ಸರಸ್ವತಿ*
ನಮ್ಮನ್ನು ಭೂಮಿಗೆ ತಂದ ತಂದೆಗೆ ಸಲ್ಲಿಸಬಹುದಾದ ಕೃತಜ್ಞತೆಯ ಸಹಸ್ರನಾಮವಳಿಯೇ “ಥ್ಯಾಂಕ್ಸ್ ಅಪ್ಪ” ಕಾದಂಬರಿ. ನಿರ್ಮಾಪಕ – ನಿರ್ದೇಶಕ ವೀರೇಂದ್ರ ಬಾಬು ನಂಜೇಗೌಡ ಅವರು ಬರೆದಿರುವ *”ಥ್ಯಾಂಕ್ಸ್ ಅಪ್ಪ”* ಪುಸ್ತಕವನ್ನು ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್ ನಲ್ಲಿ *ಡಾ. ಸಂತೋಷ್ ಹೆಗಡೆ* ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. ಜಿ.ಎಸ್.ಟಿ. ಜಂಟಿ ಆಯುಕ್ತರಾದ *ಡಾ|| ಸಂಗಮೇಶ್ ಉಪಾಸೆ,* ಮಾಜಿ ಶಾಸಕರಾದ *ಶ್ರೀ ನೆ.ಲ.ನರೇಂದ್ರಬಾಬು,* ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರು, *ಶ್ರೀ ಎಸ್. ಇ. ಸುಧೀಂದ್ರ,* AICCಯ ನಾಷನಲ್ ಕಮಿಟಿ ಸದಸ್ಯರು ಕರ್ನಾಟಕ ಉಸ್ತುವಾರಿ ವಹಿಸಿರುವ *ಶ್ರೀ ಸುಜೇಂದ್ರ ಶೆಟ್ಟಿ,* ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು *ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ,* ವಕೀಲರಾದ *ಬಿ.ಎಸ್. ಸಂತೋಷ್, ಬಿ.ವಿ. ಮಾಧವಮೂರ್ತಿ,* ಪೋಲಿಸ್ ಇನ್ಸಪೆಕ್ಟರ್ *ಜಗದೀಶ್* ರವರು ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲೇಖಕರಾದ ವೀರೇಂದ್ರಬಾಬು ಅವರ ತಂದೆ ನಂಜೇಗೌಡ ಅವರು “ಥ್ಯಾಂಕ್ಸ್ ಅಪ್ಪ” ಕಾದಂಬರಿ ಬಿಡುಗಡೆಗೆ ಸಾಕ್ಷಿಯಾದರು.
*ಡಾ. ಸಂತೋಷ್ ಹೆಗಡೆ* ಯವರು ಮಾತನಾಡಿ *”ಥ್ಯಾಂಕ್ಸ್ ಅಪ್ಪ”* ಕಾದಂಬರಿ ನಾಡಿನ ಪ್ರತಿ ಮನೆಯಲ್ಲು ಇರಬೇಕಾದ ಪುಸ್ತಕ ಎನ್ನುವುದು ನನ್ನ ಅನಿಸಿಕೆ. Screen ಮೇಲೆ ಪ್ರದರ್ಶಿಸಿದ Promo ದಲ್ಲಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ *”ಥ್ಯಾಂಕ್ಸ್ ಅಪ್ಪ”* ಕಾದಂಬರಿಯನ್ನು ಉಡುಗೊರೆಯಾಗಿ ಪಡೆದ ದೃಶ್ಯದಂತೆ ಇವತ್ತಿನ ಪೀಳಿಗೆಗೆ ಅಪ್ಪನ ಮಹತ್ವ ತಿಳಿಸಲು ಈ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ರೂಡಿಸಿಕೊಳ್ಳಬೇಕು ಎಂದು ಲೇಖಕರಾದ *ವೀರೇಂದ್ರಬಾಬು ನಂಜೇಗೌಡ* ರವರಿಗೆ ಹಾರೈಸಿದರು.

ಸ್ವತಃ ಲೇಖಕರಾದ *ಡಾ|| ಸಂಗಮೇಶ್ ಉಪಾಸೆ* ಯವರು ಮತನಾಡಿ *ವೀರೇಂದ್ರಬಾಬು ನಂಜೇಗೌಡ* ರವರು ಏನೇ ಮಾಡಿದರು ವಿಭಿನ್ನವಾಗಿ ಮಾಡುವವರು. ಸಿನಿಮೆಯ ರೀತಿಯಲ್ಲಿ ಕನ್ನಡದ ಕೃತಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು *”ಥ್ಯಾಂಕ್ಸ್ ಅಪ್ಪ”* ಕಾದಂಬರಿಯಲ್ಲಿ ಲೇಖಕರು 92 ಅಧ್ಯಯಗಳನ್ನು ಬರೆದಿದ್ದಾರೆ. ಇದರಲ್ಲಿ ಕಾದಂಬರಿ ಪ್ರಕಾರದಲ್ಲಿನ ಜನಪ್ರಿಯ ಶೈಲಿಯ ತಂತ್ರವನ್ನು ತನ್ನ ನಿರೂಪಣೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. *ಕನ್ನಂಬಾಡಿ* ಅಣೆಕಟ್ಟು ಕಟ್ಟುವಾಗ ಅಲ್ಲಿದ್ದ 19 ಸಾವಿರ ಹಳ್ಳಿಗರು KRS Dam ಗಾಗಿ ಹಳ್ಳಿಯನ್ನು ತೊರೆದು, ತ್ಯಾಗ ಮಾಡುವ ಹಿನ್ನಲೆಯಲ್ಲಿ ಈ ಕಾದಂಬರಿ ತೆರೆದುಕೊಳ್ಳುತ್ತದೆ. ಕೊನೆಯ ಅಧ್ಯಾಯ ಓದುವಾಗ ಅದು ಲೇಖಕರ ಮಾತಾಗದೆ ನಮ್ಮೆಲ್ಲರ ಬಾವೋದ್ರೇಕವನ್ನ ಉದ್ದೀಪನಗೊಳಿಸಿ ಕಣ್ಣು ತೇವಗೊಳಿಸುವುದಂತು ನಿಜ. ಈ ಕಾರ್ಯಕ್ರಮದಲ್ಲಿ ಲೇಖಕರಾದ *ವೀರೇಂದ್ರಬಾಬು* ರವರ ತಂದೆ *ನಂಜೇಗೌಡ* ರವರು ಸಾಕ್ಷಿಯಾಗುವುದರಿಂದ ಇದೊಂದು ಅರ್ಥಪೂರ್ಣ ಸಂದರ್ಭ ಈ ಕಾರ್ಯಕ್ರಮದ ಮೂಲಕ ಜಗತ್ತಿನ ಎಲ್ಲಾ ತಂದೆಯರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಪುಸ್ತಕದ ಕುರಿತು ಆಶಯ ನುಡಿಯನ್ನು ಆಡಿದರು.
ಚಲನಚಿತ್ರ ಕಿರುತೆರೆ ನಟರು, ಶಾಸಕರಾದ *ಶ್ರೀ ನೆ.ಲ. ನರೇಂದ್ರಬಾಬು* ರವರು ಮಾತಾಡಿ ಈ ಕಾದಂಬರಿಯ ಒಂದಿಷ್ಟು ಪುಟಗಳನ್ನು ಓದುವಾಗ ನನ್ನ ತಂದೆಯ ನೆನಪು ಕಾಡಿಸಲು ಶುರುವಾಯಿತು. ವೀರೇಂದ್ರಬಾಬು ರವರ *”ಥ್ಯಾಂಕ್ಸ್ ಅಪ್ಪ”* ನಮ್ಮ ಅಪ್ಪನನ್ನು ನೆನೆಯುವಂತೆ ಮಾಡುವುದೆ ಈ ಪುಸ್ತಕದ ಸಾರ್ಥಕತೆ ಎಂದು ಭಾವುಕರಾದರು. ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ *ಶ್ರೀ ಎಸ್. ಇ. ಸುಧೀಂದ್ರ* ರವರು ಕುಟುಂಬ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಸಾರುವ ಈ ಪುಸ್ತಕ *”ಭಾವ ಭಗವದ್ಗೀತೆ”* ಎಂದು ಶ್ಲಾಘಿಸಿದರು. ಕೆ.ಪಿ.ಸಿ.ಸಿ ಇತರೆ ಹಿಂದುಳಿದ ವರ್ಗಗಳ ವಿಭಾಗ ಉಪಾಧ್ಯಕ್ಷರು *ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ* ಯವರು ಅಪ್ಪನ ಹಾಡು ಹಾಡಿ ವೀಕ್ಷಕರ ಗಮನ ಸೆಳೆದರು.
ಅತಿಥಿ ಗಣ್ಯರು ಶುಭ ನುಡಿಗಳ ನಂತರ *ಬೆಂಗಳೂರು ಲಾ ಹೌಸ್* 2026ನೇ ಸಾಲಿನ *ಶ್ರೇಷ್ಠ ಗೌರವ ಪುರಸ್ಕಾರ* ವನ್ನು ಹೆಮ್ಮೆಯಿಂದ ನೀಡಿತು. ಶ್ರೀ ಸಂತೋಷ್ಹೆಗಡೆಯವರಿಗೆ *ನ್ಯಾಯ ಶ್ರೇಷ್ಠ* ಗೌರವ ಪುರಸ್ಕಾರ, ಡಾ|| ಸಂಗಮೇಶ್ ಉಪಾಸೆ, ಬಿ.ಎಸ್. ಸಂತೋಷ್, ಬಿ.ವಿ. ಮಾಧವಮೂರ್ತಿ *”ವೃತ್ತಿ ಶ್ರೇಷ್ಠ,”* ಪಂಡಿತ್ ಅರುಣ್ ರಾಟೆಯವರಿಗೆ *”ಗುರು ಶ್ರೇಷ್ಠೆ”* ಶ್ರೀ ಎಸ್.ಇ. ಸುಧೀಂದ್ರ, ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ ರವರಿಗೆ *”ಜನ ಶ್ರೇಷ್ಠ”* ಶ್ರೀ ನರೇಂದ್ರಬಾಬುರವರಿಗೆ *”ಸೇವಾ ಶ್ರೇಷ್ಠ”* ಗೌರವ ಪುರಸ್ಕಾರವನ್ನು ನೀಡಿ ಗೌರವಿಸಿದರು. ಇದೇ ಸಂತಸದಲ್ಲಿ ವೀರೇಂದ್ರಬಾಬು ನಂಜೇಗೌಡರವರು, ಪುಸ್ತಕಕ್ಕೆ ಮುನ್ನಡಿ ಬರೆದ ಇತಿಹಾಸ ತಜ್ಞರಾದ *ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್* ರವರು ಹಾಗೇ ಪುಸ್ತಕಕ್ಕೆ ಬೆನ್ನುಡಿ ಬರೆದು ಬೆನ್ನು ತಟ್ಟಿ ಆಶಿರ್ವದಿಸಿದ *ಪ್ರೊ. ಎಸ್.ಜಿ. ಸಿದ್ಧರಾಮಯ್ಯ* ರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಪುಸ್ತಕದ ಹಲವಾರು ಹಂತಗಳಲ್ಲಿ ಸಹಕರಿಸಿದ ಚಲನಚಿತ್ರ ನಿರ್ದೇಶಕಾರದ *ಶ್ರೀ ರಾಮ್ ಜನಾರ್ಧನ್* ಹಾಗೂ ತನ್ನ ಕನಸಿಗೆ ಅಕ್ಷರ ರೂಪ ಕೊಟ್ಟ ಚಲನಚಿತ್ರ ಸಾಹಿತಿ-ಸಂಗೀತ ನಿರ್ದೇಶಕರಾದ *ಶ್ರೀ ಕೆ. ಎಮ್ ಇಂದ್ರ* ರವರನ್ನು ವೇದಿಕೆಯಲ್ಲಿ ಸನ್ಮಾಸಿಲಾಯಿತು. ಕಾರ್ಯಕ್ರಮವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದ ಅಂತರಾಷ್ಟ್ರೀಯ ನಿರೂಪಕರಾದ *ಶ್ರೀ ಶಂಕರ್ ಪ್ರಕಾಶ್* ರವರು ಭಾವುಕರಾಗಿ ತಮ್ಮ ತಂದೆಯನ್ನು ನೆನೆದು ತನಗೆ ಕಂಚಿನ ಕಂಠ ಎಂದು ಕರೆಯುವುದರ ಹಿಂದೆ ತನ್ನ ತಂದೆಯ ಬಳುವಳಿ ಇದೆ. ಎಂದು ಗದ್ಗಿದಿತರಾದರು.





