ಈ ವಿಷ ಖುಲ್ಲಂಖುಲ್ಲ ಮಾರಾಟವಾಗುತ್ತಿದೆ!
ಡೆಹರಾಡೂನ್ ನಗರದಲ್ಲಿ ರಾತ್ರಿ ಹೊತ್ತು, ಅತಿ ವೇಗವಾಗಿ ಚಲಿಸುತ್ತಿದ್ದ ಅತ್ಯಾಧುನಿಕ ಕಾರೊಂದು, ಅಲ್ಲಿನ ಪ್ರಮುಖ ಸರ್ಕಲ್ ಒಂದರ ಬಳಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಘನಘೋರ ಅಪಘಾತವಾಗಿ, ಆ ಸ್ಪಾಟ್ ನಲ್ಲೇ 5 ಮಂದಿ ತೀರಿಹೋದರು. 6ನೇ ವ್ಯಕ್ತಿ ಆಸ್ಪತ್ರೆ ತಲುಪುತ್ತಿದ್ದಂತೆ ಸತ್ತ. ಇದರಿಂದ ಸ್ಪಷ್ಟವಾಗುವುದು ಅಂದ್ರೆ ಹೆಂಡ ಕುಡಿದು ಅತಿಯಾದ ಬಿಪಿ ಹೆಚ್ಚಿಸಿಕೊಂಡು, ಡಿಪ್ರೆಶನ್ ಗೆ ಇಳಿದು, ವಿವೇಕಶೂನ್ಯರಾಗಿ ಹೀಗೆ ಅಪಘಾತ ಮಾಡುತ್ತಾರೆ ಎಂಬುದು. ನಮ್ಮ ದೇಶದ ಅತಿ ದೊಡ್ಡ ವಿಡಂಬನೆ ಎಂದರೆ ಈ ಹೆಂಡವೆಂಬ ವಿಷ ಖುಲ್ಲಂಖುಲ್ಲ ಎಲ್ಲೆಡೆ ಸೇಲ್ ಆಗುತ್ತಿರುವುದು! ಇದನ್ನು ಕುಡಿದು ಮತ್ತೇರಿಸಿಕೊಳ್ಳುವವರಿಗೆ ಗನ್, ರಿವಾಲ್ವರ್ ಗಳ ಲೈಸೆನ್ಸ್ ಏನೂ ಬೇಡ, ಯಾವ ಡಾಕ್ಟರ್ ಬಳಿ ಚಿಕಿತ್ಸಾ ಚೀಟಿಯೂ ಬೇಡ, ಗಾಡಿ ಹತ್ತಿ ರೋಡಿಗಿಳಿದರೆ ಯಮದೂತರೂ ನಾಚಬೇಕು!
ಈಗ ವಿಶ್ವದೆಲ್ಲೆಡೆಯ ವೈದ್ಯರ ಒಂದೇ ಸಲಹೆ ಎಂದರೆ, ಒಂದಿಷ್ಟು ಅಲ್ಪ ಪ್ರಮಾಣದ ಹೆಂಡ ಖಂಡಿತಾ ಒಳ್ಳೆಯದಲ್ಲ. ಹೆಂಡದ ಗುಣಗಾನ ಮಾಡುತ್ತಾ ಅದನ್ನು ಎಲ್ಲೆಡೆ ಹರಡುವರು, ಅದರ ಸೇಲ್ ಹೆಚ್ಚಲಿ ಎಂದು ಮಾತ್ರ ನೋಡುತ್ತಾರಷ್ಟೆ. ಇಷ್ಟೆಲ್ಲ ಆದರೂ ಹೆಂಡ ಘನಂದಾರಿಯಾಗಿ ಸೇಲ್ ಆಗುತ್ತಿದೆ ಅಂದ್ರೆ, ಇದಕ್ಕೆ ಮೂಲಕಾರಣ, ಇದರ ಮಾರಾಟದಿಂದ, ಸರ್ಕಾರಕ್ಕೆ ಸಿಗುತ್ತಿರುವ ಟ್ಯಾಕ್ಸ್. ಅನಾದಿಕಾಲದಿಂದಲೂ ರಾಜರು, ಧರ್ಮಕ್ಕೂ ಖಂಡಿತಾ ಇದರಿಂದ ಹೆಚ್ಚಿನ ಲಾಭವಿದೆ ಎಂಬುದು ನಿರ್ವಿವಾದ. ಹೆಂಡದ ಮೇಲೆ ಅಧಿಕ ತೆರಿಗೆ ಹೇರುವುದೇನೋ ಸುಲಭ, ಏಕೆಂದರೆ ಹೆಂಡದ ತಯಾರಿಕೆಯಿಂದ ಇದರ ದುರ್ವಾಸನೆ ಎಲ್ಲೆಡೆ ಖಂಡಿತಾ ಹರಡುತ್ತದೆ. ಹಾಗಾಗಿ ಅದು ಎಲ್ಲಿ ತಯಾರಾಗುತ್ತಿದೆ ಎಂಬುದು ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ, ಹಾಗಾಗಿ ಅದರಿಂದ ಟ್ಯಾಕ್ಸ್ ವಸೂಲಿ ಸುಲಭ. ಹೀಗಾಗಿ ಸಣ್ಣ, ಅತಿ ಸಣ್ಣ ಮಾತ್ರವಲ್ಲದೆ, ಬೃಹತ್ ಕೈಗಾರಿಕೆಗಳವರೆಗೂ ಈ ಹೆಂಡದ ತಯಾರಿಗೆ ಕುಮ್ಮಕ್ಕಿದೆ. ಇಡೀ ದೇಶದಲ್ಲಿ ಹಲವಾರು ಜನರಿಂದ ವಸೂಲಿ ಮಾಡಬಹುದಾದ ದೊಡ್ಡ ಮೊತ್ತದ ತೆರಿಗೆ, ಈ ಕೆಲವೇ ಕಾರ್ಖಾನೆಗಳಿಂದ ಸುಲಭವಾಗಿ ಬರುತ್ತದೆ.
ಟ್ಯಾಕ್ಸ್ ಮಾತ್ರವಲ್ಲದೆ, ಹೆಂಡದ ಮತ್ತೊಂದು ದೊಡ್ಡ ಲಾಭ ಎಂದರೆ, ಇದನ್ನು ಕುಡಿಸುವ ರಾಜನ ಸೈನಿಕರು ಸಾಯಲು, ಸಾಯಿಸಲು ಧಾವಿಸಿ ಬರುತ್ತಿದ್ದರು. ಪ್ರತಿ ಯುದ್ಧದಲ್ಲೂ ರಾಜ ಧಾರಾಳವಾಗಿ ಹೆಂಡ ಕುಡಿಸುತ್ತಿದ್ದ. ಇದರಿಂದ ಮತ್ತಿನಲ್ಲಿ ಮೈಮರೆತ ಸೈನಿಕರು ಗಂಟೆಗಟ್ಟಲೇ ಹೋರಾಡುತ್ತಿದ್ದರು, ಅವರಿಗೆ ಗಾಯವಾದರೂ ತಿಳಿಯದೆ ಹೋರಾಡಿ ಸಾಯುತ್ತಿದ್ದರು. ಪ್ರತಿ ಯುದ್ಧದಲ್ಲೂ ಎರಡೂ ಪಕ್ಷಗಳ ಸೈನಿಕರು ಸದಾ ನಶೆಯಲ್ಲೇ ಓಲಾಡುತ್ತಿದ್ದರು, ಆಗ ಮಾತ್ರ ಹೋರಾಡಲು ಅವರಿಗೆ ಹುಮ್ಮಸ್ಸು ಬರುತ್ತಿತ್ತು. ಹೀಗೆ ಸೈನಿಕರು ಹೆಂಡದ ದಾಸರಾದ ಕಾರಣ, ರಾಜ ಅವರಿಗೆ ಕೊಡಬೇಕಾದ ಸಂಬಳದ ಜೊತೆ ಇದನ್ನು ಬಿಟ್ಟಿ ಹಂಚುತ್ತಿದ್ದ, ಹೀಗಾಗಿ ಸೈನಿಕರ ದಂಡು ಎಂದೂ ಕಡಿಮೆ ಆಗುತ್ತಿರಲಿಲ್ಲ.
ಯಾವ ಧರ್ಮ ಎಂದೂ ಹೆಂಡ ಕುಡಿಯಬೇಡಿ ಎಂದು ಎಲ್ಲೂ ತಡೆಹಾಕಲಿಲ್ಲ. ಹೆಂಡದ ಕಾರಣ ಗಂಡಸರಿಂದ ಸದಾ ಹೊಡೆತ ತಿನ್ನುವ, ಅತ್ಯಾಚಾರಕ್ಕೆ ಒಳಗಾಗುವ ಕರ್ಮ ಹೆಂಗಸರಿಗೆ ತಪ್ಪಲಿಲ್ಲ. ಎಷ್ಟೋ ಸಲ ಅವರೂ ಈ ಧರ್ಮದ ಗ್ರಾಹಕರೇ ಆಗಿಹೋಗಿದ್ದಾರೆ, ಈಗಲೂ ಸಹ. ಗಂಡನ ಹೆಂಡದ ಹುಚ್ಚಿನಿಂದಾಗಿ ಅವನ ಹೆಂಡತಿ ಮಕ್ಕಳು ಉಪವಾಸ ಸಾಯುವುದು ತಪ್ಪುವುದಿಲ್ಲ. ಇಂಥ ವಿಷ ಕುಡಿದು ಗಂಡ ಸತ್ತರೆ, ಆ ವಿಧವೆಯರು ಧರ್ಮದ ದೃಷ್ಟಿಯಲ್ಲಿ ಇನ್ನಷ್ಟು ದುರಾಚಾರಕ್ಕೆ ಗುರಿಯಾಗುತ್ತಾರೆ.
ನಮ್ಮ ಭಾರತದಂಥ ಅಪ್ಪಟ ಧಾರ್ಮಿಕ ದೇಶದಲ್ಲೂ ಹೆಂಡದ ಬಿಕರಿಗೆ ದೊಡ್ಡ ಮಾನ್ಯತೆ ಸಿಕ್ಕಿದೆ, ಹೆಚ್ಚುತ್ತಲೇ ಇದೆ. ಮದುವೆಗಳಂಥ ದೊಡ್ಡ ಸಮಾರಂಭ ಇರಲಿ, ಮಗುವಿನ ಬರ್ತ್ ಡೇ ಪಾರ್ಟಿಗಳಲ್ಲೂ ಗುಂಡು ಸರಬರಾಜು ಮಾಮೂಲಿ ಆಗಿಹೋಗದೆ. ಸಿನಿಮಾಗಳಲ್ಲಂತೂ ಹೆಂಡಕ್ಕೆ ಸಾರ್ವಕಾಲಿಕ ಸಾಮಾಜಿಕ ಸ್ವೀಕೃತಿ ದೊರಕಿಸಿಕೊಡಲಾಗಿದೆ. ಇಂದಿನ ಆಧುನಿಕ ಸಿನಿಮಾಗಳಲ್ಲಿ ಹೆಂಡ ಕುಡಿಯದ ನಾಯಕ ನಾಯಕಿಯರೇ ಇಲ್ಲ.
ಹೆಂಡ ಇಷ್ಟು ಪಾಪ್ಯುಲರ್ ಆಗಲು ಕಾರಣವಾದರೂ ಏನು? ಯಾವ ಪಾರ್ಟಿಗಳಲ್ಲಿ ಹೆಂಡದ ಸರಬರಾಜು ಇಲ್ಲ ಎಂದು ಮೊದಲೇ ಗೊತ್ತಾಗುತ್ತದೋ, ಅಂಥ ಆಹ್ವಾನಿತ ನಾಗರಿಕರೆನಿಸಿಕೊಂಡವರು, ಆ ಪಾರ್ಟಿಗೆ ಹೋಗದರಿಲು ನೂರಾರು ನೆಪ ಹೇಳುತ್ತಾರೆ. ವೈದ್ಯರು ಅತ್ತ ಒಂದು ಹನಿ ಹೆಂಡವನ್ನೂ ಕುಡಿಯಬಾರದು ಎನ್ನುತ್ತಿದ್ದರೆ, ಅವರ ಮನೆಗಳಲ್ಲಿ ಮಾತ್ರವಲ್ಲದೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ, ಹೆಂಡ ಹೊಳೆಯಾಗಿ ಹರಿಯುತ್ತಿರುತ್ತದೆ.
ಲಿವರ್, ಸಿರೋಸಿಸ್, ಕ್ಯಾನ್ಸರ್, ಹೃದ್ರೋಗಗಳು, ಸ್ಥೂಲತೆ, ರಸ್ತೆ ಅಪಘಾತ, ಕೌಟುಂಬಿಕ ಕಿರುಕುಳ, ರೋಡ್ ರೇಜ್ ನಲ್ಲಿ ಡ್ರಿಂಕ್ಸ್ ಎಲ್ಲಕ್ಕೂ ಹೆಚ್ಚಿನ ಜವಾಬ್ದಾರಿಯುತವಾಗಿವೆ. ಈಗಂತೂ ಈ ನಶೆ 15-16 ವರ್ಷದವರಲ್ಲಿ ಶುರುವಾಗುತ್ತಿದೆ. ಹೆಂಡದ ಅಂಗಡಿಗಳ ಮುಂದೆ ನೆಪ ಮಾತ್ರಕ್ಕೆ 18 ವರ್ಷದವರಿಗಿಂತ ಕಡಿಮೆಯವರಿಗೆ ಸಪ್ಲೈ ಇಲ್ಲ ಅಂತ ಇರುತ್ತದೆ, ಅಸಲಿಗೆ ಅಂಥವರೇ ಅಲ್ಲಿ ಹೆಚ್ಚಿನ ಗ್ರಾಹಕರಾಗಿರುತ್ತಾರೆ.
ಈಗ ಸಲಹೆ ನೀಡುವುದು, ನಿಷೇಧ ಹೇರುವುದು, ಹೆದರಿಸುವುದೆಲ್ಲ ಬೇಕಾರ್ ಆಗಿಹೋಗಿದೆ. ಈ ಹೆಂಡದ ರೋಗ ಒಂದು ಅಂಟುರೋಗದಂತೆ ವಿಶ್ವವೆಲ್ಲ ಹರಡಿಹೋಗುತ್ತಿದೆ. ಇದನ್ನು ಬಿಡುವ ಸೂಚನೆಯಂತೂ ಯಾರೂ ನೀಡುತ್ತಿಲ್ಲ. ಇದು ಯಾವ ವಿಷಕಾರಿ ಮಾಲಿನ್ಯಕ್ಕೂ ಕಡಿಮೆ ಅಲ್ಲ. ಹೆಂಡ ಕುಡಿಯದವರನ್ನು ಇವನೆಂಥ ಗಾಂಧಿ ಎಂದೇ ಆಧುನಿಕ ಸಮಾಜ ಹಂಗಿಸುತ್ತದೆ, ವಿದ್ಯಾರ್ಥಿ ವೃಂದದಲ್ಲಿ ಅಂಥವರನ್ನು ಹೀನಾಯಿಸಲಾಗುತ್ತದೆ. ಈ ಸಮಾಜದಲ್ಲಿ ನೆಮ್ಮದಿಯಾಗಿ ಬಾಳಲು ಹೆಂಡದ ಅಭ್ಯಾಸ ಅನಿವಾರ್ಯ ಎಂಬಂತಾಗಿದೆ. ಡ್ರಿಂಕ್ಸ್ ಈಸ್ ನಾಟ್ ಡೇಂಜರ್ ಟು ಲೈಫ್, ಬಟ್ ಲೈಫ್ ಥೀಮ್ ಎಂಬಂತಾಗಿದೆ!
ಗಾರ್ಡ್ಸ್ ರೈತರು ಮಾತ್ರ ಮಾಲಿನ್ಯ ಹರಡುತ್ತಾರೆ, ದೇವರಲ್ಲ?
ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಚಿಂತೆ ಹೆಚ್ಚಿ, `ಕಮೀಶನ್ ಆನ್ ಏರ್ ಕ್ವಾಲಿಟಿ ಮ್ಯಾನೇಜ್ ಮೆಂಟ್’ ಹಾಗೂ `ಡೆಲ್ಲಿ ಪೊಲ್ಯೂಶನ್ ಕಂಟ್ರೋಲ್ ಕಮಿಟಿ’ ಮುಖದ ಮೇಲೆ ಹೊಡೆದಂತೆ ಆರೋಪ ಹೊರಿಸಿರುವುದೆಂದರೆ, ನಗರದ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ಸ್, ಈ ಥಂಡಿ ರಾತ್ರಿಗಳಲ್ಲಿ ಗಾರ್ಡ್ಸ್ ಗೆ ಹೀಟರ್ ನೀಡುತ್ತಿಲ್ಲ, ಬದಲಿಗೆ ಅವರು ಒಂದಿಷ್ಟು ಪುರುಲೆ, ಕಟ್ಟಿಗೆ, ಕಸಕಡ್ಡಿ ಸೇರಿಸಿ ಬೆಂಕಿ ಕಾಯಿಸುವುದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಗಾರ್ಡ್ಸ್ ಮತ್ತು ಈ ಅಸೋಸಿಯೇಶನ್ಸ್ ಸಾಫ್ಟ್ ಟಾರ್ಗೆಟ್ ಆಗುತ್ತಿವೆ, ಹೀಗಾಗಿ ಅವರ ಬಗ್ಗೆ ಆಡಿಕೊಳ್ಳಲಾಗುತ್ತಿದೆ.
ಈ ಕಮೀಶನ್ಕಮಿಟಿಗೆ ಧೈರ್ಯವಿದ್ದರೆ ಇಡೀ ದೇಶದ ಎಲ್ಲಾ ಜಾಗಗಳಲ್ಲೂ ಪ್ರತಿ ಮೂಲೆಯಿಂದಲೂ ದಿನೇ ದಿನೇ ನಡೆಯುವ ಹೋಮ ಹವನಗಳ ಬಗ್ಗೆ ಏಕೆ ಪ್ರಶ್ನಿಸಬಾರದು? ಅದಕ್ಕೆ ಧಾರಾಳವಾಗಿ ತುಪ್ಪ, ಕಟ್ಟಿಗೆ, ಎಣ್ಣೆ ಇತ್ಯಾದಿ ಸುರಿಯಲಾಗುತ್ತದೆ. ದೊಡ್ಡ ದೇವಾಲಯಗಳಲ್ಲಿ ಸದಾ ಉರಿಯುವ ದೀಪಗಳಿಂದ ಮಾಲಿನ್ಯ ಇಲ್ಲವೇ? ಕರೆಂಟ್ ಲೈಟ್ ಇದ್ದರೂ ದೇವರ ಸನ್ನಿಧಾನಗಳಲ್ಲಿ, ಚರ್ಚುಗಳ ಮೇಣದ ಬತ್ತಿಗಳಲ್ಲಿ ಉರಿಯುವ ಮಾಲಿನ್ಯದ ಕುರಿತು ಏಕೆ ಆಕ್ಷೇಪಿಸಬಾರದು?
ಧರ್ಮದ ಹೆಸರಿನಲ್ಲಿ ನಡೆಯುವ ಈ ಮಾಲಿನ್ಯವನ್ನು ತಡೆಹಿಡಿಯುವುದು ಭಲೇ ಕಷ್ಟ. ಜನ ಇದಕ್ಕಾಗಿ ಹೂವಿನಹಾರ, ಮೂರ್ತಿ, ಪೂಜಾ ಸಾಮಗ್ರಿ ಇವುಗಳ ಬೂದಿಯನ್ನು ಹಕ್ಕಿನಿಂದ ನದಿಗೆ ಹಾಕುತ್ತಾರೆ. ಅದರಿಂದ ನದಿ ಹಾಳಾಗದಿದ್ದರೂ, ಅನ್ ಟ್ರೀಟೆಡ್ ಸೀಪೇಜ್ ಕಂಡಾಗ ನಗರಪಾಲಿಕೆಯರು ಬೊಬ್ಬಿಡುತ್ತಾರೆ.
ಸುಖ ಸೌಲಭ್ಯ ಬೇಕು ಎಂದ ಮೇಲೆ ಇಂಥ ಮಾಲಿನ್ಯದಿಂದ ಇಂಗಾಲದ ಡೈಆಕ್ಸೈಡ್ ಬಂದೇ ಬರುತ್ತದೆ. ಆದರೆ ಬಹುತೇಕ ಇಂಥ ವಿಷಕಾರಿ ಅನಿಲವನ್ನು ನಾವು ಅನಗತ್ಯ ವಸ್ತುಗಳಿಂದ ತಯಾರಿಸುತ್ತಿರುತ್ತೇವೆ. ಇದಕ್ಕೆ ಧರ್ಮದ ಪರವಾನಗಿ ಇರುವುದರಿಂದ, ಎಲ್ಲರ ಬಾಯಿ ಬಂದ್ ಆಗುತ್ತದೆ. ಇದೀಗ ತಾನೇ ದೀಪಾವಳಿ ಮುಗಿಯಿತು, ಇದರಲ್ಲಿ ಕೋಟ್ಯಂತರ ಭಾರತೀಯರು ಅನಗತ್ಯವಾಗಿ ದೀಪ ಬೆಳೆಗಿಸಿದರು. ಯಾವ ಲಾಭವೂ ಆಗಲಿಲ್ಲ. ಯಾವ ದೇವರು ಅದರಿಂದ ಸುಪ್ರೀತನಾದನೋ ಗೊತ್ತಿಲ್ಲ.
ಮನೆಗಳಲ್ಲಿ ಅಡುಗೆ ಆಗಬೇಕೆಂದರೆ ಹೊಗೆ ಹರಡಲೇಬೇಕು. ಜನರ ಆಹಾರಕ್ಕೆ ಇದು ಅತ್ಯಗತ್ಯ. ಅದೇ ಮನೆಯ ದೇವರ ಕೋಣೆಯಲ್ಲಿ ಸದಾ ಹಗಲೂರಾತ್ರಿ ದೀಪ, ಮೇಣದ ಬತ್ತಿ ಹೊತ್ತಿಸುವುದು ಮಹಾ ಮೂರ್ಖತನ. ಇದನ್ನೆಲ್ಲ ಪ್ರಶ್ನಿಸಲು ಯಾರಿಗೂ ಧೈರ್ಯವಿಲ್ಲ. ಯಾವ ಏಜೆನ್ಸಿಯಾದರೂ ಇದನ್ನು ಪರೀಕ್ಷಿಸಲು ಹೋದರೆ, ಅದರ ಮೇಲೆ ಧಾರ್ಮಿಕ ಧಕ್ಕೆ ಆಗಿದೆ ಎಂಬ ಆರೋಪ ಹೊರಿಸಿ, ಅದರ ಸಂಚಾಲಕರನ್ನು 2-3 ತಿಂಗಳು ಕಂಬಿ ಎಣಿಸುವಂತೆ ಮಾಡಿಬಿಡುತ್ತಾರೆ.
ರಾತ್ರಿ ಹೊತ್ತು ಕಸ ಬಳಿಯುವವರು ಹೆಚ್ಚಿನ ಪಾಲಿಗೆ ಬೆಂಕಿ ಹಚ್ಚುತ್ತಾರೆ, ಇದಕ್ಕೆ ಅನುಮತಿ ಬೇಕು. ಏಕೆಂದರೆ ಅವರಿಗೆ ಯಾರೂ ಹೀಟರ್ ಒದಗಿಸುವುದಿಲ್ಲ. ವಿಶ್ವದೆಲ್ಲೆಡೆ ಬೆಂಕಿಯಿಂದ ಚಳಿ ಕಾಯಿಸಿಕೊಳ್ಳುವುದನ್ನು ಮಾನವರು ಅನಾದಿ ಕಾಲದಿಂದಲೂ ಮಾಡುತ್ತಲೇ ಇದ್ದಾರೆ. ಬಟ್ಟೆಗಳ ಆವಿಷ್ಕಾರ ಆಗುವುದಕ್ಕೂ ಮೊದಲಿನ ಕಥೆ ಇದು. ಪ್ರಾಣಿಗಳೇನೋ ಬಿಲ ಕೊರೆದು ಅದರಲ್ಲಿ ಅಡಗುತ್ತವೆ. ಕರಡಿಯಂಥ ಪ್ರಾಣಿಗೆ ಚಳಿಯೇ ಆಗದಷ್ಟು ಕೂದಲು ಇರುತ್ತದೆ. ನಮ್ಮ ನೀತಿ ನಿರ್ಧಾರಕರು ಮಾಲಿನ್ಯದ ಹೆಸರಿನಲ್ಲಿ, ಕಸ ಬಳಿಯುವವರು, ರೈತರು, ಗಾರ್ಡ್ಸ್ ಹಿಂದೆ ಬಿದ್ದಿದ್ದಾರೆ, ದೇವರಿಗೆ ಹಚ್ಚುವ ದೀಪ, ಮೇಣದಬತ್ತಿ ಕುರಿತು ಅವರೇಕೆ ಚಿಂತಿಸುವುದಿಲ್ಲ….?
ಐಡೆಂಟಿಟಿ ಕಳೆದುಕೊಳ್ಳುತ್ತಿರುವ ಟೂರಿಸಮ್ ಸ್ಪಾಟ್
ಟೂರಿಸಮ್ ಎಂದ ತಕ್ಷಣ ಪ್ರತಿ ದೇಶ ಅದನ್ನು ಹಣ ಗಳಿಸುವ ಧಂಧೆ ಮಾಡಿಕೊಂಡಿದೆ. ಆದರೆ ಇಂದಿನ ಆಧುನಿಕ ಯುವಜನತೆ ತಮ್ಮ ನಗದು ಹಣವನ್ನು ಇಂದೇ ಖರ್ಚು ಮಾಡಿಬಿಡು ಧಾವಂತದಲ್ಲಿರುತ್ತದೆ. ಹೀಗಾಗಿ ವರ್ಲ್ಡ್ ಟೂರಿಸಮ್ ಗೆ ಅವರು ಹೊರಟುಬಿಡುತ್ತಾರೆ. ಎಲ್ಲೆಡೆ ದಟ್ಟ ಜನಸಂದಣಿ, ಇದರಿಂದ ಆಯಾ ದೇಶದ ನಿವಾಸಿಗಳು ಅನಗತ್ಯ ಮಾಲಿನ್ಯ ಎದುರಿಸಬೇಕಾಗಿದೆ.
ನಮ್ಮ ದೇಶದ ಉತ್ತರ ಭಾಗದ ಹಿಮಾಲಯ ಟೂರಿಸ್ಟ್ ಸ್ಪಾಟ್ ಈಗ ಟ್ರಾಫಿಕ್ ಜ್ಯಾಮ್, ಹೊಸ ಹೋಟೆಲ್ ಗಳಿಂದ ತುಂಬಿ ಹೋಗಿದೆ. ಜೊತೆಗೆ ಲೋಕಲ್ ಜನರಿಗೆ ಆಪತ್ಕಾಲ ತಂದೊಡ್ಡಿದೆ. ಯಾವ ಜನ 10-20 ವರ್ಷಗಳ ಹಿಂದೆ, ತಮ್ಮ ಕೊನೆಗಾಲದಲ್ಲಿ ನೆಮ್ಮದಿಯಾಗಿರೋಣ ಎಂದು ಇಲ್ಲಿ ಮನೆ ಕಟ್ಟಿಕೊಂಡಿದ್ದರೋ ಅವರೀಗ ತೊಂದರೆಗೆ ಸಿಲುಕಿದ್ದಾರೆ. ಹಾಗೆಯೇ ಅಲ್ಲಿನ ಬೆಳೆ ಬೆಳೆಯುವ ಜಾಗವನ್ನು ಸೈಟ್ ಮಾಡಿ ಕೋಟ್ಯಂತರಕ್ಕೆ ಮಾರಿಕೊಳ್ಳುತ್ತಿರುವುದೂ ಅವರಿಗೆ ಬಿಸಿ ತುಪ್ಪವಾಗಿದೆ.
ಹೊಸ ಹಣವೇನೋ ಬಂತು, ಆದರೆ ಸೋಶಿಯಲ್ ಫ್ಯಾಬ್ರಿಕ್ ಹಾಳಾದೀತು. ಅಲ್ಲಿ ಎಲ್ಲೆಲ್ಲೂ ಈಗ ಗಾಡಿಗಳ ಹೊಗೆ, ಹೋಟೆಲ್ ಆಗುತ್ತಿರುವ ಮನೆಗಳು, ಗಲ್ಲಿ ಗಲ್ಲಿಗಳಲ್ಲೂ ತಲೆಯೆತ್ತುವ ಡಾಬಾಗಳು, ಅದರಿಂದಾಗಿ ಎಲ್ಲೆಡೆ ಹರಡುವ ಕಸ, ನೆಮ್ಮದಿಯಾಗಿ ವಾಸಿಸುತ್ತಿದ್ದ ಸ್ಥಳೀಯರನ್ನು ಹಿಂಸಿಸುತ್ತಿದೆ. ಇವರ ಜಾಗವನ್ನು ಟೂರಿಸಮ್ ಸ್ಪಾಟ್ ಆಗಿಸಿ, ಪ್ರವಾಸಿಗರು ಹಾಳು ಮಾಡುತ್ತಿದ್ದಾರೆ.
ಗೋವಾ, ಕೇರಳ, ಪುರಿ ಜಗನ್ನಾಥ, ಕನ್ಯಾಕುಮಾರಿ ಇತ್ಯಾದಿ ಭಾರತದ ಬಹುತೇಕ ಟೂರಿಸ್ಟ್ ಸ್ಪಾಟ್ ಗಳು ಹಿಂದೆಲ್ಲ ನೆಮ್ಮದಿಯ ತಾಣಗಳಾಗಿದ್ದವು, ಈಗ ದಟ್ಟ ಜನಸಂದಣಿಯಿಂದ ತಲೆನೋವಾಗಿವೆ.
ಇಟಲಿ ದೇಶದಲ್ಲಿ ಈ ಕಾರಣಗಳಿಂದಲೇ ಬರುತ್ತಿದ್ದ ಎಷ್ಟೋ ಪ್ರವಾಸಿಗರನ್ನು ತಡೆಯಲಾಯಿತು. ಅಲ್ಲಿನ ಎಷ್ಟೋ ಸಣ್ಣ ಹಳ್ಳಿಗಳಲ್ಲಿ ಹೊಸ ಹೊಸ ಹೋಟೆಲ್ ಸ್ಥಾಪನೆ ಯಾವ ಜಮೀನು ಆಸ್ತಿ ಕೊಳ್ಳುವಿಕೆ ವಿರುದ್ಧ ನಿಷೇಧ ಹೇರಲಾಗಿದೆ.
ಗೋವಾದಲ್ಲಿ ಅನೇಕ ಹಳೆಯ ಚರ್ಚು ಹಾಗೂ ಮನೆಗಳ ಎದುರು, ಆಯಾ ಮನೆಗಳ ಫೋಟೋ ಕ್ಲಿಕ್ಕಿಸಿ ತಮ್ಮ ಪ್ರೈವೆಸಿ ಹಾಳು ಮಾಡಬಾರದೆಂದು ಬೋರ್ಡ್ ಅಳವಡಿಸಲಾಗಿದೆ. ಹೀಗಾಗಿ ಇಂಥ ಫೋಟೋಗ್ರಫಿ ಅಲ್ಲೀಗ ಬ್ಯಾನ್ ಆಗಿದೆ.
ಹಿಂದೆಲ್ಲ ಪ್ರವಾಸಿಗರನ್ನು ತೆರೆದ ಬಾಹುಗಳಿಂದ ಸ್ವಾಗತಿಸಲಾಗುತ್ತಿತ್ತು, ಈಗ ಅಂಥವರನ್ನು ನಿರ್ದಯವಾಗಿ ದೂರವಿರಿಸಲಾಗುತ್ತಿದೆ, ನೇರವಾಗಿ ಯಾರಿಂದ ಹಣ ಬರುತ್ತದೋ ಅಂಥವರಿಗೆ ಮಾತ್ರ ಇಲ್ಲಿ ಸ್ವಾಗತ. ಪ್ರವಾಸಿಗರ ಕಾರಣ ಟೂರಿಸಮ್ ಟ್ರೇಡ್ ಹೆಚ್ಚುತ್ತಿದೆ ಎಂಬುದೇನೋ ನಿಜ, ಆ ಕಾರಣದಿಂದಲೇ ಅಲ್ಲಿನ ಜಮೀನಿನ ಬೆಲೆಯೂ ಹೆಚ್ಚಿದೆ.
ಸಣ್ಣಪುಟ್ಟ ಗ್ರಾಮಗಳಲ್ಲಿ ವಾಸಿಸುವವರು ಭಾರತ ಯಾ ಯೂರೋಪಿನವರೇ ಆಗಿರಲಿ, ಈಗಂತೂ ಯಾರೂ ಖುಷಿಯಾಗಿಲ್ಲ. ಟೂರಿಸ್ಟ್ ಕಂಪನಿಗಳು ಇವನ್ನು ಹೇಗೆ ಪ್ರಸ್ತುತಪಡಿಸುತ್ತಿವೆ ಎಂದರೆ, ಅವೇನೂ ಕಡಿಮೆ ದೋಷಿಗಳಲ್ಲ. ಸರ್ಕಾರಗಳೇನೋ ತಕ್ಷಣದ ಲಾಭಕ್ಕಾಗಿ, ಭಾರಿ ಜೋಶ್ ನಲ್ಲಿ ಜಾಹೀರಾತು ಪ್ರಕಟಿಸುತ್ತಿದೆ, ಆದರೆ ಸಾಮಾನ್ಯ ಜನತೆಯ ಗೋಳು ಮಾತ್ರ ಕೇಳುವವರಿಲ್ಲ. ಭಾರತದ ತೀರ್ಥ ಸ್ಥಳಗಳೂ ಇದರಿಂದ ಹೊರತಲ್ಲ. ಅಲ್ಲಿ ಪೂಜೆ ಪುನಸ್ಕಾರಗಳಿಗೇನೂ ಕೊರತೆಯಿಲ್ಲ, ಕಸದ ರಾಶಿಗೂ ಸಹ. ಸೂಟ್ ಕೇಸ್ ಗಳಲ್ಲಿ ಹೆಂಡ, ಡ್ರಗ್ಸ್, ಜೂಜಿನ ಮಟ್ಕಾಗಳಿಗೆ ಇಲ್ಲೇನೂ ಕೊರತೆ ಇಲ್ಲ.
ಭಾರತದ ಮೂಢ ಭಕ್ತರು ಬೆಳಗ್ಗೆ ಪೂಜೆ ಪುನಸ್ಕಾರಗಳಲ್ಲಿ ಕಳೆದರೆ ಸಂಜೆ ಹೆಂಡದ ಹೊಳೆ ಹರಿಸುತ್ತಾರೆ. ಹಿಂದೆಯೂ ಸಹ ತೀರ್ಥಸ್ಥಳಗಳು ಇಂಥವಕ್ಕೆ ಹೆಸರಾಗಿದ್ದವು, ಇಲ್ಲಿ ಪ್ರತಿ ಹಬ್ಬಕ್ಕೂ ಹೊರಗಿನಿಂದ ಹುಡುಗಿಯರನ್ನು ತರಿಸಿ ಧಂಧೆ ನಡೆಸುತ್ತಿದ್ದವು.
ಸ್ಥಳೀಯರು ಎಲ್ಲಿಯವರೆಗೆ ಈ ಟೂರಿಸಮ್ ನೆಪದಲ್ಲಿ ಖುಷಿಯಾಗಿರುತ್ತಾರೋ, ಅಲ್ಲಿಯವರೆಗೂ ಎಲ್ಲವೂ ಸರಿ. ಓವರ್ ಎಕ್ಸ್ ಪೋಶರ್ ಇದರ ಮಜಾ ಹದಗೆಡಿಸಿದೆ. 2 ನೈಟ್ 3 ಡೇಸ್ ನ ಪ್ಯಾಕೇಜ್ ಈಗ ಎಲ್ಲವೂ ನಗರಗಳಿಗೂ ಬಿಸಿ ತುಪ್ಪವಾಗುತ್ತಿದೆ!





