ಚಳಿಗಾಲದ ದಿನಗಳಲ್ಲಿ ಡ್ಯಾಂಡ್ರಫ್ಡ್ರೈ ಸ್ಕಾಲ್ಪ್ ಸಮಸ್ಯೆ ಬಲು ಹಿಂಸಕಾರಿ. ಇದನ್ನು ನಿವಾರಿಸುವ ಬಗೆ ಹೇಗೆ…..?

ದೇಹದ ಇನ್ನಿತರ ಭಾಗದ ಚರ್ಮಕ್ಕೆ ಹೋಲಿಸಿದಾಗ, ತಲೆಯ ಚರ್ಮದಲ್ಲಿ ಹೆಚ್ಚು ಆಯಿಲ್ ‌ಗ್ಲಾಂಡ್ಸ್ ಇರುತ್ತದೆ, ಆದರೂ ಡ್ರೈ ಸ್ಕಾಲ್ಪ್ ಸಮಸ್ಯೆ ತಪ್ಪಿದ್ದಲ್ಲ. ಇದಕ್ಕೆ ಮುಖ್ಯ ಕಾರಣ, ತೀವ್ರ ಥಂಡಿ ವಾತಾವರಣ. ಎಷ್ಟೋ ಸಲ ಬೇಸಿಗೆಯಲ್ಲಿ ತೀವ್ರ ಬಿಸಿಲಿನ ಕಾರಣ ಸ್ಕಾಲ್ಪ್ ಮೇಲೆ ಸನ್‌ ಬರ್ನ್‌ ಸಹ ಆಗುತ್ತದೆ. ಆಗ ಬೇಸಿಗೆಯಲ್ಲೂ ಡ್ರೈ ಸ್ಕಾಲ್ಪ್ ಸಮಸ್ಯೆ ಕಾಡಬಹುದು. ಆದರೆ ವಿಂಟರ್ ನಲ್ಲಿ ಇದು ಹೆಚ್ಚು ಕಾಟ ಕೊಡುತ್ತದೆ. ಡ್ರೈ ಸ್ಕಾಲ್ಪ್ ಕಾರಣ ತಲೆಹೊಟ್ಟು ತಪ್ಪಿದ್ದಲ್ಲ! ಎರಡರ ಲಕ್ಷಣದಲ್ಲೂ ತುಸು ಸಮಾನತೆ ಇದ್ದರೂ, ಎರಡನ್ನೂ ನಿವಾರಿಸಿಕೊಳ್ಳಲು ಬೇರೆ ಬೇರೆ ವಿಧಾನ ಅನುಸರಿಸಬೇಕು. ಇದರ ನಿವಾರಣೆ ಹೇಗೆಂದು ವಿವರವಾಗಿ ತಿಳಿಯೋಣವೇ?

ಸೂಕ್ಷ್ಮವಾಗಿ ಗಮನಿಸಿ

ನಿಮ್ಮ ಕೂದಲು ಮತ್ತು ಸ್ಕಾಲ್ಪ್ ಆಕಸ್ಮಿಕವಾಗಿ ಡ್ರೈ ಆಗತೊಡಗಿದರೆ, ನೀವು ನಿಮ್ಮನ್ನು ಪರಿಪೂರ್ಣವಾಗಿ ಪರ್ಫೆಕ್ಟ್ ಆಗಿ ಹೈಡ್ರೇಟ್‌ ಮಾಡಿಕೊಳ್ಳತಕ್ಕದ್ದು. ಅಂದ್ರೆ ಪ್ರತಿದಿನ ಹೆಚ್ಚು ನೀರು ಕುಡಿಯುತ್ತಾ, ಧಾರಾಳ ದ್ರವ ಪದಾರ್ಥ ಬಳಸಿಕೊಳ್ಳಿ. ನೀವು ಬಳಸುವ ಶ್ಯಾಂಪೂ, ಹೇರ್‌ ಆಯಿಲ್ ‌ಇತ್ಯಾದಿಗಳಲ್ಲಿ ಅತ್ಯಧಿಕ ಕೆಮಿಕಲ್ಸ್ ಇರುವುದರಿಂದ, ಅದರ ಕಾರಣ ಹೀಗಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ.

ಡ್ರೈ ಸ್ಕಾಲ್ಪ್ ಸಮಸ್ಯೆ ತೀವ್ರ ಹೆಚ್ಚಾಗಿದ್ದರೆ, ನೆತ್ತಿಯಲ್ಲಿ ಯೀಸ್ಟ್ ಸಹ ಜಾಸ್ತಿ ಜಮೆಗೊಂಡಿದ್ದರೆ, ಅಗತ್ಯವಾಗಿ ಚರ್ಮ ತಜ್ಞ (ಡರ್ಮಟಾಲಜಿಸ್ಟ್)ರನ್ನು ಭೇಟಿಯಾಗಿ. ಕೇವಲ ಋತು ಬದಲಾವಣೆಯಿಂದ ಡ್ರೈ ಸ್ಕಾಲ್ಪ್ ಸಮಸ್ಯೆ ಉಂಟಾಗಿದ್ದರೆ, ಸಕಾಲಕ್ಕೆ ಆಗಾಗ ಉತ್ತಮ ಪಾರ್ಲರ್‌ ಗೆ ಭೇಟಿ ನೀಡಿ, ಹೇರ್‌ ಸ್ಪಾ ಯಾ ಎಕ್ಸ್ ಫಾಲಿಯೇಟ್‌ ಮಾಡಿಸಿ. ಎಲ್ಲಿಯೇ ಚಿಕಿತ್ಸೆ ಪಡೆದರೂ ಅವರು ಬಳಸುವ ಪ್ರಾಡಕ್ಟ್ಸ್ ರೀಹೈಡ್ರೇಟಿಂಗ್‌ ಟೋನರ್‌ ನಲ್ಲಿ ಸೋಡಿಯಂ ಸ್ಯಾಲಿಸಲ್ಫೇಟ್‌ ಘಟಕ ಬೆರೆತಿಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳಿ.

ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಆ್ಯಲೋವೇರಾ ಜೆಲ್ ‌ಸುಲಭ ಲಭ್ಯ. ಇದನ್ನು ನೀವೇ ಮನೆಯಲ್ಲಿ ನೇರವಾಗಿ ಬಳಸಬಹುದು.

ಸ್ಕಾಲ್ಪ್ ಕೂದಲಿನ ರಕ್ಷಣೆಗಾಗಿ, ಸ್ಕಾಲ್ಪ್ ತಾನೇ ಸಹಜವಾಗಿ ಆಯಿಲ್ ‌ಸ್ರವಿಸುತ್ತದೆ. ಆದರೆ ನೀವು ಅಗತ್ಯಕ್ಕಿಂತ ಹೆಚ್ಚಾಗಿ ತಲೆಗೆ ಕೆಮಿಕಲ್ಸ್ ಶ್ಯಾಂಪೂ ತಿಕ್ಕಿ ತಿಕ್ಕಿ ತೊಳೆದರೆ, ಈ ಆಯಿಲ್ ‌ನಾಶವಾಗಿ ಡ್ರೈನೆಸ್‌ ಸಮಸ್ಯೆ ತಾನಾಗಿ ಹೆಚ್ಚಾಗುತ್ತದೆ.

ಅತಿ ಹೆಚ್ಚಿನ ಪ್ರಮಾಣದ ಕೆಮಿಕಲ್ಸ್, ಸಲ್ಫೇಟ್‌ಯಾ ಫ್ರಾಗ್ರೆನ್ಸ್ ವುಳ್ಳ ಶ್ಯಾಂಪೂ ಸ್ಕಾಲ್ಪ್ ಗೆ ಹಿಂಸಕಾರಕ, ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಇದನ್ನು ಅವಾಯ್ಡ್ ಮಾಡಿ.

ಉತ್ತಮ ಕಂಪನಿಯ ಹೈಡ್ರೇಟಿಂಗ್‌ ಹೇರ್‌ ಸೀರಂ ಬಳಕೆಯಿಂದ, ಡ್ರೈ ಸ್ಕಾಲ್ಪ್ ಡ್ಯಾಂಡ್ರಫ್‌ ಎರಡೂ ಸಮಸ್ಯೆ ಎಷ್ಟೋ ತಗ್ಗುತ್ತದೆ.

ಮುಖ್ಯ ಸಲಹೆಗಳು

ಆಯಿಲ್ ‌ಬೇಸ್ಡ್ ಶ್ಯಾಂಪೂ ಈ ಸಮಸ್ಯೆಗೆ ಉತ್ತಮ ಪರಿಹಾರ. ಟೀಟ್ರೀ ಆಯಿಲ್ ‌ಬೇಸ್ಡ್ ಶ್ಯಾಂಪೂ, ಯಾವುದೇ ಸೈಡ್‌ ಎಫೆಕ್ಟ್ಸ್ ಇಲ್ಲದೆ, ತಲೆಹೊಟ್ಟಿನ ಸಮಸ್ಯೆ ದೂರ ಮಾಡುತ್ತದೆ.

ಇತ್ತೀಚೆಗೆ ಮಾರ್ಕೆಟ್‌ ನಲ್ಲಿ ಪೈರಿಥಿಯಾನ್‌ ಘಟಕವುಳ್ಳ ಶ್ಯಾಂಪೂ ಸಹ ಲಭ್ಯವಿದೆ. ತಲೆಹೊಟ್ಟು ಬಹಳ ಜಾಸ್ತಿ ಎನಿಸಿದರೆ, ಅಗತ್ಯ ಇದನ್ನು ಬಳಸಿರಿ.

ಡ್ಯಾಂಡ್ರಫ್‌ ಸಮಸ್ಯೆ ದಟ್ಟವಾಗಿದ್ದಷ್ಟೂ, ಹೇರ್‌ ಸ್ಟ್ರೇಟ್‌ ನರ್‌ ಯಾ ಬ್ಲೋ ಡ್ರೈಯರ್‌ ಇತ್ಯಾದಿ ಬಳಸಲೇಬಾರದು. ಈ ಹೀಟಿಂಗ್ ಟೂಲ್ಸ್ ‌ನ ಬಳಕೆಯಿಂದಾಗಿ ಸ್ಕಾಲ್ಪ್ ಮತ್ತಷ್ಟು ಡ್ರೈ ಆದೀತು, ಇದರಿಂದ ನೆತ್ತಿಯಲ್ಲಿ ನವೆ, ತುರಿಕೆ, ಕಡಿತ ತಪ್ಪಿದ್ದಲ್ಲ.

ಸ್ಕಾಲ್ಪ್ ನ್ನು ನೈಸರ್ಗಿಕವಾಗಿ ಆರೋಗ್ಯಕರ ಆಗಿಸಬೇಕಾದರೆ, ನಿಮ್ಮ ಆಹಾರದಲ್ಲಿ ಕಾಬೂಲ್ ‌ಕಡಲೆಕಾಳು, ಹಸಿಶುಂಠಿ, ಸೇಬು, ಬಾಳೆಹಣ್ಣು, ಸೂರ್ಯಕಾಂತಿ ಬೀಜದ ಎಣ್ಣೆ ಇತ್ಯಾದಿಗಳನ್ನು ನಿಯಮಿತವಾಗಿ ಬ್ಯಾಲೆನ್ಸ್ಡ್ ಆಗಿ ಬಳಸಿಕೊಳ್ಳಿ.

ವೈಟ್‌ ಪಾಸ್ತಾ, ಶುಗರ್‌ ಕ್ಯಾಂಡಿ, ಆಲೂ ಚಿಪ್ಸ್, ಕುಕೀಸ್‌, ಮಫಿನ್ಸ್, ಫ್ಲೇವರ್ಡ್‌ ಯೋಗರ್ಟ್‌, ಪಾಲಿಶ್ಡ್ ಆದ ಅಕ್ಕಿಯ ಅನ್ನ, ಹೆಚ್ಚು ಸಿಹಿ ವ್ಯಂಜನ ಇತ್ಯಾದಿಗಳೆಲ್ಲ ಹೈ ಕಾರ್ಬ್ಸ್ ಆಗಿರುವುದರಿಂದ, ಇವು ತಲೆಹೊಟ್ಟಿನ ಸಮಸ್ಯೆಯನ್ನು ಉಲ್ಬಣಿಸುತ್ತವೆ. ಇಂಥವನ್ನು ಬಳಸಲೇಬೇಡಿ.

ಪ್ರತಿ ದಿನ ತಲೆಗೂದಲಿಗೆ ಎಣ್ಣೆ ಹಚ್ಚುವುದರಿಂದ ತಲೆಹೊಟ್ಟು ಮಾಯವಾಗುತ್ತದೆ ಎಂಬುದು ಮಿಥ್ಯೆ. ಹೀಗೆ ಮಾಡುವುದರಿಂದ ಅದು ಸ್ಕಾಲ್ಪ್ ಗೆ ಹೆಚ್ಚು ಅಂಟಿಕೊಳ್ಳುತ್ತದೆ, ಬದಲಿಗೆ ಮೇಲಿನ ಸಮಸ್ಯೆ ಅನುಸರಿಸಿ, ಇದರಿಂದ ಮುಕ್ತಿ ಪಡೆಯಿರಿ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ