– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಸೆಕೆಂಡ್ ಕೇಸ್ ಆಫ್ ಸೀತಾರಾಮ್
ನಿರ್ದೇಶನ: ದೇವಿ ಪ್ರಸಾದ್ ಶೆಟ್ಟಿ
ನಿರ್ಮಾಣ: ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್
ತಾರಾಗಣ: ವಿಜಯ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು.
ರೇಟಿಂಗ್: 3.5/5
ಎಸ್‌ಐ ಸೀತಾರಾಮ್ (ವಿಜಯ್ ರಾಘವೇಂದ್ರ) ಮತ್ತು ತಂಡವು ಹಲವಾರು ಅಮಾನುಷ ಸರಣಿ ಕೊಲೆಗಳ ತನಿಖೆ ನಡೆಸುತ್ತದೆ, ಇದರಲ್ಲಿ ಸಂತ್ರಸ್ತರು ಸಾವಿಗೂ ಮುನ್ನ ತೀವ್ರ ಚಿತ್ರಹಿಂಸೆಗೆ ಒಳಗಾಗುತ್ತಾರೆ. ಸೀತಾರಾಮ್ ಈ ಕುರಿತಂತೆ ತನಿಖೆ ಕೈಗೊಂಡು ಘಟನೆಯ ಹಿಂದೆ ಯಾರಿದ್ದಾರೆ ಎಂದು ಪ್ರಕರಣ ಬೇಧಿಸಲು ಹೊರಟಾಗಲೆಲ್ಲಾ ಮತ್ತೊಂದು ಕೊಲೆ ನಡೆಯುತ್ತದೆ ಮತ್ತು ಸೀತಾರಾಮ್ ಎಲ್ಲವನ್ನೂ ಮತ್ತೆ ಮೊದಲಿನಿಂದ ತನಿಖೆ ಮಾಡಬೇಕಾಗುತ್ತದೆ. ಹೀಗೆ ಸರಣಿ ಕೊಲೆಗಳ ಭಯಾನಕತೆಗೆ ಕೊನೆಯಾಗುವುದು ಹೇಗೆ? ಅಪರಾಧಿ ಯಾರು? ಸೀತಾರಾಮ್ ಅದನ್ನು ಹೇಗೆ ಬೇಧಿಸಿದ? ಇದನ್ನು ತಿಳಿಯಲು ನೀವು ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರವನ್ನು ಸಿನಿಮಾ ಮಂದಿರದಲ್ಲಿ ವೀಕ್ಷಿಸಬೇಕು.
ಈ ಹಿಂದೆ 2021 ರಲ್ಲಿ, ಸೀತಾರಾಮ್ ಬಿನೋಯ್ ಕೇಸ್ ನಂ.18 ಚಿತ್ರ ತೆರೆಗೆ ಬಂದಿತ್ತು. ಆ ಚಿತ್ರದ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅದೇ ಚಿತ್ರದ ಒಂದೆಳೆಯನ್ನು ತೆಗೆದುಕೊಂಡು ಈಗ ಮತ್ತೊಂದು ಚಿತ್ರ ಮಾಡಿದ್ದಾರೆ. .
ನಿರೂಪಣೆಯಲ್ಲಿ ಹಲವಾರು ಸೂಕ್ಷ್ಮ ವ್ಯತ್ಯಾಸಗಳಿದ್ದರೂ ಸಿನಿಮಾದಲ್ಲಿನ ವಿವಿಧ ಹಂತಗಳಲ್ಲಿ ಚಿತ್ರಕಥೆಯನ್ನು ಚೆನ್ನಾಗಿ ಹೆಣೆಯಲಾಗಿದೆ. . ವಿಜಯ್ ರಾಘವೇಂದ್ರ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅನುಭವಿ ನಟರಾಗಿದ್ದಾರೆ. ಅವರ ಅಭಿನಯದಲ್ಲಿ ಯಾವ ತೊಡಕಿಲ್ಲ ಹಾಗೆಯೇ ಉಳಿದ ಸಹಪಾತ್ರವರ್ಗ ಸಹ ಕಥೆಗೆ ಪುಷ್ಟಿ ಕೊಡುವಂತೆ ಸರಾಗವಾಗಿ ಅಭಿನಯಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ನವನೀತ್ ಶಾಮ್ ಅವರ ಹಿನ್ನೆಲೆ ಸಂಗೀತವು ಚಿತ್ರದ ಮಹತ್ವದ ಅಂಶದಲ್ಲಿ ಒಂದು. ಹೇಮಂತ್ ಆಚಾರ್ಯ ಛಾಯಾಗ್ರಹಣ ಚಿತ್ರಕ್ಕೆ ಜೀವಂತಿಕೆಯ ಸ್ಪರ್ಷ ಕೊಟ್ಟಿದೆ.





