– ರಾಘವೇಂದ್ರ ಅಡಿಗ ಎಚ್ಚೆನ್.
ವಿ.ಕೆ. ಸ್ಟುಡಿಯೋಸ್ ವತಿಯಿಂದ ಕನ್ನಡ ಕಿರುಚಿತ್ರೋತ್ಸವವನ್ನು ಇತ್ತೀಚೆಗೆ ಬೆಂಗಳೂರಿನ ವಿಕ್ಟರಿ ಸಿನಿಮಾಸ್ ನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಒಟ್ಟಾರೆ ಆರು ಕಿರುಚಿತ್ರಗಳು ಪ್ರದರ್ಶನ್ಗೊಂಡಿದ್ದು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.

ಕಿರುಚಿತ್ರೋತ್ಸವದಲ್ಲಿ ವಿನಯ್ ಕೃಷ್ಣ ನಿರ್ದೇಶನದ “ಉಪರಿ”, ವೀರ್ ಬದಾಮಿ ನಿರ್ದೇಶನದ “ಪಾಠಶಾಲೆ”, ಶಂಕರ್ ನಾಗ್ ಒಡೆಯರ್ ನಿರ್ದೇಶನದ “ದ್ವಿತಿ”, ತಕ್ಷಕ್ ಅವರ “ಬಾಳ ಪುಸ್ತಕದಲ್ಲೊಂದು ಅಧ್ಯಾಯ”, ಶಿವ ಶಕ್ತಿ ಪ್ರೊಡಕ್ಷನ್ಸ್ ಅವರ ವಿಜಯ್ ಭಾರದ್ವಾಜ್ ನಿರ್ದೇಶನದ “ಗುಬ್ಬಚ್ಚಿಗಳು” ಮತ್ತು ಆರ್.

ಪ್ರಹ್ಲಾದ್ ಆಚಾರ್ಯ ಅವರ ನಿರ್ದೇಶನದ “ಹೇಯ್ ಲಡ್ಕಿ” ಕಿರುಚಿತ್ರಗಳು ಪ್ರದರ್ಶನಗೊಂಡವು.

ಕಿರುಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು ನಿರ್ದೇಶಕರು ಹಗೂ ನಟರ ಪ್ರತಿಭೆಗೆ ತಲೆದೂಗಿದ್ದಾರೆ.
ಜಗನ್ನಾಥ್ ರಾವ್ ಸಂಸ್ಥಾಪಕರು ಹಾಗೂ ಶ್ರೀನಿವಾಸ್ ಜಿ. ಸಹ ಸಂಥಾಪಕರಾಗಿರುವ ವಿ.ಕೆ.

ಸ್ಟುಡಿಯೋಸ್ ಹಲವಾರು ವರ್ಷಗಳಿಂದ ಬೆಂಗಳುರಿನಲ್ಲಿ ಕಿರುಚಿತ್ರೋತ್ಸವ ಸೇರಿ ಹಲವು ಬಗೆಯ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.





