ಶರತ್ ಚಂದ್ರ
ಈ ತಿಂಗಳು ಜನವರಿ 8 ರಂದು ಹುಟ್ಟುಹಬ್ಬ ಆಚರಿಸಿ ಕೊಂಡ ರಾಕಿಂಗ್ ಸ್ಟಾರ್ ಯಶ್ ಆ ದಿನ ಭಾರತ ಚಿತ್ರರಂಗದ ಒಂದಷ್ಟು ಜನ ವಿಶ್ ಮಾಡಿದ್ರು. ಅದೇ ದಿನ ಟಾಕ್ಸಿಕ್ ಸಿನಿಮಾದ ಯಶ್ ನಿರ್ವಹಿಸುತ್ತಿರುವ ‘ರಾಯ ‘ ಪಾತ್ರದ ಟೀಸರ್ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. ಹುಟ್ಟುಹಬ್ಬಕ್ಕೆ ಶುಭಾಶಯಗಳು ಹೇಳುವುದರ ಜೊತೆಗೆ ಟೀಸರ್ ಬಗ್ಗೆ ಒಂದಷ್ಟು ಮೆಚ್ಚುಗೆಯನ್ನು ಬಾಲಿವುಡ್ ಸೇರಿ ಅನೇಕರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದರು
.ಕರಣ್ ಜೋಹಾರ್, ವಿಕ್ಕಿ ಕೌಶಲ್,ವರುಣ್ ಧವನ್,ಆಲಿಯಾ ಭಟ್,ಸಿದ್ದಾರ್ಥ್ ಮಲ್ಹೋತ್ರ,ದಬ್ಬೂ ರತಾನಿ, ಆಶಿಕಾ ರಂಗನಾಥ್, ಸಪ್ತಮಿ ಗೌಡ, ಹಾಗೂ ಟಾಕ್ಸಿಕ್ ಚಿತ್ರದ ನಿರ್ದೇಶಕಿ ಮತ್ತು ಎಲ್ಲಾ ನಾಯಕಿಯರಿಗೆ ಯಶ್ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಹಾಕುವುದರ ಮೂಲಕ ಧನ್ಯವಾದ ತಿಳಿಸಿದ್ದಾರೆ. ವಿಶೇಷವೆಂದರೆ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಮೊದಲು ತಮ್ಮ ಜರ್ನಿಯಲ್ಲಿ ಜೊತೆಗಿದ್ದ ಗೂಗ್ಲಿ ನಾಯಕಿ ಕೃತಿ ಕರಬಂಧ, ಕೆ. ಜಿ. ಎಫ್ ಛಾಯಾಗ್ರಾಹಕ ಭುವನ್ ಗೌಡ ಮುಂತಾದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಮಾಸ್ಟರ್ ಪೀಸ್ ಸಹ ನಟ ಚಿಕ್ಕಣ್ಣ ಗೆ ಥಾಂಕ್ಯೂ ಚಿಕ್ಕು ಎಂದು ಬರೆದುಕೊಂಡಿದ್ದರೆ,ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಥಾಂಕ್ ಯು ಸಂತು ಅಂತ ಉತ್ತರ ನೀಡಿದ್ದಾರೆ. ಅಕುಲ್ ಬಾಲಾಜಿಗೆ ಥ್ಯಾಂಕ್ಸ್ ಗೆಳೆಯ ಎಂದು ಕಾಮೆಂಟ್ ಹಾಕಿದ್ದಾರೆ.

ಇನ್ನು ಮುಖ್ಯ ವಿಷಯಕ್ಕೆ ಬರೋಣ. ಬರ್ತ್ಡೇ ದಿನ ಸುದೀಪ್ ತಮ್ಮ X ಖಾತೆಯಲ್ಲಿ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಬರ್ತ್ಡೇ ವಿಶ್ ಮಾಡಿ ಟ್ವೀಟ್ ಮಾಡಿದ್ದರು. ಸುದೀಪ್ ಮತ್ತು ಯಶ್ ಅಭಿಮಾನಿಗಳು ಯಶ್ ಅವರ ರಿಪ್ಲೈ ಗಾಗಿ ಕಾಯುತ್ತಿದ್ದರು.ಯಶ್ ಸ್ವಲ್ಪ ಸಮಯ ತೆಗೆದು ಕೊಂಡು ಸುದೀಪ್ ಗೆ ‘ಸರ್ ‘ಎಂದು ಸಂಭೋಧಿಸಿ,ನನ್ನ ಹಿರಿಯರಿಂದ ಮತ್ತು ನಿಮ್ಮಿಂದ ನಾನು ಕಲಿತ ಒಂದು ವಿಷಯವೆಂದರೆ ಏಕಾಗ್ರತೆ, ಪ್ರಾಮಾಣಿಕತೆ ಮತ್ತು ಧೈರ್ಯದೊಂದಿಗೆ ಮುನ್ನುಗುವ ಕಲೆ ಎಂದು ಉತ್ತರ ನೀಡಿದ್ದಾರೆ.

ಯಶ್ ಚಿತ್ರರಂಗಕ್ಕೆ ಕಾಲಿಟ್ಟಾಗ ಸುದೀಪ್ ಆಗಲೇ ಸ್ಟಾರ್ ಆಗಿದ್ದರು. ಬಹುಶಃ ಇದೇ ಒಂದು ಕಾರಣಕ್ಕಾಗಿ ಸುದೀಪ್ ಅವರನ್ನು ಸರ್ ಎಂದು ಯಶ್ ಟ್ವಿಟ್ ನಲ್ಲಿ ಕರೆದಿದ್ದಾರೆ. ಸುದೀಪ್ ಯಶ್ ಅಂತ ದೊಡ್ಡ ಸ್ನೇಹಿತರಲ್ಲ.

ಸ್ಟಾರ್ ವಾರ್ ನಡೆಯುತ್ತಿರುವ ಈ ದಿನಗಳಲ್ಲಿ ಇವರಿಬ್ಬರ ಬಾಂಧವ್ಯ ನೋಡಿ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ. 2024 ರಂದು ಉಪ್ಪಿ ನಟಿಸಿ ನಿರ್ದೇಶಿಸಿದ UI ಚಿತ್ರ ಮಲ್ಟಿಪ್ಲೆಕ್ಸ್ ನಲ್ಲಿ ನೋಡಲು ಬಂದಾಗ ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಫೋಟೋಗಳು ಈಗ ಮತ್ತೆ ವೈರಲ್ ಆಗಿದೆ





