ಮಹೇಶ : ಕಳೆದ ಸಲದ ಒಲಿಂಪಿಕ್ಸ್ ನಲ್ಲಿ ವೆಯ್ಟ್ ಲಿಪ್ಟಿಂಗ್‌ ಚಾಂಪಿಯನ್‌ ಎನಿಸಿರುವ ಮೀರಾಬಾಯಿ ಚಾನೂ 49 ಕಿಲೋ ವರ್ಗದಲ್ಲಿ, ಸುಲಭವಾಗಿ 205 ಕಿಲೋ ತೂಕ ಎತ್ತಿಳಿಸಿ ನಮ್ಮ ದೇಶಕ್ಕೆ ಚಿನ್ನ ತಂದಿದ್ದಾರೆ! ಎಂಥ ಗ್ರೇಟ್‌ ಅಲ್ಲವೇ?

ಸುರೇಶ : ಅದು ಸರಿ ಮಾರಾಯ, ನನ್ನ ಹೆಂಡತಿ 60 ಕಿಲೋ ತೂಗುತ್ತಾಳೆ. ಆದರೆ ಮಾರುಕಟ್ಟೆಗೆ ಹೋದಾಗ, ತರಕಾರಿ ಚೀಲ 1 ಕಿಲೋ ತೂಕಕ್ಕಿಂತ ಭಾರ ಎನಿಸಿದರೆ, ತಕ್ಷಣ ಆ ಚೀಲವನ್ನು ನನ್ನ ಕೈಗೆ ರವಾನಿಸುತ್ತಾಳೆ.... ಇವಳಿಗೂ ಆಗಾಗ ಚಿನ್ನ ಕೊಡಿಸಬೇಕಂತೆ....!

ಮಹೇಶ : ಅಯ್ಯೋ ಪಾಪ... ಗಂಡಂದಿರ ಗೋಳು ಕೇಳುವವರು ಯಾರು?

ವಿದೇಶಿ : ನಿಮ್ಮ ದೇಶದಲ್ಲಿ ನೀವು ಕಾರನ್ನು ರಸ್ತೆಯ ಎಡಬದಿಗೆ ಚಲಿಸುತ್ತೀರೋ ಬಲ ಬದಿಗೋ?

ಸ್ವದೇಶಿ : ನಮ್ಮ ದೇಶದ ರಸ್ತೆಯಲ್ಲಿ ಗುಂಡಿ, ಹಳ್ಳ ಬಿಟ್ಟು ಯಾವ ಭಾಗ ಅಳಿದುಳಿದಿರುತ್ತದೋ ಆ ಭಾಗದಲ್ಲಿ ಚಲಿಸುತ್ತೇವಷ್ಟೆ!

ಗೀತಾ : ಬೆಂಗಳೂರಿನಲ್ಲಿ ಯಾವ ಕಾರಣದಿಂದ ಇಷ್ಟೊಂದು ಸುಲಭವಾಗಿ ಟ್ರಾಫಿಕ್‌ ಆ್ಯಕ್ಸಿಡೆಂಟ್ಸ್ ಆಗುತ್ತಲೇ ಇರುತ್ತದೆ?

ಸುಧಾ : ಶಿಸ್ತಾಗಿ ಟ್ರಾಫಿಕ್‌ ರೂಲ್ಸ್ ‌ಪಾಲಿಸಿದರೆ ಇದೇ ಗತಿ, ಮನಸ್ಸು ಬಂದಂತೆ ಗಾಡಿ ಓಡಿಸಿದರೆ ಯಾವ ತಂಟೆ ತಕರಾರೂ ಇಲ್ಲ!

ಯಾರೋ ಒಬ್ಬ ಆಧುನಿಕ ತರುಣ ಟಿಪ್‌ ಟಾಪ್‌ ಆಗಿ ಡ್ರೆಸ್‌ ಮಾಡಿಕೊಂಡು ಬಾಡಿಗೆ ಮನೆಗಾಗಿ ಹುಡುಕಾಡುತ್ತಾ ಬೆಂಗಳೂರೆಲ್ಲ ಅಲೆದಾಡಿಬಿಟ್ಟ!

ಅಂತೂ ಒಬ್ಬ ಮನೆಯಾಕೆ ದೊಡ್ಡ ಮನಸ್ಸು ಮಾಡಿ ಇವನಿಗೆ ಬಾಡಿಗೆಗೆ ಮನೆ ನೀಡಲು ನಿರ್ಧರಿಸಿದಳು.

ವಿಶಾಲಮ್ಮ : ಅದು ಸರಿ ಕಣ್ರೀ, ನೀವು ಕೆಲಸ ಮಾಡೋದು ಯಾವ ಕಂಪನಿ?

ತರುಣ : ನಾನು ಇನ್‌ ಫೋಸಿಸ್‌ ಗಾಗಿ ವರ್ಕ್‌ ಮಾಡ್ತೀನಿ ಮೇಡಂ!

ವಿಶಾಲಮ್ಮ : ಓಹ್‌..... ಆ ಬಸ್‌ ಕಂಪನಿಯಾ? ಸಾರಿ ಕಣ್ರೀ, ನಾವು ಉತ್ತಮ ಕಂಪನಿಯ ಸಿಬ್ಬಂದಿಗೆ ಮಾತ್ರ ಬಾಡಿಗೆಗೆ ಮನೆ ಕೊಡೋದು!

ತರುಣ : ಅಯ್ಯೋ! ನಮ್ಮ ಕಂಪನಿ ಅತ್ಯುತ್ತಮ, ಹಾಗಲ್ಲ ಅಂತ ನಿಮಗೆ ಹೇಳಿದವರು ಯಾರು?

ವಿಶಾಲಮ್ಮ : ಕಂಡಿದ್ದೀನಿ ಹೋಗ್ರಿ... ನಮ್ಮ  ನಮಗಿಂತ ನಿಮ್ಮಲ್ಲೇ ಹೆಚ್ಚು ಬಸ್ಸುಗಳು ಓಡಾಡೋದು... ಇಡೀ ಬೆಂಗಳೂರು ಟ್ರಾಫಿಕ್‌ ಮಯ ಆಗದೇ ಇದ್ದೀತೇ?

ರಾಮಣ್ಣ : ಅಂತೂ ನಮ್ಮ ಬೆಂಗಳೂರಿನಲ್ಲಿ ಬಿಸ್‌ ನೆಸ್‌ ಜೋರಾಗಿ ನಡೀತಿದೆ ಅಂತ ಆಯ್ತು ಕಣ್ರೀ.

ಶ್ಯಾಮಣ್ಣ : ಹಾಗಂತ ಯಾರು ನಿಮಗೆ ಹೇಳಿದ್ದು? ಅದಕ್ಕಿಂತಲೂ ಪೇಯಿಂಗ್‌ ಗೆಸ್ಟ್ ಬಿಸ್‌ ನೆಸ್‌ ಬಲು ಹೈಕ್ಲಾಸಾಗಿ ನಡೀತಿದೆ ಅಂತೀನಿ!

ಮೋಹನ್‌ (ಬೆಂಗಳೂರಿನಿಂದ) : ಅಮ್ಮ.... ಮೊಬೈಲ್ ‌ನಲ್ಲಿ ಸ್ವಲ್ಪ ಜೋರಾಗಿ ಮಾತನಾಡಿ. ಇಲ್ಲಿ ಬೆಂಗಳೂರಿನಲ್ಲಿ ಒಂದೇ ಸಮ ಜೋರಾಗಿ ಮಳೆ ಸುರಿಯುತ್ತಿದೆ.

ತಾಯಿ (ಹುಬ್ಬಳ್ಳಿಯಿಂದ) : ಅಯ್ಯೋ ಹೋಗೋ ಮಾರಾಯ! ಈಗ ತಾನೇ ಅದೇ ಬೆಂಗಳೂರಿನಲ್ಲಿ ಇರುವ ನನ್ನ ತಂಗಿ ಜೊತೆ ಮಾತನಾಡಿದ್ದೀನಿ... ಅವರ ಏರಿಯಾಗೆ ಮಳೆ ಬಂದು 3 ದಿನ ಆಯ್ತು ಅನ್ಲಿಕ್‌ ಹತ್ಯಾಳ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ