಡುತ್ತವೆ. ಇವುಗಳ ಕುರಿತು ಹೆಚ್ಚಿನ ವಿವರ ತಿಳಿಯೋಣವೇ?

ಈ ಕುರಿತಾಗಿ ತಜ್ಞರ ಅಭಿಪ್ರಾಯ ಎಂದರೆ, ಸ್ಕಿನ್‌ ಬೂಸ್ಟಿಂಗ್‌ ಸಪ್ಲಿಮೆಂಟ್ಸ್ ಇತ್ತೀಚೆಗೆ ಬಲು ಚರ್ಚೆಯಲ್ಲಿವೆ. ಆದರೆ ಇವು ನಿಮ್ಮ ಓವರ್‌ ಆಲ್ ಡಯೆಟ್‌ ನ ದೃಷ್ಟಿಯಿಂದ ತೀವ್ರ ಪರಿಣಾಮಕಾರಿ ಆದುದರಿಂದ, ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಇವು ಬೇರೆಯಾಗಿ ತಾವೇ ಕೆಲಸ ನಿರ್ವಹಿಸಲಾರವು, ನಿಮ್ಮ ಡಯೆಟ್‌ (ಆಹಾರದ ಅಭ್ಯಾಸ) ಇಲ್ಲಿ ಬಲು ಮುಖ್ಯ. ನಿಮ್ಮದು ಬ್ಯಾಲೆನ್ಸ್ಡ್ ಡಯೆಟ್ ಆಗಿದ್ದರೆ, ಲೈಫ್‌ ಸ್ಟೈಲ್ ಹೆಲ್ದಿ ಆಗಿದ್ದರೆ, ಆಗ ಇವು ನಿಮ್ಮ ಚರ್ಮಕ್ಕೆ ಉತ್ತಮ ಪರಿಣಾಮ ತರಬಲ್ಲವು.

ಆದರೆ ನಿಮ್ಮ ಡಯೆಟ್‌ ಬ್ಯಾಲೆನ್ಸ್ಡ್ ಆಗಿರದೆ ಹೇಗೋ ಹಾಗಿದ್ದರೆ (ಜಂಕ್‌ ಫುಡ್‌ ಗಳ ಸೇವನೆ), ಓವರ್‌ ಆಲ್ ಹೆಲ್ತ್ ಉತ್ತಮ ಅಲ್ಲದಿದ್ದರೆ, ಇದರ ಸ್ಪೆಷಲ್ ಎಫೆಕ್ಟ್ ಏನೂ ಇರದು! ಕೆಲವು ಹೆಂಗಸರಿಗೆ ಇದರಿಂದ ಉತ್ತಮ ಪರಿಣಾಮ ಸಿಗಬಹುದು, ಇನ್ನುಳಿದ ಹಲವರಿಗೆ ಇದರಿಂದ ಯಾವ ಪರಿಣಾಮ ಆಗದು. ಹೀಗಾಗಿ ಇದರ ರಿಸಲ್ಟ್ 100% ನಿಮ್ಮ ಡಯೆಟ್‌, ಲೈಫ್‌ ಸೆಲ್‌, ಹೆಲ್ತ್ ಆಧರಿಸಿದೆ ಎಂಬುದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಜೆನಿಟಿಕ್‌ ಕಾಂಪೊಸಿಷನ್‌ ಹಾಗೂ ಎಂಥ ಸಪ್ಲಿಮೆಂಟ್ಸ್ ಆರಿಸಿದ್ದೀರಿ ಎಂಬುದು ಸಹ ಇಲ್ಲಿ ಅಷ್ಟೇ ಮುಖ್ಯ.

ನೀವಾಗಿ ನೀವೇ ಹೋಗಿ, ಯಾರೋ ಹೇಳಿದರೆಂದು ಮನ ಬಯಸಿದ ಇಂಥ ಉತ್ಪನ್ನ ಖರೀದಿಸದಿರಿ. ಏಕೆಂದರೆ ಇನ್ನು ಯಾವಾಗ, ಎಂಥದ್ದನ್ನು, ಎಷ್ಟು ಕಾಲ ಸೇವಿಸಬೇಕು ಎಂಬುದನ್ನು ನಿಮ್ಮ ಸ್ಕಿನ್‌ ಸ್ಪೆಷಲಿಸ್ಟ್ ಮಾತ್ರ ನಿರ್ಧರಿಸಿ ಹೇಳಬಲ್ಲರು.

ಸ್ಕಿನ್‌ ಬೂಸ್ಟಿಂಗ್‌ ಸಪ್ಲಿಮೆಂಟ್ಸ್ ಆಯ್ಲಿ, ಡ್ರೈ, ನಾರ್ಮಲ್ ಇತ್ಯಾದಿ ಎಲ್ಲಾ ಬಗೆಯ ಚರ್ಮಕ್ಕೂ ಸೂಟ್‌ ಆಗುತ್ತದೆ, ಆದರೆ ಅವು ಭಿನ್ನವಾಗಿರುತ್ತವೆ ಎಂಬುದನ್ನು ಗಮನಿಸಿ. ಹೀಗಾಗಿ ನಿಮ್ಮ ಸ್ಕಿನ್‌ ಸ್ಪೆಷಲಿಸ್ಟ್ ಮಾತ್ರ ನಿಮ್ಮನ್ನು ಇದಕ್ಕಾಗಿ ಪ್ರತ್ಯೇಕ ಪರೀಕ್ಷಿಸಿ, ಸಲಹೆ ನೀಡಬಲ್ಲರು. ಅವರು ಸೂಚಿಸಿದ್ದನ್ನು ಮಾತ್ರ ಸೇವಿಸಿ. ಇದರ ಬಗ್ಗೆ ತಜ್ಞರ ಸಲಹೆ ಗಮನಿಸೋಣ :

ವಿಟಮಿನ್‌ C ಇದರಿಂದ ಚರ್ಮಕ್ಕೆ ಬೇಕಾದ ಎಲಾಸ್ಟಿಸಿಟಿ ಸುಲಭ ಲಭ್ಯ. ನಿಮ್ಮ ಚರ್ಮ ನಿಮ್ಮ ವಯಸ್ಸು ತಗ್ಗಿರುವಂತೆ ತೋರಿಸುತ್ತದೆ. ಕೊಲೋಜೆನ್‌ಎಲಾಸ್ಟಿಸಿಟಿ ಎರಡೂ ಪ್ರೋಟೀನ್‌ ಫೈಬರ್ಸ್‌. ಇವು ಸ್ಕಿನ್‌ ಸೆಲ್ಸ್ ನ್ನು ರೀಜನರೇಟ್‌ ಮಾಡುವ ಜೊತೆ ಜೊತೆಗೆ ಚರ್ಮವನ್ನು ಫರ್ಮ್ ಟೈಟ್‌ ಮಾಡುವಲ್ಲಿಯೂ ಮುಂದು. ಏಜಿಂಗ್‌ ಪ್ರೋಸೆಸ್‌ ನ್ನು ಕೊಲೋಜೆನ್ ನಿಧಾನಗೊಳಿಸುತ್ತದೆ. ಚರ್ಮದ ಪಿಗ್ಮೆಂಟೇಶನ್‌ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಒಬ್ಬ ಹೆಂಗಸು ಪ್ರತಿದಿನ 80 ಮಿ.ಗ್ರಾಂ. ವಿಟಮಿನ್‌ C ಸೇವಿಸಬೇಕು.

Skin-2

ವಿಟಮಿನ್‌ ಇದು ಚರ್ಮವನ್ನು ಸೂರ್ಯನ UV ಡ್ಯಾಮೇಜ್‌ ನಿಂದ ರಕ್ಷಿಸುತ್ತದೆ. ಇದು ಚರ್ಮದ ಮಾಯಿಶ್ಚರ್‌ ಲಾಸ್‌ ಆಗದಂತೆ ಕಾಪಾಡುವುದಲ್ಲದೆ, ಅದಕ್ಕೆ ಉತ್ತಮ ಪೌಷ್ಟಿಕತೆ ಒದಗಿಸಿ, ಸಾಫ್ಟ್ ಸಿಲ್ಕಿ ಮಾಡಬಲ್ಲದು. ಇದನ್ನು ಸತತವಾಗಿ ತೆಗೆದುಕೊಳ್ಳಬಾರದು. ಇದನ್ನು ಕೇವಲ 3-4 ವಾರ ಮಾತ್ರವೇ ಸೇವಿಸಬೇಕು. ತಜ್ಞರ ಸಲಹೆಯ ಮೇರೆಗೆ ಮಾತ್ರ ಇದನ್ನು ಸೇವಿಸಿ, ನೀವಾಗಿ ಕೊಳ್ಳಬೇಡಿ. ಅಗತ್ಯಕ್ಕಿಂತ ಹೆಚ್ಚಿನ ವಿಟಮಿನ್‌ಸೇನೆ, ದೇಹಕ್ಕೆ ಮತ್ತೇನಾದರೂ ಸೈಡ್‌ ಎಫೆಕ್ಟ್ಸ್ ತರಬಹುದು. ಒಬ್ಬ ಹೆಂಗಸು ಪ್ರತಿದಿನ 15 ಮಿ.ಗ್ರಾಂ ವಿಟಮಿನ್‌ಮಾತ್ರ ಸೇವಿಸಬೇಕು.

ವಿಟಮಿನ್‌ ಇದು ನಮ್ಮ ಚರ್ಮಕ್ಕೆ ಮಾತ್ರವಲ್ಲದೆ, ಕಂಗಳಿಗೂ ಅಷ್ಟೇ ಮುಖ್ಯ. ಇದರಲ್ಲಿ ಹಲವು ಬಗೆಗಳಿದ್ದು ಅವುಗಳಲ್ಲಿ ಬೀಟಾ ಕೆರೋಟಿನ್‌, ರೆಟಿನಾಲ್ಸ್ ಇತ್ಯಾದಿ ಚರ್ಮದ ಬ್ಯಾರಿಯರ್‌ ಫಂಕ್ಷನ್‌ ಸುಧಾರಿಸಿ, ಚರ್ಮ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ. ಸ್ಕಿನ್‌ ಸೆಲ್ಸ್ ಟರ್ನ್‌ ಓವರ್‌ ನ್ನು ಪ್ರಮೋಟ್‌ ಮಾಡಲು ರೆಟಿನಾಲ್ಸ್ ಬೇಕು, ಜೊತೆಗೆ ಇದು ಚರ್ಮದ ಹೈಪರ್‌ ಪಿಗ್ಮೆಂಟೇಶನ್‌, ಸನ್‌ ಸ್ಪಾಟ್ಸ್, ಏಜ್‌ ಸ್ಪಾಟ್ಸ್ ಇತ್ಯಾದಿಗಳನ್ನು ನಿವಾರಿಸಿ, ಸ್ಕಿನ್‌ ಟೋನ್‌ ಗೆ ಹೊಸ ಕಾಂತಿ ತುಂಬುತ್ತದೆ. ಬೀಟಾ ಕೆರೋಟಿನ್‌, ವಿಟಮಿನ್‌ನಲ್ಲಿ ರಿಚ್‌ ಆಗಿರುವುದರಿಂದ, ಇದು ಸ್ಕಿನ್‌ ಸೆಲ್ಸ್ ನ್ನು ರೀಜನರೇಟ್‌ ಮಾಡಿ, ಕೊಲೋಜೆನ್‌ ನಿರ್ಮಾಣದಲ್ಲಿ ಸಹಕರಿಸುತ್ತದೆ. ಇದರಿಂದಾಗಿ ವೃದ್ಧಾಪ್ಯ ಮುಂದೂಡಲ್ಪಟ್ಟು, ಆ್ಯಕ್ನೆ ಮೊಡವೆಗಳ ರಗಳೆ ತಪ್ಪುತ್ತದೆ. ಜೊತೆಗೆ ಸ್ಕಿನ್‌ ಟೆಕ್ಸ್ ಚರ ಸ್ಮೂತ್‌ ಆಗಿ, ನೀವು ಇನ್ನಷ್ಟು ಯಂಗ್‌ ಆಗಿ ಮಿಂಚಬಹುದು! ಒಬ್ಬ ಹೆಂಗಸು ಪ್ರತಿದಿನ 800 ಮೈಕ್ರೋಗ್ರಾಂ ವಿಟಮಿನ್‌ಮಾತ್ರ ಸೇವಿಸಬೇಕು.

ಸತು (ಝಿಂಕ್‌) ಸ್ಕಿನ್‌ ಬೂಸ್ಟಿಂಗ್‌ ಸಪ್ಲಿಮೆಂಟ್ಸ್ ಗಳಲ್ಲಿ ಇದು ಬಲು ಮುಖ್ಯ. ಇದು ಚರ್ಮಕ್ಕೆ ಹೆಚ್ಚಿನ ಕಾಂತಿ ತುಂಬಿಸಿ, ಇಮ್ಯುನಿಟಿ ಹೆಚ್ಚಿಸಲು ನೆರವಾಗುತ್ತದೆ. ಇದಕ್ಕೆ ಬೇಗ ಬೇಗ ಗಾಯ ವಾಸಿ ಮಾಡುವ ಗುಣವಿದೆ. ಸ್ಕಿನ್‌ ಸೆಲ್ಸ್ ಮತ್ತೆ ಹೆಲ್ದಿ ಆಗಲು ಇದು ಗುಣಕಾರಿ. ಇದರ ಆ್ಯಂಟಿ ಇನ್‌ ಫ್ಲಮೇಟರಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು, ಚರ್ಮವನ್ನು ಕಾಡು ಆ್ಯಕ್ನೆ, ಮೊಡವೆ, ಎಗ್ಸಿಮಾ ಇತ್ಯಾದಿಗಳಿಂದ ಪಾರು ಮಾಡಿ, ನಿಮ್ಮ ಚರ್ಮವನ್ನು ಸೂಪರ್‌ ಹೈಡ್ರೇಟೆಡ್‌ ಆಗಿರಿಸಲು ಸಮರ್ಥವಾಗಿದೆ. ಆದರೆ ತಜ್ಞರ ಸಲಹೆ ಇಲ್ಲದೆ ಇದರ ಸೇವನೆ ಆರಂಭಿಸಬೇಡಿ. ಒಬ್ಬ ಹೆಂಗಸಿಗೆ ಪ್ರತಿದಿನ 10 ಮಿ.ಗ್ರಾಂ.ನಷ್ಟು ಝಿಂಕ್‌ ಸಾಕಾಗುತ್ತದೆ.

ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಇದು ನಿಮ್ಮ ಚರ್ಮಕ್ಕೆ ಆಂತರಿಕ ಹಾಗೂ ಬಾಹ್ಯ ರೂಪದಲ್ಲಿ ಪೋಷಣೆ ಒದಗಿಸಬಲ್ಲದು. ಜೊತೆಗೆ ಇದು ಚರ್ಮದಲ್ಲಿನ ತೈಲಾಂಶದ ಕೊರತೆಯನ್ನು ನೀಗಿಸಬಲ್ಲದು. ಚರ್ಮದ ಹಲವು ಸಮಸ್ಯೆಗಳಾದ ಸೊರಾಸಿಸ್‌, ಎಟೋಸಿಕ್‌ಡರ್ಮಟೈಟಿಸ್‌ ಇತ್ಯಾದಿ ಕಾಡಿದಾಗ, ತೈಲಾಂಶ ಸಹಜವಾಗಿ ಕುಗ್ಗುತ್ತದೆ. ಆಗ ಇದರ ಬಳಕೆಯಿಂದ ಬಹಳ ಹೆಚ್ಚಿನ ಲಾಭವಿದೆ. ಇನ್‌ ಫ್ಲಮೇಶನ್‌ ಕಡಿಮೆ ಮಾಡಿಸಿ, ಹೆಲ್ದಿ ಕಾಂಪ್ಲೆಕ್ಷನ್‌ ಒದಗಿಸುತ್ತದೆ. ಫ್ಲಾಕ್‌ ಸೀಡ್ಸ್ ಇದರ ಉನ್ನತ ಮೂಲವಾಗಿದ್ದು, ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸಲಾಡ್‌, ಚಟ್ನಿಗಳಿಗೆ ನೇರ ಬಳಸಿಕೊಳ್ಳಿ. ಒಬ್ಬ ಹೆಂಗಸಿಗೆ ಪ್ರತಿದಿನ 250-500 ಮಿ.ಗ್ರಾಂ.ನಷ್ಟು ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಬೇಕಾಗುತ್ತದೆ.

ಜಿ. ಸುಪ್ರೀತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ