“ಅವಳ ಹೆಜ್ಜೆ ಕಿರುಚಿತ್ರೋತ್ಸವ 2026″ರ  ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ ಜನವರಿ 31ರೊಳಗೆ ಅರ್ಜಿ ಸಲ್ಲಿಸಲು ಮಹಿಳಾ ನಿರ್ದೇಶಕರನ್ನು ಗುಬ್ಬಿವಾಣಿ ಟ್ರಸ್ಟ್ ಆಹ್ವಾನಿಸಿದೆ.

ಕಳೆದ ವರ್ಷದ ಮೊದಲ ಆವೃತ್ತಿಯಲ್ಲಿಯೇ ಅದ್ಭುತ ಯಶಸ್ಸು ಕಂಡ, ಮಹಿಳಾ ನಿರ್ದೇಶಕರಿಗೇ ಮೀಸಲಾದ ಏಕೈಕ ಕನ್ನಡ ಕಿರುಚಿತ್ರ ಸ್ಪರ್ಧೆ  ಇದಾಗಿದೆ.

ಮೊದಲ ಬಹುಮಾನ : ಅತ್ಯುತ್ತಮ ಕಿರುಚಿತ್ರಕ್ಕೆ “ಅವಳ ಹೆಜ್ಜೆ ಪ್ರಶಸ್ತಿ” – ₹1,00,000 ನಗದು

ಕೆಳಗಿನ ವಿಶೇಷ ವಿಭಾಗಗಳಲ್ಲಿ ತಲಾ ಒಂದು ಕಿರುಚಿತ್ರಕ್ಕೆ ₹10,000 ನಗದು ಬಹುಮಾನ :

– ಗೂಡಿನಿಂದ ಗಗನದೆಡೆಗೆ – ಚೌಕಟ್ಟಿನಾಚೆ – ಅಸ್ಮಿತೆ, ಅಸ್ತಿತ್ವ, ಅನ್ವೇಷಣೆ

– ಅನಿಮೇಷನ್ ಮತ್ತು ಎಐ​​

– ಸ್ತ್ರೀ ಒಗ್ಗಟಿನಲ್ಲಿ ಬಲವಿದೆ

– ಹಾಸ್ಯ, ವ್ಯಂಗ್ಯ, ವಿಡಂಬನೆ

– ವಿಜ್ಞಾನ ಆಧಾರಿತ ಕಲ್ಪನೆ

– ಮಹಿಳಾ ಕ್ರೀಡಾಧಾರಿತ

– ಸಾಮಾಜಿಕ ಬದಲಾವಣೆಯ ಕಥಾವಸ್ತು

– ಉದಯೋನ್ಮುಖ ನಿರ್ದೇಶಕಿ – 21ನೇ ಶತಮಾನದಲ್ಲಿ ಜನಿಸಿದ ಮಹಿಳೆಯರು ನಿರ್ದೇಶಿಸಿದ ಕಿರುಚಿತ್ರ

ಸಲ್ಲಿಕೆ ವಿವರಗಳು: ನಿರ್ದೇಶಕರು ಮಹಿಳೆಯೇ ಆಗಿರಬೇಕು; 5–30 ನಿಮಿಷ; 2024, 2025 ಅಥವಾ 2026ರಲ್ಲಿ ನಿರ್ಮಿತ ಕನ್ನಡ ಕಿರುಚಿತ್ರಗಳು.

2026ರ ಜನವರಿ 31ರೊಳಗೆ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕ ಕೇವಲ ₹1,000; ₹500 ತಡಶುಲ್ಕದೊಂದಿಗೆ ಫೆಬ್ರುವರಿ 14ರೊಳಗೆ ಸಲ್ಲಿಸಬಹುದು.

https://forms.gle/x5AZeeKkiDWbnvCA9 ಮೂಲಕ ಸಲ್ಲಿಸಬಹುದು.

ಮಾಹಿತಿಗಾಗಿ www.gubbivanitrust.ngo ಅಥವಾ 8867747236 ಮೂಲಕ ಸಂಪರ್ಕಿಸಬಹುದು.

ಗುಬ್ಬಿವಾಣಿ ಟ್ರಸ್ಟ್ ನ ಸ್ಥಾಪಕ ಟ್ರಸ್ಟೀ ಮಾಲವಿಕ ಗುಬ್ಬಿವಾಣಿ ಅವರು ಈ ಕುರಿತು ಮಾತನಾಡಿದ್ದು, “ಮಹಿಳಾ ಪ್ರಧಾನ ಪಾತ್ರವಿರುವ, ಮಹಿಳಾ ದೃಷ್ಟಿಕೋನಗಳಿರುವ, ಲಿಂಗಸಮಾನತೆ, ಮಹಿಳಾ ಸಬಲೀಕರಣ ಮುಂತಾದ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರಲಿ. ಇದು ಕೇವಲ ಕಿರುಚಿತ್ರೋತ್ಸವವಲ್ಲ – ಮಹಿಳಾ ಸಬಲೀಕರಣದ ಒಂದು ಸಾಂಸ್ಕೃತಿಕ ಚಳುವಳಿ .” ಎಂದು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ