– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: “ಕಲ್ಟ್”
ನಿರ್ದೇಶನ: ಅನಿಲ್ ಕುಮಾರ್
ನಿರ್ಮಾಣ: ಲೋಕಿ ಸಿನಿಮಾಸ್
ತಾರಾಂಗಣ: ಜೈದ್ ಖಾನ್, ಮಲೈಕಾ ,ರಚಿತಾ ರಾಮ್, ಅಚ್ಯುತ್ ಕುಮಾರ್, ರಂಗಾಯಣ ರಘು, ಅಲೋಕ್ ಮೊದಲಾದವರು
ರೇಟಿಂಗ್: 3/5
ಈ ಹಿಂದೆ ‘ಬನಾರಸ್’ನಲ್ಲಿ ಚಾಕಲೇಟ್ ಹೀರೋ ಆಗಿ ಗಮನ ಸೆಳೆದಿದ್ದ ಜೈದ್ ಖಾನ್, ಈಗ ಭಗ್ನಪ್ರೇಮಿ ಅವತಾರದಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇಲ್ಲಿ ಇಬ್ಬರು ಹುಡುಗಿಯ ಮುದ್ದಿನ ಪ್ರಿಯಕರನಾಗಿ ಅವರು ಕಾಣಿಸಿಕೊಂಡಿದ್ದಾರೆ. ಹಾಗಾದರೆ ಈ ಭಗ್ನಪ್ರೇಮಿಯ ಕಲ್ಟ್ ಕಥೆ ಹೇಗಿದೆ? ಇಲ್ಲಿ ಓದಿ..
ಮ್ಯಾಡಿ( ಜೈದ್ ಖಾನ್) ಗೆ ಲವ್ ಎನ್ನುವ ಪದ ಕೇಳಿದರೇ ಆಗುವುದಿಲ್ಲ. ಅಲ್ಲದೆ ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ದಿನ ರಾತ್ರಿ ಎನ್ನದೆ ಮದ್ಯಸೇಅನೆ ಮಾಡುವುದು ಇವನ ಚಾಳಿ.ಇಂತಹ ಮ್ಯಾಡಿ ಜೀವನದಲ್ಲಿ ಇತಿಹಾಸಿನಿ (ರಚಿತಾ ರಾಮ್) ಪ್ರವೇಶವಾಗುತ್ತದೆ. ಆಗ ಮ್ಯಾಡಿ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಎಂದರೆ ಕೃಷ್ಣಾಪುರ, ಗೀತಾ (ಮಲೈಕಾ ವಸುಪಾಲ್) ಅವರ ಕಥೆ ತೆರೆದುಕೊಳ್ಳುತ್ತದೆ. ಅಂತಿಮವಾಗಿ ಗೀತಾ ಮತ್ತು ಇತಿಹಾಸಿನಿ ನಡುವೆ ಮ್ಯಾಡಿ ಸಿಕ್ಕಿಕೊಳ್ಳುತ್ತಾನೆ. ಆ ಪ್ರೀತಿಯ ಸಿಕ್ಕಿನಿಂದ ಅವನು ಹೇಗೆ ಬಿಡಿಸಿಕೊಂಡ ಅಂತಿಮವಾಗಿ ಯಾರೊಡನೆ ತನ್ನ ಜೀವನ ಕಳೆಯಲು ತೀರ್ಮಾನಿಸಿದ ಎನ್ನುವುದು ಕಥೆಯ ಸಾರಾಂಶ..

“ಕಲ್ಟ್” ಸಿನಿಮಾ ಕಥೆ ಕನ್ನಡಕ್ಕೇನೂ ಹೊಸತಲ್ಲ. ಪ್ರೀತಿಸಿದ ಹುಡುಗಿ ತನಗೆ ಹಣವೇ ಮುಖ್ಯ ಎಂಬ ಕಾರಣಕ್ಕೆ ಕೈಕೊಟ್ಟು ಹೋಗುವುದು ಯುವಕ ಸಿರಿವಂತನಾದಾಗ ಮತ್ತೆ ತಿರುಗಿ ಬರುವುದು ಇದೆಲ್ಲಾ ಈ ಹಿಂದೆ ಅನೇಕ ಸಿನಿಮಾಗಳಲ್ಲಿ ಬಂದಿದೆ. ಹಾಗಾಗಿ ಚಿತ್ರಕಥೆ ಪ್ರತಿ ದೃಶ್ಯವೂ ಮೊದಲೇ ನಿರೀಕ್ಷಿಸಿದಂತೆ ಸಾಗಿದೆ. ಒಟ್ಟಾರೆ ಸಿದ್ದಸೂತ್ರಗಳನ್ನೇ ಪುನರಾವರ್ತಿಸಿದ್ದಾರೆ ನಿರ್ದೇಶಕ ಅನಿಲ್. ಈ ಹಿಂದೆ ತೆಲುಗಿನಲ್ಲಿ ಬಂದಿದ್ದ “ಬೇಬಿ” ಹಗೂ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣ” ಚಿತ್ರಗಳ ಕಥೆ ಕಲ್ಟ್ ಸಿನಿಮಾದೊಂದಿಗೆ ಸಾಕಷ್ಟು ಹೋಲಿಕೆ ಮಾಡಬಹುದು. ಒಟ್ತಾರೆ ಸಿನಿಮಾನಲ್ಲಿ ಪ್ರೀತಿ, ರೊಮ್ಯಾನ್ಸ್, ಆಕ್ಷನ್, ಭಗ್ನ ಪ್ರೇಮ, ಭಗ್ನ ಪ್ರೇಮದ ಬಳಿಕ ಮತ್ತೆ ಪ್ರೇಮದಲ್ಲಿ ಬೀಳುವುದು, ಮಗ ವ್ಯಸನಗಳಿಗೆ ದಾಸನಾದರೆ ಪೋಷಕರು ಅನುಭವಿಸುವ ನೋವು, ಎಲ್ಲವೂ ಇಲ್ಲಿದೆ. ಆದರೆ ಯಾವುದೂ ಸುಸೂತ್ರವಾಗಿಲ್ಲ.. ಅಲ್ಲೆಲ್ಲೋ ಸುತ್ತಾಡಿ ಇಲ್ಲೆಲ್ಲೋ ಓಡಾಡಿದಂತಾ ಅನುಭವ ಕೊಡುತ್ತದೆ!
ಪಾತ್ರವರ್ಗದ ವಿಷಯಕ್ಕೆ ಬಂದರೆ ಜೈದ್ ಖಾನ್ ಒಂದೊಮ್ಮೆ ಲವರ್ ಬಾಯ್ ಆಗಿ ಮತ್ತೊಮ್ಮೆ ವೈಲೆಂಟ್ ಭಗ್ನಪ್ರೇಮಿ ಯಾಗಿ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಸಿಗರೇಟ್ ಸೇಯುತ್ತಾ ಝನ್ಝಿ ಹುಡುಗಿಯರ ಹಾಗೆ ಗ್ಲಾಮರ್ ಗೊಂಬೆ ಅವತಾರದಲ್ಲಿ ಕಾಣಿಸಿಕೊಂಡರೂ ರಚಿತಾ ರಂಗಾಯಣ ರಘು ಜೊತೆಗೆ ತಂದೆ ಮಗಳ ಪಾತ್ರವನ್ನು ಜೀವಿಸಿದ್ದಾರೆ. ಇನ್ನು ಮಲೈಕಾ, ರಂಗಾಯಣ ರಘು, ಅಚ್ಯುತ್ ಕುಮಾರ್, ಅಲೋಕ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ನಲ್ಲಿ ಮೂಡಿ ಬಂದಿರುವ ಯ್ಯೋ ಶಿವನೇ ಮತ್ತು ಹೃದಯವು ಕೇಳದೆ ಹಾಡುಗಳು ಗುನುಗುವಂತಿದೆ. ಉಳಿದಂತೆ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ “ಹೇ ಶಾರದೆ” ಹಾಗೂ ಆಲ್ ಓಕೆ ಅವರ “ಹ್ಯಾಪಿ” ಹಾಡುಗಳನ್ನು ಯಥಾವತ್ ಬಳಸಿಕೊಳ್ಳಲಾಗಿದೆ. ಜಿ.ಎಸ್. ವಾಲಿ ಛಾಯಾಗ್ರಹಣದಲ್ಲಿ ಹಂಪಿಯ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಬಹುದು. ಜೊತೆಗೆ ಕೆಲವೊಂದು ಹಾಡಿನ ದೃಶ್ಯಗಳು ಸುಂದರವಾಗಿ .
ಮೂಡಿ ಬಂದಿದೆ





