ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ –  
ನಿರ್ಮಾಪಕರು ರಾಘವೇಂದ್ರ ರೆಡ್ಡಿ
ನಿರ್ದೇಶನ ಎಂ. ಎಲ್. ಪ್ರಸನ್ನ
ಕಲಾವಿದರು :- ಸಿಹಿ ಕಹಿ ಚಂದ್ರು, ಕು.ಯಶಿಕಾ, ಗೋವಿಂದೆಗೌಡ, ರೋಹಿತ್ ರಾಘವೇಂದ್ರ, ಅಶ್ವಿನ್,ದಿವ್ಯಾ ಅಂಚನ್, ಬೆನಕಾ ನಂಜಪ್ಪ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು
ರೇಟಿಂಗ್:  3/5
“ಭಾರತೀ ಟೀಚರ್ 7ನೇ ತರಗತಿ” ಚಿತ್ರವು ಗ್ರಾಮೀಣ ಶಿಕ್ಷಣ ಮತ್ತು ಕನ್ನಡ ಭಾಷೆಯ ಮಹತ್ವವನ್ನು ಚಿತ್ರಿಸುವ ಸಾಮಾಜಿಕ ಕಥಾವಸ್ತುವಿನಿಂದ ಕೂಡಿದೆ.
ಅದೊಂದು ಮದ್ದೂರು ತಾಲೂಕಿನ ಹುಳಿಕೆರೆಪುರದ ಗ್ರಾಮ. ಅಲ್ಲಿ ಸಾಕ್ಷರತೆ ಕಡಿಮೆಯಿದ್ದು, ಒಂಟಿ ಹುಡುಗಿ ಭಾರತಿ ತನ್ನ ಗುರುಗಳ ಕನಸನ್ನು ಮುಂದುವರೆಸುತ್ತಾಳೆ. ಚಿತ್ರವು ಭಾವನೆಗಳನ್ನು ಸರಳವಾಗಿ ತೋರಿಸಿ, ಶಿಕ್ಷಣದ ಸಾಮಾಜಿಕ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಆ ಗ್ರಾಮದಲ್ಲಿ ಶಾಲೆಯ ಕೊರತೆಯಿಂದ ಮಕ್ಕಳು ದೂರದ ಗ್ರಾಮಗಳಿಗೆ ಓದಲು ಹೋಗುತ್ತಾರೆ. ವಿಧವೆ ತಾಯಿ ಮತ್ತು ಗುರು ಸಿಹಿ ಕಹಿ ಚಂದ್ರು ಮಾರ್ಗದರ್ಶನದಲ್ಲಿ ಬೆಳೆದ ಭಾರತಿ (ಯಾಶಿಕಾ) ಗ್ರಾಮವನ್ನು ಸಾಕ್ಷರಗೊಳಿಸುವ ಕನಸು ಕಾಣುತ್ತಾಳೆ. ಗುರುಗಳು ನಿವೃತ್ತಿಯಾಗುತ್ತಿದ್ದಾಗಲೇ 7ನೇ ತರಗತಿಯಲ್ಲಿ ಇರುವ ಭಾರತಿ ಕನ್ನಡ ಭಾಷೆಯ ಮೂಲಕ ತನ್ನ ಗುರುಗಳ ಕನಸ್ಸನ್ನು ನನಸಾಗಿಸುವ, ಬುದ್ದಿವಂತೆ ಹಾಗೂ ಚತುರೆಯಾದ ಈ ಬಾಲೆ
ಜಾಣತನದಿಂದ ಎಲ್ಲವನ್ನು, ಎಲ್ಲರನ್ನು ಗೆಲ್ಲುವ ಹಠಕ್ಕೆ ಬಿದ್ದು ಹೇಗೆ ಎಲ್ಲರಿಂದ ಸೈ ಎನಿಸಿಕೊಳ್ಳುತ್ತಾಳೆ ಎನ್ನುವುದೇ ಈ ಚಿತ್ರದ ಜೀವಾಳ.

bharathi

ಬಾಲ ನಟಿಯಾಗಿ ಯಾಶಿಕಾಳನ್ನು ಭಾರತಿ ಪಾತ್ರದಲ್ಲಿ ಸಣ್ಣ ವಯಸ್ಸಿನ ದೃಢತೆಯನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಈಗಾಗಲೇ ರೇಣುಕಾ ಯಲ್ಲಮ್ಮ ಧಾರವಾಹಿಯಲ್ಲಿ ರಾಜನ ಮಗಳು ರೇಣುಕಾ ಪಾತ್ರದಲ್ಲಿ ಅಭಿನಯಿಸಿದ್ದ ಯಾಶಿಕಾ ತುಂಬಾ ಚನ್ನಾಗಿ ಲವಲವಿಕೆಯಿಂದ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾಳೆ.
ಕನ್ನಡದ ಬಗ್ಗೆ ಹಾಗೂ ಊರಿನ ಜನರಿಗೆ ಕನ್ನಡದಲ್ಲಿ ಅಕ್ಷರ ಕಲಿಸುವ ನಿಟ್ಟಿನಲ್ಲಿ ದಿಟ್ಟತನದಿಂದ ಎಲ್ಲಾ ಸಮಸ್ಯೆಗಳನ್ನು ನಗು ನಗುತಗತಲೆ ಬುದ್ದಿವಂತಿಕೆಯಿಂದ ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಈ ಹುಡುಗಿಗೆ ಈ ಪಾತ್ರಕ್ಕೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಬಂದರೆ ಆಶ್ಚರ್ಯ ಪಡಬೇಕಿಲ್ಲ.
ಇನ್ನು ಚಿತ್ರದಲ್ಲಿ ಮತ್ತೊಂದು ಕೋಪ, ರೋಷದಿಂದ ವ್ಯವಸ್ಥೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಅಭಿನಯಿಸಿರುವುದು. ರೋಹಿತ್ ರಾಘವೇಂದ್ರ ಆ್ಯಂಟಿ ಹೀರೋ ಆಗಿ ಅಬ್ಬರಿಸಿದ್ದಾರೆ.

bharathi 3

ಮೊದಲ ಬಾರಿಗೆ ಕ್ಯಾಮರಾ ಮುಂದೆ ಅಭಿನಯಿಸಿದ್ದರು ತಮ್ಮ ಪಾತ್ರವನ್ನು ಚನ್ನಾಗಿ ನಿಭಾಯಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಸಿದ್ದಾರೆ. ಸಿಹಿ ಕಹಿ ಚಂದ್ರು ಗುರುವಾಗಿ ಶಾಂತ ಸಾಧಕನಂತೆ ನಟಿಸಿ, ಚಿತ್ರದ ನೈತಿಕ ಕೇಂದ್ರವಾಗುವುದರ ಜೊತೆಗೆ ಒಂದಷ್ಟು ತತ್ವ ಸಿದ್ಧಾಂತಗಳನ್ನು  ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಸಿರಗುಪ್ಪ ಮೂಲದ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ಪೂಜ್ಯಾಯ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಕ್ರಿಷಿ ಸಂಸ್ಥೆಯ ವೆಂಕಟ್‌ಗೌಡ ಕ್ರಿಯೇಟೀವ್ ಹೆಡ್ ಆಗಿ

bharathi 1

ಕಾರ್ಯನಿರ್ವಹಿಸಿದ್ದಾರೆ. ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಸಂಗೀತ ಮತ್ತು ನಿರ್ದೇಶನವನ್ನು ಎಂ.ಎಲ್.ಪ್ರಸನ್ನ* ನಿರ್ವಹಿಸಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಪ್ರಸನ್ನ ಒಂದು ಸಾಮಾಜಿಕ ಕಳಕಳಿಯಿಂದ ಕನ್ನಡ ಭಾಷೆ, ಮತ್ತು ಅಕ್ಷರ ಜ್ಞಾನ ಗ್ರಾಮೀಣ ಪ್ರದೇಶಗಳಿಗೆ ಅತ್ಯವಶ್ಯಕ ಎನ್ನುವುದರ ಜೊತೆಗೆ ಸಮಾಜದ ವ್ಯವಸ್ಥೆಗಳ ಸಂಘರ್ಷವನ್ನು ಚಿತ್ರದ ಮೂಲಕ ಪ್ರೇಕ್ಷಕರಿಗರ ಹೇಳಿದ್ದಾರೆ. ಚಿತ್ರದಲ್ಲಿ ಹಾಡುಗಳು ಕೂಡ ಪ್ರಮುಖ ಪಾತ್ರವನ್ನು ವಹಿಸಿವೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮೊದಲಬಾರಿ ಖಳನಾಗಿ ಕಾಣಿಸಿಕೊಂಡರೆ, ಇನ್ಸ್‌ಪೆಕ್ಟರ್ ಆಗಿ ಅಶ್ವಿನ್‌ಹಾಸನ್. ಉಳಿದಂತೆ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿಯವರ ಛಾಯಾಗ್ರಹಣದಲ್ಲಿ ಹಳ್ಳಿಯ ಪರಿಸರ ಚನ್ನಾಗಿ ಮೂಡಿಬಂದಿದೆ. ಹಾಗೂಕೆ.ಎಂ. ಇಂದ್ರರವರ ಸಂಗೀತ ಕೇಳುವಂತಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ