ಸೀರೆ ಅಥವಾ ಗೌನ್ಇರಲಿ, ನಿಮ್ಮ ಡ್ರೆಸ್ಗೆ ತಕ್ಕಂತೆ ಸಲದ ಹಬ್ಬಕ್ಕೆ ಎಂಥ ಒಡವೆ ಆರಿಸಬೇಕು ಎಂದು ವಿವರವಾಗಿ ನೋಡೋಣವೇ…..?

ಹಬ್ಬಗಳ ಸೀಸನ್‌ ಅಂದ್ರೆ ಎಲ್ಲೆಲ್ಲೂ ಬೆಳಕಿನ ಪ್ರಭೆ, ಉತ್ಸಾಹ, ಉಲ್ಲಾಸ, ಫ್ರೆಂಡ್ಸ್, ನೆಂಟರಿಷ್ಟರ ಸಡಗರ ಸಂಭ್ರಮ ತುಂಬಿಕೊಂಡು ಎಲ್ಲರ ಮುಂದೆ ನೀವು ಮಿಂಚಲು ಒಂದು ಸದವಕಾಶ! ಅದರಲ್ಲೂ ದೀಪಾವಳಿಯ ಪಾರ್ಟಿ ಅಂದ ಮೇಲೆ ಅದು ಗ್ರಾಂಡಾಗಿ ಇರಲೇಬೇಕು. ಪ್ರತಿಯೊಬ್ಬ ಹೆಣ್ಣು ಈ ಶುಭ ಸಂದರ್ಭದಲ್ಲಿ ಸ್ಟೈಲಿಶ್‌, ಗ್ಲಾಮರಸ್‌, ಸುಂದರವಾಗಿ ಕಂಗೊಳಿಸ ಬಯಸುತ್ತಾಳೆ.

ಹೀಗಾಗಿಯೇ ಹೆಂಗಸರು ಈ ಫೆಸ್ಟಿವ್ ಸೀಸನ್‌ ನಲ್ಲಿ ತಮ್ಮ ಸೌಂದರ್ಯ, ಫ್ಯಾಷನ್‌ ಸ್ಟೈಲ್ ‌ಗಾಗಿ ಹಲವು ಬಗೆಯ ಟಿಪ್ಸ್ ಫಾಲೋ ಮಾಡುತ್ತಾರೆ. ಇಂಥದ್ದರಲ್ಲಿ ಸೂಕ್ತ ಒಡವೆ ಕ್ಯಾರಿ ಮಾಡುವ ಸ್ಟೈಲ್ ‌ಒಂದೇ ಅವರನ್ನು ಇತರರಿಗಿಂತ ಭಿನ್ನವಾಗಿ ತೋರಿಸಲು ಸಾಧ್ಯ. ನೀವು ಸಹ ಹೀಗೆ ಗಾರ್ಜಿಯಸ್‌ ಆಗಿ ಮಿಂಚ ಬಯಸಿದರೆ ಈ ಸಲಹೆಗಳನ್ನು ಅಗತ್ಯ ಅನುಸರಿಸಿ :

ಡ್ರೆಸ್ಗೆ ತಕ್ಕಂತೆ ಒಡವೆ ಸೀರೆಗೆ ತಕ್ಕಂತೆ ಒಡವೆ ಆರಿಸುವುದು ಹೇಗೆ? : ಸೀರೆಗೆ ತಕ್ಕಂತೆ ನೀವು ಸೂಕ್ತ ಒಡವೆ ಆರಿಸಿದ್ದೇ ಆದರೆ, ಯಾವ ಅಪ್ಸರೆಯ ಬೆಡಗಿಗೂ ಕಡಿಮೆ ಇಲ್ಲದಂತೆ ಮೆರೆಯಬಹುದು. ಸೀರೆಯ ಡ್ರೇಪಿಂಗ್‌ ಅಷ್ಟೇ ಸ್ಟೈಲಿಶ್‌ಗ್ಲಾಮರಸ್‌ಆಗಿರಬೇಕೆಂಬುದು ಮುಖ್ಯ.

ಸೀರೆಗಳ ಟೆಕ್ಸ್ ಚರ್‌, ಫ್ಯಾಭ್ರಿಕ್ಸ್, ಬಣ್ಣಕ್ಕೆ ತಕ್ಕಂತೆ ಒಡವೆ ಆರಿಸಬೇಕು. ಲೈಟ್‌ ಕಲರ್‌ ಬಣ್ಣದ ಸೀರೆಗಳ ಜೊತೆ, ಲೈಟ್‌ಹೆವಿ ಒಡವೆ ಎರಡೂ ಓಕೆ. ಆದರೆ ಡಾರ್ಕ್‌ ಬಣ್ಣದ ಸೀರೆಗಳಿಗೆ ಮಾತ್ರ, ಒಡವೆಗಳನ್ನು ಬಲು ಎಚ್ಚರಿಕೆಯಿಂದ ಮ್ಯಾಚ್‌ ಮಾಡಬೇಕು.

ಮುತ್ತುಗಳ ಸೆಟ್‌, ಪರ್ಲ್ ಜ್ಯೂವೆಲರಿಯನ್ನು ಎಲ್ಲಾ ಬಗೆಯ ಸೀರೆಗಳ ಜೊತೆಗೂ ಧರಿಸಬಹುದಾಗಿದೆ.

ಸೀರೆಗಳ ಜೊತೆ ಒಂದೇ ಸಲ ಬಹು ಬಗೆಯ ಒಡವೆಗಳನ್ನು ಧರಿಸಬೇಡಿ. ಭಾರಿ ನೆಕ್‌ ಪೀಸ್‌ ಜೊತೆಗೆ ವೆರಿ ಲೈಟ್‌ ಇಯರ್‌ ಸ್ಟಡ್ಸ್ ಇರಲಿ, ಅಥವಾ ಸ್ಟಡ್ಸ್ ಇಲ್ಲದೆ ಸಣ್ಣ ಸ್ಟಾರ್‌ ಆದರೂ ಓಕೆ. ಭಾರಿ ಜುಮಕಿ ಯಾ ಡ್ಯಾಂಗಲರ್ಸ್‌ ಜೊತೆ ಖಾಲಿ ಕುತ್ತಿಗೆ ಅಥವಾ ಒಂದೆಳೆಯ ಸಣ್ಣ ಚೇನ್‌ (ಮಾಂಗಲ್ಯದ ಸರ) ಇದ್ದರೂ ಸರಿ. ಇದಕ್ಕೆ ಸೂಕ್ತ ಡಿಸೈನರ್‌ ಬ್ಲೌಸ್‌ ಆರಿಸಬೇಕು ಎಂಬುದನ್ನು ಮರೆಯದಿರಿ.

ಸೀರೆಯ ಜೊತೆ ಒಮ್ಮೊಮ್ಮೆ ಸಿಂಗಲ್ ಒಡವೆ ಸಹ ಧರಿಸಬಹುದು, ಅದು ಸಾಕಷ್ಟು ಹೈಲೈಟ್‌ ಆಗುವಂತಿರಬೇಕು. ಹ್ಯಾಂಡ್ ಲೂಂ ಕಾಟನ್‌ ಸೀರೆಗಳ ಜೊತೆ ಕೃತಕ ಒಡವೆಗಳು (ಅಮೆರಿಕನ್‌ ಡೈಮಂಡ್‌, ರೋಲ್ಡ್ ಗೋಲ್ಡ್ ಇತ್ಯಾದಿ) ಯಾ ಕೋರ್‌ಡ್ಯಾಂಗ್ಲರ್ಸ್‌ಬ್ರೇಸ್‌ ಲೆಟ್ಸ್ ಬಲು ಸುಂದರ ಎನಿಸುತ್ತದೆ.

Avama-Jewellers-(23)

ಕೈಗಳಿಂದ ನೇಯಲ್ಪಟ್ಟ ಸೀರೆಗಳೊಂದಿಗೆ ಬ್ಲ್ಯಾಕ್‌ ಮೆಟಲ್ ನ ಒಡವೆಗಳು ಹೆಚ್ಚು ಕಳೆಗಟ್ಟುತ್ತವೆ. ಇದೇ ತರಹ ಚಂದೇರಿ ಕಾಟನ್ ಯಾ ಸಿಲ್ಕ್ ಜೊತೆಗೆ ಬಣ್ಣಗಳಿಗೆ ತಕ್ಕಂತೆ, ಬೆಳ್ಳಿಚಿನ್ನದ ಒಡವೆಗಳು ಚೆನ್ನಾಗಿರುತ್ತವೆ. ಬೆನಾರಸ್‌ ಸಿಲ್ಕ್, ಕಾಂಚೀಪುರಂ ಸಿಲ್ಕ್ ಹಾಗೂ ಅಸ್ಸಾಂ ಮುಗಾ ಸಿಲ್ಕ್ ಜೊತೆ ಸ್ವರ್ಣಾಭರಣಗಳು ಯಾ ಬೆಳ್ಳಿ ಒಡವೆಗಳು ಸೀರೆಗೆ ಉತ್ತಮ ಲುಕ್ಸ್ ನೀಡುತ್ತವೆ. ಇವುಗಳ ಜೊತೆ ಮುತ್ತು, ಪ್ರೇಶಿಯಸ್‌ ಸ್ಟೋನ್ಸ್ ಜ್ಯೂವೆಲರಿ ಸಹ ಸೊಗಸಾಗಿ ಹೊಂದುತ್ತವೆ.

ಇದೇ ತರಹ ಭಾಗಲ್ಪುರಿ ಸೀರೆ ಜೊತೆ ಬಣ್ಣಕ್ಕೆ ಹೊಂದುವಂತೆ ಕಿವಿಗಳ ಜುಮಕಿ ಹಾಗೂ ಇನ್ನಿತರ ಒಡವೆಗಳೂ ಚೆನ್ನಾಗಿ ಒಪ್ಪುತ್ತವೆ. ಲೈಟ್‌ ಬಣ್ಣದ ಕೈಮಗ್ಗದ ಸೀರೆ ಜೊತೆ ಡೈಮಂಡ್‌ ಜ್ಯೂವೆಲರಿ ಉತ್ತಮ ಕಾಂಟ್ರಾಸ್ಟ್ ಮ್ಯಾಚ್‌ ಆಗಿದೆ.

ರೇಷ್ಮೆ ಸೀರೆಗಳು : ಉತ್ತಮ ಒಡವೆಗಳನ್ನು ಜೊತೆಗೆ ಧರಿಸಿದಾಗ ಮಾತ್ರ ಉಟ್ಟಿರುವ ರೇಷ್ಮೆ ಸೀರೆಗೂ ಒಂದು ಕಳೆ ಬರುತ್ತದೆ. ನೀವು ರೇಷ್ಮೆ ಸೀರೆ ಉಟ್ಟಾಗೆಲ್ಲ ಅದಕ್ಕೆ ಒಪ್ಪುವಂಥ ಒಡವೆ ಧರಿಸಿ, ಆಗ ಮಾತ್ರ ನೀವು ಗುಂಪಿನ ನಾಲ್ವರಲ್ಲಿ ಎದ್ದು ಕಾಣುವಿರಿ.

ಚೋಕರ್ಧರಿಸಿ : ರೇಷ್ಮೆ ಸೀರೆ ಜೊತೆ ಚೋಕರ್‌ ಪೆಂಡೆಂಟ್‌ ಹಾಗೂ ದೊಡ್ಡ ದೊಡ್ಡ ಓಲೆಗಳು, ಲೋಲಾಕು ಬಹಳ ಬ್ಯೂಟಿಫುಲ್ ಎನಿಸುತ್ತವೆ.

ಲೈಟ್ಸಿಲ್ಕ್ ಸೀರೆ ಜೊತೆ ಭಾರಿ ಪೆಂಡೆಂಟ್‌ : ಯಾವುದೇ ಪಾರ್ಟಿ, ಫಂಕ್ಷನ್‌ ಯಾ ದೀಪಾವಳಿಯಂಥ ದೊಡ್ಡ ಹಬ್ಬಗಳಿಗೆ ನೀವು ಲೈಟ್‌ ಸಿಲ್ಕ್ ಸೀರೆ ಉಟ್ಟರೆ, ಭಾರಿ ಪೆಂಡೆಂಟ್‌ ಧರಿಸಿರಿ. ಭಾರತೀಯ ಉಡುಗೆಗಳ ಜೊತೆ ಭಾರಿ ಪೆಂಡೆಂಟ್‌ ನಲ್ಲಿ ನೀವು ಮತ್ತಷ್ಟು ಸುಂದರವಾಗಿ ಮಿಂಚುವಿರಿ. ಇದಕ್ಕೆ ತಕ್ಕಂತೆ ನೀವು ಮ್ಯಾಚಿಂಗ್‌ ಇಯರ್‌ ರಿಂಗ್ಸ್, ಬ್ರೇಸ್ಲೆಟ್‌, ರಿಂಗ್ಸ್ ಸಹ ಧರಿಸಬಹುದು.

ರೇಷ್ಮೆ ಸೀರೆ ಜೊತೆ ಬೈತಲೆ ಬೊಟ್ಟು : ರೇಷ್ಮೆ ಸೀರೆಯ ಹೊಳಪು ಎದ್ದು ಕಾಣಿಸಬೇಕೆಂದರೆ, ಅದರ ಜೊತೆ ನೀವು ಬೈತಲೆ ಬೊಟ್ಟು ಧರಿಸುವುದು ಲೇಸು. ನೀವು ರೇಷ್ಮೆ ಸೀರೆ ಉಟ್ಟಾಗ, ಮರೆಯದೆ ಬೈತಲೆ ಬೊಟ್ಟು ಇರಿಸಿಕೊಳ್ಳಿ. ಇದರಿಂದ ರೇಷ್ಮೆ ಸೀರೆ ಉಟ್ಟ ನಿಮಗೆ ಬ್ಯೂಟಿಫುಲ್ ಡಿಫರೆಂಟ್‌ ಲುಕ್‌ ಸಿಗುತ್ತದೆ.

ಶರಾರಾ ಜೊತೆ ಒಪ್ಪುವ ಆ್ಯಕ್ಸೆಸರೀಸ್‌ : ಹಬ್ಬಗಳಿಗಾಗಿ ಆಯ್ಕೆ ಮಾಡಿಕೊಳ್ಳುವ ಟ್ರೆಡಿಶನಲ್ ಡ್ರೆಸ್‌ ಗಳಲ್ಲಿ ಶರಾರಾ ನಿಮಗೆ ಕ್ಲಾಸಿ ಲುಕ್‌ ನೀಡುತ್ತದೆ. ಇದಕ್ಕೆ ಒಪ್ಪುವ ವಿಶಿಷ್ಟ ಒಡವೆಗಳಿಂದ ನೀವು ಸ್ಟೈಲಿಶ್‌ಗಾರ್ಜಿಯಸ್‌ ಲುಕ್ಸ್ ಪಡೆಯಬಹುದು.

ಜುಮಕಿ ಹಾಗೂ ಬೈತಲೆ ಬೊಟ್ಟು : ಶರಾರಾ ಸೂಟ್‌ ಜೊತೆ ಜುಮಕಿ ಚೆನ್ನಾಗಿ ಒಪ್ಪುತ್ತದೆ. ನೀವು ಕ್ಯಾಶ್ಯುಯೆಲ್ ‌ಶರಾರಾ ಸೂಟ್ ಧರಿಸಿದರೆ, ಅದಕ್ಕೆ ತಕ್ಕಂತೆ ಬೆಳ್ಳಿ ಜುಮಕಿ ಟ್ರೈ ಮಾಡಿ ನೋಡಿ. ಕೆಂಪು, ಮೆರೂನ್‌ ಶರಾರಾಗಳ ಜೊತೆ ಬೆಳ್ಳಿ ಜುಮಕಿಗಳು ಕಾಂಟ್ರಾಸ್ಟ್ ಆಗಿ, ಮಿಂಚಲು ಪೂರಕ. ಅದೇ ತರಹ ಶರಾರಾ ಜೊತೆ ಬೈತಲೆಬೊಟ್ಟು, ನಿಮಗೆ ತುಸು ಹೆವಿ ಲುಕ್ಸ್ ನೀಡಬಹುದು.

ಚೋಕರ್‌ : ನೀವು ರೌಂಡೆಡ್‌ ನೆಕ್‌ ವುಳ್ಳ ಶರಾರಾ ಸೂಟ್‌ ಧರಿಸಿದ್ದರೆ, ಇದರ ಜೊತೆ ಚೋಕರ್‌ ಉತ್ತಮ ಕಾಂಬಿನೇಶನ್‌ ಆಗಲಿದೆ. ಇಷ್ಟು ಮಾತ್ರವಲ್ಲದೆ, ಡೀಪ್‌ ನೆಕ್‌ ಸೂಟ್‌ ಗಾಗಿ ಕುಂದಣದ ಸೆಟ್‌ ಧರಿಸಬಹುದು.

ನೋಸ್ಪಿನ್‌: ಶರಾರಾ ಜೊತೆ ಪರ್ಫೆಕ್ಟ್ ಟ್ರೆಡಿಶನಲ್ ಲುಕ್‌ ಪಡೆಯಲು, ನೋಸ್‌ ಪಿನ್‌ಧರಿಸಲು ಮರೆಯದಿರಿ. ಇದಕ್ಕಾಗಿ ನೀವು ಶರಾರಾಗೆ ಹೊಂದುವಂಥ ಡಿಸೈನರ್‌ ನೋಸ್‌ ಪಿನ್‌ ಧರಿಸಿದರೆ ಚೆಂದ.

ಡ್ರೆಸ್ಕಲರಿಗೆ ತಕ್ಕಂತೆ ಆ್ಯಕ್ಸೆಸರೀಸ್

ನೀವು ಆರಿಸುವ ಆ್ಯಕ್ಸೆಸರೀಸ್ನಿಮ್ಮ ಡ್ರೆಸ್ಕಲರ್ಗೆ ಹೊಂದುವಂತಿರಲಿ : ನೀವು ಧರಿಸಿರುವ ಡ್ರೆಸ್‌ ಕಲರಿಗೆ ತಕ್ಕಂತೆ ಆ್ಯಕ್ಸೆಸರೀಸ್‌ ಆರಿಸಿಕೊಂಡರೆ, ಅದರಿಂದ ನಿಮಗೆ ಒಂದು ಬ್ಯಾಲೆನ್ಸ್ಡ್ ಲುಕ್‌ ಸಿಗುತ್ತದೆ, ನೀವು ಮತ್ತಷ್ಟು ಆಕರ್ಷಕವಾಗಿ ಕಾಣುವಿರಿ. ಉದಾ : ನೀವು ಯಾವುದೇ ಲೈಟ್‌ ಪಿಂಕ್‌ ಬಣ್ಣದ ಡ್ರೆಸ್‌ ಧರಿಸಿದ್ದರೆ, ಇದರ ಜೊತೆ ಪಿಂಕ್‌/ ರೋಸ್‌ ಬಣ್ಣದ ಆ್ಯಕ್ಸೆಸರೀಸ್‌ ಮಾತ್ರ ಆರಿಸಿ. ಕಲರ್‌ ನ ಶೇಡ್‌ ಗಳಲ್ಲಿ ತುಸು ಅಂತರವಿದ್ದರೂ ಅಡ್ಡಿಯಿಲ್ಲ. ಅಂದ್ರೆ, ಲೈಟ್‌ ಪಿಂಕ್‌ ಡ್ರೆಸ್‌ ಜೊತೆ ಡಾರ್ಕ್‌ ಪಿಂಕ್‌ ಬಣ್ಣದ ಸ್ಯಾಂಡಲ್ಸ್, ಬ್ರೇಸ್ಲೆಟ್‌ ಓಕೆ. ಇದರಿಂದ ನಿಮ್ಮ ಮ್ಯಾಚಿಂಗ್‌ ತುಸು ಫ್ಯಾಷನೆಬಲ್ ಆಗಿರುತ್ತದೆ.

ನೀವು ಡ್ರೆಸ್‌ ನ ಓವರ್‌ ಆಲ್ ಕಲರ್‌ ಗೆ ಮ್ಯಾಚ್‌ ಆಗುವಂತೆ ಆ್ಯಕ್ಸೆಸರೀಸ್‌ ಆರಿಸುವ ಬದಲು, ಸೆಕೆಂಡರಿ ಕಲರ್‌ ಗೂ ಸಹ ಮ್ಯಾಚ್‌ ಮಾಡಬಹುದು. ವಿಶೇಷವಾಗಿ ಇದು ಪ್ಯಾಟರ್ನ್‌ ಡ್ರೆಸೆಸ್‌ ಜೊತೆ ಚೆನ್ನಾಗಿ ಒಪ್ಪುತ್ತದೆ. ಏಕೆಂದರೆ ಇದಕ್ಕೆ ಮ್ಯಾಚ್ ಮಾಡುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಿರುತ್ತವೆ. ನೀವು ಪಿಂಕ್‌ ಬ್ಲೂ ಹೂಗಳುಳ್ಳ ಲೈಟ್‌ ಡ್ರೆಸ್‌ ಧರಿಸಿದ್ದರೆ, ಪಿಂಕ್‌ ಯಾ ಬ್ಲೂ ಆ್ಯಕ್ಸೆಸರೀಸ್‌ ಸಹ ಧರಿಸಬಹುದು ನಿಮ್ಮದು ಬಲು ಬ್ರೈಟ್‌ ಡ್ರೆಸ್‌ ಆಗಿದ್ದರೆ, ನ್ಯೂಟ್ರಲ್ ಆ್ಯಕ್ಸೆಸರೀಸ್‌ ಧರಿಸಿರಿ. ಉದಾ : ನಿಮ್ಮ ಹೊಳೆ ಹೊಳೆಯುವ ಗೋಲ್ಡನ್‌ ಡ್ರೆಸ್‌ ಗೆ, ಅಂಥದ್ದೇ ಬ್ರೈಟ್‌ ಆ್ಯಕ್ಸೆಸರೀಸ್‌ ಧರಿಸಿದರೆ, ಆಕರ್ಷಕ ಎನಿಸುವ ಬದಲು ಕೆಂಭೂತ ಕುಣಿದಂತೆ ಇರುತ್ತದೆ.

ಆಫ್‌ ವೈಟ್‌, ಬ್ಲ್ಯಾಕ್‌, ಬ್ರೌನ್‌ ನಂಥ ನ್ಯೂಟ್ರಲ್ ಕಲರ್ಸ್‌ ನ ಒಡವೆಗಳು ಹೆಚ್ಚುಕಡಿಮೆ ಎಲ್ಲಾ ತರಹದ ಉಡುಗೆಗಳಿಗೂ ಚೆನ್ನಾಗಿ ಒಪ್ಪುತ್ತವೆ. ಇದೇ ತರಹ ಗೋಲ್ಡ್ ಯಾ ಸಿಲ್ವರ್‌ ಜ್ಯೂವೆಲರಿ ಎಲ್ಲಾ ಡ್ರೆಸ್‌ ಗಳಿಗೂ ಚೆನ್ನಾಗಿ ಒಪ್ಪುತ್ತವೆ.

ನಿಮ್ಮ ಡ್ರೆಸ್‌ ಬಿಳಿ, ಬೇಜ್‌, ಬ್ರೌನಿನಂಥ ನ್ಯೂಟ್ರಲ್ ಕಲರ್‌ ನದ್ದಾಗಿದ್ದರೆ, ಆಗ ಅಗತ್ಯ ಬ್ರೈಟ್‌ ಆ್ಯಕ್ಸೆಸರೀಸ್‌ ಧರಿಸಿರಿ. ಇದರಿಂದ ಡ್ರೆಸ್‌ ನ ಲುಕ್‌ ಬದಲಾಗುತ್ತದೆ. ನಿಮ್ಮ ಡ್ರೆಸ್‌ ನ ಟೋನ್‌ ನಿಂದಲೂ ಒಡವೆಗಳನ್ನು ಮ್ಯಾಚ್‌ ಮಾಡಿ ಆರಿಸಿ. ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ಟೋನ್‌ ಇರುತ್ತದೆ. ಕೆಂಪು, ಆರೆಂಜ್‌, ಹಳದಿ ಇತ್ಯಾದಿ ವಾರ್ಮ್ ಟೋನ್‌ ಕಲರ್ಸ್‌. ಗ್ರೀನ್‌, ಬ್ಲೂ, ಪರ್ಪಲ್ ಕೂಲ್ ಟೋನ್‌ ಕಲರ್ಸ್‌ ಆಗಿವೆ. ಈ ನಿಟ್ಟಿನಲ್ಲಿ ಒಡವೆಗಳನ್ನು ಗಮನಿಸಿದಾಗ, ಗೋಲ್ಡ್ ವಾರ್ಮ್ ಟೋನ್‌ ಕಲರ್‌ ಆಗಿದ್ದು, ಬೆಳ್ಳಿ ಕೂಲ್ ‌ಟೋನ್‌ ಒಡವೆ ಎನಿಸುತ್ತದೆ.

IMG_9219

ಡ್ರೆಸ್ಕಟ್ಸ್ ಗೆ ತಕ್ಕಂತೆ ಆ್ಯಕ್ಸೆಸರೀಸ್

U ಯಾ V ನೆಕ್‌ ವುಳ್ಳ ಡ್ರೆಸ್‌ ಜೊತೆ ನೆಕ್‌ ಲೆಸ್‌ ಧರಿಸಿರಿ. ಈ ನೆಕ್‌ ಲೆಸ್‌ ಡ್ರೆಸ್‌ ನ ನೆಕ್‌ ಲೈನಿನ ಕರ್ವ್ ಗೆ ಮ್ಯಾಚ್ ಆಗುವಂತಿರಬೇಕು. ನೀವು ಬಯಸಿದರೆ ಸಿಂಪಲ್ ಪೆಂಡೆಂಟ್‌ ವುಳ್ಳ ನೆಕ್‌ ಲೇಸ್‌ ಸಹ ಧರಿಸಬಹುದು.

ಇದಕ್ಕೆ ಕಾಂಟ್ರಾಸ್ಟ್ ಎಂಬಂತೆ, ಹಾಲ್ಟರ್‌ ನೆಕ್‌ ವುಳ್ಳ ಡ್ರೆಸ್‌ ಜೊತೆ ನೆಕ್‌ ಲೇಸ್‌ ಧರಿಸಿದರೆ ಚೆನ್ನಲ್ಲ. ಏಕೆಂದರೆ ಇಂಥ ಡ್ರೆಸ್ ಗಳಲ್ಲಿ ಮೊದಲೇ ನೆಕ್‌ ಲೈನ್‌ ನಲ್ಲಿ ಸಾಕಷ್ಟು ಕೆಲಸ ಆಗಿರುತ್ತದೆ. ಇಂಥದ್ದರಲ್ಲಿ ನೆಕ್‌ ಲೇಸ್‌ ಯಾ ದೊಡ್ಡ ದೊಡ್ಡ ಇಯರ್‌ ರಿಂಗ್ಸ್ ಧರಿಸಿದರೆ, ನಿಮ್ಮ ಡ್ರೆಸ್‌ ಬಲು ಹೆವಿಯಾಗಿ ಕಂಡುಬರುತ್ತದೆ. ಆದ್ದರಿಂದ ಹಾಲ್ಟರ್‌ ನೆಕ್‌ ಡ್ರೆಸ್‌ ಜೊತೆ ಆ್ಯಕ್ಸೆಸರೀಸ್‌ ಧರಿಸುವ ಹಾಗಿದ್ದರೆ, ಬ್ರೇಸ್‌ ಲೆಟ್ಸ್ ಉತ್ತಮ. ಇದರಿಂದ ನಿಮ್ಮ ಕೈಗಳ ಮೇಲೆ ಎಲ್ಲರ ಗಮನ ಹೋಗುತ್ತದೆ, ಆಗ ಡ್ರೆಸ್‌ ನ ಮೇಲ್ಭಾಗದ ಲುಕ್‌ ಬ್ಯಾಲೆನ್ಸ್ ಆಗುತ್ತದೆ.

ನೀವು ಹೈ ನೆಕ್‌ ಡ್ರೆಸ್‌ ಧರಿಸುತ್ತಿದ್ದರೆ, ಜೊತೆಗೆ ಲಾಂಗ್‌ ನೆಕ್‌ ಲೇಸ್‌ ಧರಿಸುವುದರಿಂದ ನೀವು ಹೆಚ್ಚಿನ ಆಕರ್ಷಕ ಲುಕ್ಸ್ ಗಳಿಸುವಿರಿ. ಸ್ಟ್ರಾಪ್‌ ಲೆಸ್‌ ಡ್ರೆಸ್‌ ಜೊತೆ ಅಗತ್ಯವಾಗಿ ಇಯರ್‌ ರಿಂಗ್ಸ್ ಧರಿಸಿರಿ. ಇದು ನಿಮ್ಮ ಕೈಗಳು, ಭುಜಗಳನ್ನು ಹೈಲೈಟ್ ಗೊಳಿಸುತ್ತದೆ. ಇಲ್ಲಿ ನೆಕ್‌ ಲೇಸ್‌ ಧರಿಸುವುದರಿಂದ ಡ್ರೆಸ್‌ ನ ಹೊಳಪು ಕುಗ್ಗುತ್ತದೆ. ಇದರ ಬದಲು ಸ್ಟ್ರಾಪ್‌ ಲೆಸ್‌ ಡ್ರೆಸ್‌ ಜೊತೆ ಹೆವಿ ಇಯರ್‌ ರಿಂಗ್ಸ್ ಧರಿಸಬಹುದು.

ಮ್ಯಾಚಿಂಗ್ಆ್ಯಕ್ಸೆಸರೀಸ್

ನಿಮಗೆ ಒಂದೇ ಸಲ ಅನೇಕ ಒಡವೆ ಧರಿಸುವ ಆಸೆ ಇದ್ದರೆ, ಅದರಲ್ಲಿ ಮೆಟಲ್ ಜ್ಯೂವೆಲರಿಗೆ ಮ್ಯಾಚ್‌ ಆಗುವಂಥದ್ದನ್ನು ನೋಡಿ ಆರಿಸಿ. ಉದಾ : ಎಲ್ಲಾ ಬೆಳ್ಳಿ ಒಡವೆ ಅಥವಾ ಚಿನ್ನದ ಒಡವೆಗಳಿರಲಿ. ನೀವು ಇಂಥವನ್ನು ಬೇರೆ ಒಡವೆಗಳ ಸೆಟ್‌ ಜೊತೆಗೆ ಮಿಕ್ಸ್ ಮ್ಯಾಚ್‌ ಮಾಡಿ ಸಹ ಧರಿಸಬಹುದು. ಉದಾ : ನೀವು ಲಾಂಗ್‌ ಮುತ್ತಿನ ಹಾರವನ್ನು ಒಂದು ಸಣ್ಣ ಸಿಲ್ವರ್‌ ನೆಕ್‌ ಲೇಸ್‌ ಜೊತೆ ಧರಿಸಿದರೆ, ಆಕರ್ಷಕ ಲುಕ್ಸ್ ಸಿಗುತ್ತದೆ.

ನಿಮ್ಮ ಆ್ಯಕ್ಸೆಸರೀಸ್‌ ಗಾಗಿ 1-2 ಬ್ರೈಟ್‌ ಕಲರ್ಸ್‌ ಮಾತ್ರ ಇರಲಿ. ನೀವು ಇದಕ್ಕಿಂತ ಹೆಚ್ಚಿನ ಥಳುಕಿನ ಆ್ಯಕ್ಸೆಸರೀಸ್‌ ಧರಿಸ ಬಯಸಿದರೆ, ಅವೆಲ್ಲ ಒಂದೇ ಬಣ್ಣದ್ದಾಗಿರಲಿ!

ಗಿರಿಜಾ ಶಂಕರ್

ಕೆಲವು ವಿಶಿಷ್ಟ ಒಡವೆಗಳು ಹಾಗೂ ಅದನ್ನು ಧರಿಸುವ ವಿಧಾನ

ಬೈತಲೆ ಬೊಟ್ಟು : ಈ ಬ್ಯೂಟಿಫುಲ್ ಜ್ಯೂವೆಲರಿ ಪೀಸ್‌, ಫೆಸ್ಟಿವಲ್ ‌ಸೆಲೆಬ್ರೇಷನ್‌ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಈ ಹಬ್ಬಗಳ ಸಂದರ್ಭದಲ್ಲಿ ನೀವು ಯಾವುದೇ ಎಥ್ನಿಕ್‌ ಡ್ರೆಸ್‌ ಗಳಾದ ರೇಷ್ಮೆ ಸೀರೆ, ರೇಷ್ಮೆಯ ಲಂಗದಾವಣಿ, ಲೆಹಂಗಾ, ಶರಾರಾ, ಸೂಟ್‌ ಗಳ ಜೊತೆ ಸ್ಟೋನ್‌ ಹುದುಗಿಸಲಾದ ಬೈತಲೆ ಬೊಟ್ಟು ಯಾ ಬಿಳಿಯ ಕುಂದಣದ ಜೊತೆ ಹಣೆಪಟ್ಟಿ ಯಾ ಹೆಡ್‌ ಗೇರ್ ಧರಿಸಬಹುದು.

ಬಂಗಾರದ ಬಳೆ (ನವರತ್ನ ಹುದುಗಿಸಿದ ಕಂಗನ್‌) ಹಾಗೂ ಕಡಗ : ಈ ಹಬ್ಬಗಳಲ್ಲಿ ನಿಮ್ಮ ಸ್ಟೈಲಿಶ್‌ ಡ್ರೆಸ್‌ ನ್ನು ಮತ್ತಷ್ಟು ಆಕರ್ಷಕಗೊಳಿಸಲು, ನಿಮ್ಮ ಕೈಗಳಿಗೆ ಡಿಸೈನರ್‌ ಗೋಲ್ಡನ್‌ ಕಡಗ ತೊಡಿಸಿ. ಇದು ನಿಮ್ಮ ಯಾವುದೇ ಎಥ್ನಿಕ್‌ ಡ್ರೆಸ್‌ ಗೂ ಚೆನ್ನಾಗಿ ಸೂಟ್‌ ಆಗುತ್ತದೆ, ಪರ್ಫೆಕ್ಟ್ ಫೆಸ್ಟಿವ್ ‌ಲುಕ್‌ ನೀಡುತ್ತದೆ. ಹಾಗೆಯೇ ಇದು ನಿಮ್ಮ ರೇಷ್ಮೆ ಸೀರೆ ಯಾ ಸಿಲ್ಕ ಸಲ್ವಾರ್ ಸೂಟ್‌ ಜೊತೆ ಹೆಚ್ಚಿನ ಗಾರ್ಜಿಯಸ್‌ ಲುಕ್ಸ್ ನೀಡುತ್ತದೆ.

IMG_9507---Copy

ಸ್ಟೇಟ್ಮೆಂಟ್ರಿಂಗ್‌ : ಒಂದು ಸುಂದರ ಡಿಸೈನರ್‌ ರಿಂಗ್‌ ಯಾ ಉಂಗುರ, ಎಲ್ಲರನ್ನೂ ತನ್ನತ್ತ ಸೆಳೆಯಬಲ್ಲದು. ಈ ಸಲದ ಹಬ್ಬದ ಸಂದರ್ಭಕ್ಕೆ ಸೂಟ್‌ ಆಗುವಂತೆ, ನಿಮ್ಮ ಉಂಗುರಕ್ಕೆ ಕುಂದಣ ಯಾ ನವರತ್ನದ ಟಚ್‌ ಕೊಡಿ. ಇದಕ್ಕೆ ತಕ್ಕ ರೇಷ್ಮೆ ಸೀರೆ ಉಟ್ಟು, ಫೆಸ್ಟಿವ್ ‌ಮೇಕಪ್‌ ಮಾಡಿಕೊಳ್ಳಿ. ಇದನ್ನು ನೀವು ಟ್ರೆಡಿಷನಲ್ ಯಾ ವೆಸ್ಟರ್ನ್‌ ಎರಡೂ ಬಗೆಯ ಡ್ರೆಸೆಸ್‌ ಜೊತೆ ಧರಿಸಬಹುದು.

ಚೋಕರ್ಸ್ಪೆಂಡೆಂಟ್‌ : ನೀವು ನಿಮ್ಮ ಲೆಹಂಗಾದ ಜೊತೆ ಡೀಪ್‌ ನೆಕ್‌ ಬ್ಲೌಸ್‌ ಧರಿಸಲು ಬಯಸಿದರೆ, ಅದರ ಜೊತೆ ಅಗತ್ಯವಾಗಿ ಒಂದು ಆಕರ್ಷಕ ಚೋಕರ್‌ ಯಾ ಪೆಂಡೆಂಟ್‌ ಪೀಸ್‌ ಧರಿಸಿರಿ, ಇದರಿಂದ ನಿಮ್ಮ ಫೆಸ್ಟಿವ್ ‌ಲುಕ್‌ ಕಳೆಗಟ್ಟುತ್ತದೆ. ಈ ಒಂದೇ ಜ್ಯೂವೆಲರಿ ಪೀಸ್‌ ನಿಮಗೆ ಅತ್ಯಾಕರ್ಷಕ ಲುಕ್‌ ನೀಡಲು ಸಾಕು. ಟ್ರೆಡಿಷನಲ್ ಡ್ರೆಸ್‌ ಜೊತೆ ನೀವು ಚೋಕರ್‌ ನೆಕ್‌ ಲೇಸ್‌ ಸಹ ಧರಿಸಬಹುದು. ಇದು ನಿಮಗೆ ಹಲವು ಡಿಸೈನ್‌ ಗಳಲ್ಲಿ ಲಭ್ಯ. ನೀವು ಪರ್ಲ್ ಚೋಕರ್‌ ನೆಕ್‌ ಲೇಸ್‌, ಕುಂದಣದ ಚೋಕರ್‌ ನೆಕ್‌ ಲೇಸ್‌ ಯಾ ಡೈಮಂಡ್‌ ಚೋಕರ್‌ ನೆಕ್‌ ಲೇಸ್‌ ಇತ್ಯಾದಿ ಯಾವುದನ್ನಾದರೂ ಆರಿಸಿಕೊಳ್ಳಿ.

ಸಾಂಪ್ರದಾಯಿಕ ಜುಮಕಿ ಡ್ಯಾಂಗ್ಲರ್ಸ್‌ : ಇದು ಎಂದೂ ಔಟ್‌ ಆಫ್‌ ಟ್ರೆಂಡ್‌ ಎನಿಸದು. ಭಾರಿ, ಬ್ಯೂಟಿಫು ಆಗಿರುವ ಈ ಸಾಂಪ್ರದಾಯಿಕ ಒಡವೆಗಳು ನಿಮ್ಮ ಕಾಂಜೀವರಂ, ಮೈಸೂರು ಸಿಲ್ಕ್ ಯಾ ಬನಾರಸ್‌ ರೇಷ್ಮೆ ಸೀರೆಗೆ ಅಚ್ಚುಕಟ್ಟಾಗಿ ಹೊಂದುತ್ತವೆ. ಟ್ರೆಡಿಷನಲ್ ಟೆಂಪಲ್ ಜ್ಯೂವೆಲರಿ ಡಿಸೈನಿನಿಂದ ಹಿಡಿದು, ಪಾರಂಪರಿಕ ಕುಂದಣ ಹಾಗೂ ನವರತ್ನಗಳು ಹುದುಗಿಸಲ್ಪಟ್ಟ ಒಡವೆಗಳು, ನಿಮ್ಮ ಡ್ರೆಸ್‌ ಗೆ ಪೂರಕ ಆಗುತ್ತವೆ, ಅಷ್ಟೇ ಆಕರ್ಷಕ ಆಗಿಸುತ್ತವೆ. ಇವುಗಳಲ್ಲಿ ಗೋಲ್ಡನ್‌ ಜುಮಕಿ, ಚಾಂದ್‌ ಬಾಲಿ, ಪರ್ಲ್ ಜುಮಕಿ, ಝೂಮರ್‌ ಜುಮಕಿ ಇತ್ಯಾದಿ ಬಲು ಜನಪ್ರಿಯ.

ಲೇಯರ್ಡ್ನೆಕ್ಲೇಸ್‌ : ಇತ್ತೀಚೆಗೆ ಇವು ಭಾರಿ ಟ್ರೆಂಡ್‌ ನಲ್ಲಿವೆ. ಆಧುನಿಕ ಮಹಿಳೆಯರು ಇವನ್ನು ಟ್ರೆಡಿಶನಲ್ ಮಾತ್ರವಲ್ಲದೆ, ವೆಸ್ಟರ್ನ್‌ ಡ್ರೆಸೆಸ್‌ ಜೊತೆಗೂ ಧರಿಸುತ್ತಾರೆ. ಈ ನೆಕ್‌ ಲೇಸ್‌ ನ ವೈಶಿಷ್ಟ್ಯ ಎಂದರೆ ಇವು ನಿಮಗೆ ಹಲವು ಬಣ್ಣ, ಸೈಜ್‌, ಸ್ಟೈಲ್‌, ಡಿಸೈನ್‌ ಗಳಲ್ಲಿ ಲಭ್ಯ.

Avama-Jewellers-(14)

ವಜ್ರಾಭರಣಗಳು ಎಂದೆಂದೂ ಎವರ್ಗ್ರೀನ್‌!

ವಜ್ರಾಭರಣಗಳು ಎಂಥವರ ಕುತ್ತಿಗೆಗಾದರೂ ಚೆಂದವಾಗಿಯೇ ಕಂಡುಬರುತ್ತವೆ. ಆದರೆ ನಿಮ್ಮ ಡೈಮಂಡ್‌ ನೆಕ್‌ ಲೇಸ್‌ ನಲ್ಲಿ ಅತಿ ಹೆಚ್ಚು ಎನಿಸುವಷ್ಟು ಹೆವಿ ವರ್ಕ್‌ ತುಂಬಿಕೊಂಡಿದ್ದರೆ, ಅದರ ಲುಕ್‌ ವೆರಿ ಫೈನ್‌ ಎಂದೇನೂ ಅನಿಸದು. ಆ್ಯಂಟಿಕ್‌ ಜ್ಯೂವೆಲರಿ ಆಕ್ಸಿಡೈಸ್ಡ್ ಆಗಿದ್ದು, ಈಗೆಲ್ಲ ಇಂಥ ಹಳೆಯ ಒಡವೆಗಳು ಮಾಡರ್ನ್‌ ವರ್ಷನ್‌ ನಲ್ಲಿ ಲಭ್ಯ. ಅವು ಫಿನಿಶಿಂಗ್‌, ಸ್ಟೋನ್‌ ಗಳಲ್ಲಿ ಅಥೆಂಟಿಕ್‌ ಲುಕ್‌ ಹೊಂದಿದ್ದು, ಆಧುನಿಕ ಫೀಲಿಂಗ್‌ ನೀಡುತ್ತದೆ. ಇದು ಎಲ್ಲಾ ಬಗೆಯ ಡ್ರೆಸೆಸ್‌ ಗೂ ಹೊಂದುತ್ತದೆ.

ಹೀಗಾಗಿಯೇ ವಜ್ರಾಭರಣಗಳು ಎಂದೆಂದೂ ಎವರ್‌ ಗ್ರೀನ್‌ ಎನಿಸಿವೆ. ಇಷ್ಟು ಮಾತ್ರವಲ್ಲದೆ, ಟೆಂಪಲ್ ಜ್ಯೂವೆಲರಿ ಹಿಂದೆಲ್ಲ ದ. ಭಾರತಕ್ಕೆ ಮಾತ್ರ ಸೀಮಿತವಾಗಿದ್ದದ್ದು, ಇದೀಗ ಭಾರತದಾದ್ಯಂತ ಹೆಸರು ಗಳಿಸಿವೆ. ಇದರಲ್ಲಿನ ವೈವಿಧ್ಯಮಯ ಡಿಸೈನಿಂಗ್ಸ್ ನ್ನು ನೋಡಿಯೇ ತಣಿಯಬೇಕು.

ಆ್ಯಂಟಿಕ್‌ ಜ್ಯೂವೆಲರಿ ಕುಂದಣ, ಸ್ಟೋನ್‌ ಇತ್ಯಾದಿಗಳಲ್ಲಿ ಲಭ್ಯವಿದ್ದು, ಇತ್ತೀಚೆಗೆ ಹೆಚ್ಚು ಜನಪ್ರಿಯ ಎನಿಸಿದೆ. ಇದರಲ್ಲಿನ ಕುಶಲಕಲೆ, ಹಳೆ ಕಾಲದ ಹೆವಿ ವರ್ಕ್‌ ನ ಫೀಲ್ ‌ನೀಡುತ್ತದೆ. ಇದು ಎಲ್ಲಾ ಡ್ರೆಸ್‌ ಗೂ ರಾಯಲ್ ಲುಕ್ಸ್ ನೀಡುತ್ತದೆ. ಫಿನಿಶಿಂಗ್ ಎಷ್ಟು ಮಜಬೂತಾಗಿರುತ್ತದೋ, ಒಡವೆ ಅಷ್ಟೇ ಪರ್ಫೆಕ್ಟ್ ಎನಿಸುತ್ತದೆ. ಹಳೆಯ ಡಿಸೈನಿನ ಒಡವೆಗಳ ಗಮ್ಮತ್ತೇ ಬೇರೆ, ಇವು ನೋಡಲು ಹೆವಿ ಎನಿದರೂ, ಅಸಲಿಗೆ ಲೈಟ್‌ ಆಗಿಯೇ ಇರುತ್ತವೆ.

ಇವನ್ನು ಧರಿಸಿ ನೀವು ಓಪನ್‌ ಹೇರ್‌ ಹೊಂದಿದ್ದರೆ, ನೆಕ್‌ ಲೇಸ್‌ ಅದರಲ್ಲಿ ಅಡಗಿಹೋದೀತು! ಬದಲಿಗೆ ನೀಟಾಗಿ ಹೆರಳು ಹೆಣೆದಿದ್ದರೆ, ಕಿವಿಯ ಆಭರಣ ಕಾಣಸಿಗುತ್ತದೆ. ಎಷ್ಟು ನೀಟಾಗಿ ಕೂದಲು ಸೆಟ್‌ ಆಗಿರುತ್ತದೋ, ಒಡವೆಗಳು ಅಷ್ಟೇ ಗಮನ ಸೆಳೆಯುತ್ತವೆ.

ಸೀರೆಗೆ ಹೊಂದುವ ಒಡವೆಗಳು

ಸೀರೆಗೆ ಸದಾ ಟ್ರೆಡಿಷನಲ್ ಜ್ಯೂವೆಲರಿ ಉತ್ತಮವಾಗಿ ಸೂಟ್‌ ಆಗುತ್ತದೆ. ನೀವು ಡೈಮಂಡ್‌ ನೆಕ್‌ ಲೇಸ್‌ ಯಾ ಗೋಲ್ಡನ್‌ ಆ್ಯಂಟಿಕ್‌ ಲೈಟ್‌ ಶೇಡ್‌ ನ ಒಡವೆ ಧರಿಸಿರಿ, ಎಲ್ಲವೂ ಎದ್ದು ಕಾಣುತ್ತವೆ. ನೀವು ರೇಷ್ಮೆ ಯಾ ಕಾಟನ್‌ ಸೀರೆ ಉಟ್ಟರೂ, ಟೆಂಪಲ್ ಜ್ಯೂವೆಲರಿ ಎಲ್ಲದಕ್ಕೂ ಸೆಟ್‌ ಆಗುತ್ತದೆ. ನೀವು ಆಫ್‌ ವೈಟ್‌ ಸೀರೆ ಉಟ್ಟಿದ್ದರೆ, ಅದಕ್ಕೆ ಈ ಆ್ಯಂಟಿಕ್‌ ಜ್ಯೂವೆಲರಿ ಸೂಕ್ತವಾಗಿ ಹೊಂದುತ್ತದೆ. ಅದರಲ್ಲಿನ ಮೀನಾಕಾರಿ ಕುಶಲಕಲೆ ಎಂಥವರನ್ನೂ ಪರವಶಗೊಳಿಸುತ್ತದೆ. ನೀವು ಕಾಂಟ್ರಾಸ್ಟ್ ಫಾಲೋ ಮಾಡಿದಷ್ಟೂ ಒಡವೆಗಳು ಎದ್ದು ಕಾಣುತ್ತವೆ. ಆಫ್‌ ವೈಟ್‌ ಜೊತೆ ತುಸು ಆಕ್ಸಿಡೈಸ್ಡ್ ಯಾ ಸ್ಟೋನ್ಸ್ ಹುದುಗಿಸಿದ ಒಡವೆ ಹೆಚ್ಚು ಕಳೆಗಟ್ಟುತ್ತದೆ.

ಕೆಂಪು ರೇಷ್ಮೆ ಸೀರೆ ಜೊತೆ ವಜ್ರ, ಹಸಿರು ಬಣ್ಣದ ರೇಷ್ಮೆ ಸೀರೆ ಜೊತೆ ಪಚ್ಚೆ ಕಲ್ಲಿನ ಒಡವೆ, ಆಕ್ಸಿಡೈಸ್ಡ್ ಒಡವೆಗಳೂ ಸೇರಿದಂತೆ ಹೆಚ್ಚು ಪೂರಕ. 2 ಬೆರಳುಗಳಿಗೆ ಉಂಗುರ ಇದ್ದಷ್ಟೂ ಅಂದ!

ಲೆಹಂಗಾ ಚೋಲಿಯ ಹೆವಿ ಡ್ರೆಸ್‌ ಜೊತೆಗೆ ಚೋಕರ್‌ ಸೆಟ್‌ ಕಂಪ್ಲೀಟ್‌ ಎನಿಸುತ್ತದೆ. ಹೆವಿ ನೆಕ್‌ ಲೇಸ್‌ ಜೊತೆಗೆ ಉಡುಗೆಯೂ ಹೆವಿ ಆದರೆ, ನಡುವೆ ಉಳಿಯುವ ಗ್ಯಾಪ್‌ ಉತ್ತಮ ಲುಕ್ಸ್ ನೀಡುತ್ತದೆ. ಸಲ್ವಾರ್‌ ಸೂಟ್‌ ಜೊತೆ ಇಯರ್‌ ರಿಂಗ್ಸ್, ಬ್ರೇಸ್‌ ಲೆಟ್‌, ಉಂಗುರದ ಕಾಂಬಿನೇಶ್‌ ಉತ್ತಮ ಎನಿಸುತ್ತದೆ. ಕುತ್ತಿಗೆಗೆ ನೀಳ ನೆಕ್ಲೇಸ್‌ ಸೆಟ್‌ ಚೆಂದ ಎನಿಸುತ್ತದೆ.

ನೀವು ಯಾವಾಗ ಹೆವಿ ಡ್ರೆಸ್‌ ಧರಿಸಿದರೂ, ಜೊತೆಗೆ ಇಯರ್‌ ರಿಂಗ್ಸ್ ಬೈತಲೆ ಬೊಟ್ಟನ್ನು ಒಟ್ಟಿಗೆ ಧರಿಸಿದರೆ, ಸ್ಮಾರ್ಟ್‌ ಲುಕ್ ನಿಮ್ಮದಾಗುತ್ತದೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ