ನಿಮ್ಮ ಮನೆಯನ್ನು ಅಪರೂಪದ, ವಿಶಿಷ್ಟ ಗೃಹಾಲಂಕಾರದಿಂದ ಚಂದಗೊಳಿಸಿ, ಅದಕ್ಕೆ ಸೆಲೆಬ್ರಿಟಿ ಲುಕ್ಸ್ ಬರುವಂತೆ ಏಕೆ ಟ್ರೈ ಮಾಡಬಾರದು….?

ಇತ್ತೀಚೆಗೆ ಹೋಂ ಇಂಟೀರಿಯರ್‌ ಡೆಕೋರ್‌ ಅಂದ್ರೆ ಎಥ್ನಿಕ್‌ ಲುಕ್ಸ್ ಕಾರ್ಪೆಂಟರಿ ಸ್ಟೈಲ್ ‌ನ ಟ್ರೆಂಡ್‌ ಜೋರಾಗಿದೆ. ಇದಕ್ಕಾಗಿ ಅತಿ ದುಬಾರಿಯಾದ ಗೃಹಾಲಂಕಾರದ ಸಾಮಗ್ರಿ, ಪೀಠೋಪಕರಣಗಳು ಇತ್ಯಾದಿ ಏನೂ ಬೇಕಿಲ್ಲ. ನಿಮ್ಮ ಅಭಿರುಚಿ, ಕಲಾತ್ಮಕತೆ, ಮ್ಯಾನೇಜ್‌ ಮೆಂಟ್‌ ಟೆಕ್ನಿಕ್ಸ್, ಹೊಸ ವಿಚಾರವಂತಿಕೆ, ಹೊಸ ಜೀವನಶೈಲಿ ಇತ್ಯಾದಿಗಳ ಆಧಾರದಿಂದ ನಿಮ್ಮ ಮನೆಯನ್ನು ಭವ್ಯವಾಗಿಸಿ.

ಮನೆಯ ಗೃಹಾಲಂಕಾರ ಗಮನಿಸಿ ಗೃಹಿಣಿಯ ಕ್ರಿಯೇಟಿವಿಟಿ ಅಂದಾಜಿಸಬಹುದು. ಏಕೆಂದರೆ ಗೃಹಾಲಂಕಾರ ಎಂಬುದು ಗೃಹಿಣಿಯ ವ್ಯಕ್ತಿತ್ವದ ಕೈಗನ್ನಡಿ ಎಂದರೆ ಉತ್ಪ್ರೇಕ್ಷೆಯಲ್ಲ.

ಇಂದಿನ ಆಧುನಿಕ ಇಂಟೀರಿಯರ್‌ ಡಿಸೈನಿಂಗ್‌ ನಲ್ಲಿ ಮಿನಿಮಿಲಸ್ಟ್, ಪೇಸ್ಟ್‌ ಕಲರ್ಸ್‌ ಪ್ರಮುಖ ಸ್ಥಾನ ಪಡೆಯುತ್ತವೆ. ಈ ಸಲುವಾಗಿಯೇ ಬಾಲಿವುಡ್‌ ನಟಿ ಕಿಯಾರಾ ಅಡ್ವಾನಿ ತನ್ನ ಮನೆಗೆ ಐವರಿ ಕಲರ್‌ ಆರಿಸಿದ್ದಾಳೆ, ಜಾನ್‌ ಅಬ್ರಹಾಂ ಜ್ಯಾಕ್ಲೀನ್ ಫರ್ನಾಂಡಿಸ್‌ ಸಹ ತಮ್ಮ ಮನೆಗಳಿಗೆ ಅಪ್ಪಟ ಹಾಲು ಬಿಳುಪಿನ ಬಣ್ಣ ಬಳಸಿದ್ದಾರೆ. ಹಲವಾರು ಆಧುನಿಕ ಡಿಸೈನಿನ ಫ್ಲವರ್ ಪಾಟ್ಸ್  ಗ್ರೀನ್‌ ಪ್ಲಾಂಟ್ಸ್ ಗಳಿಂದ ಈ ಬಣ್ಣ ಮಿರಿಮಿರಿ ಮಿರುಗುವಂತೆ ಕಾಣಿಸುತ್ತದೆ.

ಈಗ ಕಿಟಕಿಗಳಿಗೆ ಅತ್ಯಾಧುನಿಕ ಡಿಸೈನಿನ ಗ್ಲಾಸ್‌ ಅಳವಡಿಕೆ ಮಾಮೂಲಿ. ಇದಕ್ಕೆ ತೆಳು ಶೀಯರ್‌ ಪರದೆ ಬಳಸುವುದು ವಾಡಿಕೆ, ಇಲ್ಲಿ ಹೆವಿ ಬಣ್ಣ ಬಣ್ಣದ ಪರದೆ ಬೇಡ. ಸಿನಿಮಾ ನಟನಟಿಯರು ಸಹ ದಿನವಿಡೀ ಕಣ್ಣು ಕೋರೈಸುವ ಬೆಳಕಿನ ಶೂಟಿಂಗ್‌ ನಲ್ಲಿ ಮುಳುಗಿದ್ದು, ಸಂಜೆ ನಂತರ ಮನೆಗೆ ಹಿಂದಿರುಗಿದಾಗ, ಇಂಥ ಸರಳ ಬಣ್ಣಗಳಿಂದ ಅಲಂಕೃತ ಮನೆ ಅವರ ಮನಸ್ಸಿಗೆ ಎಷ್ಟೋ ತಂಪನ್ನು ನೀಡುತ್ತದೆ. ಈ ಕ್ಷಣಗಳು ಅವರಿಗೆ ಖಾಸಗಿಯದಾಗಿರುತ್ತವೆ. ಇಲ್ಲಿ ಸಂಭಾಷಣೆ, ಶೂಟಿಂಗ್‌ ನ ಕಿರಿಕಿರಿ ಇಲ್ಲದೆ ಅವರು ಮನಶ್ಶಾಂತಿ ಬಯಸುತ್ತಾರೆ.

ಬಣ್ಣಗಳ ಪ್ರಾಮುಖ್ಯತೆ

ಇಂಟೀರಿಯರ್‌ ಡಿಸೈನಿಂಗ್‌ ಇಲ್ಲದಿದ್ದರೆ ಮನೆ ಆಶ್ರಮದ ಹಾಗೆ ತೋರುತ್ತದೆ. ಇಂಟೀರಿಯರ್ಸ್‌ ನಿಂದ ನಿಮ್ಮ ಜೀವನಶೈಲಿ ಎಂಥದ್ದು ಎಂಬುದು ತಿಳಿಯುತ್ತದೆ, ಹೀಗಾಗಿ ನೀವು ನಿಮ್ಮ ಮನೆಯ ಗೃಹಾಲಂಕಾರದತ್ತ ವಿಶೇಷ ಗಮನ ನೀಡಬೇಕು. ಹೀಗೆ ಇಂಟೀರಿಯರ್ಸ್‌ ರೆಡಿ ಮಾಡಿಸುವಾಗ ಅಲ್ಲಿ ಬಣ್ಣಗಳು ಬಲು ಪ್ರಾಮುಖ್ಯತೆ ವಹಿಸುತ್ತವೆ. ಬಣ್ಣ ಎದ್ದು ಕಾಣುವಂತಿರಬೇಕು, ಆದರೆ ಕಣ್ಣಿಗೆ ರಾಚುವಂತಿರಬಾರದು.

ಇಂದು ಎಲ್ಲರೂ ಬಯಸುವುದು ಲೈಟ್‌ ಕಲರ್ಸ್‌ ಮಾತ್ರ. ಇದು ಕಂಗಳಿಗೆ ಹೆಚ್ಚಿನ ಆರಾಮ ನೀಡುತ್ತದೆ. ಇದರಲ್ಲಿ ಬಿಳಿ ಬಣ್ಣ, ಆಫ್ ವೈಟ್‌ ಪ್ರಮುಖ ಎನಿಸಿವೆ. ಇದರ ನಂತರ ಗೃಹಾಲಂಕಾರದಲ್ಲಿ ಹೂ (ಸಹಜ ಯಾ ಕೃತಕ) ಮುಖ್ಯವಾಗುತ್ತದೆ. ಮನೆಯಲ್ಲಿ ಎಲ್ಲಾ ಕಡೆ ಬಳುಕುವ ಹೂಗಳನ್ನಿರಿಸಿ ಅಲಂಕರಿಸಿದರೆ ಚಂದ! ಹೂಕುಂಡಗಳು ಹೆಚ್ಚಿದ್ದರೂ ಅಂದ! ಹೂ, ಹಸಿರಿನ ಎಲೆಗಳ ಈ ಅಲಂಕಾರ ಎಂಥವರ ಮನಸ್ಸನ್ನೂ ಗೆಲ್ಲಬಲ್ಲದು, ಇದರಿಂದ ಮನೆ ಎಷ್ಟೋ ತಾಜಾ ಅನಿಸುತ್ತದೆ. ಒಂದೇ ಬಗೆಯದನ್ನು ಬಳಸದೆ ಪ್ರತಿ ಸಲ ಬಗೆಬಗೆಯದನ್ನು ವಿಭಿನ್ನ ರೀತಿಯಲ್ಲಿ ಅಲಂಕರಿಸಿ ಸಂಭ್ರಮಿಸಿ! ಇದರಿಂದ ಗೃಹಾಲಂಕಾರದಲ್ಲಿ ಹೊಸ ಬಗೆಯ ನಾವೀನ್ಯತೆ ಮೂಡುತ್ತದೆ.

ಮನೆ ಎಂಬುದು ಪ್ರತಿಯೊಬ್ಬರ ಕನಸಿನ ಪ್ರತೀಕ. ಮನೆ ಚಿಕ್ಕದು ಅಥವಾ ದೊಡ್ಡದಿರಲಿ, ಅದರಲ್ಲಿ ನಾವು 2 ಅಥವಾ 3 ಗಂಟೆಗಳ ಕಾಲವೇ ಇರಲಿ, ಅದರಿಂದ ವ್ಯಕ್ತಿಗೆ ಅಪಾರ ಮನಶ್ಶಾಂತಿ ಸಿಗುತ್ತದೆ. ಸಾಮಾನ್ಯವಾಗಿ ಸೆಲೆಬ್ರಿಟೀಸ್‌ ತಮ್ಮ ಮನೆಗಳಿಗೆ ಚಂದದ ಟಚ್‌ ನೀಡಲು, ಸದಾ ಆಫ್‌ ವೈಟ್‌ ಬಣ್ಣಗಳನ್ನೇ ಆರಿಸುತ್ತಾರೆ. ಇದರಲ್ಲಿ ಲೈಟ್‌ ಗ್ರೀನ್‌ ಟಚ್‌ ಇದ್ದೇ ಇರುತ್ತದೆ. ಬೆಡ್‌ ರೂಂ ತುಸು ಬ್ರೈಟ್‌ ಕಲರ್ಸ್‌ ಹೊಂದಿರುತ್ತದೆ. ಗೋಡೆಗಳಿಗೆ ಬ್ಯೂಟಿಫುಲ್ ಕಲರ್ಸ್‌ ಆರಿಸಿರುತ್ತಾರೆ. ಜೊತೆಗೆ ಮೇಲ್ಭಾಗದ ಛಾವಣಿಗೆ ಕೃತಕ ತಾರೆಗಳ ಅಳವಡಿಕೆ ಇರುತ್ತದೆ. ರಾತ್ರಿ ಮಲಗುವಾಗ ದೀಪ ಆರಿಸಿದ ನಂತರ ವಿಶಾಲ ಆಗಸದ ಕೆಳಗೆ ಮಲಗಿರುವಂಥ ಭಾವನೆ ಮೂಡುತ್ತದೆ.

ಕ್ಲಾಸಿಕ್ಲುಕ್ಸ್

ಇದರ ಜೊತೆಗೆ ಯಂಗ್‌ ಸೆಲೆಬ್ರಿಟೀಸ್‌ ತಮ್ಮ ಮನೆಯ ಪ್ರತಿ ಮೂಲೆಯಲ್ಲೂ ಸಾಫ್ಟ್ ಟಾಯ್ಸ್ ಇಡಲು ಬಹಳ ಇಷ್ಟಪಡುತ್ತಾರೆ. ಅದು ಟಿವಿ ಮೇಲೆ ಅಥವಾ ಡ್ರಾಯಿಂಗ್‌ ರೂಮಿನ ಟೀಪಾಯಿ ಮೇಲೆ ಆಗಿರಬಹುದು. ಬಣ್ಣಗಳ ಕಲಾತ್ಮಕ ಸಂಗಮ ಇರುವಂತೆ ಈ ಟಾಯ್ಸ್ ಜೋಡಣೆ ಇರುತ್ತದೆ. ನೀವು ಬಳಸುವ ಪರದೆಗಳ ರಂಗು, ಗೋಡೆಗಳ ಬಣ್ಣಕ್ಕೆ ಹೊಂದುವಂತಿರಲಿ.

ಲೈಟ್‌ ಕಲರ್ಸ್‌ ಬಳಸುವುದರಿಂದ ಸೆಲೆಬ್ರಿಟೀಸ್‌ ಮನೆಯನ್ನು ಹೆಚ್ಚು ಸ್ಪೇಶಿಯಸ್‌ ಮಾಡುತ್ತಾರೆ. ಬಣ್ಣಗಳ ಟಚ್‌ ರಿಚ್‌ ಆಗಿರಲು, ಗೋಲ್ಡನ್‌ರೆಡ್‌ ಬಣ್ಣ ಪ್ರಯೋಗಿಸಬಹುದು. ಮನೆಯ ಫರ್ನೀಚರ್‌ ಬ್ರೌನ್‌ಲೈಟ್‌ ಕಲರ್‌ ನದೇ ಆಗಿರಲಿ. ಇದು ಮನೆಯ ಲ್ಯಾಂಪ್‌ ಶೇಡಿನ ಕ್ಲಾಸಿಕ್‌ ಲುಕ್ಸ್ ನ್ನು ಆಧರಿಸಿದಂತಿರಲಿ.

ಬಣ್ಣಗಳ ಹಾಗೆಯೇ ಬೆಳಕಿನ ವ್ಯವಸ್ಥೆ ಸಹ ಅಚ್ಚುಕಟ್ಟಾಗಿರಬೇಕು. ಮನೆಯನ್ನು ಸುಂದರ, ಅತ್ಯಾಕರ್ಷಕಗೊಳಿಸಲು ಕ್ರಿಸ್ಟಲ್ ಕಲೆಕ್ಷನ್‌ ಮಾಡಿ. ಇವುಗಳ ಕ್ಲೀನಿಂಗ್‌ ಜವಾಬ್ದಾರಿಯನ್ನು ಆಳುಗಳಿಗೆ ಬಿಡುವ ಬದಲು ಮನೆಯವರೇ ನಿರ್ವಹಿಸಬೇಕು. ಆಗಾಗ ಮನೆಯ ಗೃಹಾಲಂಕಾರದಲ್ಲಿ ಸಣ್ಣಪುಟ್ಟ ಬದಲಾವಣೆ ಇರಲಿ.

ಕನಸು ನನಸಾಗಿಸುವ ಮನೆ ಸಿನಿ ಕಲಾವಿದರಿಗೆ ಕೇವಲ ನಟನೆಯ ಹುಚ್ಚು ಮಾತ್ರ ಇರುವುದಿಲ್ಲ, ಬದಲಿಗೆ ತಮ್ಮ ಮನೆಯನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳುವುದರತ್ತಲೂ ಹೆಚ್ಚಿನ ಗಮನ ಇರುತ್ತದೆ. ತಮ್ಮ ಮನೆಯಲ್ಲಿನ ಈ ರೀತಿಯ ಒಂದೊಂದು ಗೃಹಾಲಂಕಾರದ ವಸ್ತುವನ್ನೂ ಕಂಡಾಗ, ಏನೋ ಹೆಚ್ಚಿನ ಆನಂದ ಉಕ್ಕುತ್ತದೆ. ಪ್ರತಿ ಸೆಲೆಬ್ರಿಟಿ ನಟಿ ಅಪ್ಪಟ ಗೃಹಿಣಿಯಾಗಿರುತ್ತಾಳೆ ಎಂಬುದನ್ನು ನೆನಪಿಡಿ. ಮನೆಯ ವಾತಾವರಣ 5 ಸ್ಟಾರ್‌ ಹೋಟೆಲ್ ‌ನಂತಿರದೆ, ನಾರ್ಮಲ್ ಆಗಿರಲಿ. ಪಾರ್ಟಿಗಳನ್ನು ಏರ್ಪಡಿಸಿದಾಗ ಯಾವ ವಸ್ತು ಮುರಿಯದಂತೆ ಎಚ್ಚರಿಕೆ ವಹಿಸಿ.

ಸೆಲೆಬ್ರಿಟೀಸ್‌ ಗೆ ತಮ್ಮ ಮನೆಯ ಗೃಹಾಲಂಕಾರದ ಜವಾಬ್ದಾರಿ ತಾವೇ ಹೊರಬೇಕೆಂಬ ಆಸೆ ಇರುತ್ತದೆ. ಇಡೀ ದಿನದ ಶ್ರಮದಾಯಕ ದುಡಿಮೆಯ ನಂತರ ಮನೆಗೆ ಬಂದಾಗ ಅದು ನೆಮ್ಮದಿಯ ತಾಣವಾಗಿ ಮನಸ್ಸಿಗೆ ಆನಂದ ತುಂಬುವಂತಿರಬೇಕು, ಮನೆಯಲ್ಲಿನ ವಾತಾವರಣ ಮನಸ್ಸಿಗೆ ಹಿತ ನೀಡುವಂತಿರಬೇಕು.

ಜಿ. ಸುಮನಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ