ಏನಾದರೂ ಡಿಫರೆಂಟ್ಆಗಿರಲಿ : ವಾವ್‌, ಹೇರ್‌ ಡೂ ಅಂದ್ರೆ ಹೀಗಿರಬೇಕಲ್ಲವೇ? ನೀವು ಹೀಗೆ ತಯಾರಾಗಿ ಪಾರ್ಟಿಗೆ ಹೊರಟರೆ, ನಿಮ್ಮಿಂದ ಯಾರೂ ಬೇರೆ ಕಡೆಗೆ ದೃಷ್ಟಿ ತಿರುಗಿಸಲಾರರು! ಕೂದಲು ಸಹಜವೇ, ಕೃತಕವೇ ಅದನ್ನು ಯಾರು ಗಮನಿಸುತ್ತಾರೆ? ನ್ಯೂಯಾರ್ಕ್‌ ಮಹಾನಗರದ ಝೀಬ್ರಾ ಸ್ರಾಟೆಡೀಯ ಬ್ಯೂಟಿ ಔಟ್‌ ಸೈಡ್‌ಇನ್‌ ಸೈಡ್‌ ಪ್ರೋಗ್ರಾಂನಲ್ಲಿ ಮೇಕಪ್‌ ಸಹ ಒಳಗೊಂಡಿದ್ದು, ಇದರ ಒಬ್ಬ ಮಾಡೆಲ್ ‌ಹೀಗೆ ಹೊಸದೇನೋ ಕ್ರಿಯೇಟ್‌ ಮಾಡಿದಳು. ಈ ಸಲದ ನ್ಯೂ ಇಯರ್ ಪಾರ್ಟಿಗೆ ನೀವು ಹೀಗೆ ಏನಾದರೂ ಡಿಫರೆಂಟ್‌ ಮೇಕಪ್‌ ಟ್ರೈ ಮಾಡಿ!

1728468311233

ಕಲೆಯ ಮಹತ್ವ : 2 ಸಾವಿರ ವರ್ಷಗಳ ಹಿಂದೆಯೇ ರೋಮನ್‌ ನಾಟಕಕಾರರು ಎಂಥ ಹಾಸ್ಯ ನಾಟಕ ಬರೆದಿದ್ದರು ಎಂದರೆ, ಇಂದಿಗೂ ಅದು ಪಾಶ್ಚಿಮಾತ್ಯ ದೇಶಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದೆ! ಒಂದಿಷ್ಟು ವ್ಯತ್ಯಾಸ ಮಾಡಿದ ನಂತರ ಇದು ಹೊಸದರಂತೆಯೇ ಫ್ರೆಶ್‌ ಎನಿಸುತ್ತದೆ. `ಎ ಫನಿ ಥಿಂಗ್‌ ಹ್ಯಾಪೆನ್ಡ್’ ಇಂಥದ್ದೇ ಒಂದು ನಾಟಕವಾಗಿದ್ದು, ವಿದೇಶಗಳಲ್ಲಿ ಇಂದಿಗೂ ಇದರ ಪ್ರದರ್ಶನ ಜನಪ್ರಿಯತೆ ಉಳಿಸಿಕೊಂಡಿದೆ. ಹ್ಞಾಂ, ಈಗ ಅಂಥ ಪ್ರಾಚೀನ ಡ್ರೆಸ್‌ ಗಳಿಲ್ಲ ಬಿಡಿ, ಏಕೆಂದರೆ ಈ ನಾಟಕ ಚರ್ಚ್‌ ಗೆ ಸೇರಿದ್ದಲ್ಲ!

rac

ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ? : ಇಸ್ರೇಲ್‌, ಹಮಾಸ್‌ ಮತ್ತು ಹಿಜ್‌ ಬುಲ್ಲಾಹ್‌ ಗಳ ನಡುವೆ ಎಂಥ ಘನಘೋರ ಯುದ್ಧ ನಡೆಯುತ್ತಿದೆ ಎಂದರೆ, ಇಡೀ ವಿಶ್ವದ ಮುಸ್ಲಿಂ/ಯೆಹೂದಿ ಸಮುದಾಯ ಹರಿದು ಹಂಚಿಹೋಗಿದೆ. ಪ್ರಾಚೀನ ಕಾಲದಿಂದ ಯೆಹೂದಿಗಳನ್ನು ದೋಷಿ ಎಂದು ಆರೋಪಿಸುತ್ತಿದ್ದ ಕ್ರೈಸ್ತರು, ಈಗಿನ ಇಸ್ರೇಲ್ ‌ನ ಮೇಲೆ ನಡೆಯುತ್ತಿರುವ ಜಬರ್ದಸ್ತಿನಿಂದ ಖುಷಿ ಕಾಣುತ್ತಿಲ್ಲ. ಅಮೆರಿಕಾ ಯೂರೋಪಿಯನ್‌ ಸರ್ಕಾರಗಳು ಇಸ್ರೇಲ್ ‌ಗೆ ಎಷ್ಟೇ ಸಪೋರ್ಟ್‌ ಮಾಡುತ್ತಿರಲಿ, ಎಲ್ಲ ಛಿದ್ರಛಿದ್ರವಾಗಿ ಹಂಚಿಹೋಗಿವೆ ಎಂಬುದು ನಿಜ. ಇಸ್ಲಾಮಾ ಫೋಬಿಯಾ ಸಹ ಕೆಟ್ಟ ರೀತಿಯಲ್ಲಿ ಎಲ್ಲೆಡೆ ಹರಡುತ್ತಿದೆ. ಸದಾ ಜೊತೆ ಜೊತೆಯಲ್ಲಿ ವಾಸಿಸುತ್ತಿದ್ದ ಮಂದಿ, ಈಗ ಪರಸ್ಪರ ಶತ್ರುಗಳಾಗಿದ್ದಾರೆ. ಕೆಲವು ಮುಸ್ಲಿಂ ಹೆಂಗಸರು ಈ ಕಂದಕ ಮುಚ್ಚಲು, ಅಮೆರಿಕಾದ ನಗರಗಳಲ್ಲಿ ಯೆಹೂದಿ ಮಂದಿ ಜೊತೆ ಸರಿಸಮನಾಗಿ ಕುಳಿತು, ಕಷ್ಟಸುಖ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ದೊಡ್ಡ ಪರಿವರ್ತನೆ ಆದೀತೇ ಎಂಬುದನ್ನು ಈಗಲೇ ಹೇಳಲಾಗದು, ಆದರೆ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ?

scoop-masters-is-a-dog-waste-re

ಅಗ್ಗದ ಷೋಕಿ ಅಲ್ಲ : ಸಾಕುಪ್ರಾಣಿಗಳ ಸೇವಾರ್ಥ ಹಲವಾರು ಕಾರ್ಯಕ್ರಮ ಇದ್ದೇ ಇವೆ. ಅವುಗಳ ಕಕ್ಕಾ ತೆಗೆಯಲಿಕ್ಕೆಂದೇ ಮಂದಿ ಈಗ ಬಿಸ್‌ ನೆಸ್‌ ನಡೆಸುತ್ತಿದ್ದಾರೆ. ಅದರಲ್ಲೂ ಸ್ಕೂಪ್‌ ಮಾಸ್ಟರ್ಸ್‌ ಎಂಬ ಕಂಪನಿ ಇಡೀ ಅಮೆರಿಕಾದಲ್ಲಿ ಹರಡಿ ಹೋಗಿದೆ. ಊಬರ್‌ ಟ್ಯಾಕ್ಸಿ ಸಂಪರ್ಕಿಸುವಂತೆಯೇ, ನಿಮ್ಮ ಸಾಕುಪ್ರಾಣಿಗಳ ಈ ಗಲೀಜು ತೆಗೆಯಬೇಕೆಂದು ನೀವು ಫೋನಾಯಿಸಿದ ತಕ್ಷಣ, ನಾಯಿ ಜೊತೆ ನೀವು ಎಲ್ಲಿರುತ್ತೀರೋ ಅಲ್ಲಿಗೇ ಧಾವಿಸಿ ಬರುತ್ತಾರೆ. ಅವರು ಕೇಳಿದಷ್ಟು ಹಣ ತೆತ್ತು, ನಿಮ್ಮ ಕೆಲಸ ಹಗುರವಾಗಿಸಿಕೊಳ್ಳಿ. ಸಾಕುಪ್ರಾಣಿಗಳ ಸಹವಾಸ ಸುಮ್ಮನಲ್ಲ, ಬಲು ದುಬಾರಿ ಆಗುತ್ತಿದೆ!

forum

ಧರ್ಮದ ಅಂಗಡಿ ತೆರೆದಿದೆ! : ನಮ್ಮ ಉ.ಭಾರತದಲ್ಲಿ ಹೇಗೆ ರಾಮಲೀಲಾ ಪೌರಾಣಿಕ ನಾಟಕ ಪ್ರದರ್ಶಿಸಿ ಧರ್ಮದ ದಂಧೆ ನಡೆಸುತ್ತಾರೋ, ಕ್ರೈಸ್ತರಲ್ಲಿ ಚರ್ಚುಗಳಿಂದ ನಾಟಕದ ತಾಲೀಮು ಕೊಡಿಸಿ, ಎಲ್ಲೆಲ್ಲೂ ಪ್ರದರ್ಶನ ನೀಡಿ, ಭಕ್ತಾದಿಗಳಿಂದ ಸಿಕ್ಕಾಪಟ್ಟೆ ಹಣ ಕೀಳಾಗುತ್ತದೆ. ಚಾರ್ಲ್ ಡಿಕನ್ಸನ್ ನ ಪ್ರಸಿದ್ಧ ನಾಟಕ `ಕ್ರಿಸ್‌ ಮಸ್‌ ಕೆರೋಲ್‌’ ಇಂಥದ್ದೇ ಒಂದು ನಾಟಕ. ಇದನ್ನು ಆಗಾಗ ಪ್ರದರ್ಶಿಸುತ್ತಾ ಚರ್ಚ್‌ ಬೇಕಾದಷ್ಟು ಹಣ ಗಿಟ್ಟಿಸುತ್ತಿರುತ್ತದೆ. ಹಾಲಿವುಡ್‌ ನ ಚರ್ಚುಗಳೂ ಇನ್ನು ಬಿಟ್ಟಿಲ್ಲ ಎಂದರೆ ಲೆಕ್ಕ ಹಾಕಿ. `ಬನ್ನಿ, ನಾಟಕ ನೋಡಿ, ಹಣ ಕೊಡಿ’ ಎಂಬ ಹೆಸರಲ್ಲಿ ಧರ್ಮದ ಅಂಗಡಿಗಳು ಸದಾ ತೆರೆದಿರುತ್ತವೆ.

544483-image_1~3

ಪರ್ಫೆಕ್ಟ್ ಫಿಟ್ನೆಸ್ಗಾಗಿ : ಸಿಂಗಾಪುರ್‌ ನ ಎಸ್ಕಾರ್ಟ್‌ ಹಾಸ್ಪಿಟಾಲಿಟಿ ಕಂಪನಿಯು ಹೋಟೆಲ್ ‌ಗಳಲ್ಲಿ ಫಿಟ್‌ ನೆಸ್‌ ಯೂನಿಟ್ ಸಹ ಅಳವಡಿಸಲು ಶುರುಮಾಡಿವೆ. ಏಕೆಂದರೆ ಹೋಟೆಲ್ ‌ಗೆ ಬರುವವರೆಲ್ಲ ಕೇವಲ ತಿಂದುಂಡು ಮಜಾ ಮಾಡುವವರೇ ಆಗಿರುವುದಿಲ್ಲ. ಹೆಲ್ತ್ ಅವೇರ್‌ ನೆಸ್‌ ಹೆಚ್ಚುತ್ತಿರುವುದರಿಂದ, ಇದೀಗ ರೆಸ್ಟೋರೆಂಟ್‌ ಗಳಲ್ಲಿ ಊಟ ತಿಂಡಿ ಕಡಿಮೆ ಆಗಿ ಆರೋಗ್ಯದ  ಕಾಳಜಿ ಹೆಚ್ಚುತ್ತಿದೆ. ಈ ಕೆಲಸ ಜಿಮ್ ಗಳಲ್ಲೂ ನಡೆಸಬಹುದು, ಫಿಟ್‌ ನೆಸ್‌ ಜೊತೆಗೆ ಗಾಸಿಪ್‌ ಸಹ ಅಪ್‌ ಡೇಟ್‌ ಆಗಲಿದೆ.

1728468311233

ನಕಲು ಈಗ ಮಾಮೂಲಿ : ನಮ್ಮಲ್ಲಿ ದೀಪಾವಳಿ ಹಬ್ಬದ ಹಾಗೆ ಚೀನಾದಲ್ಲಿ ಮೂನ್‌ ಫೆಸ್ಟಿವ್‌. ಈ ಸಂದರ್ಭದಲ್ಲಿ ಅಲ್ಲಿ ಬೇಕಾದಷ್ಟು ಸಿನಿಮಾ, ಡ್ರಾಮಾ, ಡ್ರೆಸೆಸ್‌, ವಿವಿಧ ಬಿಸ್‌ ನೆಸ್‌ ಬೊಂಬಾಟಾಗಿ ಹಣ ಬಾಚಿಕೊಳ್ಳುತ್ತವೆ. ಅಲ್ಲಿ ಈಗ OTT ಯಲ್ಲಿ `ಡಾರ್ಕ್ ಫೆದರ್‌’ ಸೀರೀಸ್‌ ಹೆಚ್ಚು ಖ್ಯಾತಿಗೊಂಡಿದ್ದು, ಅಲ್ಲಿ ಹೆಂಗಸರೇ ಗಂಡು ಪಾತ್ರಧಾರಿಗಳಾಗಿ (ನಮ್ಮಲ್ಲಿ ಹಿಂದೆಲ್ಲ ಇದು ಉಲ್ಟಾ ಆಗಿತ್ತು) ಮಾರಾಮಾರಿಯ ದೃಶ್ಯಗಳಲ್ಲಿ ಮಿಂಚುತ್ತಿದ್ದಾರೆ! ಇದರಲ್ಲಿ ಕರೀನಾ ಎಂಬಾಕೆ ಸಿಮ್ರನಾಫ್‌ ಎಂಬ ಹೀರೋ ಪಾತ್ರದಲ್ಲಿ ಮಿಂಚುತ್ತಿದ್ದಾಳೆ. ಇದು ಅಪ್ಪಟ ಚೀನೀ ಥ್ರಿಲ್ಲರ್‌ ಕಥೆ ಆಧರಿಸಿದೆ. ಇದೇನಾದರೂ ಹದಿನಾರಾಣೆ ಕ್ಲಿಕ್‌ ಆಗಿಹೋದರೆ, ನಮ್ಮಲ್ಲಿಗೆ ಇದು ರೂಪಾಂತರಗೊಂಡು ಧಾವಿಸಲು ತಡ ಆಗದು ಹಾಲಿವುಡ್‌ ಇಂದು ಮಾಡಿದ್ದನ್ನು ನಾಳೆ ನಮ್ಮಲ್ಲಿ ಬಾಲಿವುಡ್ ಮಾಡದಿರುತ್ತದೆಯೇ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ