ವೆಜಿಟೆಬ್ಸ್ಪ್ರಿಂಗ್ರೋಲ್ಸ್

ಸಾಮಗ್ರಿ :  ಅರ್ಧರ್ಧ ಕಪ್‌ ತುರಿದ ಕ್ಯಾರೆಟ್‌, ಎಲೆಕೋಸು, ಕ್ಯಾಪ್ಸಿಕಂ, ಸಣ್ಣಗೆ ಹೆಚ್ಚಿದ ಬೀನ್ಸ್, 1 ಈರುಳ್ಳಿ, 2-3 ಹಸಿ ಮೆಣಸು, ತುಸು ಕೊ. ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ಸೋಯಾ ಸಾಸ್‌, ರೆಡ್‌ ಚಿಲೀ ಸಾಸ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೈದಾ, ತುಸು ಸ್ಪ್ರಿಂಗ್‌ ರೋಲ್ ಶೀಟ್ಸ್, ಕರಿಯಲು ಎಣ್ಣೆ.

ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ಒಂದೊಂದಾಗಿ ಹೆಚ್ಚಿದ ಎಲ್ಲಾ ತರಕಾರಿ ಹಾಕಿ ಬಾಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಹಸಿ ಮೆಣಸು ಎಲ್ಲಾ ಸೇರಿಸಿ ಬಾಡಿಸಿಕೊಳ್ಳಿ. ಆಮೇಲೆ ಇದಕ್ಕೆ 2 ಬಗೆಯ ಸಾಸ್‌ ಸೇರಿಸಿ ಬಾಡಿಸಿ. ನಂತರ ಬಾಣಲೆ ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಸ್ಪ್ರಿಂಗ್ ರೋಲ್ ‌ಶೀಟ್ಸ್ ನ್ನು ಡೀಫ್ರಾಸ್ಟ್ ಮಾಡಿ, ಒದ್ದೆ ಬಟ್ಟೆಯಲ್ಲಿ ಸುತ್ತಿಡಿ. ನಂತರ ಪ್ರತಿಯೊಂದು ಶೀಟಿಗೂ 2-3 ಚಮಚ ತರಕಾರಿ ಮಿಶ್ರಣ ತುಂಬಿಸಿ, ಅದನ್ನು ಚಿತ್ರದಲ್ಲಿರುವಂತೆ ರೋಲ್ ‌ಮಾಡಿ, ಅಂಚು ಬಿಡದಂತೆ, ನೀರಲ್ಲಿ ಕದಡಿದ ಮೈದಾದಿಂದ ಪೇಸ್ಟ್ ಮಾಡಿ. ನಂತರ ಬಾಣಲೆಯಿಲ್ಲ ಎಣ್ಣೆ ಬಿಸಿ ಮಾಡಿಕೊಂಡು ಈ ರೋಲ್ಸ್ ನ್ನು ತೇಲಿಬಿಟ್ಟು, ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಟಿಶ್ಯು ಪೇಪರ್‌ ಮೇಲೆ ಹರಡಿ, ಹೆಚ್ಚುವರಿ ಜಿಡ್ಡು ಹೋಗಲಾಡಿಸಿ. ನಂತರ ಇವನ್ನು ಚಿತ್ರದಲ್ಲಿರುವಂತೆ ಸಲಾಡ್‌ ನಿಂದ ಅಲಂಕರಿಸಿರಿ ಸೋಯಾಚಿಲೀ ಸಾಸ್‌ ಜೊತೆ ಬಿಸಿಯಾಗಿ ಸವಿಯಲು ಕೊಡಿ.

Healthy-bar

ಹೆಲ್ದೀ ಬಾರ್ಸ್

ಸಾಮಗ್ರಿ : 1 ಕಪ್‌ ಬೀಜರಹಿತ ಹಸಿ ಖರ್ಜೂರ, 1 ಕಪ್‌ ಗುಲಾಬಿ ದಳ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, 4-5 ಚಮಚ ಫ್ಲಾಕ್‌ ಸೀಡ್ಸ್, ತುಸು ಕೊಬ್ಬರಿ ಎಣ್ಣೆ, ತುಳಸೀ ಬೀಜ.

ವಿಧಾನ : ಫುಡ್‌ ಪ್ರೊಸೆಸರ್‌ ಗೆ ಹಸಿ ಖರ್ಜೂರ ಹಾಕಿ ಚೆನ್ನಾಗಿ ಬ್ಲೆಂಡ್‌ ಮಾಡಿ, ಚೆನ್ನಾಗಿ ಪೇಸ್ಟ್ ತರಹ ಆಗಲಿ. ಅನಿವಾರ್ಯ ಎನಿಸಿದರೆ ಮಾಮೂಲಿ ಮಿಕ್ಸಿ ಬಳಸಿಕೊಳ್ಳಿ. ಈ ಪೇಸ್ಟ್ ನ್ನು ಒಂದು ಬೇಸನ್ನಿಗೆ ಹಾಕಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಮಿಶ್ರಣ ಮಾಡಿ. ನಂತರ ಗ್ಲಾಸ್‌ ಟ್ರೇ/ ಬೇಕಿಂಗ್‌ ಟ್ರೇನಲ್ಲಿ ಫಾಯಿಲ್‌/ ಬಟರ್‌ ಪೇಪರ್‌ ಹರಡಿ, ಅದರ ಒಂದು ಬದಿಗೆ ಗುಲಾಬಿ ದಳ ಹರಡಿರಿ. ನಂತರ ನಿಮ್ಮ ಕೈಗಳನ್ನು ಕೊಬ್ಬರಿ ಎಣ್ಣೆಯಿಂದ ಜಿಡ್ಡು ಮಾಡಿಕೊಂಡು, ಮಿಶ್ರಣವನ್ನು ಗುಲಾಬಿ ದಳದಲ್ಲಿ ಹೊರಳಿಸಿ. ಪುಸ್ತಕ ಬೈಂಡ್‌ ಮಾಡುವಂತೆ, ಈ ಮಿಶ್ರಣಕ್ಕೆ ಬಟರ್‌ ಪೇಪರ್‌ ನಿಂದ ಫೋಲ್ಡ್ ‌ಮಾಡಿ, ಕೈಗಳಿಂದ ಚೆನ್ನಾಗಿ ಒತ್ತಿಬಿಡಿ. ಇದು 1 ಇಂಚು ದಪ್ಪ ಇರುವಂತೆ ಮಾಡಿ. ಇದನ್ನು ಫ್ರಿಜ್‌ ನಲ್ಲಿ 1-2 ಗಂಟೆ ಕಾಲ ಇರಿಸಿ, ಚೆನ್ನಾಗಿ ಕೂಲ್ ‌ಮಾಡಿ. ಇದನ್ನು ನೀವು ಹೊರಗೆ ಡೀಮೋಲ್ಡ್ ‌ಮಾಡಿದಾಗ, ಗುಲಾಬಿ ದಳ ಮೇಲ್ಭಾಗಕ್ಕೆ ಅಂಟಿರುತ್ತದೆ. ಇದನ್ನು ಚಿತ್ರದಲ್ಲಿರುವಂತೆ ಬಾರ್ಸ್‌ ಆಗಿ ಕತ್ತರಿಸಿ, ಏರ್‌ ಟೈಟ್‌ ಡಬ್ಬದಲ್ಲಿ ಸಂಗ್ರಹಿಸಿ ಪ್ರೇಮಿ ಜೊತೆ ಬೇಕೆನಿಸಿದಾಗ ಸವಿಯಿರಿ.

doodhi-fritters

ಸೋರೆಯ ಫ್ರೀಟರ್ಸ್

ಸಾಮಗ್ರಿ : 250 ಗ್ರಾಂ ಸಿಪ್ಪೆ ಹೆರೆದು ತುರಿದ ಸೋರೆಕಾಯಿ, 2-3 ಹೆಚ್ಚಿದ ಹಸಿ ಮೆಣಸು, ಅರ್ಧರ್ಧ ಕಪ್‌ ಹೆಸರು ಬೇಳೆ (ನೆನೆಸಿದ), ಕಡಸಂಹಿಟ್ಟು, ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಅರಿಶಿನ, ಇಂಗು, ಬೇಕಿಂಗ್‌ ಸೋಡ, ತುಸು ತುಪ್ಪ, ಕರಿಯಲು ಎಣ್ಣೆ.

ವಿಧಾನ : ಸೋರೆ ತುರಿಯನ್ನು ತುಸು ಹಿಂಡಿ, ಆದಷ್ಟೂ ಅದರ ತೇವಾಂಶ ತೆಗೆಯಿರಿ. ಆ ರಸವನ್ನು, ತಿಳಿಸಾರಿಗೆ ಬಳಸಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ, ಉಳಿದೆಲ್ಲ ಸಾಮಗ್ರಿ ಸೇರಿಸಿ ಪಕೋಡ ತರಹ ಮಿಶ್ರಣ ಕಲಸಿಡಿ. ನಂತರ ಕಾದ ಎಣ್ಣೆಯಲ್ಲಿ ಇದರಿಂದ ತುಸು ತುಸುವೇ ಭಾಗ ಹಾಕುತ್ತಾ ಹೊಂಬಣ್ಣ ಬರುವಂತೆ ಎರಡೂ ಬದಿ ತಿರುವಿಹಾಕಿ ಬೇಯಿಸಿ. ನಂತರ ಇದನ್ನು ಟಿಶ್ಯು ಪೇಪರ್ ಮೇಲೆ ಹರಡಿ, ಹೆಚ್ಚುವರಿ ಜಿಡ್ಡು ಹೋಗಲಾಡಿಸಿ. ಬಿಸಿ ಇರುವಾಗಲೇ ಇದನ್ನು ಸಾಸ್‌ ಜೊತೆ, ಹಬೆಯಾಡುವ ಕಾಫಿ/ಟೀ ಸಮೇತ ಸೇವಿಸಿ.

Paneer-Veg-Kabab

ಪನೀರ್ವೆಜ್ಕಟ್ಲೆಟ್ಸ್

ಸಾಮಗ್ರಿ : 250 ಗ್ರಾಂ ತುರಿದ ಪನೀರ್‌, 250 ಗ್ರಾಂ ಬೇಯಿಸಿ ಮಸೆದ ಆಲೂ, ಅರ್ಧ ಕಪ್‌ ಬೆಂದ ಹಸಿ ಬಟಾಣಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ಪಿಸ್ತಾ, ದ್ರಾಕ್ಷಿ, ಬಾದಾಮಿ ಚೂರು, ತುಸು ಹೆಚ್ಚಿದ ಹಸಿ ಮೆಣಸು, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಅಮ್ಚೂರ್‌ ಪುಡಿ, ಜೀರಿಗೆ, ಬ್ರೆಡ್‌ ಕ್ರಂಬ್ಸ್, ಅರ್ಧ ಕಪ್‌ ಕಾರ್ನ್‌ ಫ್ಲೋರ್‌, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ ನೀಟಾಗಿ ಬೆರೆಸಿ ಮಿಶ್ರಣ ಮಾಡಿ. ನಂತರ ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಕಟ್‌ ಲೆಟ್‌ ಯಾ ವಡೆ ಆಕಾರದಲ್ಲಿ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಇದನ್ನು ಚಿತ್ರದಲ್ಲಿರುವಂತೆ ಸಲಾಡ್‌ ನಿಂದ ಅಲಂಕರಿಸಿ, ಟೊಮೇಟೊ ಸಾಸ್‌ ಜೊತೆ ವ್ಯಾಲೆಂಟೈನ್ಸ್ ಪಾರ್ಟಿಯಲ್ಲಿ ಸವಿಯಿರಿ.

Falafel1

ಸ್ಪೆಷಲ್ ಸುರುಳಿ

ಸಾಮಗ್ರಿ : ರಾತ್ರಿ ಭರ್ತಿ ನೆನೆಸಿ/ಮಾರನೇ ದಿನ ಬೇಯಿಸಿದ ಕಡಲೆಕಾಳು, ಹೆಚ್ಚಿದ 2 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 2-3 ಹಸಿ ಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ರೆಡ್‌ ಚಿಲೀ ಫ್ಲೇಕ್ಸ್, ಹುರಿದು ಪುಡಿ ಮಾಡಿದ ಜೀರಿಗೆ, ಮೆಣಸು, ಹುರಿದ ನೈಲಾನ್‌ ಎಳ್ಳು, ಕರಿಯಲು ಎಣ್ಣೆ.

ವಿಧಾನ : ಮೊದಲು ಮಿಕ್ಸಿಗೆ ನೀರು ಬಸಿದ ಬೆಂದ ಕಡಲೆಕಾಳು, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು ಇತ್ಯಾದಿ ಸೇರಿಸಿ ತರಿತರಿಯಾಗಿ ಪೇಸ್ಟ್ ಮಾಡಿಡಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಉಳಿದೆಲ್ಲ ಪದಾರ್ಥ ಸೇರಿಸಿ ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ಸಣ್ಣ ಗಾತ್ರದ ಉಂಡೆ ಹಿಡಿದು, ಚಿತ್ರದಲ್ಲಿರುವಂತೆ ಇದರಿಂದ ಸುರುಳಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಟಿಶ್ಯು ಪೇಪರ್‌ ಮೇಲೆ ಹರಡಿ, ಹೆಚ್ಚುವರಿ ಜಿಡ್ಡು ಹೋಗಲಾಡಿಸಿ, ಚಿತ್ರದಲ್ಲಿರುವಂತೆ ಸಲಾಡ್‌ ಸಾಸ್‌ ಗಳೊಂದಿಗೆ ಸವಿಯಲು ಕೊಡಿ.

Cookry-1

ಮಸಾಲ ಸೋಯಾ ಹಾಂಡಿ

ಸಾಮಗ್ರಿ : 2 ಕಪ್‌ ಸೋಯಾ ಚಂಕ್ಸ್ (ನೀರಿನಲ್ಲಿ ನೆನೆ ಹಾಕಿಡಿ), 1 ಕಪ್‌ ಬ್ರೆಡ್‌ ಕ್ರಂಬ್ಸ್, ಒಂದಿಷ್ಟು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ, 2 ಚಮಚ ಕಾರ್ನ್‌ ಫ್ಲೋರ್‌, ಕರಿಯಲು ಎಣ್ಣೆ, 100 ಗ್ರಾಂ ಹುರಿದ ಇಡೀ ಮಸಾಲೆ, ಜೊತೆಗೆ ತುಸು ಧನಿಯಾ ಪುಡಿ, ಜೀರಿಗೆ ಪುಡಿ, ಸಕ್ಕರೆ, ಹುಣಿಸೇ ಕಿವುಚಿದ ರಸ, ಉಪ್ಪು, ಹೆಚ್ಚಿದ ಕೊ.ಸೊಪ್ಪು.

ವಿಧಾನ : ನೆನೆದ ಸೋಯಾ ಚಂಕ್ಸ್ ನ್ನು ಸಣ್ಣದಾಗಿ ಹೆಚ್ಚಿಡಿ. ಇದಕ್ಕೆ ಬ್ರೆಡ್‌ ಕ್ರಂಬ್ಸ್, ಶುಂಠಿ, ಬೆಳ್ಳುಳ್ಳಿ, ತುಸು ಉಪ್ಪು, ಖಾರ, ಚಾಟ್‌ ಮಸಾಲ, ಹಸಿ ಮೆಣಸು ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ನೀರಿಲ್ಲದೆ ರುಬ್ಬಿಕೊಳ್ಳಿ. ಇದನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ಕಾರ್ನ್‌ ಫ್ಲೋರ್‌ ಬೆರೆಸಿಕೊಳ್ಳಿ. ನಂತರ ಇದರಿಂದ ನಿಂಬೆ ಗಾತ್ರದ ಸಣ್ಣ ಉಂಡೆ ಮಾಡಿ, ಓವಲ್ ಶೇಪ್‌ ನಲ್ಲಿ ಐಸ್‌ ಕ್ರೀಂ ಕಡ್ಡಿಗಳಿಗೆ ಸಿಗಿಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದನ್ನು ಬಿಳಿ ಕಾಗದದ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ. ನಂತರ ಅದೇ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಇಡೀ ಮಸಾಲೆ ಪದಾರ್ಥ ಹಾಕಿ ಹುರಿಯಿರಿ. ನಂತರ ಬಾಕಿ ಎಲ್ಲಾ ಮಸಾಲೆ ಸೇರಿಸಿ. ಸಕ್ಕರೆ, ಹುಣಿಸೇರಸ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ 1 ಕಪ್‌ ನೀರು ಬೆರೆಸಿ, ಉಪ್ಪು ಹಾಕಿ ಕುದಿಸಿರಿ. ನಂತರ ಗ್ರೇವಿ ಗಟ್ಟಿಯಾಗ ತೊಡಗಿದಂತೆ ಇದಕ್ಕೆ ಸೋಯಾ ಚಾಪ್ಸ್ ಹಾಕಿ, ಸ್ವಲ್ಪ ಹೊತ್ತು ಬೇಯಿಸಿ. ನಂತರ ಇದಕ್ಕೆ ಹೆಚ್ಚಿದ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಬಿಸಿ ಬಿಸಿಯಾಗಿ ಚಪಾತಿ, ರೊಟ್ಟಿ ಜೊತೆ ಸವಿಯಿರಿ.

Cookry-2

ಮಿಕ್ಸ್ಡ್ ವೆಜ್ಟೊಮೇಟೊ ಸೂಪ್

ಸಾಮಗ್ರಿ : ಮಾಗಿದ 5-6 ಹುಳಿ ಟೊಮೇಟೊ, ತುಸು ಹೆಚ್ಚಿದ ಬೀನ್ಸ್, ಕ್ಯಾರೆಟ್‌, ಸೌತೇಕಾಯಿ, ಬೀಟ್‌ ರೂಟ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್‌, ಬ್ರೆಡ್‌ ಕ್ರೂಟಾನ್ಸ್, ತುಸು ತುಪ್ಪ.

ವಿಧಾನ : ಪ್ರೆಶರ್‌ ಕುಕರ್‌ ನಲ್ಲಿ ಮೊದಲು ತುಪ್ಪ ಬಿಸಿ ಮಾಡಿ ಬ್ರೆಡ್‌ ಚೂರು ಹಾಕಿ ಕರಿದು ತೆಗೆಯಿರಿ. ನಂತರ ಇದಕ್ಕೆ ಧಾರಾಳ ನೀರು ಬೆರೆಸಿ, ಸಣ್ಣಗೆ ಹೆಚ್ಚಿದ ತರಕಾರಿ ಹಾಕಿ ಹದನಾಗಿ ಬೇಯಿಸಿ. ಕೆಳಗಿಳಿಸಿ ಆರಿದ ನಂತರ ಇದನ್ನು ಸೋಸಿ, ವೆಜ್‌ ಸ್ಟಾಕ್ ಬೇರ್ಪಡಿಸಿ. ಅದನ್ನು ಒಲೆಯ ಮೇಲಿರಿಸಿ ಉಪ್ಪು, ಮೆಣಸು, ಕೆಚಪ್‌ ಬೆರೆಸಿ ಮಂದ ಉರಿಯಲ್ಲಿ ಹದನಾಗಿ ಕುದಿಸಿ. ಕೊನೆಯಲ್ಲಿ ಬ್ರೆಡ್‌ ಚೂರು ಬೆರೆಸಿ, ಬಿಸಿ ಬಿಸಿಯಾಗಿ ಊಟಕ್ಕೆ ಮೊದಲು ಸವಿಯಲು ಕೊಡಿ.

Cookry-3

ಚಿಕನ್ಸೂಪ್

ಸಾಮಗ್ರಿ : 3-4 ಪೀಸ್‌ ಬೋನ್‌ ಲೆಸ್‌ ಚಿಕನ್‌, ಹೆಚ್ಚಿದ 1 ಆಲೂ, ಅರ್ಧ ಸೌತೇಕಾಯಿ, 2 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಮೇಲಿನ ಎಲ್ಲಾ ಪದಾರ್ಥಗಳನ್ನು ಕುಕ್ಕರಿನಲ್ಲಿ ಬೇಯಿಸಿಕೊಂಡು ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಮಿಕ್ಸಿಗೆ ಹಾಕಿ ಬ್ಲೆಂಡ್‌ ಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಈ ಮಿಶ್ರಣ ಅದಕ್ಕೆ ಬೆರೆಸಿ, ಉಪ್ಪು, ಮೆಣಸು ಸೇರಿಸಿ ಕುದಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

Cookry-4

ಮ್ಯಾಕ್ರೋನಿ ಸಲಾಡ್

ಸಾಮಗ್ರಿ : 2 ಕಪ್‌ ಬೇಯಿಸಿದ ಮ್ಯಾಕ್ರೋನಿ, ಹೆಚ್ಚಿದ 2 ಈರುಳ್ಳಿ, 1 ಸಣ್ಣ ಸೌತೇಕಾಯಿ, ಅರ್ಧ ಅನಾನಸ್‌ ಹೋಳು, 1 ದೊಡ್ಡ ಕ್ಯಾರೆಟ್‌ ನ ಹೋಳು, 1-1 ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಂ, 1 ಗಿಟುಕು ತೆಂಗಿನ ತುರಿ, ತುಸು ಹೆಚ್ಚಿದ ಕೊ.ಸೊಪ್ಪು ಪುದೀನಾ, ಡ್ರೆಸ್ಸಿಂಗ್‌ ಗಾಗಿ 2-3 ಚಮಚ ವಿನಿಗರ್‌, ಅರ್ಧರ್ಧ ಚಮಚ ಮಿಕ್ಸ್ಡ್ ಹರ್ಬ್ಸ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ-ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ತುಸು ಆಲಿವ್ ‌ಆಯಿಲ್‌.

ವಿಧಾನ : ಬೆಂದ ಮ್ಯಾಕ್ರೋನಿಯನ್ನು ಸೋಸಿ ಬೇರ್ಪಡಿಸಿ ಒಂದು ಬೇಸನ್ನಿನಲ್ಲಿ ಹರಡಿರಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ನೀಟಾಗಿ ಕಲಸಿ, 1 ಗಂಟೆಕಾಲ ಫ್ರಿಜ್‌ ನಲ್ಲಿರಿಸಿ ನಂತರ ಊಟದ ಜೊತೆ ಸವಿಯಲು ಕೊಡಿ.

Cookry-5

ಚಿಕನ್ಬಿರಿಯಾನಿ

ಸಾಮಗ್ರಿ : 1 ಕಿಲೋ ಬೋನ್‌ ಲೆಸ್‌ ಚಿಕನ್‌ ಪೀಸ್‌, ಅರ್ಧ ಸೌಟು ಆಲಿವ್ ‌ಎಣ್ಣೆ, ಒಂದಿಷ್ಟು ಲವಂಗ, ಚಕ್ಕೆ, ಏಲಕ್ಕಿ, ಪಲಾವ್ ‌ಎಲೆ, ಕಾಳುಮೆಣಸು, ಮೊಗ್ಗು (ಒಟ್ಟಾರೆ 1 ದೊಡ್ಡ ಚಮಚ, ಇಡಿಯಾಗಿರಲಿ). 4-5 ಟೊಮೇಟೊಗಳ ಪ್ಯೂರಿ, ತುಸು ಅರಿಶಿನ, ಜೀರಿಗೆ, ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ಅರ್ಧ ಕಿಲೋ ಬಾಸುಮತಿ ಅಕ್ಕಿ, ತುಪ್ಪ.

ವಿಧಾನ : ಮೊದಲು ಪ್ರೆಷರ್‌ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಇಡಿಯಾದ ಮಸಾಲೆ ಪದಾರ್ಥ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಟೊಮೇಟೊ ಪ್ಯೂರಿ ಬೆರೆಸಿ 2-3 ನಿಮಿಷ ಕೆದಕಬೇಕು. ಆಮೇಲೆ ಚಿಕನ್‌ ಪೀಸ್‌ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಜೊತೆಗೆ ತುಸು ನೀರು ಬೆರೆಸಿ, ಮುಚ್ಚಳ ಮುಚ್ಚಿರಿಸಿ ಬೇಯಲು ಬಿಡಿ. ನಂತರ ಅದಕ್ಕೆ ಉಪ್ಪು, ಖಾರ, ಅರಿಶಿನ ಇತ್ಯಾದಿ ಎಲ್ಲಾ ಮಸಾಲೆ ಹಾಕಿ ಕೈಯಾಡಿಸಿ. ಆಮೇಲೆ ತೊಳೆದ ಅಕ್ಕಿ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಮಿಶ್ರಣ ಉದುರಾಗಿ ಬರುವಷ್ಟು ನೀರು ಬೆರೆಸಿ, 3 ಸೀಟಿ ವಿಷಲ್ ಕೂಗಿಸಿ. ಕೆಳಗಿಳಿಸಿ ತಣಿದ ನಂತರ, ಧಾರಾಳ ತುಪ್ಪ ಹಾಕಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ