ಮುಖ ಮಂಡಲ ಚಂದ್ರಮನಂತೆ ಬೆಳಗಬೇಕೇ? ಇಲ್ಲಿವೆ ನೋಡಿ ಸೂಕ್ತ ಸಲಹೆಗಳು…….
ನಿಮ್ಮ ಮುಖದ ಯಾ ದೇಹದ ಯಾವುದೋ ಒಂದು ಭಾಗದ ಜೀವಕೋಶಗಳು ತಂತಾನೇ ಸಾಯತೊಡಗಿದಾಗ, ಅವಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗದಿದ್ದಾಗ, ಆ ಭಾಗದಲ್ಲಿ ಪಿಗ್ಮೆಂಟೇಶನ್ ಕಾಟ ಶುರುವಾಗುತ್ತದೆ. ಅಂದ್ರೆ, ಚರ್ಮ ತಂತಾನೇ ಕಪ್ಪಾಗುತ್ತದೆ. ಎಷ್ಟೋ ಸಲ ಹೆಂಗಸರಿಗೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದಾಗಿಯೂ ಹೀಗಾಗಬಹುದು. ಕ್ಯಾನ್ಸರ್ ಗೆ ಪಡೆಯುವ ಕೀಮೋಥೆರಪಿ ಚಿಕಿತ್ಸೆಯಿಂದಲೂ ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚುತ್ತದೆ. ತಜ್ಞರು ಈ ಕುರಿತು ವಿವರಿಸುತ್ತಾ, “ನಮ್ಮ ದೇಹದಲ್ಲಿ ಮೆಲನಿನ್ ಅಂಶ ಹೆಚ್ಚಾದಂತೆ ಈ ಪಿಗ್ಮೆಂಟೇಶನ್ ಉಂಟಾಗುತ್ತದೆ. ಯಾವುದರಿಂದ ನಮ್ಮ ಚರ್ಮ, ಕೂದಲು, ಕಂಗಳಿಗೆ ಬಣ್ಣ ಬರುತ್ತದೋ ಅಂಥ ವರ್ಣದ್ರವ್ಯಗಳೇ ಮೆಲನಿನ್. ಇದು ಸೂರ್ಯ ರಶ್ಮಿಯಿಂದ ಚರ್ಮಕ್ಕೆ ಆಗಬಹುದಾದ ಹಾನಿಯನ್ನು ನೈಸರ್ಗಿಕವಾಗಿಯೇ ತಪ್ಪಿಸುತ್ತವೆ. ಮೇಕಪ್ ನಿಂದಾಗಿ ಫೇಸ್ ಪಿಗ್ಮೆಂಟೇಶನ್ ನ್ನು ಅಡಗಿಸಬಹುದು, ಹಾಗೇಂತ ದಿನದ 24 ಗಂಟೆಯೂ ಮೇಕಪ್ ಮಾಡಿಕೊಳ್ಳಲು ಸಾಧ್ಯವೇ? ಹೀಗಾಗಿ ಈ ಪಿಗ್ಮೆಂಟೇಶನ್ ಸಮಸ್ಯೆಯನ್ನು ಎಚ್ಚರಿಕೆಯಿಂದ ನಿವಾರಿಸಿಕೊಳ್ಳುವುದೇ ವಿವೇಕ.”
ಪಿಗ್ಮೆಂಟೇಶನ್ ಆಗಿದೆ ಎಂದ ಮಾತ್ರಕ್ಕೆ ಹೆದರಬೇಕಿಲ್ಲ. ಆದರೆ ಇದರಿಂದ ನಿಮ್ಮ ಮುಖದ ಸೌಂದರ್ಯ ಕುಂದಬಹುದು. ಇರುವುದಕ್ಕಿಂತ ನಿಮಗೆ ವಯಸ್ಸು ಜಾಸ್ತಿ ಆಗಿರುವಂತೆ ಕಾಣುತ್ತೀರಿ. ಚರ್ಮ ತನ್ನ ಕಾಂತಿ, ತಾರುಣ್ಯ ಕಳೆದುಕೊಳ್ಳುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕುಂದಬಾರದು ಎಂದು ನೀವು ಬಯಸಿದರೆ, ಇಲ್ಲಿನ ಸಲಹೆಗಳನ್ನು ಅಗತ್ಯ ಅನುಸರಿಸಿ :
ಸನ್ ಸ್ಕ್ರೀನ್ ಬಳಕೆ ಬಿಡಬೇಡಿ
ಪಿಗ್ಮೆಂಟೇಶನ್ ನಿಂದ ಮುಕ್ತಿ ಪಡೆಯಲು ನೀವು ಬಿಸಿಲಿನಲ್ಲಿ ಹೊರಗೆ ಹೋದರೆ, 30 SPF ನ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಲು ಮರೆಯಬೇಡಿ. ಇದು ಸೂರ್ಯನ UV ಕಿರಣಗಳಿಂದ ನಿಮ್ಮ ಚರ್ಮಕ್ಕೆ ಆಗಬಹುದಾದ ಹಾನಿ ತಪ್ಪಿಸುತ್ತದೆ. ಇದನ್ನು ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ಚರ್ಮ ಡ್ರೈ ಆಗುವುದಿಲ್ಲ, ಇದರಿಂದ ನಿಮ್ಮ ಮುಖ ಪಿಗ್ಮೆಂಟೇಶನ್ನಿನ ಸಮಸ್ಯೆಯಿಂದ ದೂರವಾಗುತ್ತದೆ. ಸೂರ್ಯನ UV ಕಿರಣಗಳಿಂದ ತಪ್ಪಿಸಿಕೊಳ್ಳಲು ನೀವು ಮಾಮಾ ಅರ್ಥ್ ಕಂಪನಿಯ ಅಲ್ಟ್ರಾ ವೈಸೆಟ್ ಇಂಡಿಯನ್ ಸನ್ ಸ್ಕ್ರೀನ್ ನ್ನು ಖರೀದಿಸಿ ಬಳಸಿಕೊಳ್ಳಿ. ಇದರ ಸಾಮರ್ಥ್ಯ SPF 50 ಆಗಿದೆ. ಇದು ನಮ್ಮ ಭಾರತೀಯ ಸ್ಕಿನ್ ಟೋನಿಗೆ ಉತ್ತಮ ಸನ್ ಸ್ಕ್ರೀನ್ ಆಗಿದೆ.
ವಿಟಮಿನ್ C ಸೀರಮ್
ಪಿಗ್ಮೆಂಟೇಶನ್ ನಿಂದ ಪಾರಾಗಲು ನೀವು ವಿಟಮಿನ್ C ಸೀರಮ್ ಬಳಸಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ರಕ್ಷಿಸಿ, ಟೈರೋಸಿನೆಸ್ ಪ್ರಕ್ರಿಯೆಗೆ ಆಗಬಹುದಾದ ಹಾನಿ ತಪ್ಪಿಸುತ್ತದೆ. ಟೈರೋಸಿನೆಸ್ ನ ಮುಖ್ಯ ಕೆಲಸವೆಂದರೆ ಮೆಲನಿನ್ ವರ್ಣದ್ರವ್ಯದ ತಯಾರಿಕೆ. ನೀವು ಪ್ರತಿದಿನ ವಿಟಮಿನ್ C ಸೀರಮ್ ಬಳಸಿದ್ದಾದರೆ, ಹೈಪರ್ ಪಿಗ್ಮೆಂಟೇಶನ್ ನ ಸಮಸ್ಯೆ ನಿಧಾನವಾಗಿ ದೂರಾಗುತ್ತದೆ.
ಲೇಸರ್ ಥೆರಪಿ ಆಪ್ಶನ್
ನೀವು ಇಷ್ಟೆಲ್ಲ ಕ್ರೀಂ, ಸನ್ ಸ್ಕ್ರೀನ್ ಲೋಶನ್, ಸೀರಮ್ ಗಳನ್ನು ಬಳಸಿಯೂ ಲಾಭವಿಲ್ಲದೆ ಹೋದರೆ, ಆಗ ನೀವು ಲೇಸರ್ ಥೆರಪಿಗೆ ಮೊರೆಹೋಗಬಹುದು. ಇದರಲ್ಲಿನ ಕೆಲವು ಸಿಟ್ಟಿಂಗ್ಸ್ ಆದ ನಂತರ, ನಿಮಗೆ ಪಿಗ್ಮೆಂಟೇಶನ್ ನಿಂದ ಮುಕ್ತಿ ಸಿಗುತ್ತದೆ.
ಇವು ಸ್ಕಿನ್ ಪಿಗ್ಮೆಂಟೇಶನ್ ಹಾಗೂ ಡಾರ್ಕ್ ಸರ್ಕಲ್ಸ್ ನಿಂದ ಮುಕ್ತಿ ಪಡೆಯಲು ಹೆಚ್ಚು ನೆರವಾಗುತ್ತವೆ. ಇದರಿಂದ ಚರ್ಮದ ಜೀವಕೋಶಗಳು ಆರೋಗ್ಯಕರವಾಗಿ ಬೆಳೆಯುತ್ತವೆ.
ಕೋಝಿಕ್ ಆ್ಯಸಿಡ್ ಪ್ರಾಡಕ್ಟ್ಸ್
ಯಾವ ಕಾಸ್ಮೆಟಿಕ್ಸ್ ನಲ್ಲಿ ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್ ಇರುತ್ತದೋ ಅಂಥವನ್ನೇ ಆರಿಸಿ. ಇದು ಪಿಗ್ಮೆಂಟೇಶನ್ ದೂರ ಮಾಡಲು ಸಹಾಯಕ. ಯಾವುದರಲ್ಲಿ ವಿಟಮಿನ್ C, ಲಿಕೋರಿಸ್ ರೂಟ್, ಕೋಝಿಕ್ ಆ್ಯಸಿಡ್ ಧಾರಾಳ ಇರುತ್ತದೋ ಅಂಥ ಕಾಸ್ಮೆಟಿಕ್ಸ್ ನ್ನೇ ಕೊಳ್ಳಿರಿ. ಇದು ಟೈರೋಸಿನೆಸ್ ಪ್ರಕ್ರಿಯೆಗೆ ಆಗುವ ಹಾನಿ ತಪ್ಪಿಸಿ, ಪಿಗ್ಮೆಂಟೇಶನ್ ನಿವಾರಿಸಲು ಸಹಕಾರಿ.
ಜೇನುನಿಂಬೆ ಮಿಶ್ರಣ
ಈ ಮಿಶ್ರಣದಿಂದ ಹೆಚ್ಚಿನ ಲಾಭವಿದೆ. ಇಲ್ಲಿ ನಿಂಬೆರಸ ಮುಖದ ಕಲೆ ಓಡಿಸಲು ನೆರವಾದರೆ, ಜೇನುತುಪ್ಪ ಚರ್ಮದ ಬಿಗಿತಕ್ಕೆ ಕಾರಣವಾಗಿ, ಸಹಜ ಪೋಷಣೆ ಒದಗಿಸತ್ತದೆ. ಪಿಗ್ಮೆಂಟೇಶನ್ ದೂರ ಮಾಡಲು ಈ ಮಿಶ್ರಣವನ್ನು ಮುಖದ ಆ ಭಾಗಗಳಿಗೆ ಹಚ್ಚಿಕೊಂಡು 15 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಹಾಲು ಮೊಸರು ಬೇಳೆ ಮಿಶ್ರಣ
ಅಲ್ಪ ಪ್ರಮಾಣದಲ್ಲಿ ಮಸೂರ್ ದಾಲ್, ಕಾಯಿಸದ ಹಸಿ ಹಾಲು, ಮೊಸರು ಬೆರೆಸಿ ಆ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕೆಂಪು ಮಸೂರ್ ದಾಲ್‌ಡೆಡ್ ಸ್ಕಿನ್ ಸೆಲ್ಸ್ ತೊಲಗಿಸಿದರೆ, ಉಳಿದೆರಡು ನ್ಯಾಚುರಲ್ ಕ್ಲೆನ್ಸಿಂಗ್ ಕೆಲಸ ಮಾಡುತ್ತವೆ. ಈ ಮಿಶ್ರಣ ಉತ್ತಮ ಬ್ಲೀಚಿಂಗ್ ಏಜೆಂಟ್ ನ ಕಾರ್ಯ ನಿಭಾಯಿಸುತ್ತದೆ. ಈ ಕಾರಣದಿಂದಾಗಿ ಇದರ ಬಳಕೆ ಪಿಗ್ಮೆಂಟೇಶನ್ ನಿವಾರಣೆಗೆ ಸಹಾಯಕ.
ಓಟ್ಸ್–ಟೊಮೇಟೊ ಫೇಸ್ ಪ್ಯಾಕ್
ಟೊಮೇಟೊದಲ್ಲಿ ಆ್ಯಂಟಿ ಏಜಿಂಗ್ ಗುಣಗಳಿವೆ. ಇದು ಪಿಗ್ಮೆಂಟೇಶನ್, ಫೈನ್ ಲೈನ್ಸ್, ರಿಂಕಲ್ಸ್, ಡಾರ್ಕ್ ಸರ್ಕಲ್ಸ್ ಇತ್ಯಾದಿಗಳ ನಿವಾರಣೆಗೆ ಸಹಕರಿಸಿ, ವಯಸ್ಸು ಹೆಚ್ಚಾಗಿಲ್ಲ ಎಂದು ತೋರಿಸುತ್ತದೆ. ಟೊಮೇಟೊ ಒಂದು ಉತ್ತಮ ಸ್ಕಿನ್ ಲೈಟ್ನರ್ ಆಗಿಯೂ ಕೆಲಸ ಮಾಡುತ್ತದೆ. ಇದರ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ, ಮುಖ ಹೆಚ್ಚಿನ ಕಾಂತಿ ಗಳಿಸುತ್ತದೆ. ಹಾಗೆಯೇ ಮೊಸರಿನಲ್ಲಿನ ಲ್ಯಾಯಾಕ್ಟಿಕ್ ಆ್ಯಸಿಡ್ ಸ್ಕಿನ್ನಿನ ಪೋರ್ಸ್ ನ್ನು ಟೈಟ್ ಮಾಡಲು ಸಹಕಾರಿ. ಮೊಸರಿನಿಂದ ಗುರುತು ಕಲೆ ಸಹ ನಿವಾರಣೆಗೊಳ್ಳುತ್ತದೆ. ಎಕ್ಸ್ ಫಾಲಿಯೇಟರ್ ರೂಪದಲ್ಲಿ ಓಟ್ಸ್ ಕೆಲಸ ಮಾಡುತ್ತದೆ, ಡೆಡ್ ಸ್ಕಿನ್ ಸೆಲ್ಸ್ ಓಡಿಸಿ, ಚರ್ಮದ ಹೆಲ್ದಿ ಪದರವನ್ನು ಮೇಲೆ ತರುತ್ತದೆ.
ಇಷ್ಟು ಮಾತ್ರವಲ್ಲದೆ ನೀವು ಮನೆಮಟ್ಟಿಗೆ ಇನ್ನೊಂದಿಷ್ಟು ಫೇಸ್ ಪ್ಯಾಕ್ ಗಳನ್ನು ತಯಾರಿಸಿ, ಪಿಗ್ಮೆಂಟೇಶನ್ ಸಮಸ್ಯೆಯಿಂದ ಪಾರಾಗಬಹುದು. ನೀವು ಹಸಿ ಆಲೂ ರಸ, ಸೌತೆ ರಸ, ಈರುಳ್ಳಿ ರಸ ಬೆರೆಸಿ ಸಹ ಹಚ್ಚಬಹುದು. ಇದರಿಂದ ಮುಖದಲ್ಲಿ ಹೆಚ್ಚಿನ ಗ್ಲೋ ಬರುತ್ತದೆ. ಇದರಿಂದ ಮುಖದಲ್ಲಿ ಹೆಚ್ಚಾಗಿದ್ದ ಪಿಗ್ಮೆಂಟೇಶನ್ ಕ್ರಮೇಣ ಕಡಿಮೆ ಆಗುತ್ತದೆ.
ಮುಖದಲ್ಲಿ ಪಿಗ್ಮೆಂಟೇಶನ್ ಕಲೆಗಳನ್ನು ನಿರ್ಲಕ್ಷಿಸಿದಷ್ಟೂ ಅದು ಆಳ, ಅಗಲವಾಗಿ ಹರಡುತ್ತದೆ. ಆದ್ದರಿಂದ ಇನ್ನು ಎಷ್ಟು ಬೇಗ ಗುರುತಿಸಿ ತೊಲಗಿಸುತ್ತೀರೋ ನಿಮ್ಮ ರೂಪ ಲಾವಣ್ಯ ಬೆಳಗಲು ಅಷ್ಟೇ ಸಹಕಾರಿ!
– ಪ್ರೇಮಲತಾ





