– ರಾಘವೇಂದ್ರ ಅಡಿಗ ಎಚ್ಚೆನ್.
ಸಿನಿಮಾ ಲೋಕದ ಬಹುಚರ್ಚಿತ ಜೋಡಿ
ರಶ್ಮಿಕಾ ಮದ್ದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವಿಶೇಷ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪಾರಂಪರಿಕ ವೇಷಭೂಷಣದಲ್ಲಿ ಕಾಣಿಸಿಕೊಂಡ ಈ ಜೋಡಿ, ಅಭಿಮಾನಿಗಳ ಹೃದಯ ಗೆದ್ದಿದ್ದಾರೆ

ಇವರಿಬ್ಬರ ಜೋಡಿ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ಇದೀಗ ಈ ಮದುವೆ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.
ಮದುವೆ ಫೋಟೋಗಳನ್ನು ಇನ್ಸ್ಟಾಗ್ರಾಂ ಹಂಚಿಕೊಂಡ ರಶ್ಮಿಕಾ ಮಂದಣ್ಣ ಕೇವಲ 10 ನಿಮಿಷದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಅವರು ಖ್ಯಾತಿ ಪಡೆದಿದ್ದಾರೆ. ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ವಿಜಯ್ ದೇವರಕೊಂಡ ಕೂಡ ತೆಲುಗು ಮತ್ತು ಬಾಲಿವುಡ್ನಲ್ಲಿ ಫೇಮಸ್ ಆಗಿದ್ದಾರೆ. ಮದುವೆಯ ಫೋಟೋಗಳಿಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಏನೆಂದು ಬರೆದುಕೊಂಡಿದ್ದಾರೆ ಗೊತ್ತಾ?
ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ, ಸದ್ಯ ಈ ಪ್ರೇಮಪಕ್ಷಿಗಳ ಬರಹ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದೆ.

ಮೊದಲಿಗೆ ಟಾಲಿವುಡ್‌ನ ‘ರೌಡಿ ಬಾಯ್’ ವಿಜಯ್ ದೇವರಕೊಂಡ ತಮ್ಮ ಪ್ರೀತಿಯ ಒಡತಿಯ ಬಗ್ಗೆ ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಾರೆ. ಅವರ ಕಣ್ಣಿಗೆ ರಶ್ಮಿಕಾ ಕೇವಲ ಹೆಂಡತಿಯಷ್ಟೇ ಅಲ್ಲ, ಅವರ ಬದುಕಿನ ಪ್ರತಿಯೊಂದು ಕ್ಷಣವನ್ನು ಪೂರ್ಣಗೊಳಿಸುವ ಅದ್ಭುತ ಶಕ್ತಿ. ತಮ್ಮ ಪೋಸ್ಟ್‌ನಲ್ಲಿ ವಿಜಯ್ ಹೀಗೆ ಬರೆದಿದ್ದಾರೆ:

“ಒಂದು ದಿನ, ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಂಡೆ. ಆ ಮಿಸ್ ಮಾಡಿಕೊಳ್ಳುವಿಕೆ ಹೇಗಿತ್ತು ಎಂದರೆ, ಅವಳು ನನ್ನ ಪಕ್ಕದಲ್ಲಿಯೇ ಇದ್ದಿದ್ದರೆ ನನ್ನ ದಿನ ಇನ್ನಷ್ಟು ಸುಂದರವಾಗಿರುತ್ತಿತ್ತೇನೋ ಅನಿಸಲು ಶುರುವಾಯಿತು. ನಾನು ಊಟ ಮಾಡುವಾಗ, ಅವಳು ನನ್ನ ಎದುರು ಕುಳಿತಿದ್ದರೆ ಆ ಊಟ ಇನ್ನಷ್ಟು ರುಚಿಯಾಗಿರುತ್ತಿತ್ತೇನೋ ಅನಿಸಿತು. ನಾನು ಜಿಮ್‌ನಲ್ಲಿ ಕಷ್ಟಪಟ್ಟು ವರ್ಕೌಟ್ ಮಾಡುವಾಗ, ಅವಳು ನನ್ನ ಜೊತೆಗಿದ್ದರೆ ಆ ಕಷ್ಟದ ವರ್ಕೌಟ್ ಕೂಡ ಒಂದು ಮೋಜಿನ ಆಟದಂತೆ, ಶಿಕ್ಷೆಯ ಬದಲು ಖುಷಿ ಕೊಡುತ್ತಿತ್ತೇನೋ ಎಂದು ಭಾಸವಾಯಿತು. ನಾನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ನನಗೆ ಒಂದು ನೆಮ್ಮದಿ ಮತ್ತು ‘ನನ್ನ ಮನೆ’ ಎಂಬ ಭಾವನೆ ಸಿಗಬೇಕು ಎಂದರೆ, ನನಗೆ ಅವಳು ಬೇಕೇ ಬೇಕು ಎಂದು ಆಳವಾಗಿ ಅನ್ನಿಸಿತು. ಹಾಗಾಗಿ, ನಾನು ನನ್ನ ಅಚ್ಚುಮೆಚ್ಚಿನ ಬೆಸ್ಟ್ ಫ್ರೆಂಡ್ ಅನ್ನು… ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ. 26.02.2026.”

ಇತ್ತ, ವಿಜಯ್ ಅವರ ಪೋಸ್ಟ್‌ಗೆ ಕನ್ನಡಿಗರ ನೆಚ್ಚಿನ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ಪ್ರೀತಿಯ ಹೊಳೆಯನ್ನೇ ಹರಿಸಿದ್ದಾರೆ. ವಿಜಯ್ ಅವರನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸುತ್ತಾ ರಶ್ಮಿಕಾ ಸುದೀರ್ಘವಾದ ಹಾಗೂ ಅಷ್ಟೇ ಪ್ರೇಮಮಯವಾದ ಪತ್ರವೊಂದನ್ನೇ ಬರೆದಿದ್ದಾರೆ. ಅವರು ಬರೆದಿರುವ ಸಾಲುಗಳು ಹೀಗಿವೆ:

“ಹಾಯ್ ನನ್ನ ಪ್ರೀತಿಯ ಅಭಿಮಾನಿಗಳೇ, ನಾನೀಗ ನಿಮಗೆ ನನ್ನ ‘ಗಂಡ’ನನ್ನು ಪರಿಚಯಿಸುತ್ತಿದ್ದೇನೆ! ಆತ ಬೇರಾರೂ ಅಲ್ಲ.. ಮಿಸ್ಟರ್ ವಿಜಯ್ ದೇವರಕೊಂಡ!!
ನಿಜವಾದ ಪ್ರೀತಿ ಎಂದರೆ ಹೇಗಿರುತ್ತದೆ ಎಂದು ನನಗೆ ಕಲಿಸಿದ ಅದ್ಭುತ ವ್ಯಕ್ತಿ ಇವರು. ನೆಮ್ಮದಿಯಿಂದ ಇರುವುದು ಅಂದರೆ ಏನು ಎಂಬುದನ್ನು ನನಗೆ ತೋರಿಸಿಕೊಟ್ಟವರು ಇವರು! ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿದಿನ ಹೇಳುತ್ತಾ, ನಾನು ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ಮಟ್ಟದ ಸಾಧನೆ ಮಾಡಲು ನನಗೆ ಶಕ್ತಿ ಇದೆ ಎಂದು ಸದಾ ನನ್ನನ್ನು ಹುರಿದುಂಬಿಸುತ್ತಿದ್ದವರು ಇವರೇ!

ನಾನು ಯಾರ ಹಂಗಿಲ್ಲದೆ, ಯಾರೂ ನೋಡುತ್ತಿಲ್ಲವೇನೋ ಎಂಬಷ್ಟರ ಮಟ್ಟಿಗೆ ಮನಬಂದಂತೆ ಕುಣಿಯುವುದನ್ನು ಅವರು ಎಂದಿಗೂ ತಡೆದಿಲ್ಲ.. ಸ್ನೇಹಿತರೊಂದಿಗೆ ಪ್ರವಾಸ ಹೋಗುವುದು ಎಷ್ಟೊಂದು ಅದ್ಭುತವಾದ ಅನುಭವ ಎಂಬುದನ್ನು ನನಗೆ ತೋರಿಸಿಕೊಟ್ಟ ಈ ವ್ಯಕ್ತಿಯ ಬಗ್ಗೆ ನಾನು ಖಂಡಿತವಾಗಿ ಒಂದು ದೊಡ್ಡ ಪುಸ್ತಕವನ್ನೇ ಬರೆಯಬಲ್ಲೆ!

ನಾನು ಭವಿಷ್ಯದಲ್ಲಿ ಎಂತಹ ಮಹಿಳೆಯಾಗಬೇಕು ಎಂದು ಕನಸು ಕಂಡಿದ್ದೆನೋ, ಇಂದು ನಾನು ಆ ಮಹಿಳೆಯಾಗಿ ರೂಪುಗೊಂಡಿದ್ದೇನೆ ಎಂದರೆ ಅದಕ್ಕೆ ಕಾರಣ ನೀವೇ. ನೀವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು. ನಾನು ನಿಜಕ್ಕೂ ಬಹಳ ಅದೃಷ್ಟವಂತೆ!

ವಿಜ್ಜು… ನಿನ್ನ ಮೇಲಿರುವ ನನ್ನ ಪ್ರೀತಿ ಹಾಗೂ ಭಾವನೆಗಳನ್ನು ವರ್ಣಿಸಲು ನನಗೆ ಪದಗಳೇ ಸಾಲುತ್ತಿಲ್ಲ ಎಂದು ನಾನು ನಿನಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ!! ಆದರೆ ನಿನಗೊಂದು ವಿಷಯ ಗೊತ್ತಾ? ಈಗ ನನ್ನೆಲ್ಲಾ ಸಾಧನೆಗಳು, ನಾನು ಪಟ್ಟ ಕಷ್ಟಗಳು, ನನ್ನ ಸುಖ, ದುಃಖ, ಸಂತೋಷ, ನನ್ನ ಇಡೀ ಜೀವನ – ಎಲ್ಲದಕ್ಕೂ ಒಂದು ಸುಂದರವಾದ ಅರ್ಥ ಸಿಕ್ಕಿದೆ. ಕಾರಣ, ನೀನು ನನ್ನ ಜೊತೆಗಿದ್ದೀಯಾ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನೀನು ಸಾಕ್ಷಿಯಾಗಿದ್ದೀಯಾ.. ನನ್ನ ಬದುಕಿನ ಅತಿದೊಡ್ಡ ಭಾಗವೇ ನೀನಾಗಿದ್ದೀಯಾ!

ನಿನ್ನ ಹೆಂಡತಿಯಾಗುತ್ತಿದ್ದೇನೆ, ನಿನ್ನ ಹೆಂಡತಿ ಎನಿಸಿಕೊಳ್ಳುತ್ತಿದ್ದೇನೆ ಎಂಬ ವಿಚಾರವೇ ನನಗೆ ಎಲ್ಲಿಲ್ಲದ ರೋಮಾಂಚನ ಹಾಗೂ ಅತೀವ ಸಂತೋಷ ತರುತ್ತಿದೆ!! ಇದಂತೂ ಪಕ್ಕಾ ಪಾರ್ಟಿ ಮಾಡುವ ಸಮಯ!

ಬಾ, ನಾವಿಬ್ಬರೂ ಸೇರಿ ನಮ್ಮ ಜೀವನದ ಅತ್ಯಂತ ಸುಂದರವಾದ ಪಯಣವನ್ನು ಒಟ್ಟಿಗೆ ಸಾಗಿಸೋಣ! ಐ ಲವ್ ಯು! ”
ಹೀಗೆ, ಈ ತಾರಾಜೋಡಿಯು ತಮ್ಮ ಪ್ರೀತಿಯನ್ನು ಜಗಜ್ಜಾಹೀರು ಮಾಡಿದ್ದು, ಅವರ ಈ ಪೋಸ್ಟ್‌ಗಳಿಗೆ ಲಕ್ಷಾಂತರ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ರೀಲ್ ಲೈಫ್‌ನಲ್ಲಿ ಮ್ಯಾಜಿಕ್ ಮಾಡಿದ್ದ ಈ ‘ಗೀತಾ-ಗೋವಿಂದಂ’ ಜೋಡಿ, ಈಗ ರಿಯಲ್ ಲೈಫ್‌ನಲ್ಲೂ ಒಂದಾಗಿರುವುದು ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.
a





