ಇಂದಿನ ಮಾರುಕಟ್ಟೆಯಲ್ಲಿ ಹಲವು ಬಗೆಯ ಫೇಸ್ಸೀರಮ್ ಲಭ್ಯವಿವೆ, ಆದರೆ ಯಾವುದು ನಿಮ್ಮ ಚರ್ಮಕ್ಕೆ ಅತಿ ಸೂಕ್ತವಾಗಬಲ್ಲದು ಎಂದು ತಜ್ಞರಿಂದ ತಿಳಿಯೋಣವೇ…..?

ಪ್ರತಿ ವಯಸ್ಸಿನಲ್ಲೂ ಹಾರ್ಮೋನ್‌ ಬದಲಾವಣೆಗಳು ಮುಖದ ಮೇಲೆ ಹೆಚ್ಚಿನ ಪರಿವರ್ತನೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಮುಖ ಕಲೆಗುರುತು, ಆ್ಯಕ್ನೆ, ಮೊಡವೆಗಳಿಂದ ಪಾರಾಗಲು, ನಾವು ಏನೇನೋ ಹರಸಾಹಸ ಮಾಡುತ್ತೇವೆ, ಕೈಗೆ ಸಿಕ್ಕಿದ ಕಾಸ್ಮೆಟಿಕ್ಸ್ ನೆಲ್ಲ ಮುಖದ ಮೇಲೆ ಪ್ರಯೋಗಿಸುತ್ತೇವೆ. ಆದರೆ ನಿಮಗೆ ಬೇಕಾದಂಥ ರೇಡಿಯೆಂಟ್‌ ಸ್ಕಿನ್‌ ಮಾತ್ರ ಇವುಗಳಿಂದ ಸಿಗುವುದಿಲ್ಲ. ಇದಕ್ಕಾಗಿ ಲಕ್ಷಾಂತರ ರೂ. ನಮ್ಮ ಕೈ ಬಿಟ್ಟು ಹೋಗಿರುತ್ತದೆ, ಅತ್ತ ಫಲ ಇಲ್ಲ…. ಇತ್ತ ಹಣ ಪೋಲು! ಇದಕ್ಕೆಲ್ಲ ಒಂದೇ ಕಾರಣ ಎಂದರೆ, ನಾವು ಸೂಕ್ತ ಸೀರಮ್ ಬಳಸದೇ ಇರುವುದು! ಅದರಲ್ಲೂ 30+ನವರಿಗೆ ಇಂಥ ಸ್ಪೆಷಲ್ ಸೀರಮ್ ಬೇಕೇ ಬೇಕು.

ಹೀಗಾಗಿ ನಿಮ್ಮ ರೆಗ್ಯುಲರ್‌ ಸ್ಕಿನ್‌ ಕೇರ್‌ ರೊಟೀನ್‌ ಗಾಗಿ ಎಂಥ ಘಟಕಗಳುಳ್ಳ ಸೀರಮ್ ಇರಬೇಕು ಎಂಬುದನ್ನು ತಜ್ಞರಿಂದ  ವಿವರವಾಗಿ ಕೇಳಿ ತಿಳಿಯೋಣ :

ವಿಟಮಿನ್ಸಿ ಅರಿಶಿನಯುಕ್ತ ಸೀರಮ್

ವಿಟಮಿನ್‌ ಸಿ ಆ್ಯಂಟಿ ಆಕ್ಸಿಡೆಂಟ್‌ ನ ಕೆಲಸ ನಿರ್ವಹಿಸುತ್ತದೆ, ಅದು ಹಾನಿಕಾರಕ ಅಂಶಗಳಿಂದ ಚರ್ಮವನ್ನು ರಕ್ಷಿಸುತ್ತದೆ, ಜೊತೆಗೆ ನಾವು ನಮ್ಮ ಡಯೆಟ್‌ ಕಾಸ್ಮೆಟಿಕ್ಸ್ ಮೂಲಕ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಸಿ ಗಳಿಸುತ್ತೇವೆ. ಹಾಗಾಗಿ ಇದು ನಮ್ಮ ಇಮ್ಯೂನಿಟಿಯನ್ನು ಬೂಸ್ಟ್ ಮಾಡುವ ಜೊತೆ ಜೊತೆಗೆ, ನಮ್ಮ ಚರ್ಮಕ್ಕೆ ಹೊಸ ಕೊಲೋಜೆನ್‌ ನ್ನು ಸಹ ಒದಗಿಸುತ್ತದೆ. ಇದು ನಮ್ಮ ಚರ್ಮವನ್ನು ಸೂರ್ಯನ UV ಕಿರಣಗಳ ಹಾನಿಯಿಂದ ರಕ್ಷಿಸುವುದರ ಜೊತೆಗೆ, ಚರ್ಮದ ಡ್ರೈನೆಸ್‌ ನ್ನು ಸಹ ದೂರಗೊಳಿಸುತ್ತದೆ ಹಾಗೂ ಮಾಯಿಶ್ಚರೈಸ್‌ ಮಾಡುತ್ತದೆ. ಇದು ನಮ್ಮ ಸ್ಕಿನ್‌ ಟೋನ್‌ ನ್ನು ಸುಧಾರಿಸಿ, ಹೊಸ ಟಿಶ್ಯೂಸ್‌ ನ್ನು ಇಂಪ್ರೂವ್ ಮಾಡಿ, ಸ್ಕಿನ್‌ ಏಜಿಂಗ್‌, ಫೈನ್‌ ಲೈನ್ಸ್ ನ್ನು ಕಡಿಮೆಗೊಳಿಸಲು ಬಹಳ ಸಹಾಯ ಮಾಡುತ್ತದೆ.

ಅದೇ ತರಹ ಅರಿಶಿನ ಆ್ಯಂಟಿ ಆಕ್ಸಿಡೆಂಟ್ಸ್ ಆ್ಯಂಟಿ ಇನ್‌ ಫ್ಲಮೇಟರಿ ಪೋಷಕಾಂಶಗಳಿಂದ ಕೂಡಿದೆ. ಇದು ಚರ್ಮಕ್ಕೆ ಹೆಚ್ಚಿನ ಗ್ಲೋ ನೀಡಿ, ಕಾಂತಿ ತುಂಬಿಸುವಲ್ಲಿ ಸಹಕಾರಿ. ಇದು ಒಂದು ರೀತಿಯಲ್ಲಿ ಚರ್ಮವನ್ನು ತಿಳಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿನ ಕರ್ಕ್ಯುಮಿನ್‌ ಚರ್ಮದ ಹೆಚ್ಚುವರಿ ಮೆಲನಿನ್‌ ಉತ್ಪಾದನೆಯನ್ನು ತಡೆದು, ನಮ್ಮ ಸ್ಕಿನ್‌ ಟೋನ್‌ ನ್ನು ಇಂಪ್ರೂವ್ ‌ಮಾಡಿ, ನವೀನ ಕಾಂತಿ ತುಂಬುತ್ತದೆ.

ಹೀಗಿರುವಾಗ ಎಂಥ ಫೇಸ್‌ ಸೀರಮ್ ಆರಿಸಬೇಕು? ಇದಕ್ಕಾಗಿ ನೀವು ಮಾಮಾ ಅರ್ಥ್‌ ನ ಸ್ಕಿನ್‌ ಇಲ್ಯುಮಿನೇಟ್‌ ವಿಟಮಿನ್‌ ಸಿ ಇರುವ  ಫೇಸ್‌ ಸೀರಮ್ ಫಾರ್‌ ರೇಡಿಯಂಟ್‌ ಸ್ಕಿನ್‌, ಕ್ರೀಮನ್ನು ಆರಿಸಿಕೊಳ್ಳಿ. ಏಕೆಂದರೆ ಇದು ವಿಟಮಿನ್‌ ಸಿ ಅರಿಶಿನದಂಥ ನೈಸರ್ಗಿಕ ಘಟಕಗಳನ್ನು ಹೊಂದಿದ್ದು ಡರ್ಮಟಾಲಜಿಸ್ಟ್ ಟೆಸ್ಟೆಡ್‌ ಆಗಿದೆ. ಇದು ಹಾನಿಕಾರಕ ಸಲ್ಫೇಟ್‌, ಪ್ಯಾರಾಬೀನ್ಸ್, ಪ್ರಿಸರ್ ವೇಟಿವ್ಸ್ ಕೃತಕ ಬಣ್ಣಗಳಿಂದ ದೂರವಾಗಿದೆ. ಇದರ 30 ಗ್ರಾಂ ಪ್ಯಾಕ್‌ ನ ಬೆಲೆ ಸುಮಾರು 700 ರೂ. ಆಗುತ್ತದೆ.

ಹಾರ್ವರ್ಡ್ ಮೆಡಿಕಲ್ ಸ್ಕೂಲಿನ ವರದಿ ಪ್ರಕಾರ, ಟ್ರಾಪಿಕ್‌ ವಿಟಮಿನ್‌ ಸಿ ಚರ್ಮಕ್ಕೆ ಪೂರಕ ಪೋಷಕಾಂಶಗಳ ಗಣಿ! ಇದು ವೃದ್ಧಾಪ್ಯವನ್ನು ಆದಷ್ಟೂ ಮುಂದೂಡಿ, ಸೂರ್ಯನ ಹಾನಿಕಾರಕ UV ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಇದು ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್‌ ಆದಕಾರಣ ಆ್ಯಕ್ನೆ, ಡಾರ್ಕ್‌ ಸರ್ಕಲ್ಸ್, ಮೊಡವೆಗಳನ್ನೂ ತೊಲಗಿಸುತ್ತದೆ.

shutterstock_62411647

ಟೀ ಟ್ರೀ ಆಯಿಲ್ ಫೇಸ್ಸೀರಮ್

ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳಿದ್ದು, ಇದು ಚರ್ಮದ ಪೋರ್ಸ್‌ ನ್ನು ಶುಚಿಗೊಳಿಸಿ ಆ್ಯಕ್ನೆ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾ ನಿವಾರಿಸಿ, ಚರ್ಮವನ್ನು ಸ್ಪಾಟ್‌ ಲೆಸ್‌ ಆಗಿಸಲು ನೆರವಾಗುತ್ತದೆ. ಜೊತೆಗೆ ಇದರ ಆ್ಯಂಟಿಸೆಪ್ಟಿಕ್‌ ಗುಣಗಳು, ಚರ್ಮದ ಹೆಚ್ಚುವರಿ ತೈಲಾಂಶವನ್ನು ನಿಯಂತ್ರಿಸಿ, ಪೋರ್ಸ್‌ ಕ್ಲಾಗ್‌ ಆಗದಂತೆ ತಡೆದು, ಆ್ಯಕ್ನೆ ಮೊಡವೆಗಳನ್ನು ಇನ್ನಿಲ್ಲವಾಗಿಸುತ್ತದೆ. ಇದರ ವೈಶಿಷ್ಟ್ಯ ಎಂದರೆ ಚರ್ಮವನ್ನು ಕ್ಲೀನ್‌ ಕ್ಲಿಯರ್‌ ಮಾಡಿ, ಎಲ್ಲಾ ಬಗೆಯ ಚರ್ಮಕ್ಕೂ ಹೊಂದಿಕೊಳ್ಳುತ್ತದೆ.

ಹೀಗಾಗಿ ನೀವು ನಿರಾಂತಕವಾಗಿ ಗುಡ್‌ ವೈಬ್ಸ್ ನ ಟೀ ಟ್ರೀ ಫೇಸ್‌ ಸೀರಮ್ ಆರಿಸಿಕೊಳ್ಳಿ. ಏಕೆಂದರೆ ಇದು ಅನ್‌ ಈವೆನ್‌ ಸ್ಕಿನ್ ಟೋನ್‌ನ್ನು ಸುಧಾರಿಸಿ, ಚರ್ಮವನ್ನು ಪರಿಪೂರ್ಣ ಕಲೆರಹಿತ ಮಾಡುವುದಲ್ಲದೆ, ಅದನ್ನು ಹೆಲ್ದಿ, ಸಾಫ್ಟ್ ಗ್ಲೋಯಿಂಗ್‌ ಆಗಿಯೂ ಮಾಡುತ್ತದೆ. ಇದು ಪ್ಯಾರಾಬೀನ್‌ ಸಲ್ಫೇಟ್‌ ಫ್ರೀ ಪ್ರಾಡಕ್ಟ್. ಇದು ನಿಮಗೆ ಆನ್‌/ಆಫ್‌ ಲೈನುಗಳಲ್ಲಿ ಸುಮಾರು 400 ರೂ.ಗಳಲ್ಲೇ ಸಿಗುತ್ತದೆ.

ಹ್ಯಾಲುರೋನಿಕ್ಆ್ಯಸಿಡ್ಸೀರಮ್

ಇತ್ತೀಚೆಗೆ ಕಾಸ್ಮೆಟಿಕ್ಸ್ ನಲ್ಲಿ ಅದರಲ್ಲೂ ಫೇಸ್‌ ಸೀರಮ್ ನಲ್ಲಿ ಹ್ಯಾಲುರೋನಿಕ್‌ ಆ್ಯಸಿಡ್‌ ನ ಹೆಸರು ಬಲು ಚರ್ಚೆಯಲ್ಲಿದೆ. ಇದರ ಹೆಸರೇ ಸ್ಟ್ರಾಂಗ್‌ ಆಗಿರುವಂತೆ, ಇದರ ಕೆಲಸ ಅಷ್ಟೇ ಪವರ್‌ ಫುಲ್ ಆಗಿದೆ. ಅಸಲಿಗೆ ಇದು ಚರ್ಮವನ್ನು ಸೂಪರ್‌ ಹೈಡ್ರೇಟ್ ಗೊಳಿಸುವ ಗುಣ ಹೊಂದಿದ್ದು, ಚರ್ಮಕ್ಕೆ ಇನ್‌ ಸ್ಟೆಂಟ್‌ ಗ್ಲೋ ಹೈಡ್ರೇಶನ್‌ ಒದಗಿಸುತ್ತದೆ. ಇದು ಸ್ಕಿನ್‌ ಟಿಶ್ಯೂಸ್‌ ನ್ನು ಸದಾ ಮಾಯಿಸ್ಟ್ ಆಗಿಡುವಲ್ಲಿಯೂ ಮುಂದು.

ಇದು ಸ್ಕಿನ್‌ ಟೆಕ್ಸ್ ಚರ್‌ ನ್ನು ಸುಧಾರಿಸಿ, ಜೊತೆಗೆ ಪ್ಯಾಚೀ ಸ್ಕಿನ್‌ ಸಮಸ್ಯೆಯನ್ನೂ ನಿವಾರಿಸಬಲ್ಲದು. ಇದು ಚರ್ಮದ ಬಿಗಿತ ಉಳಿಸಿ, ಚಿರಯೌವನ ಮರಳಿಸಲಿದೆ! ಇದರ ನಿಯಮಿತ ಬಳಕೆಯಿಂದ ಸ್ಕಿನ್‌ ಎಲಾಸ್ಟಿಸಿಟಿ ಎಷ್ಟೋ ಸುಧಾರಿಸುತ್ತದೆ. ಇದು ಏಜಿಂಗ್‌ ಪ್ರೋಸೆಸ್‌ ಸ್ಲೋ ಮಾಡಿ, ಚರ್ಮವನ್ನು ಕಲೆರಹಿತ ಮಾಡುವಲ್ಲಿಯೂ ಬಹಳ ಸಹಾಯಕ.

ಇದಕ್ಕಾಗಿ ನೀವು ದಿ ಮಾಮ್ಸ್ ಕಂಪನಿಯ, ಹಲವು ವಿಟಮಿನ್ಸ್ ಬೆರೆತಿರುವಂಥ ಹ್ಯಾಲೋರೋನಿಕ್‌ ಆ್ಯಸಿಡ್‌ ಕೊಂಡು ಬಳಸಿರಿ. ಇದು ಚರ್ಮವನ್ನು ಡೀಪ್‌ ಹೈಡ್ರೇಟ್‌ ಮಾಡಿ, ಸ್ಕಿನ್‌ ಪಿಗ್ಮೆಂಟೇಶನ್‌ ತಗ್ಗಿಸುವುದಲ್ಲದೆ, ಡಾರ್ಕ್‌ ಸರ್ಕಲ್ಸ್ ತೊಲಗಿಸಿ ಚರ್ಮಕ್ಕೆ ಹೆಚ್ಚು ಗ್ಲೋ ನೀಡಿ, ಕ್ಲೀನ್‌ ಕ್ಲಿಯರ್‌ ಮಾಡುತ್ತದೆ. ಇದರ ಬೆಲೆ ಸುಮಾರು 500 ರೂ.

ಆಧುನಿಕ ಅಧ್ಯಯನಗಳ ವರದಿಯ ಪ್ರಕಾರ, ಯಾರು 120 ಗ್ರಾಂನ ಈ ಆ್ಯಸಿಡ್‌ ನ್ನು ಸತತ 1-2 ವಾರ ಬಳಸುತ್ತಾರೋ, ಅಂಥವರ ಮುಖದಲ್ಲಿ ಸುಕ್ಕು, ನಿರಿಗೆ ಸಹಜವಾಗಿ ತಗ್ಗಿ ಹೋಗುತ್ತದೆ. ಅಂಥವರ ಚರ್ಮದ ಸಮಸ್ಯೆಗಳೆಲ್ಲ ದೂರವಾಗಿ, ಹೊಳೆಯುವ ಚರ್ಮ ಮೂಡುತ್ತದೆ.

ನಿಯಾಸಿನ್  ಮೈಲ್ಡ್ ಫೇಸ್ಸೀರಮ್

ಈ ಸೀರಮ್ ನ ಬಳಕೆಯಿಂದ ಕಲೆರಹಿತ ಚರ್ಮ ನಿಮ್ಮದಾಗುವುದಲ್ಲದೆ, ಅದಕ್ಕೆ ಎಂದೂ ಕಾಣದ ವಿಶೇಷ ಹೊಳಪು ಸಹ ಬರುತ್ತದೆ. ಇದು ಸ್ಕಿನ್‌ ಟೋನ್‌ ನ್ನು ತಿಳಿಯಾಗಿಸಿ, ಡಾರ್ಕ್‌ ಸರ್ಕಲ್ಸ್ ನ್ನು ಸಂಪೂರ್ಣ ತೊಲಗಿಸುತ್ತದೆ. ಈ ಸೀರಮ್ ವಿಟಮಿನ್‌ ಸಿ‌ಯ ಪರ್ಯಾಯ ಎನ್ನಬಹುದು. ಇದಂತೂ ಚರ್ಮಕ್ಕೆ ಅತ್ಯಗತ್ಯ ಪೋಷಕಾಂಶಗಳ ಭಂಡಾರ. ಇದರ ಕೊರತೆಯಿಂದ ಚರ್ಮ ಡಲ್ ಆಗುತ್ತದೆ, ಬೇಗ ನಯಸ್ಸಾದನರಂತೆ ಕಂಡು ಬರುತ್ತೀರಿ. ಅದರ ನಿವಾರಣೆಗಾಗಿ ಮತ್ತೆ ಸಾವಿರಾರು ರೂ.ಗಳ ಕಾಸ್ಮೆಟಿಕ್ಸ್ ಗೆ ಮೊರೆ ಹೋಗಬೇಕಾದೀತು.

ಆದ್ದರಿಂದ ಈ ಸೀರಮ್ ಬಳಸಿರಿ. ಇದು ಚರ್ಮಕ್ಕೆ ಬೇಕಾದ ಪ್ರೋಟೀನ್‌, ಕೆರಾಟಿನ್ಸ್ ರೂಪಿಸಿ, ಅದನ್ನು ಆಂತರಿಕವಾಗಿ ಸದಾ ಸುಸ್ಥಿತಿಯಲ್ಲಿಡುತ್ತದೆ. ಹಾಗಾಗಿ ಇದರ ಬಳಕೆಯಿಂದ ಚರ್ಮ ಸದಾ ಆರ್ದ್ರತೆ ಗಳಿಸಬಲ್ಲದು. ಒಂದು ವರದಿ ಪ್ರಕಾರ ಇದನ್ನು ನಿಯಮಿತವಾಗಿ ಬಳಸುವವರು ಎಗ್ಸಿಮಾ, ಆ್ಯಕ್ನೆ ಮೊಡವೆ, ಕಲೆಗುರುತುಗಳಂಥ ಎಲ್ಲಾ ಚರ್ಮ ಸಮಸ್ಯೆಗಳಿಂದಲೂ ಮುಕ್ತಿ ಹೊಂದುತ್ತಾರೆ. ಅವರ ಚರ್ಮದಲ್ಲಿ ಹೊಸತೊಂದು ಬಗೆಯ ಹೊಳಪು ಎದ್ದು ತೋರುತ್ತದೆ. ಜೊತೆಗೆ ಇದು ಹೊಸ ಹೆಲ್ದಿ ಸೆಲ್ಸ್ ನಿರ್ಮಾಣಕ್ಕೂ ಸಹಕಾರಿ. ಆಂತರಿಕವಾಗಿ ಅಂಥ ಜೀವಕೋಶಗಳು ಪುನರುಜ್ಜೀವನ ಹೊಂದುವುದರಿಂದ, ಅದರ ಉನ್ನತ ಪರಿಣಾಮಗಳು ಹೊರ ಭಾಗದಲ್ಲಿ ತಂತಾನೇ ಪ್ರತಿಫಲಿಸುತ್ತವೆ.

ಇದಕ್ಕಾಗಿ ನೀವು ಲ್ಯಾಕ್ಮೆ  ಆ್ಯಬ್‌ ಸಲ್ಯೂಟ್‌ನ ಪರ್ಫೆಕ್ಟ್ ರೇಡಿಯನ್ಸ್ ಸೀರಮ್ ಬಳಸಿಕೊಳ್ಳಿ. 15 ಗ್ರಾಂನ ಬೆಲೆ ಸುಮಾರು 400 ರೂ.ತಜ್ಞರ ಪ್ರಕಾರ, ಫೇಸ್‌ ಸೀರಮ್ ನಲ್ಲಿ 5% ಈ ಆ್ಯಸಿಡ್‌ ಬೆರೆತಿದ್ದರೂ, ಇದು ಡಾರ್ಕ್‌ ಸರ್ಕಲ್ಸ್, ಬ್ಲ್ಯಾಕ್‌ ಸ್ಪಾಟ್ಸ್ ಇತ್ಯಾದಿಗಳನ್ನು ಕಡಿಮೆಗೊಳಿಸಬಲ್ಲದು. ನೀವು 5 ರೆಟಿನಾಲ್ ಸೀರಮ್ ಫಾರ್‌ ಯಂಗರ್‌ ಸ್ಕಿನ್‌ ಬಳಸುವುದರಿಂದ, ಅದು ಸ್ಕಿನ್ ಸೆಲ್ಸ್ ನ್ನು ಹೆಚ್ಚಿಸುವಲ್ಲಿ ಪೂರಕ ಪಾತ್ರ ವಹಿಸುತ್ತದೆ. ಜೊತೆಗೆ ಅದು ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡಿ ಕೊಲೋಜೆನ್ ಉತ್ಪಾದನೆ ಹೆಚ್ಚಿಸುತ್ತದೆ. ಹಾಗಾಗಿ ಮುಖದಲ್ಲಿನ ಅನಗತ್ಯ ಫೈನ್‌ ಲೈನ್ಸ್, ಸುಕ್ಕುಗಳನ್ನು ದೂರಗೊಳಿಸಿ, ಸ್ಕಿನ್‌ ಫ್ರೆಶ್‌ ಪ್ಲಂಪ್ ಲುಕ್‌ ಗಳಿಸಲು ನೆರವಾಗುತ್ತದೆ. ಇದಂತೂ ಬಹಳ ಲೈಟ್‌ ವೆಯ್ಟ್ ಸೀರಮ್. ಹೀಗಾಗಿ ಬಲು ಸಹಜವಾಗಿ ಚರ್ಮದಲ್ಲಿ ವಿಲೀನ ಆಗಬಲ್ಲದು. ಇದು ಡಾರ್ಕ್‌ ಸ್ಪಾಟ್ಸ್ ತೊಲಗಿಸಿ, ಸ್ಕಿನ್‌ ಬ್ರೈಟ್‌ ಆಗಲು ಸಹಕರಿಸುತ್ತದೆ. ರೆಟಿನಾಲ್ ಎಂಬುದು ವಿಯಮಿನ್ ಅಂಶವಾಗಿದ್ದು, ಜೀವಕೋಶಗಳ ಜೀವನಾಡಿ ಎನಿಸಿದೆ. ಇದಕ್ಕಾಗಿ ನೀವು ಆಫ್‌/ಆನ್‌ ಲೈನ್‌ ನಲ್ಲಿ ದಿ ಡರ್ಮಾ ಕಂಪನಿಯ 0.3% ರೆಟಿನಾಲ್ ‌ಸೀರಮ್ ಫಾರ್‌ ಸ್ಪಾಟ್‌ ಲೆಸ್‌ ಸ್ಕಿನ್‌, ಖರೀದಿಸಿ ಬಳಸಿಕೊಳ್ಳಿ. ಇದರ ಬಳಕೆಯಿಂದ ನಿಮ್ಮ ಚರ್ಮ ದಿನೇದಿನೇ ತಾರುಣ್ಯದ ಕಾಂತಿಯಿಂದ ಮಿರಿಮಿರಿ ಮಿಂಚುತ್ತದೆ. ಇದರ 30 ಪ್ಯಾಕಿನ ಬೆಲೆ ಸುಮಾರು 1000 ರೂ.ಮಾರುಕಟ್ಟೆಯಲ್ಲಿ ಇತ್ತೀಚೆಗೆ ಲಭ್ಯವಿರುವ ರೆಟಿನಾಲ್ ‌ಗಳಲ್ಲಿ, ಮೊಟ್ಟ ಮೊದಲನೆಯದು ಎಂದರೆ ರಾಟಿನೈಡ್‌ ರಾಟಿನ್‌ ಆಗಿದ್ದು, ಇದರ ಬಳಕೆ ಆ್ಯಕ್ನೆ ಮೊಡವೆಗಳ ನಿವಾರಣೆಗೆ ಸಹಾಯಕ. ಜೊತೆಗೆ ಇದು ಸೆ‌ಟರ್ನ್‌ ಓವರ್‌ ನ್ನು ಸಹ ಪ್ರೋತ್ಸಾಹಿಸುತ್ತದೆ, ಚರ್ಮದ ಪಿಗ್ಮೆಂಟೇಶನ್ ಸ್ಪಾಟ್ಸ್ ನಿಂದ ಸಹ ಮುಕ್ತಿ ಕೊಡಿಸುತ್ತದೆ.

ಪಾರ್ವತಿ ಭಟ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ