`ತೂ ಝೂಠಿ ಮೈ ಮಕ್ಕಾರ್‌’ ಚಿತ್ರ 200 ಕ್ರೋರ್‌ ಕ್ಲಬ್‌ ಸೇರಿದ ನಂತರ ಶ್ರದ್ಧಾ `ಸ್ತ್ರೀ-2′ ಚಿತ್ರವನ್ನು ಸಹ 600 ಕ್ರೋರ್‌ ಕ್ಲಬ್‌ ಗೆ ಅತಿ ಸಮೀಪ ಕೊಂಡೊಯ್ದಿದ್ದಾಳೆ! ಇದಕ್ಕಾಗಿ ಇವಳಿಗೆ ಯಾವ ಬ್ಯಾನರ್‌ ಸಹಾಯ ಬೇಕಿರಲಿಲ್ಲ, ಯಾವ ಗಾಡ್‌ ಫಾದರ್ರೂ ಇರಲಿಲ್ಲ! ಇದೆಲ್ಲ ಇವಳ ಸರಿಯಾದ ನಿರ್ಧಾರಗಳ ಗುರುತಾಗಿತ್ತು. ಸುದ್ದಿಗಾರರ ಪ್ರಕಾರ ಶ್ರದ್ಧಾ ಇದೀಗ  `ನೋ ಎಂಟ್ರಿ-2′ ಹಾಗೂ `ಚಾಲ್ ಬಾಝ್ ಇನ್‌ ಲಂಡನ್‌’ ಚಿತ್ರಗಳಲ್ಲಿ ನಟಿಸಲಿದ್ದಾಳೆ. ಇವೆರಡೂ ಕೋಟ್ಯಂತರ ರೂ.ಗಳ ಪ್ರಾಜೆಕ್ಟ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ಇವೆರಡೂ ಗೆದ್ದೇ ಗೆಲ್ಲುತ್ತೆ ಎಂದು ಇಂಡಸ್ಟ್ರಿಯಲ್ಲಿ ಎಲ್ಲೆಲ್ಲೂ ಚರ್ಚೆ ಕೇಳಿಬರುತ್ತಿದೆ. ಶಭಾಷ್ ಶ್ರದ್ಧಾ….. ನೀನು ಹೀಗೇ ಮುಂದುರಿಯುತ್ತಿದ್ದರೆ, ಮಮ್ಮಿಗಳಾಗಿರುವ ದೀಪಿಕಾ ಆಲಿಯಾ ಮನೆಗಂಟಿಕೊಂಡೇ ಇರಬೇಕಾದೀತು!!

Karan_Ke_Sahare_Hu

ಕರಣ್ ಸಹಾಯದಿಂದ ಉಳಿದಿರುವ ಅನನ್ಯಾ ಪಾಂಡೆ

ಅನನ್ಯಾ ಪಾಂಡೆಯನ್ನು ಸ್ಟಾರ್‌ ಪುತ್ರರ ಲಾಂಚಿಂಗ್‌ ಪ್ಯಾಡ್‌ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ `ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಚಿತ್ರಕ್ಕಾಗಿ ಲಾಂಚ್‌ ಮಾಡಿತ್ತು. ಅದಾದ ನಂತರ ಕರಣ್‌ ನ ಸಹಕಾರದಿಂದ ಅನನ್ಯಾಳ ಕೆರಿಯರ್‌ ನಿಧಾನಕ್ಕೆ ಮೇಲೇರ ತೊಡಗಿತು. ಇದೀಗ ಈಕೆ `ಕಾಲ್ ‌ಮೀ ಬೇ’ ವೆಬ್ ಸೀರೀಸ್‌ ನಲ್ಲಿ ಕ್ರಿಯೇಟಿವ್ ‌ಆಗಿ ಕಾಣಿಸಿಕೊಂಡಿದ್ದಾಳೆ, ಇದರ ಪ್ರೊಡ್ಯೂಸರ್ ಕರಣ್‌ ಜೌಹರ್‌ ಅಲ್ಲದೆ ಬೇರೆ ಯಾರಾಗಿರಲು ಸಾಧ್ಯ? ಆದರೆ ಇಡೀ ಸೀರೀಸ್‌ ಮತ್ತು ಇವಳ ನಟನೆ ಎರಡೂ ಮಹಾ ಕಿರಿಕಿರಿ, ತಲೆನೋವು ಎಂದು ಪ್ರೇಕ್ಷಕರು ಸಾರಾಸಗಟಾಗಿ ಪಕ್ಕಕ್ಕೆ ಒತ್ತರಿಸಿದ್ದಾರೆ! ಈಗ ಪ್ರಶ್ನೆ ಎಂದರೆ, ಇವಳ ಗಾಡ್‌ ಫಾದರ್‌ ಕರಣ್ ಮುಂದೆ ಇವಳನ್ನು ಯಾವುದಕ್ಕೂ ರೆಕಮೆಂಡ್‌ ಮಾಡದಿದ್ದರೆ, ಇವಳ ಗತಿ ಏನಾದೀತು? ಇದರ ಕುರಿತು ತುಸು ಗಂಭೀರವಾಗಿ ಆಲೋಚಿಸಮ್ಮ ಅನನ್ಯಾ, ನಿನ್ನ ಮುಂದಿನ ಪ್ರಾಜೆಕ್ಟ್ಸ್, ಪಾತ್ರಗಳನ್ನು ಆರಿಸಿಕೊಳ್ಳುವಾಗ ಎಚ್ಚರವಾಗಿರು, ಇಂದು ನಿನ್ನ ಓರಗೆಯವರಾದ ಜಾಹ್ನವಿ ಕಪೂರ್‌. ಸಾರಾ ಆಲಿ ಖಾನ್‌ ಎಷ್ಟೋ ಮುಂದುರಿದಿದ್ದಾರೆ ಎಂದು ಹಿತೈಷಿಗಳು ಹೇಳುವ ಕಿವಿಮಾತುಗಳನ್ನು ಕೇಳಿದರೆ ಇವಳು ಗೆದ್ದಾಳು, ಇಲ್ಲದಿದ್ದರೆ…..?

Punjabi_filmo_me

ಪಂಜಾಬಿ ಚಿತ್ರಗಳಲ್ಲಿ ಮಿಂಚುತ್ತಿರುವ ಜ್ಯಾಸ್ಮಿನ್

ಕಾರ್ನಿಯಲ್ ಡ್ಯಾಮೇಜ್‌ ನಿಂದ ಹೇಗೋ ಹೊರಬಂದ ನಟಿ ಜ್ಯಾಸ್ಮಿನ್‌ ಭಸೀನ್‌, ತನ್ನ ಹೊಸ `ಅರ್ದಾಸ್‌ ಸರ್ಬತ್‌ ದೇ ಭೀ ದೀ’ ಪಂಜಾಬಿ ಚಿತ್ರದಲ್ಲಿ ಎಲ್ಲರಿಂದ ಸೈ ಎನಿಸಿಕೊಂಡ ಈಕೆ, ಈಗ ಅದರ ಪ್ರಮೋಶನ್‌ ನಲ್ಲಿ ಭೀ ಬಿಝಿ ಆಗಿದ್ದಾಳೆ. ಇದು ಈಕೆಯ 4ನೇ ಪಂಜಾಬಿ ಚಿತ್ರ. ಕಿರು ತೆರೆಯಿಂದ ಹಿರಿ ತೆರೆಗೆ ಬಂದ ನಂತರ, ಜ್ಯಾಸ್ಮಿನ್‌ ಎಲ್ಲಕ್ಕಿಂತ ಹೆಚ್ಚಾಗಿ ಪಂಜಾಬಿ ಚಿತ್ರಗಳಲ್ಲಿ ಉತ್ತಮ ಹೆಸರು ಗಳಿಸಿದಳು. ಇವಳ ಸೋಕಾಲ್ಡ್ FB ‌ಅಲೀ ಗೋನಿಯ ಜೊತೆಗೆ ತೆರೆಮರೆಯ ರೊಮಾನ್ಸ್ ನಲ್ಲೂ ಅಷ್ಟೇ ಚರ್ಚೆಯಲ್ಲಿರುತ್ತಾಳೆ. ಸುದ್ದಿಗಾರರ ಪ್ರಕಾರ ಇಷ್ಟರಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಕಿರುತೆರೆಯ `ಬಿಗ್‌ ಬಾಸ್‌’ನಿಂದ ಆರಂಭವಾದ ಇವರ ದೋಸ್ತಿ, ಇದೀಗ ದೊಡ್ಡ ಲವ್ ಸ್ಟೋರಿ ಆಗಿದೆ. ಲವ್ ಅಫೇರ್‌ ಸರಿ, ಆದರೆ ಇಷ್ಟು ಬೇಗ ಮದುವೆಯಾಗಿ ಆಂಟಿ ಆದರೆ ಮುಂದೆ ಫಿಲ್ಮಿ ಕೆರಿಯರ್‌ ಉದ್ಧಾರ ಆದೀತೇ? ಎನ್ನುತ್ತಿದ್ದಾರೆ ಹಿತೈಷಿಗಳು.

Shriya_ki_style

`ಇದೇ ನನ್ನ ಹೊಸ ಸ್ಟೈಲ್!’ ಶ್ರಿಯಾ

ಇತ್ತೀಚೆಗೆ ಒಂದು ಚಿತ್ರದ ಪ್ರಮೋಶನ್‌ ಗಾಗಿ ದೆಹಲಿಗೆ ಬಂದಿದ್ದ ಶ್ರಿಯಾ ಪಿಳಗಾಂವ್ ಕರ್‌ ಳ ಡ್ರೆಸ್‌ ನ್ನು ಸೆರೆಹಿಡಿದ ಬಾಲಿವುಡ್‌ ನ ಫೋಟೋಗ್ರಾಫರ್ಸ್‌, ಅದಕ್ಕೆ ಎಲ್ಲಾ ಕಡೆ ಪ್ರಚಾರ ಕೊಡಿಸಿದರು. ನಿಮಗೂ ಇವಳ ಈ ಡ್ರೆಸ್‌ ಹಿಡಿಸಿತೇ? ಹ್ಞೂಂ ಅನಿಸಿದರೆ, ಇದನ್ನು ನೀವು ಸುಲಭವಾಗಿ ಆನ್‌ ಲೈನ್‌ ಶಾಪಿಂಗ್‌ ವೆಬ್‌ ಸೈಟ್ಸ್ ನಲ್ಲಿ ಹುಡುಕಬಹುದು. ಇದರದೇ ಪಡಿಯಚ್ಚು ನಿಮಗೆ 1000/ ರೂ.ಗೆ ಸಿಕ್ಕಿದರೆ, ಇದರ ಒರಿಜಿನಲ್ ಮಾತ್ರ 1000 ಡಾಲರ್ಸ್‌ ಎಂದು ನೆನಪಿಡಿ! ಅಸಲಿ ಏನು…. ನಕಲಿ ಏನು….. ಒಂದು ಈವ್ನಿಂಗ್‌ ಪಾರ್ಟಿಗೆ ಇದು ನಿಮಗೆ ಹೆಚ್ಚು ಸೂಟ್‌ ಆಗುತ್ತದೆ ಎಂಬುದರಲ್ಲಿ ಸಂದೇಹ ಬೇಡ. ಇನ್ನೇಕೆ ತಡ……?

Typecast_Ho_Gaye_Rajkumar

ಇವತ್ತೇ ಖರೀದಿಸಿ ಪಾರ್ಟಿ ಎಂಜಾಯ್ಮಾಡಿ!????

ಒಂದೇ ಪಾತ್ರಕ್ಕೆ ಅಂಟಿ ಕುಳಿತ ರಾಜ್‌ ಕುಮಾರ್‌ OTT ಹಾಗೂ ಹಿರಿ ತೆರೆಯಲ್ಲಿ ಬಿಡುಗಡೆಯಾದ ಕೆಲವೊಂದು ಚಿತ್ರ ಬಿಟ್ಟರೆ, ರಾಜ್‌ ಕುಮಾರ್‌ ರಾವ್ ‌ಕಳೆದ ಹಲವಾರು ವರ್ಷಗಳಿಂದ, ಕೇವಲ ಕಾಮಿಡಿ ಚಿತ್ರಗಳಿಗಷ್ಟೇ ಅಂಟಿ ಕುಳಿತಿದ್ದಾನೆ. `ಸ್ತ್ರೀ-2′ ಚಿತ್ರದ ನಂತರ ಈತನ ಹೊಸ `ವಿಕ್ಕಿ ವಿದ್ಯಾ ಕಾ ವಿಡಿಯೋ’ ಚಿತ್ರ ಬಿಡುಗಡೆ ಭಾಗ್ಯ ಕಾಣದೆ ತೊಳಲಾಡುತ್ತಿದೆ. ಇದರ ಟ್ರೇಲರ್‌ ನಿಂದಲೇ ಈ ಚಿತ್ರ ಮಹಾನ್‌ ಸ್ಪೆಷಲ್ ಏನೂ ಅಲ್ಲ ಎಂದು ಸಾಬೀತಾಗುತ್ತದೆ, ಕಾಮಿಡಿಗಷ್ಟೇ ಇದು ಸೀಮಿತವಾಗಿದೆ. ಇಷ್ಟು ಹೊತ್ತಿಗೆ ಈತನಿಗೂ ತಾನು ಕೇವಲ ಟೈಪ್‌ ಕಾಸ್ಟ್ ಆಗುತ್ತಿದ್ದೇನೆ ಎಂಬುದು ತಿಳಿಯುತ್ತಿದೆ. ಈತನಂಥ ಒಬ್ಬ ನುರಿತ, ಪ್ರತಿಭಾನ್ವಿತ ನಟನಿಗೆ ಹೀಗಾಗುವುದು ಖಂಡಿತಾ ಸರಿಯಲ್ಲ. ಎಷ್ಟೋ ಗಂಭೀರ ಪಾತ್ರ ನಿಭಾಯಿಸಿರುವ ಈತ, ಮುಂದೆ ಇನ್ನೂ ಗಟ್ಟಿ ಪಾತ್ರಗಳಲ್ಲಿ ಮಿಂಚಲು ಸಾಧ್ಯ. ಕ್ವಾಂಟಿಟಿ ಬಿಟ್ಟು ಕ್ವಾಲಿಟಿಗೆ ಗಮನ ಕೊಡಬೇಕಷ್ಟೇ!

Abhi_to_me_jawan_hu

ನನ್ನದು ಎವರ್ಗ್ರೀನ್ಯೌವನ!

60ರ ಹರೆಯದ ಜಾವೇದ್‌ ಜಾಫ್ರಿ, 25ರ ಪಡ್ಡೆ ಹುಡುಗರಿಗೆ ಈಗಲೂ ಡ್ಯಾನ್ಸ್ ನಲ್ಲಿ ಟಕ್ಕರ್‌ ಕೊಡಬಲ್ಲ! ಫಿಟ್‌ ನೆಸ್‌ಸ್ಮಾರ್ಟ್‌ ನೆಸ್‌ ವಿಷಯದಲ್ಲಿ ಈತ ನವ ಯುವಕರನ್ನೂ ನಾಚಿಸುತ್ತಾನೆ, ಹಿರಿತೆರೆ ಮಾತ್ರವಲ್ಲದೆ, OTTಯಲ್ಲೂ ಮಿಂಚುತ್ತಿರುವ ಈತ ಇಂದಿನ ಯುವಕರಿಗೆ ಸಿಂಹಸ್ವಪ್ನವಾಗಿದ್ದಾನೆ. 40+ ನಂತರ ಬೊಜ್ಜು ಬೆಳೆಸುವ ಪತಿ ಮಹಾಶಯರು ಇವನಿಂದ ಕಲಿಯುವುದು ಬೇಕಾದಷ್ಟಿದೆ. ಬಾಲಿವುಡ್‌ ಶೈಲಿಯ ಡ್ಯಾನ್ಸ್ ನಿಂದಾಗಿ ಎಂದೆಂದೂ ತಾನು ಫಿಟ್‌ ಆಗಿಯೇ ಉಳಿಯುವೆ ಎನ್ನುವ ಆತ್ಮವಿಶ್ವಾಸ ಈತನಿಗಿದೆ. ಪ್ರತಿಯೊಬ್ಬರಿಗೂ ಇಂಥ ಒಂದು ಮೋಟಿವೇಶನ್‌ ಇದ್ದರೆ ಫಿಟ್‌ ನೆಸ್‌ ತಾನಾಗಿ ಮೈಗೂಡುತ್ತದೆ. ಫಿಟ್‌ ಆಗಿರುವುದರ ಮತ್ತೊಂದು ಲಾಭ ಏನಂತೀರಾ? ಬಾಲಿವುಡ್‌ ಗುಸುಗುಸು ಪ್ರಕಾರ 60+ನವರು ಫಿಟ್‌ ಆಗಿದ್ದು 30+ನವರೊಂದಿಗೆ ರೊಮಾನ್ಸ್ ನಡೆಸುತ್ತಿರುವುದು ಓಪನ್‌ ಸೀಕ್ರೆಟ್‌ ಎಂದು ಎಲ್ಲರಿಗೂ ಗೊತ್ತಿದೆ! ಯಾರಿಗೆ ಗೊತ್ತು….. ನಿಮಗೂ ಅದೃಷ್ಟ ಖಾಯಿಸಬಹುದು, ಟ್ರೈ ಮಾಡಿ ನೋಡಿ!

Nora-fatehi

ನೋರಾಳ ಕಥೆ ಮುಂದೇನು?

`ಸ್ತ್ರೀ-2′ ಚಿತ್ರದ ಹಾಡು `ಮಜಾ ಹುಸ್ನ್ ಕಾ…..’ ಹಿಟ್‌ ಆಗಿದ್ದೇ ತಡ, ಪ್ರೇಕ್ಷಕರು ಹೊಸ ನಟಿ ನೋರಾಳ ಕೆರಿಯರ್‌ ಕುರಿತು ಇನ್ನಿಲ್ಲದಷ್ಟು ಪ್ರಶ್ನೆಗಳನ್ನು ನೆಟ್‌ ನಲ್ಲಿ ಹರಿಯಬಿಟ್ಟರು. ತಮನ್ನಾ ಸಹ ಇವಳೊಂದಿಗೆ ಈ ಹಾಡಿನ ಠುಮ್ಕಾ ನೃತ್ಯಕ್ಕೆ ಹೆಜ್ಜೆ ಹಾಕಿ ಹಿಟ್‌ ಎನಿಸಿದಳು, ನೋರಾಳಿಗೆ ಅಷ್ಟೇ ಪೈಪೋಟಿ ನೀಡಿದಳು. ಐಟಂ ಸಾಂಗ್ಸ್ ನಲ್ಲಿ ತನ್ನದೇ ಅಧಿಪತ್ಯ ಸ್ಥಾಪಿಸಿದ್ದ ನೋರಾ, ಬಹಳ ದಿನಗಳಿಂದ ಯಾವ ಹಿಟ್‌ ಹಾಡನ್ನೂ ನೀಡಿರಲಿಲ್ಲ. ಅಂದಹಾಗೆ, ಈ ಆಧುನಿಕ ಕಾಲದಲ್ಲಿ  ನೋರಾ ಐಟಂ ಗರ್ಲ್ ಆಗಿ ಉಳಿಯುವ ನಿರ್ಧಾರ ತಳೆದು ತಪ್ಪು ಮಾಡಿದಳು. ಏಕೆಂದರೆ ಈಗೆಲ್ಲ ನಾಯಕಿಯರೇ ಬಿಚ್ಚಮ್ಮಂದಿರಾಗಿ ಬಾಲಿವುಡ್‌ ನಲ್ಲಿ ಕುಣಿಯುತ್ತಿರುವಾಗ, ಈ ಹುಡುಗಿಯನ್ನು ಮತ್ತೆ ಮತ್ತೆ ಅದೇ ಅವತಾರದಲ್ಲಿ ಯಾರು ನೋಡ ಬಯಸುತ್ತಾರೆ? ಹೀಗಾಗಿ ನೋರಾಳ ಕೆರಿಯರ್‌ ಮುಳುಗುವ ನೌಕೆಯಾಗಿದೆ!

Anjani-Dhawan

ಬರುತ್ತಿದ್ದಾಳೆ ವರುಣನ ಕಸಿನ್‌!

ಬಾಲಿವುಡ್‌ ನಲ್ಲಿ ಖ್ಯಾತ ತಾರೆಯರು ತಮ್ಮ ನೆಂಟರಿಷ್ಟರನ್ನು ಬೆಳ್ಳಿತೆರೆಗೆ ಪರಿಚಯಿಸಿ ಗಾಡ್‌ ಫಾದರ್‌ ಆಗಿ ನಿಲ್ಲುವುದು ಹೊಸತೇನಲ್ಲ. ಈ ನಿಟ್ಟಿನಲ್ಲಿ ಈಗ ಹೊಸ ಸೇರ್ಪಡೆ, ವರುಣ್‌ ಧವನ್‌ ನ ಕಸಿನ್‌ ಅಂಜನೀ ಧವನ್‌. 24ರ ಹರೆಯದ ಈಕೆ `ಬಿನ್ನಿ  ಫ್ಯಾಮಿಲಿ’ ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಪಡೆಯುತ್ತಿದ್ದಾಳೆ. ಈ ಚಿತ್ರದಲ್ಲಿ ಜನರೇಶನ್‌ ಗ್ಯಾಪ್‌ ಸಮಸ್ಯೆಯತ್ತ ಬೆಳಕು ಚೆಲ್ಲಲಾಗಿದೆ. ಜೊತೆಗೆ ಕುಟುಂಬ ಅಂದ್ರೆ ಸದಾ ಒಂದಾಗಿರಬೇಕು ಎಂಬ ಐಕ್ಯತೆಯ ಮೆಸೇಜ್‌ ಸಹ ಇದೆ. ಇಲ್ಲಿ ಕಥೆ ಹೊಸತಲ್ಲದಿದ್ದರೂ, ಹೊಸ ಜನರೇಶನ್ನಿನ ತಾರೆಯೆಲ್ಲರೂ ಅಪ್ಪಟ ಎಳೆ ನಿಂಬೆಗಳು! ಈ ಎಳೆ ನಿಂಬೆಗಳು ಚಿತ್ರದ ಸಕ್ಸಸ್‌ ಗೆ ಎಷ್ಟು ಕಾರಣರಾಗಬಲ್ಲರೋ…. ಕಾದು ನೋಡಬೇಕಿದೆ!

Abhsek-banarji

ಅಂತೂ ಇಂತೂ ಟೈಂ ಕೂಡಿ ಬಂತು!

`ಸ್ತ್ರೀ-2′ ಹಾಗೂ `ವೇದಾ’ ಚಿತ್ರಗಳಲ್ಲಿ ವಿಭಿನ್ನ ಪಾತ್ರ ನಿಭಾಯಿಸಿ ಅಭಿಷೇಕ್‌ ಬ್ಯಾನರ್ಜಿ ತನ್ನ ಬಹುಮುಖ ಪ್ರತಿಭೆ ಮೆರೆದಿದ್ದಾನೆ. ಈ ಕಲಾವಿದ ಎಷ್ಟು ಉತ್ತಮ ಕಾಮಿಡಿ ಮಾಡಬಲ್ಲನೋ, ಅಷ್ಟೇ ಉತ್ತಮವಾಗಿ ನೆಗೆಟಿವ್ ‌ಪಾತ್ರ ಸಹ ನಿಭಾಯಿಸಬಲ್ಲ! ಅಭಿಷೇಕ್ ಗೆ ಈಗ ಹಿರಿ ತೆರೆಯಲ್ಲಿ ಎಷ್ಟು ಬೇಡಿಕೆ ಇದೋ OTTಯಲ್ಲೂ ಅಷ್ಟೇ ಡಿಮ್ಯಾಂಡ್‌ ಇದೆ. ಈತನಿಗೆ ಗಟ್ಟಿ ಪಾತ್ರಗಳು ಸಿಕ್ಕಿದ್ದೇ ಆದರೆ ಬಾಲಿವುಡ್‌ ನ ಖಾನ್‌, ಕುಮಾರರಿಗೆ ಮಣ್ಣು ಮುಕ್ಕಿಸುವ ದಿನ ದೂರವಿಲ್ಲ. ವೆಲ್ ‌ಡನ್‌ ಅಭಿ, ಅಂತೂ ಇಂತೂ ನಿನಗೂ ಟೈಂ ಕೂಡಿ ಬಂದಿದೆ!

Aparsakti

ಅಪಾರ್ಶಕ್ತಿಗೆ ಬಂತು ಅಪಾರ ಶಕ್ತಿ

ಯಾವುದೇ ಬಾಲಿವುಡ್‌ ಚಿತ್ರವಿರಲಿ, ಅದರಲ್ಲಿ ಹೀರೋನ ಫ್ರೆಂಡ್‌ ಅಂದ್ರೆ ಅದು ಅಪಾರ್‌ ಶಕ್ತಿಯೇ ಆಗಿರಬೇಕು, ಹಿಂದೆಲ್ಲ ಕನ್ನಡದಲ್ಲಿ ಶರಣ್‌, ಚಿಕ್ಕಣ್ಣ ನಿರ್ವಹಿಸುತ್ತಿದ್ದ ಪಾತ್ರಗಳಂತೆ. ನಂತರ ಅವರು ನಾಯಕರಾಗಿ ಏನು ಸಾಧಿಸಿದರೋ ಗೊತ್ತೇ  ಇದೆ! ಈಗ ಅಪಾರ್‌ ಗೆ ಕೇವಲ ನಗಿಸುವುದಷ್ಟೇ ಕೆಲಸವಲ್ಲ, ಬದಲಿಗೆ ಚಿತ್ರದಲ್ಲಿ ಈತನ ಪಾತ್ರ ಅಷ್ಟೇ ಮಹತ್ವಪೂರ್ಣ ಆಗಿರುತ್ತದೆ. ಗಂಭೀರ ಪಾತ್ರಗಳನ್ನು ನಿರ್ವಹಿಸುವುದರಲ್ಲೂ ಅಪಾರ್‌ ಸೈ ಎನಿಸಿದ್ದಾನೆ. ಇದೀಗ ಅಪಾರ್‌ ಸ್ಪೈ ಥ್ರಿಲ್ಲರ್‌ ನ `ಬರ್ಲಿನ್‌’ ಚಿತ್ರದಲ್ಲಿ ಜಬರ್ದಸ್ತ್ ಪಾತ್ರ ನಿರ್ವಹಿಸಲಿದ್ದಾನೆ. ಇದರ ಸಾಲಿಡ್‌ ಟ್ರೇಲರ್‌ ನೋಡಿ ಎಲ್ಲರೂ ಫಿದಾ ಆಗಿದ್ದಾರೆ, ಶಭಾಷ್‌ ಅಪಾರ್‌!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ