ಮುಖದಲ್ಲಿನ ಕಲೆ, ಸುಕ್ಕು, ನಿರಿಗೆಗಳಿಂದ ಮುಕ್ತಿ ಪಡೆಯಲು ಇಲ್ಲಿವೆ ಸುಲಭ ಸಾಧ್ಯ ಮನೆ ಮದ್ದು. ಏನದು……?

ರಿಂಕಲ್ಸ್ ನಿಂದ ಮುಕ್ತಿ ಪಡೆಯಲು ಕೇವಲ ಮೆಡಿಕಲ್ ಟ್ರೀಟ್‌ ಮೆಂಟ್‌ ಒಂದೇ ದಾರಿ ಎಂದು ಭಾವಿಸದಿರಿ. ಇದಕ್ಕಾಗಿ ನಮ್ಮ ಅಜ್ಜಿ ಕಾಲದ ಮನೆ ಮದ್ದು ಬಹಳ ಸರಳವಾಗಿದೆ. ಆ ಉಪಾಯಗಳ ಕುರಿತು ವಿವರವಾಗಿ ತಿಳಿಯೋಣವೇ…..?

ಕೊಬ್ಬರಿ ಎಣ್ಣೆ ನಿಮ್ಮ ಕಂಗಳ ಕೆಳಗೆ ಅಥವಾ ಮುಖ, ಮೈನಲ್ಲಿ ಎಲ್ಲೇ ಸುಕ್ಕುಗಳಿರಲಿ, ಆ ಭಾಗಕ್ಕೆ ರಾತ್ರಿ ಮಲಗುವ ಮುನ್ನ ಪ್ರತಿದಿನ ಕೊಬ್ಬರಿ ಎಣ್ಣೆ (ಚಳಿಗೆ ಅದು ಗಟ್ಟಿ ಆಗಿದ್ದರೆ ಇನ್ನೂ ಉತ್ತಮ!) ಹಚ್ಚಲು ಮರೆಯಬೇಡಿ. ಇದರಿಂದ ನಿಮಗೆ ಸಹಜ ಮೈಕಾಂತಿ ಕೂಡುತ್ತದೆ. ಇದು ಕಲೆ, ನಿರಿಗೆ, ಸುಕ್ಕುಗಳ ನಿವಾರಣೆಗೆ ಎತ್ತಿದ ಕೈ. ಏಕೆಂದರೆ ಇದರಲ್ಲಿ ನಮ್ಮ ಚರ್ಮಕ್ಕೆ ಬೇಕಾದ ನೈಸರ್ಗಿಕ, ಅಮೂಲ್ಯ ಮಾಯಿಶ್ಚರೈಸರ್‌ ಹಾಗೂ ಹೈಡ್ರೇಟಿಂಗ್‌ ಗುಣಗಳು ಧಾರಾಳ ಅಡಗಿವೆ.

ವಿಟಮಿನ್‌ ಮುಖದಿಂದ ರಿಂಕಲ್ಸ್ ತೊಲಗಿಸಲು ವಿಟಮಿನ್‌ಬೇಕೇಬೇಕು. ಇದರ ಕ್ಯಾಪ್ಸೂಲ್ ‌ನಲ್ಲಿನ ಅಂಶಕ್ಕೆ ತುಸು ಹಾಲಿನ ಕೆನೆ ಬೆರೆಸಿ, ಆಯಾ ಭಾಗಕ್ಕೆ ನೀಟಾಗಿ ಹಚ್ಚಿಕೊಳ್ಳಿ. ಲೈಟ್‌ ಆಗಿ ಮಸಾಜ್‌ ಮಾಡಿ. ಇದು ಚರ್ಮವನ್ನು ಸಹಜವಾಗಿ ಮಾಯಿಶ್ಚರೈಸ್ ಗೊಳಿಸಿ, ಅದನ್ನು ಹೈಡ್ರೇಟ್‌ ಮಾಡಲು ಅತ್ಯಗತ್ಯವಾದ ಆ್ಯಂಟಿ ಆಕ್ಸಿಡೆಂಟ್ಸ್ ಅಂಶಗಳನ್ನು ಹೇರಳವಾಗಿ ಹೊಂದಿದೆ. ಇದು ಚರ್ಮಕ್ಕೆ ಆ್ಯಂಟಿ ಇನ್‌ ಫ್ಲಮೇಟರಿ ಫೋಟೋಪ್ರೊಟೆಕ್ಟಿವ್ ‌ಎಫೆಕ್ಟ್ ಸಹ ನೀಡುತ್ತದೆ. ಇದು ಚರ್ಮದ ಶಕ್ತಿಯನ್ನು ರಿನ್ಯೂ ಮಾಡಿ ರಿಂಕಲ್ಸ್ ನಿಂದ ಮುಕ್ತಿ ನೀಡುತ್ತದೆ.

ಎಗ್ವೈಟ್

ಮೊಟ್ಟೆಯ ಬಿಳಿ ಭಾಗದಿಂದಲೂ ನಿರಿಗೆ ಸುಕ್ಕುಗಳಿಂದ ಮುಕ್ತಿ ಪಡೆಯಬಹುದಾಗಿದೆ. ಮೊಟ್ಟೆ ಒಡೆದು, ಅದರ ಬಿಳಿ ಭಾಗವನ್ನು ಬೇರೆ ಮಾಡಿ ಚೆನ್ನಾಗಿ ಗೊಟಾಯಿಸಿ. ನಂತರ ಅದನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಇದು ಚರ್ಮದಲ್ಲಿ ಬಿಗಿತ ತಂದು, ಸದೃಢಗೊಳಿಸುತ್ತದೆ. ಇದು ಸಣ್ಣ ಪುಟ್ಟ ಥಿನ್‌ ಲೈನ್ಸ್ ನ್ನು ಸಹ ತಗ್ಗಿಸುತ್ತದೆ. ಇದು ರೋಮರಂಧ್ರ (ಪೋರ್ಸ್‌)ಗಳನ್ನು ತೆರೆಸಿ, ಚರ್ಮದ ಹೆಚ್ಚುವರಿ ಸೀಬಮ್ ನ್ನು ಹೀರಿಕೊಳ್ಳುತ್ತದೆ.

ಆ್ಯಲೋವೇರಾ (ಲೋಳೆಸರ)

ಮೊಟ್ಟೆ ಬಿಳಿ ಭಾಗಕ್ಕೆ ತಾಜಾ ಆ್ಯಲೋವೇರಾ ಜೆಲ್ ‌ಸೇರಿಸಿ ಪೇಸ್ಟ್ ಮಾಡಿ, ನಿಧಾನವಾಗಿ ಇದರಿಂದ ಮುಖ ಪೂರ್ತಿ ಮಸಾಜ್ ಮಾಡಿ. ಇದು ವಿಟಮಿನ್‌ಗೆ ಉತ್ತಮ ರಿಚ್‌ ಸೋರ್ಸ್‌ ಆಗಿದೆ. ಇದು ಚರ್ಮಕ್ಕೆ ಬೂಸ್ಟರ್‌ ನ ಕೆಲಸ ಮಾಡುತ್ತದೆ. ಮೊಟ್ಟೆ ಜೊತೆ ಇದು ಇನ್ನೂ ಪರಿಣಾಮಕಾರಿ! ಇದು ತನ್ನ ಆ್ಯಂಟಿ ಆಕ್ಸಿಡೆಂಟ್ಸ್ ಆ್ಯಂಟಿ ಇನ್‌ ಫ್ಲಮೇಟರಿ ಘಟಕಗಳಿಗಳಿಂದಾಗಿ ಡ್ರೈ ಸ್ಕಿನ್‌ ನ್ನು ಎಷ್ಟೋ ಸ್ಮೂಥ್‌ ಆಗಿಸುತ್ತದೆ.

ಗ್ರೀನ್ಟೀ

ಮುಖದ ರಿಂಕಲ್ಸ್ ತೊಲಗಿಸಲು, ನೀವು ಗ್ರೀನ್‌ ಟೀ ಜೊತೆ ಜೇನುತುಪ್ಪ ಬೆರೆಸಿ ಬಳಸಿಕೊಳ್ಳಿ. ಗ್ರೀನ್‌ ಟೀಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ತುಂಬಿದ್ದು, ನಮ್ಮ ದೇಹವನ್ನು ನೀಟಾಗಿ ಶುಭ್ರಗೊಳಿಸಿ, ರಿಂಕಲ್ಸ್ ತೊಲಗಿಸಿ, ಚರ್ಮದ ಸಡಿಲತೆಯನ್ನು ಬಿಗಿಗೊಳಿಸುತ್ತದೆ.

ಜೇನುತುಪ್ಪ

ನಿಮ್ಮ ಮುಖದ ಎ್ಲಾ ಕಡೆ, ಕಂಗಳ ಕೆಳಗೆ, ರೆಪ್ಪೆಗಳ ಮೇಲೆ ಜೇನು ಸವರಿ, 2 ನಿಮಿಷ ನಿಧಾನವಾಗಿ ಮಸಾಜ್‌ ಮಾಡಿ. ಇದು ಚರ್ಮದ  Ph ಲೆವೆಲ್ ಬ್ಯಾಲೆನ್ಸ್ ಮಾಡುತ್ತದೆ. ಜೊತೆಗೆ ಇದು ರಿಂಕಲ್ಸ್ ಫೈನಲ್ ಲೈನ್ಸ್ ನ್ನು ಕಡಿಮೆ ಮಾಡುತ್ತದೆ. ಇದರ ಕಂಡೀಶನಿಂಗ್‌ ಗುಣ ಶ್ಲಾಘನೀಯ!

ಮೊಸರಿನ ಮಾಸ್ಕ್

ಹಿಪ್ಪೆ ಎಣ್ಣೆ (ಆಲಿವ್ ‌ಎಣ್ಣೆ) ಹಾಗೂ ಮೊಸರು ಬೆರೆಸಿ ಗೊಟಾಯಿಸಿ. ಇದನ್ನು ಮುಖದಲ್ಲಿನ ರಿಂಕಲ್ಸ್ ಭಾಗಕ್ಕೆ ಹಚ್ಚಿಕೊಳ್ಳಿ. ಮೊಸರಿನಲ್ಲಿನ ಲ್ಯಾಕ್ಟಿಕ್‌ ಆ್ಯಸಿಡ್‌ ಹಾಗೂ ಇತರ ಪ್ರಾಕೃತಿಕ ಕಿಣ್ವಗಳು, ಮುಖದ ಪೋರ್ಸ್‌ ನ್ನು ಕ್ಲೀನ್‌ಕ್ಲಿಯರ್‌ ಮಾಡುತ್ತವೆ. ಇದು ಅವನ್ನು ಶ್ರಿಂಕ್‌ ಮಾಡುತ್ತದೆ. ಜೊತೆಗೆ ಇದು ಚರ್ಮವನ್ನು ಟೈಟ್‌ ಮಾಡುತ್ತದೆ. ಥಿನ್‌ ಲೈನ್ಸ್ ರಿಂಕಲ್ಸ್ ನ್ನು ತೊಲಗಿಸುತ್ತದೆ. ಇದರಿಂದ ಮುಖದಲ್ಲಿನ ಕಲೆಗಳು ಮಾಯವಾಗುತ್ತವೆ, ಮುಖ ಎಷ್ಟೋ ಸಾಶ್ಟ್  ಶೈನಿ ಆಗುತ್ತದೆ!

ಹನೀ ಜೊತೆಗೆ ದಾಲ್ಚಿನ್ನಿ

ಚಕ್ಕೆ (ದಾಲ್ಚಿನ್ನಿ) ಯನ್ನು ತುಪ್ಪದಲ್ಲಿ ಹುರಿದು ನುಣುಪಾಗಿಸಿ, ಜೇನುತುಪ್ಪದೊಂದಿಗೆ ತೇಯ್ದುಕೊಳ್ಳಿ. ಇದರ ಪೇಸ್ಟ್ ಒಂದು ಉತ್ತಮ ಆ್ಯಂಟಿ ಏಜಿಂಗ್‌ ಮಾಸ್ಕ್ ಆಗಿದೆ. ಇದರ ಫ್ರೀ ರಾಡಿಕಲ್ಸ್ ಸ್ಕ್ಯಾಲೆಂಜಿಂಗ್‌ ಜೇನಿನ ಜೊತೆ ಮತ್ತಷ್ಟು ಸಕ್ರಿಯವಾಗುತ್ತದೆ. ಈ ಎರಡರಲ್ಲೂ ಆ್ಯಂಟಿ ಇನ್‌ ಫ್ಲಮೇಟರಿ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಧಾರಾಳವಾಗಿದ್ದು, ಹೆಚ್ಚಿನ ಲಾಭ ತರುತ್ತದೆ. ಇದನ್ನು ಬಳಸುವ ಮೊದಲು, ಅಗತ್ಯವಾಗಿ ಪ್ಯಾಚ್‌ ಟೆಸ್ಟ್ ಮಾಡಿಕೊಳ್ಳಿ. ಯಾರಿಗೆ ಚಕ್ಕೆಯಿಂದ ಅಲರ್ಜಿ ಇದೆಯೋ, ಅವರು ಇದನ್ನು ಬಳಸುವುದು ಬೇಡ.

ಗ್ಯಾರಂಟಿ ಇಲ್ಲ

ಮಾರುಕಟ್ಟೆಯಲ್ಲಿ ಲಭ್ಯವಿರುವ ಮನೆ ಮದ್ದಿನಂಥದ್ದೇ ಹರ್ಬಲ್ಸ್ ಬಳಸಿದ್ದೇವೆ ಎನ್ನುವ ಪ್ರಾಡಕ್ಟ್ ತಂದು ಏಮಾರದಿರಿ. ಇದರಲ್ಲಿ ಕೇವಲ ಅರ್ಧ ಸತ್ಯ ಮಾತ್ರ ಇರುತ್ತದೆ. ಮನೆ ಮದ್ದು ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ ಎಂಬುದು ನಿಜ, ಸತತ ಪ್ರಯತ್ನ ಪಡದಿದ್ದರೆ ಗ್ಯಾರಂಟಿ ಇಲ್ಲ. ಜನ ಇದನ್ನು ಮೆಚ್ಚಲು ಇದರ ಅಗ್ಗದ ಬೆಲೆ ಮುಖ್ಯ ಕಾರಣ. ಹೀಗಾಗಿ ರೆಡಿಮೇಡ್‌ ಹರ್ಬಲ್ಸ್ ಎಲ್ಲವೂ ಮನೆ ಮದ್ದಿನಂತೆಯೇ ಎಂದು ಭಾವಿಸದೆ, ಅಜ್ಜಿ ಕಾಲದ ಈ  ಉತ್ಪನ್ನಗಳನ್ನೇ ಬಳಸಿರಿ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ