ಭಾರತದ ಖಾಸಗಿ ವಲಯದ ಮುಂಚೂಣಿಯಲ್ಲಿರುವ ಬ್ಯಾಂಕ್ ಎಚ್.ಡಿ.ಎಫ್.ಸಿ. ಜನವರಿ 16ರಂದು ರಾಷ್ಟ್ರೀಯ ಸ್ಟಾರ್ಟಪ್ ದಿನದ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ತನ್ನ ವಿಶೇಷ ಸ್ಟಾರ್ಟಪ್ ಲೌಂಜ್ ಗಳ ಪ್ರಾರಂಭವನ್ನು ಪ್ರಕಟಿಸಿದೆ.

ಈ ಸ್ಟಾರ್ಟಪ್ ಲೌಂಜ್ ಗಳು ಭಾರತದ ಸ್ಟಾರ್ಟಪ್ ಇಕೊಸಿಸ್ಟಂ ಜೊತೆಯಲ್ಲಿ ಸಕ್ರಿಯತೆಯನ್ನು ಹೆಚ್ಚು ಸದೃಢಗೊಳಿಸಲು ಮುಂದುವರಿದ ಆದ್ಯತೆಯ ಭಾಗವಾಗಿದ್ದು, ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ 24ನೇ ಮುಖ್ಯರಸ್ತೆಯ ಶಾಖೆ ಮತ್ತು ಗೌಹಾಟಿಯ ಜಿ.ಎಸ್. ರೋಡ್ ಶಾಖೆಯಲ್ಲಿ ಪ್ರಾರಂಭಿಸಲಾಗುತ್ತದೆ.

ಈ ಸ್ಟಾರ್ಟಪ್ ಲೌಂಜ್ ಗಳು ಸ್ಟಾರ್ಟಪ್ ಗಳಿಗೆ ಸೇವೆ ಒದಗಿಸುವುದಲ್ಲದೆ ಕೆಲಸ ಮಾಡಲು ಮತ್ತು ಹೊಸ ಐಡಿಯಾಗಳನ್ನು ರೂಪಿಸಲು ವೃತ್ತಿಪರ ಪರಿಸರವನ್ನು ಕೂಡಾ ಒದಗಿಸುತ್ತವೆ. ಅಲ್ಲದೆ ಈ ಲೌಂಜ್ ಗಳು ಬ್ಯಾಂಕಿಗೆ ಸಂಸ್ಥಾಪಕರು, ಹೂಡಿಕೆದಾರರು, ವೆಂಚರ್ ಕ್ಯಾಪಿಟಲ್ ಸಂಸ್ಥೆಗಳಿಗೆ ಹಾಗೂ ವಿಸ್ತಾರ ಸ್ಟಾರ್ಟಪ್ ಇಕೊಸಿಸ್ಟಂಗೆ ಸಂಪರ್ಕ ಹೊಂದಲು ಸೂಕ್ತ ಸ್ಥಳವನ್ನೂ ಒದಗಿಸುತ್ತದೆ. ಈ ಸ್ಥಳವು ಸ್ಟಾರ್ಟಪ್ ಇಕೊಸಿಸ್ಟಂ ಅನ್ನು ಒಳಗೊಂಡು ಹಲವಾರು ಕಾರ್ಯಕ್ರಮಗಳನ್ನೂ ನಡೆಸಲಿದೆ.

ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳ ಜವಾಬ್ದಾರಿ ಹೊತ್ತಿರುವ ಎಚ್.ಡಿ.ಎಫ್.ಸಿ. ಬ್ಯಾಂಕ್ ನ ರೀಟೇಲ್ ಬ್ರಾಂಚ್ ಬ್ಯಾಂಕಿಂಗ್ ಅಂಡ್ ಆಲ್ಟರ್ನೇಟಿವ್ ಬ್ಯಾಂಕಿಂಗ್ ಚಾನೆಲ್ಸ್ ಅಂಡ್ ಪಾರ್ಟ್ನರ್ಸ್ ಗ್ರೂಪ್ ಹೆಡ್ ಸಂಪತ್ ಕುಮಾರ್ ಮಾತನಾಡಿ, “ಬೆಂಗಳೂರು ದೇಶದ ಉಜ್ವಲ ಸ್ಟಾರ್ಟಪ್ ಕೇಂದ್ರವಾಗಿ ನಗರದಲ್ಲಿ ಬ್ಯಾಂಕಿನ ಸ್ಟಾರ್ಟಪ್ ಲೌಂಜ್ ಸಮಾನ ಮನಸ್ಕ ಜನರೊಂದಿಗೆ ಕೆಲಸ ಮಾಡಲು ಪ್ರಯತ್ನಿಸುವ ಸಂಸ್ಥಾಪಕರಿಗೆ ಜಾಲ ನಿರ್ಮಾಣದ ಕೇಂದ್ರವಾಗಿ ಕೆಲಸ ಮಾಡಲಿದೆ. ಅವರು ಕೂಡಾ ಬ್ಯಾಂಕಿನ ಸ್ಟಾರ್ಟಪ್ ಬಿಲ್ಡಪ್ ಕಾರ್ಯಕ್ರಮದಡಿ ವಿಶೇಷ ಉತ್ಪನ್ನಗಳಿಂದ ಪ್ರಯೋಜನ ಪಡೆಯಬಹುದು. ನಗರದಲ್ಲಿ ನಮ್ಮ ಸ್ಟಾರ್ಟಪ್ ಲೌಂಜ್ ಸ್ಟಾರ್ಟಪ್ ಇಕೊಸಿಸ್ಟಂಗೆ ಮತ್ತಷ್ಟು ವೃದ್ಧಿಸಲು ಪರಿಸರ ಒದಗಿಸುತ್ತದೆ ಎಂಬ ಭರವಸೆ ನಮ್ಮದು”ಎಂದಿದ್ದಾರೆ.

ಉತ್ತರ, ಪೂರ್ವ ಮತ್ತು ಮಧ್ಯ ಪ್ರದೇಶಗಳ ಜವಾಬ್ದಾರಿ ಹೊತ್ತಿರುವ ಎಚ್.ಡಿ.ಎಫ್.ಸಿ. ಬ್ಯಾಂಕ್ ನ ರೀಟೇಲ್ ಬ್ರಾಂಚ್ ಬ್ಯಾಂಕಿಂಗ್ ಮತ್ತು ಆಲ್ಟರ್ನೇಟ್ ಬ್ಯಾಂಕಿಂಗ್ ಚಾನೆಲ್ ಅಂಡ್ ಪಾರ್ಟ್ನರ್ಶಿಪ್ಸ್ ಗ್ರೂಪ್ ಹೆಡ್ ಅರುಣ್ ಮೆಡಿರಟ್ಟ ಮಾತನಾಡಿ, “ಗೌಹಾಟಿಯು ಭಾರತದ ಈಶಾನ್ಯ ಪ್ರದೇಶದಲ್ಲಿ ಸ್ಟಾರ್ಟಪ್ ಇಕೊಸಿಸ್ಟಂನ ಕೇಂದ್ರವಾಗಿ ವಿಕಾಸಗೊಳ್ಳುತ್ತಿದ್ದು, ಉದ್ಯಮಶೀಲತೆಯ ಸ್ಫೂರ್ತಿಗೆ ಬೆಂಬಲಿಸುತ್ತಿದೆ. ನಾವು ಸ್ಟಾರ್ಟಪ್ ಸಂಸ್ಥಾಪಕರಿಗೆ ಸ್ವಾಗತಿಸಲು ಸ್ಟಾರ್ಟಪ್ ಲೌಂಜ್ ಪ್ರಾರಂಭಿಸಲು ಬಹಳ ಸಂತೋಷ ಹೊಂದಿದ್ದು ಅವರು ಸ್ಟಾರ್ಟಪ್ ಸಮುದಾಯದೊಂದಿಗೆ ಕೆಲಸ ಮಾಡಲು ಮತ್ತು ತೊಡಗಿಕೊಳ್ಳಲು ಈ ಸ್ಥಳವನ್ನು ಬಳಸಬಹುದಾಗಿದೆ” ಎಂದು ಹೇಳಿದ್ದಾರೆ.

ಈ ಬ್ಯಾಂಕ್ ಸ್ಟಾರ್ಟಪ್ ಬಿಲ್ಡಪ್ ಕಾರ್ಯಕ್ರಮದಡಿ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಈ ಕಾರ್ಯಕ್ರಮದಡಿ ಪಡೆಯಬಹುದಾದ ಪ್ರಮುಖ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಸ್ಟಾರ್ಟಪ್ ಬ್ಯಾಂಕಿಂಗ್ ಚಾಲ್ತಿ ಖಾತೆ, ಕಲೆಕ್ಟ್ ನೌ- ಡಿಜಿಟಲ್ ಕಲೆಕ್ಷನ್ ಮತ್ತು ಪೇಮೆಂಟ್ಸ್ ಸಲ್ಯೂಷನ್, ಟ್ರೇಡ್ ಫೊರೆಕ್ಸ್ ಅಂಡ್ ಆಫ್ ಶೋರ್ ಬ್ಯಾಂಕಿಂಗ್, ಕಮರ್ಷಿಯಲ್ ಕಾರ್ಡ್ಸ್, ಇ.ಎಸ್.ಒ.ಪಿ ಟ್ರಸ್ಟ್ ಅಂಡ್ ಶೇರ್ ಕ್ಯಾಪಿಟಲ್ ಅಕೌಂಟ್, ಕಸ್ಟಮೈಸ್ಡ್ ಆರೋಗ್ಯ ವಿಮೆ, ಉದ್ಯೋಗಿಗಳಿಗೆ ವೇತನ ಖಾತೆಗಳು ಮತ್ತು ಸ್ಟಾರ್ಟಪ್ ಗಳಿಗೆ ಸೆಂಟ್ರಲ್ ಗ್ಯಾರೆಂಟೀ ಸ್ಕೀಂ (ಸಿ.ಜಿ.ಎಸ್.ಎಸ್.) ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ಹೊಂದಿದ್ದು ಅದು ಅರ್ಹತೆಯ ಮಾನದಂಡಗಳನ್ನು ಆಧರಿಸಿರುತ್ತದೆ.

ಬ್ಯಾಂಕ್ ಸ್ಟಾರ್ಟಪ್ ಗಳೊಂದಿಗೆ ಸಕ್ರಿಯ ಸಹಯೋಗ ಹೊಂದಿದೆ. ವಾಸ್ತವದಲ್ಲಿ ಟೆಕ್ ಇನ್ನೊವೇಟರ್ಸ್ ಉಪಕ್ರಮವನ್ನು 2024ರಲ್ಲಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಗ್ರೂಪ್ ಲೆವೆಲ್ ಪ್ಲಾಟ್ ಫಾರಂ ಆಗಿ ಪರಿಚಯಿಸಲಾಗಿದ್ದು ಅದು ದೇಶದ ಹಲವು ವಲಯಗಳಲ್ಲಿ ಆವಿಷ್ಕಾರವನ್ನು ಗುರುತಿಸುವ ಮತ್ತು ಸಂಭ್ರಮಿಸುವ ವೇದಿಕೆಯಾಗಿದೆ. ಇದು ಪ್ರಸ್ತುತ ಸ್ಥಳೀಯ ಮತ್ತು ಗಡಿಯಾಚೆಗಿನ ಪಾವತಿಗಳು, ಸಾಲ, ಎಪಿಐ ಅಭಿವೃದ್ಧಿ, ಸರ್ಕಾರ ಮತ್ತು ಸಾಂಸ್ಥಿಕ ಗ್ರಾಹಕರಿಗೆ ಪರಿಹಾರಗಳು ಮತ್ತು ಏಜೆಂಟಿಕ್ ಎಐ ಪ್ರಾಜೆಕ್ಟ್ ಗಳ ಕ್ಷೇತ್ರಗಳಲ್ಲಿ ಹಲವಾರು ಸ್ಟಾರ್ಟಪ್ ಗಳೊಂದಿಗೆ ಕೆಲಸ ಮಾಡುತ್ತಿದೆ.

ಎಚ್.ಡಿ.ಎಫ್.ಸಿ. ಬ್ಯಾಂಕ್ ಸರ್ಕಾರದ ಸಿ.ಜಿ.ಎಸ್.ಎಸ್. ಹಾಗೂ ಬ್ಯಾಂಕಿನ ಸಿ.ಎಸ್.ಆರ್. ಕಾರ್ಯಕ್ರಮ ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್ ಅಡಿಯಲ್ಲಿ ಇಕೊಸಿಸ್ಟಂಗೆ ಪ್ರಮುಖ ಕೊಡುಗೆ ನೀಡುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ