ಪ್ರ : ನಮ್ಮ ಕುಟುಂಬದಲ್ಲಿ ಮೊದಲಿನಿಂದಲೂ ಹೃದಯಾಘಾತದ ಇತಿಹಾಸವಿದೆ. ಹಾರ್ಟ್ ಅಟ್ಯಾಕ್ ಆಗುವ ಮೊದಲು ಇದು ಬರಬಹುದು ಎಂದು ತಿಳಿಯುವ ಬಗೆ ಹೇಗೆ?
ಉ : ಹೃದಯದ ಕಡೆ ರಕ್ತ ಕೊಂಡೊಯ್ಯುವ ಧಮನಿಗಳಲ್ಲಿ ಬ್ಲಾಕೇಜ್ ಆದಾಗ ಹಾರ್ಟ್ ಅಟ್ಯಾಕ್ ಆಗುತ್ತದೆ. ಇಂಥ ಬ್ಲಾಕೇಜ್ 50%ಗಿಂತ ಹೆಚ್ಚಾದಾಗ, ಅಪಾಯ ಹೆಚ್ಚಾಗುತ್ತದೆ. ಆದರೆ ಹಾರ್ಟ್ ಅಟ್ಯಾಕ್ ಗೆ ಮೊದಲೇ ಬ್ಲಾಕೇಜ್ ಬಗ್ಗೆ ಪತ್ತೆ ಹಚ್ಚುವುದು ಕಷ್ಟ ಆಗಬಹುದು. ಏಕೆಂದರೆ ಹೆಚ್ಚಿನ ಪ್ರಕರಣಗಳಲ್ಲಿ 70% ಬ್ಲಾಕೇಜ್ ಆಗುವವರೆಗೂ ಯಾವುದೇ ಲಕ್ಷಣ ಗೋಚರಿಸುವುದಿಲ್ಲ. ಈ ಬ್ಲಾಕೇಜ್‌ನ್ನು ಕೊರೊನರಿ ಆ್ಯಂಜಿಯೋಗ್ರಪಿ ಮೂಲಕ ಕೇವಲ ಎರಡೇ ನಿಮಿಷಗಳಲ್ಲಿ ಪತ್ತೆ ಹಚ್ಚಬಹುದು.
ನಿಮ್ಮ ಕುಟುಂಬದಲ್ಲಿ ಹಾರ್ಟ್ ಆಟ್ಯಾಕ್ ನ ಇತಿಹಾಸವಿದ್ದರೆ, ನೀವು ಈ ಪರೀಕ್ಷೆ, ಮಾಡಿಸಿಕೊಳ್ಳಲು ತಡ ಮಾಡಬೇಡಿ. 3-4 ತಿಂಗಳಿಗೊಮ್ಮೆ ಇದನ್ನು ಮಾಡಿಸುತ್ತಾ ಇರಬೇಕು. ನಿಮ್ಮ ಬ್ಲಾಕೇಜ್ 80% ದಾಟಿದ್ದರೆ, ಎನ್ ಝೈನಾ ಆಗಬಹುದು. ಇದನ್ನು ವಿಧಾನದ ಮೂಲಕ ತಿಳಿದುಕೊಂಡು, ನೀವು ಹೃದಯಾಘಾತದ ಭೀತಿಯಿಂದ ಪಾರಾಗಬಹುದು.
ಪ್ರ : ನಾನು ಕಳೆದ 4-5 ವರ್ಷಗಳಿಂದ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದೇನೆ. ನನಗೆ ಮಧ್ಯೆ ಮಧ್ಯೆ ತಲೆ ಸುತ್ತಿದಂತೆ ಆಗುತ್ತದೆ. ಹೃದಯದ ಬಡಿತ ತೀವ್ರ ಹೆಚ್ಚುತ್ತದೆ. ಹೀಗೆ ಬಿಪಿ ಹೆಚ್ಚುವುದರಿಂದ ಮುಂದೆ ಏನಾದರೂ ಅಪಾಯ ಇದೆಯೇ? ಇದನ್ನು ನಿಯಂತ್ರಿಸಲು ಏನಾದರೂ ದಾರಿ ಇದೆಯೇ?
ಉ : ನಿಮ್ಮ ರಕ್ತದ ಒತ್ತಡ 140/90ಗಿಂತಲೂ ಹೆಚ್ಚಾಗಿದ್ದರೆ, ಇದನ್ನೇ ಅಧಿಕ ಬಿಪಿ ಎನ್ನುತ್ತಾರೆ. ನಿಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ. ನಿಯಮಿತವಾಗಿ ಯೋಗ, ವ್ಯಾಯಾಮ, ರನ್ನಿಂಗ್, ಜಾಗಿಂಗ್, ಬ್ರಿಸ್ಕ್ ವಾಕಿಂಗ್ ಇತ್ಯಾದಿಗಳನ್ನು ತೊಡಗಿಸಿಕೊಳ್ಳಿ. ನಿಮ್ಮ ದೇಹ ತೂಕ ಹೆಚ್ಚಲು ಅವಕಾಶ ಕೊಡಬೇಡಿ ಹಾಗೂ ಅದು ಹೆಚ್ಚಿದ್ದರೆ, ಹೇಗಾದರೂ ಕರಗಿಸುವ ಪ್ರಯತ್ನ ಮಾಡಿ. ಧೂಮಪಾನ, ಮದ್ಯಪಾನ ಬೇಡವೇ ಬೇಡ! ಇದನ್ನು ನಿಯಂತ್ರಿಸದಿದ್ದರೆ ಹಾರ್ಟ್ ಆಟ್ಯಾಕ್, ಕಿಡ್ನಿ ಪ್ರಾಬ್ಲಂ, ಸ್ಟ್ರೋಕ್(ಪಾರ್ಶ್ವವಾಯು), ಕಾಲುಗಳ ರಕ್ತ ಧಮನಿಗಳಲ್ಲಿ ಬ್ಲಾಕೇಜ್, ವೆರಿಕೋಸ್ ವೆಯ್ನ್ಸ್ ಇತ್ಯಾದಿ ಹಲವು ಅಪಾಯಗಳು ಕಟ್ಟಿಟ್ಟ ಬುತ್ತಿ. ಕಂಗಳ ರಕ್ತನಾಳ ಒಡೆದು ಬ್ಲೀಡಿಂಗ್ ಸಹ ಆಗಬಹುದು, ಆಗ ಶಾಶ್ವತ ಕುರುಡುತನ ಉಂಟಾದೀತು. ಹೀಗಾಗಿ ಆರೋಗ್ಯ ಸಮಸ್ಯೆ ಹೆಚ್ಚುವ ಮುನ್ನ ನಿಮ್ಮ ಬಿಪಿ ನಿಯಂತ್ರಿಸಿ.
ಪ್ರ : ಇತ್ತೀಚೆಗೆ ಹಾರ್ಟ್ ಆಟ್ಯಾಕ್ ಸಮಸ್ಯೆ ಎಲ್ಲೆಲ್ಲೂ ಕೇಳಿಬರುತ್ತಿದೆ. ಹಾರ್ಟ್ ಅಟ್ಯಾಕ್ ಬಂದಾಗ ಏನು ಮಾಡಬೇಕು ಅಂತ ಸಲಹೆ ನೀಡುವಿರಾ?
ಉ : ಹಾರ್ಟ್ ಆಟ್ಯಾಕ್ ಗೆ ರಕ್ತ ಧಮನಿಗಳ ಬ್ಲಾಕೇಜ್ ಮುಖ್ಯ ಕಾರಣ. ಅವನ್ನು ನಿರ್ಲಕ್ಷಿಸಿದರೆ ಮುಂದೆ 100% ಹೆಚ್ಚಾಗಿ ಗಟ್ಟಿಯಾಗುತ್ತಾ ಹಲವು ಪ್ರಾಣಘಾತಕ ಸಮಸ್ಯೆ ತಂದೊಡ್ಡಬಹುದು. ಇದರಿಂದ ರಕ್ತದ ಸಂಚಾರ ಸಂಪೂರ್ಣ ನಿಂತೇ ಹೋಗುತ್ತದೆ. ಹೃದಯದ ಮಾಂಸಖಂಡಗಳು ತೀರಾ ದುರ್ಬಲಗೊಳ್ಳುತ್ತವೆ. ಎಷ್ಟೋ ಕೇಸುಗಳಲ್ಲಿ ರೋಗಿಗೆ ತೀವ್ರ ಎದೆ ನೋವು ಕಾಡುತ್ತದೆ, ಉಸಿರು ಸಿಕ್ಕಿ ಹಾಕಿಕೊಳ್ಳುತ್ತದೆ. ಹೀಗಾಗಿ ರೋಗಿ ಹೆಚ್ಚಿನ ಎದೆನೋವು, ಉಸಿರಾಟದ ತೊಂದರೆ ಬಗ್ಗೆ ಹೇಳಿದಾಗ, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ. ಇದಕ್ಕೆ ಮೊದಲು ರೋಗಿಯನ್ನು ನಾಲಿಗೆ ಕೆಳಗೆ ಸೋರ್ಬಿಟ್ರೇಟ್ ಮಾತ್ರೆ ಇಟ್ಟುಕೊಳ್ಳಲು ಹೇಳಿ. ಬೇಗ ಗುಣಕಾರಿ ಆಗಲು, ರೋಗಿಗೆ ಒಂದು ಡಿಸ್ಪ್ರಿನ್ ಮಾತ್ರೆ ಸಹ ಸೇವಿಸಲು ಕೊಡಿ. ರೋಗಿ ಬೇಗ ಆಸ್ಪತ್ರೆ ಸೇರಿದ ಬಳಿಕ ಅಲ್ಲಿ ಬ್ಲಾಕೇಜ್ ಸರಿಪಡಿಸುವ ವ್ಯವಸ್ಥೆ ಆಗುತ್ತದೆ. ಇದರಿಂದ ಮಾತ್ರ ಹೃದಯ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯ.





