ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಮಾತು ಇದೀಗ ವಿವಾದಕ್ಕೆ ಎಡೆಮಾಡಿದೆ. ರಣಹದ್ದುಗಳ ಬಗ್ಗೆ ಸುದೀಪ್‌ ಆಡಿದ ಮಾತು ಪಕ್ಷಿ ಪ್ರಿಯರನ್ನು ಕೆರಳಿಸಿದ್ದು, ಇದೀಗ ಸುದೀಪ್‌ ವಿರುದ್ಧ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ದಾಖಲಿಸಿದೆ.

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ. ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಜನವರಿ 17 ಹಾಗೂ 18 ರಂದು ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಸಂದರ್ಭದಲ್ಲಿ ‘ಬಿಗ್ ಬಾಸ್’ ಮತ್ತು ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲಾಗಿದೆ.ದೂರು ದಾಖಲು: ಕಿಚ್ಚ ಸುದೀಪ್ ಅವರು ನಿರೂಪಣೆ ಸಂದರ್ಭ “ರಣಹದ್ದುಗಳು ಹೊಂಚು ಹಾಕಿ ಕರೆಕ್ಟ್ ಟೈಮ್‌ಗೆ ಹಿಡಿಯುತ್ತೆ” ಎಂಬ ಮಾತು ಹೇಳಿದ್ದರು. ಕಿಚ್ಚ ಸುದೀಪ್ ಅವರ ಈ ಮಾತಿಗೆ ಆಕ್ಷೇಪ ವ್ಯಕ್ತವಾಗಿದ್ದು, ಸುದೀಪ್ ವಿರುದ್ಧ ಪಕ್ಷಿ ಪ್ರೇಮಿಗಳು ಹಾಗೂ ರಣಹದ್ದು ಸಂರಕ್ಷಣಾ ಟ್ರಸ್ಟ್‌ನವರು ದೂರು ದಾಖಲಿಸಿದ್ದಾರೆ.
ಬೆಂಗಳೂರು ದಕ್ಷಿಣ ಡಿಎಫ್‌ಓ ರಾಮಕೃಷ್ಣಪ್ಪ ಅವರಿಗೆ ಪಕ್ಷಿಪ್ರೇಮಿಗಳು ಮತ್ತು ರಣಹದ್ದು ಸಂರಕ್ಷಣಾ ಟ್ರಸ್ಟ್​​ನವರು ದೂರು ನೀಡಿದ್ದಾರೆ. ರಣಹದ್ದುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಬೇಕೆಂಬುದು ದೂರುದಾರರ ಆಗ್ರಹ.

“ಜೀವಂತವಾಗಿರುವ ಪ್ರಾಣಿಗಳನ್ನು ರಣಹದ್ದು ಬೇಟೆಯಾಡುತ್ತದೆ ಎಂಬ ರೀತಿಯಲ್ಲಿ ಸುದೀಪ್ ಹೇಳಿದ್ದಾರೆ. ಹದ್ದು ಯಾವತ್ತೂ ಜೀವಂತ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ರಣಹದ್ದುಗಳು ಪರಿಸರ ಸ್ನೇಹಿಗಳು. ವಾಹಿನಿ ಮೂಲಕ ರಣಹದ್ದುಗಳ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ. ಸುದೀಪ್ ಅವರು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳಬೇಕು” ಎಂದು ಬೆಂಗಳೂರು ದಕ್ಷಿಣ ಡಿಎಫ್‌ಓ ರಾಮಕೃಷ್ಣಪ್ಪ ಹೇಳಿದ್ದಾರೆ.

“ಹೊಂಚು ಮಾಡಿ, ಸಂಚು ರೂಪಿಸಿ, ಲಬಕ್ ಅಂತ ಹಿಡಿಯುವುದು ಎಂಬ ಮಾತನ್ನು ಹೇಳಿದ್ದಾರೆ. ಆದರೆ, ರಣಹದ್ದುಗಳು ಬೇಟೆಯಾಡುವುದಿಲ್ಲ. ಸತ್ತ ಪ್ರಾಣಿಗಳನ್ನು ಹದ್ದುಗಳು ತಿನ್ನುತ್ತವೆ. ರಣಹದ್ದುಗಳ ಸಂತತಿ ಉಳಿವಿಗಾಗಿ ನಾವು ಹೋರಾಟ ಮಾಡಿದ್ದೇವೆ” ಎಂದು ದೂರುದಾರರು ವಿವರಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ