“ಅವಳ ಹೆಜ್ಜೆ ಕಿರುಚಿತ್ರೋತ್ಸವ 2026″ರ ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ *ಜನವರಿ 31ರೊಳಗೆ* ಅರ್ಜಿ ಸಲ್ಲಿಸಲು ಮಹಿಳಾ ನಿರ್ದೇಶಕರನ್ನು *ಗುಬ್ಬಿವಾಣಿ ಟ್ರಸ್ಟ್* ಆಹ್ವಾನಿಸುತ್ತಿದೆ.
ಇದು ಕಳೆದ ವರ್ಷದ ಮೊದಲ ಆವೃತ್ತಿಯಲ್ಲಿಯೇ ಅದ್ಭುತ ಯಶಸ್ಸು ಕಂಡ, *ಮಹಿಳಾ ನಿರ್ದೇಶಕರಿಗೇ ಮೀಸಲಾದ ಏಕೈಕ ಕನ್ನಡ ಕಿರುಚಿತ್ರ ಸ್ಪರ್ಧೆ* .
*ಮೊದಲ ಬಹುಮಾನ* : ಅತ್ಯುತ್ತಮ ಕಿರುಚಿತ್ರಕ್ಕೆ *”ಅವಳ ಹೆಜ್ಜೆ ಪ್ರಶಸ್ತಿ” – ₹1,00,000 ನಗದು*
ಜೊತೆಗೆ, *ಕೆಳಗಿನ ವಿಶೇಷ ವಿಭಾಗಗಳಲ್ಲಿ* ತಲಾ ಒಂದು ಕಿರುಚಿತ್ರಕ್ಕೆ ₹10,000 ನಗದು ಬಹುಮಾನ :
– *ಗೂಡಿನಿಂದ ಗಗನದೆಡೆಗೆ* – ಚೌಕಟ್ಟಿನಾಚೆ – ಅಸ್ಮಿತೆ, ಅಸ್ತಿತ್ವ, ಅನ್ವೇಷಣೆ
– *ಅನಿಮೇಷನ್ ಮತ್ತು ಎಐ*
– ಸ್ತ್ರೀ ಒಗ್ಗಟಿನಲ್ಲಿ ಬಲವಿದೆ
– ಹಾಸ್ಯ, ವ್ಯಂಗ್ಯ, ವಿಡಂಬನೆ
– ವಿಜ್ಞಾನ ಆಧಾರಿತ ಕಲ್ಪನೆ
– ಮಹಿಳಾ ಕ್ರೀಡಾಧಾರಿತ
– ಸಾಮಾಜಿಕ ಬದಲಾವಣೆಯ ಕಥಾವಸ್ತು
– *ಉದಯೋನ್ಮುಖ ನಿರ್ದೇಶಕಿ* – 21ನೇ ಶತಮಾನದಲ್ಲಿ ಜನಿಸಿದ ಮಹಿಳೆಯರು ನಿರ್ದೇಶಿಸಿದ ಕಿರುಚಿತ್ರ

*ಸಲ್ಲಿಕೆ ವಿವರಗಳು:*
- ನಿರ್ದೇಶಕರು ಮಹಿಳೆಯೇ ಆಗಿರಬೇಕು; 5–30 ನಿಮಿಷ; 2024, 2025 ಅಥವಾ 2026ರಲ್ಲಿ ನಿರ್ಮಿತ ಕನ್ನಡ ಕಿರುಚಿತ್ರಗಳು
- *ಜನವರಿ 31, 2026 ರೊಳಗೆ* ಸಲ್ಲಿಸಿದಲ್ಲಿ ಪ್ರವೇಶ ಶುಲ್ಕ ಕೇವಲ ₹1,000; ₹500 ತಡಶುಲ್ಕದೊಂದಿಗೆ ಫೆಬ್ರುವರಿ 14ರೊಳಗೆ ಸಲ್ಲಿಸಬಹುದು.
- ಸಲ್ಲಿಕೆ ಲಿಂಕ್:https://forms.gle/x5AZeeKkiDWbnvCA9
ಹೆಚ್ಚಿನ ಮಾಹಿತಿಗಾಗಿ www.gubbivanitrust.ngo ನೋಡಿ ಅಥವಾ 8867747236 ಮೂಲಕ ಸಂಪರ್ಕಿಸಿ.
ಗುಬ್ಬಿವಾಣಿ ಟ್ರಸ್ಟ್ ನ *ಸ್ಥಾಪಕ ಟ್ರಸ್ಟೀ ಮಾಲವಿಕ ಗುಬ್ಬಿವಾಣಿ* ಯವರು “ಮಹಿಳಾ ಪ್ರಧಾನ ಪಾತ್ರವಿರುವ, ಮಹಿಳಾ ದೃಷ್ಟಿಕೋನಗಳಿರುವ, ಲಿಂಗಸಮಾನತೆ, ಮಹಿಳಾ ಸಬಲೀಕರಣ ಮುಂತಾದ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರಲಿ. ಇದು ಕೇವಲ ಕಿರುಚಿತ್ರೋತ್ಸವವಲ್ಲ – *ಮಹಿಳಾ ಸಬಲೀಕರಣದ ಒಂದು ಸಾಂಸ್ಕೃತಿಕ ಚಳುವಳಿ* .” ಎಂದು ಕರೆ ನೀಡಿದರು.
ಧನ್ಯವಾದಗಳೊಂದಿಗೆ,
*ಶಾಂತಲಾ ದಾಮ್ಲೆ*
“ಅವಳಹೆಜ್ಜೆ” ಕಾರ್ಯಕ್ರಮ ನಿರ್ದೇಶಕಿ
ಗುಬ್ಬಿವಾಣಿ ಟ್ರಸ್ಟ್
8867747236





