ಒಂದಿಷ್ಟು ಕಲ್ಪನೆ, ಉತ್ತಮ ಕಾಭಿರುಚಿ, ವಿಶೇಷ ಕ್ರಿಯೇಟಿವಿಟಿಯಿಂದ ಸಲದ ಹಬ್ಬಗಳಿಗೆ ನಿಮ್ಮದೇ ಪೇಂಟಿಂಗ್ಸ್ ನಿಂದ ಏಕೆ ಗೃಹಾಲಂಕಾರಕ್ಕೆ ತೊಡಗಬಾರದು…..?

ನಿಮ್ಮ ಮನೆಯ ಗೋಡೆಗಳಿಗೆ ತೂಗುಬಿಟ್ಟ ನಿಮ್ಮದೇ ಕಲ್ಪನೆ, ಅಭಿರುಚಿಯ ಪೇಂಟಿಂಗ್ಸ್ ಈ ಸಲದ ಹಬ್ಬಗಳ ಇಂಟೀರಿಯರ್ಸ್‌ ನ ಹೈಲೈಟ್‌ ಆಗಿರಲಿ! ಬಹಳಷ್ಟು ಜನ ಎಷ್ಟೋ ದುಬಾರಿ ಬೆಲೆಯ ತೈಲಚಿತ್ರಗಳನ್ನು ತಂದು ತಮ್ಮ ಮನೆಯ ಗೃಹಾಲಂಕಾರಕ್ಕೆ ಮುಂದಾಗುತ್ತಾರೆ. ಆದರೆ ಈ ಕಲಾತ್ಮಕ ಪೇಂಟಿಂಗ್ಸ್ ನಿಮ್ಮ ಕೈಯಿಂದಲೇ ತಯಾರಾಗಿದ್ದರೆ…. ಅದರ ಸೊಗಸೇ ಬೇರೆ. ಆದರೆ ಕೆಲವು ಗೃಹಿಣಿಯರು ಇದನ್ನು ಕೇಳಿ ನೊಂದುಕೊಳ್ಳುವುದು ಬೇಡ. ನಾವೆಂದೂ ಕೈಗೆ ಕುಂಚ ಹಿಡಿದವರೇ ಅಲ್ಲ, ಬಣ್ಣಗಳ ಮಿಶ್ರಣ ನಮ್ಮಂಥ ಸಾಧಾರಣ ಗೃಹಿಣಿಯರಿಗೆ ಎಲ್ಲಿಂದ ತಿಳಿಯಬೇಕು ಎಂದು ಬೇಸರಿಸದಿರಿ. ಕ್ಯಾನ್‌ ವಾಸ್‌ ಸ್ಟ್ಯಾಂಡ್‌ ಕಂಡವರಲ್ಲ, ಪ್ರಕೃತಿ ಸೊಬಗನ್ನು ಎಂತು ವರ್ಣಿಸುವುದು ಎಂದು ಕೊರಗದಿರಿ. ಹಾಗಿರುವಾಗ ನಮ್ಮದೇ ಪೇಂಟಿಂಗ್ಸ್ ನ್ನು ತೂಗು ಹಾಕುವುದು ಎಂದರೇನು ಅಂತೀರಾ….?

ನೀವು ಎಂದೂ ಇಂಥ ಕಲಾವಿದರ ಕೆಲಸಕ್ಕೆ ಕೈ ಹಾಕದೇ ಇರುವುದರಿಂದ ನಿಮಗೆ ಹೀಗೆ ಅನಿಸಬಹುದು. ಒಂದು ಮಾತು ನೆನಪಿಡಿ, ಪೇಂಟಿಂಗ್‌ ಕಲೆ ಕೇವಲ ಕೆಲವರಿಗೆ ಮಾತ್ರ ಕರಗತ ಆಗಿರಬಹುದು, ಆದರೆ ಸುಂದರ ರಂಗೋಲಿ ಬಿಡಿಸು, ಅದನ್ನು ಬಣ್ಣದ ಪುಡಿಗಳಿಂದ ಇನ್ನಷ್ಟು ಚಂದ ಮಾಡುವ ಗೃಹಿಣಿಯ ಕೈಗಳು, ಬಿಳಿಯ ಹಾಳೆ ಮೇಲೆ ಪೆನ್ಸಿಲ್ ‌ಹಿಡಿದು ಚಿತ್ತಾರ ಬಿಡಿಸದೇ? ಅದಕ್ಕೆ ಬ್ರಶ್‌ ನಿಂದ ಟಚ್‌ ಕೊಟ್ಟು, ಮನಸ್ಸು ಬಯಸಿದ ಬಣ್ಣ ತುಂಬಿಸಲಾಗದೇ? ಇವೆಲ್ಲ ನಿಮ್ಮ ಕಲ್ಪನೆ, ಕಲಾಭಿರುಚಿ, ಅದರಲ್ಲಿನ ನಿಮ್ಮ ಶ್ರದ್ಧೆ, ಏಕಾಗ್ರತೆಗೆ ಸಾಕ್ಷಿ ಆಗುತ್ತದೆ. ಮೇಲಿನ ಚಿತ್ರಗಳನ್ನೇ ಗಮನಿಸಿ, ಇವು ಅತಿ ಸಾಧಾರಣವೇ ಆದರೂ, ನಿಮ್ಮದೇ ಕೈಗಳಲ್ಲಿ ಮೂಡಿಬಂದಾಗ, ಅದು ತುಂಬಾ ಗ್ರೇಟ್‌ ಎನಿಸುತ್ತದೆ, ಅಲ್ಲವೇ? ಹೀಗೇ ನೀವು ಟ್ರೈ ಮಾಡಿ ನೋಡಿ! ಹೀಗೆ ಉತ್ತಮ ಪೇಂಟಿಂಗ್‌ ರೆಡಿ ಮಾಡಿ, ಅದಕ್ಕೊಂದು ಫ್ರೇಮ್ ಹಾಕಿಸಿ, ನಿಮ್ಮ ಡ್ರಾಯಿಂಗ್‌ ರೂಮಿನ ಗೋಡೆಗಳಿಗೆ ತೂಗುಬಿಡಿ, ಬಂದವರು ಇದನ್ನು ಕಂಡು ಪ್ರಶಂಸಿಸದೆ ಇರಲಾರರು!

ನಿಮ್ಮ ಮಕ್ಕಳ ಶಾಲೆಯ ಪ್ರಾಜೆಕ್ಟ್ ವರ್ಕ್‌ ನ್ನು ನೀವು ಅಂತೂ ಇಂತೂ ಕಷ್ಟಪಟ್ಟು ಹೇಗೋ ಮುಗಿಸಿಕೊಡ್ತೀರಿ ಅಲ್ಲವೇ, ಹಾಗೆಯೇ ಈ ಪೇಂಟಿಂಗ್ಸ್ ಸಹ ಫ್ರೇಮ್ ಏರುತ್ತದೆ. ಇಲ್ಲಿನ ಮತ್ತೊಂದು ರಹಸ್ಯ ಎಂದರೆ, ಯಾವ ಸಾಧಾರಣ ಪೇಂಟಿಂಗೇ ಇರಲಿ, ಅದು ಅಂದವಾಗಿ ಫ್ರೇಮ್ ಆಗಿಹೋದಾಗ, ಖಂಡಿತಾ ಅದರ ಸೊಗಸು ಎಷ್ಟೋ ಪಟ್ಟು ಹೆಚ್ಚುತ್ತದೆ! ಇದರಲ್ಲಿ ನಿಮ್ಮ ಪ್ರೀತಿಯ ಪರಿಶ್ರಮ ಬೆರೆತಿದೆ ಎಂಬುದೇ ಎಲ್ಲಕ್ಕಿಂತ ದೊಡ್ಡ ವಿಷಯ.

ಕುಂಚದಿಂದ ಇಳಿದ ಕಲ್ಪನೆ

ಈ ಕುರಿತಾಗಿ ನಗರದ ಪ್ರಸಿದ್ಧ ಪೇಂಟಿಂಗ್‌ ತಜ್ಞರ ಅಭಿಪ್ರಾಯ ಎಂದರೆ, ಪೇಂಟಿಂಗ್‌ ಸದಾ ಜನರನ್ನು ಬಿಝಿ ಆಗಿರಿಸಲು, ಕಾಲಾಭಿರುಚಿ ಅಭಿವೃದ್ಧಿ ಪಡಿಸಿಕೊಳ್ಳಲು ಉತ್ತಮ ಸಾಧನವಾಗಿದೆ. ನೀವು ಸಹ ಇದೇ ರೀತಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸ ಬಯಸಿದರೆ, ಅಂಥ ಗೋಡೆಗಳ ಬಣ್ಣ ಹೆಚ್ಚು ಗಾಢ ಆಗಿರಬಾರದು. ಬಿಳಿಯ ಬಣ್ಣದ ಯಾವುದೇ ಉತ್ತಮ ಶೇಡ್ ಇದಕ್ಕೆ ಪೂರಕವಾಗಿರುತ್ತದೆ. ಪ್ಯೂರ್‌ ವೈಟ್‌ ಕಲರ್‌ ಬದಲು ಕ್ರೀಂ ಶೇಡ್‌ ವೈಟ್‌ ಕಲರ್‌ ನಲ್ಲಿ ಬೆಳಕು ಹೆಚ್ಚು ಪ್ರಕಾಶಮಾನ ಎನಿಸುತ್ತದೆ.

ಹಾಗೆಯೇ ಗೋಡೆಗಳ ಸೈಜ್‌ ಸಹ ಗಮನದಲ್ಲಿಟ್ಟುಕೊಳ್ಳಿ. ಇದರ ನೆರವಿನಿಂದ ಕ್ಯಾನ್‌ ವಾಸ್‌ ಸೈಜ್‌ ಡಿಸೈನ್‌ ಮಾಡಿ. ಈಗ ಈ ಕ್ಯಾನ್‌ ವಾಸ್‌ ಮೇಲೆ ಆ್ಯಕ್ರೆಲಿಕ್‌ ಬಣ್ಣಗಳನ್ನು ಬಳಸುತ್ತಾ, ಬೇರೆ ಬೇರೆ ನಂಬರ್‌ ಬ್ರಶ್ಶುಗಳ ಸಹಾಯದಿಂದ ನಿಮ್ಮ ಕಲ್ಪನೆಗೆ ತೋಚಿದಂತೆ ಚಿತ್ರ ಬಿಡಿಸಬಹುದು.

ಪೇಂಟಿಂಗ್‌ ಅಂದ್ರೆ ಇಷ್ಟು ಸುಲಭಾನಾ ಅಂತಿದ್ದೀರಾ? ಒಂದು ವಿಧದಲ್ಲಿ ಹೌದು. ನಿಮಗೆ ನಂಬಿಕೆ ಇಲ್ಲದಿದ್ದರೆ, ನಟಿ ಕರೀನಾ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಕಮೆಂಟ್‌ ನೆನಪಿಸಿಕೊಳ್ಳಿ. ಅವಳ ಪುಟ್ಟ ಮಗ ಮನೆಯ ಗೋಡೆ ಮೇಲೆ ತನ್ನದೇ ಪುಟ್ಟ ಕೈಗಳಿಂದ ಮಾಡಿದ ಪೇಂಟಿಂಗ್‌ ಕುರಿತಾಗಿ ಆಕೆ ಹೇಳಿದ ಮಾತುಗಳು.

ಆಕೆ ತನ್ನ ಮಗನ ಒಂದು ಫೋಟೋವನ್ನು ಜನರಿಗೆ ಪರಿಚಯಿಸುತ್ತಾ, “ನಿಮ್ಮ ಎದುರಿಗೆ ಸಿಕ್ಕಿದ ಯಾವುದೇ ಒಂದು ಗೋಡೆ ಇರಲಿ, ಅದರ ಮೇಲೆ ಹೀಗೆ ನಿಮ್ಮ ಕ್ರಿಯೇಟಿವಿಟಿ ತೋರಿಸಲು ಹಿಂಜರಿಯದಿರಿ. ಆಗ ನಿಮ್ಮ ಪೇಂಟಿಂಗ್‌ ತಂತಾನೇ ಮೂಡುತ್ತದೆ!” ಇದೇ ತರಹ ಈಕೆಯ ಪತಿ ಸೈಫ್‌ ಸಹ ಒಂದು ಗೋಡೆಯನ್ನು ಹೂಗಳ ಪೇಂಟಿಂಗ್‌ ನಿಂದ ಸಿಂಗರಿಸುತ್ತಿದ್ದ ಫೋಟೋ ಸಹ ವೈರಲ್ ಆಗಿತ್ತು.

ಪ್ರತಿಭೆ ಅರಳಲು ಬಿಡಿ

ನಾವು ನಿಷ್ಠೆ, ಶ್ರದ್ಧೆಗಳಿಂದ ಮಾಡುವ ಯಾವ ಕೆಲಸವೇ ಆಗಲಿ, ಉತ್ತಮ ಹವ್ಯಾಸ ಟೈಂಪಾಸ್‌ ಗೆ ಬಲು ಉತ್ತಮ ಸಾಧನವಾಗಿದೆ. ಎಷ್ಟೋ ಹೆಂಗಸರು ಮಧುಬನಿ ಆರ್ಟ್‌ ಡಿಸೈನ್‌ ಗಳಿಂದ ಪ್ರೇರಣೆ ಪಡೆಯುತ್ತಾರೆ, ಅದರಿಂದ ತಮ್ಮ ಗೋಡೆಗಳನ್ನು ಚೆಂದಗೊಳಿಸುತ್ತಾರೆ. ಉಳಿದವರು ಮಾಡರ್ನ್‌ ಆರ್ಟ್‌ ಮೂಲಕ ಈ ಕೆಲಸ ಮಾಡುತ್ತಾರೆ.

ಇಷ್ಟು ಮಾತ್ರವಲ್ಲದೆ, ಕ್ಯಾನ್‌ ವಾಸ್‌ ಮೇಲೆ ಪೇಂಟಿಂಗ್‌ ಮಾಡುವಾಗ, ಅದರಲ್ಲಿ ನಡುನಡುವೆ ಸಣ್ಣಪುಟ್ಟ ಕಾಡು ಪ್ರಾಣಿಗಳ  ಚಿತ್ರ ಬಿಡಿಸಿದರೆ, ಕೆಲವು ಚಿತ್ರಗಳನ್ನು ನೇರವಾಗಿ ಫೆವಿಕಾಲ್ ‌ನಿಂದ ಮಧ್ಯೆ ಅಂಟಿಸಿದರೆ, ನಿಮ್ಮ ಪೇಂಟಿಂಗ್‌ ನ ಎಂಡ್‌ ರಿಸ್ಟ್‌ ಮತ್ತಷ್ಟು ಚೆನ್ನಾಗಿರುತ್ತದೆ. ಇವಕ್ಕೆಲ್ಲ ಹೆಚ್ಚಿನ ಖರ್ಚು ತಗುಲುವುದಿಲ್ಲ ಎಂಬುದು ಗಮನಾರ್ಹ.

ಹಾಗಿರುವಾಗ ಇನ್ನೇಕೆ ತಡ? ನಿಮ್ಮ ಗೋಡೆಗಳ ಕ್ಯಾನ್‌ ವಾಸ್‌ ಗೆ ನಿಮ್ಮದೇ ಪ್ರತಿಭೆಯ ಪರಿಚಯ ಮಾಡಿಸಿ! ಈ ಕ್ರಿಯೇಟಿವಿಟಿ ಎಂಥ ಪರಿಣಾಮ ಬೀರುತ್ತದೋ ಗಮನಿಸಿ. ಎಲ್ಲ ಗೃಹಣಿಯರಿಗೂ ಆಲ್ ದಿ ಬೆಸ್ಟ್!

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ