ಗರ್ಭಿಣಿ ಹೆಂಡತಿ ತನ್ನ ಗಂಡನನ್ನು ಕೇಳಿದಳು:

*“ನೀನು ಏನು ಬಯಸುತ್ತೀಯ? ಗಂಡು ಮಗುವೋ, ಹೆಣ್ಣು ಮಗುವೋ?”*

ಗಂಡನು ನಗುತ್ತಾ ಹೇಳಿದನು:

“ಒಂದು ವೇಳೆ ಗಂಡು ಮಗು ಹುಟ್ಟಿದರೆ ಅವನಿಗೆ ಗಣಿತ ಕಲಿಸುತ್ತೇನೆ, ನನ್ನ ಕೆಲಸಕ್ಕೆ ಜೊತೆಗಾರನಾಗಿಸುತ್ತೇನೆ. ಪೂಜೆ ಹೇಗೆ ಮಾಡಬೇಕು, ಬದುಕನ್ನು ಹೇಗೆ ನಡೆಸಬೇಕು, ವ್ಯಾಪಾರ ಹೇಗೆ ಮಾಡಬೇಕು ಎನ್ನುವುದನ್ನೆಲ್ಲಾ ತಿಳಿಸುತ್ತೇನೆ.”

ಹೆಂಡತಿ ಮತ್ತೆ ನಸುನಗುತ್ತಾ ಕೇಳಿದಳು:

*“ಹೆಣ್ಣು ಮಗು ಹುಟ್ಟಿದರೆ?”*

ಗಂಡನು ಮುಗುಳ್ನಗುತ್ತ ಹೇಳಿದನು:

“ಹೆಣ್ಣು ಮಗು ಹುಟ್ಟಿದರೆ ನಾನು ಅವಳಿಗೆ ಕಲಿಸುವುದೇನೂ ಇಲ್ಲ.

ಅವಳೇ ನನಗೆ ಬಹಳವನ್ನು ಕಲಿಸುತ್ತಾಳೆ – ಹೇಗೆ ಬಟ್ಟೆ ಧರಿಸಬೇಕು, ಹೇಗೆ ನಡೆದುಕೊಳ್ಳಬೇಕು, ಹೇಗೆ ಮಾತನಾಡಬೇಕು ಎನ್ನುವುದನ್ನೆಲ್ಲಾ.

ಅವಳು ನನಗೆ ಬೇಗನೇ ಎರಡನೇ ತಾಯಿಯಾಗುತ್ತಾಳೆ.

ನಾನು ಏನೂ ಮಾಡದಿದ್ದರೂ ನನನ್ನು ಅವಳು ಹೀರೋ ಎಂದುಕೊಳ್ಳುತ್ತಾಳೆ.

ನಾನು ಹೇಳದೇ ಇದ್ದರೂ ನನ್ನ ಮನಸ್ಸನ್ನು ಅರ್ಥಮಾಡಿಕೊಳ್ಳುತ್ತಾಳೆ.

ತನ್ನ ಭವಿಷ್ಯದ ಗಂಡ ಹೇಗಿರಬೇಕು ಎಂಬುದನ್ನು ನನ್ನಲ್ಲಿ ಹುಡುಕಿಕೊಳ್ಳುತ್ತಾಳೆ.

ಅವಳಿಗೆ ವಯಸ್ಸು ಎಷ್ಟು ಇದ್ದರೂ ಪರವಾಗಿಲ್ಲ – ಅವಳು ಸದಾ ನಮ್ಮ ಮನೆಯ ರಾಜಕುಮಾರಿ.

ಈ ಜಗತ್ತಿನಲ್ಲಿ ನನಗೋಸ್ಕರ ಹೋರಾಡುತ್ತಾಳೆ.

ಯಾರಾದರೂ ನನಗೆ ನೋವು ಮಾಡಿದರೆ, ಅವರನ್ನು ಅವಳು ಸುಲಭವಾಗಿ ಕ್ಷಮಿಸುವುದಿಲ್ಲ.”

ಗಂಡನ ಮಾತುಗಳನ್ನು ಕೇಳಿ ಹೆಂಡತಿ ಆಶ್ಚರ್ಯದಿಂದ ಕೇಳಿದಳು:

*“ಹಾಗಾದರೆ ನಿನ್ನ ಪ್ರಕಾರ ಮಗಳು ಎಲ್ಲವನ್ನೂ ಮಾಡುತ್ತಾಳೆ, ಮಗ ಮಾಡೋದಿಲ್ಲವೇ?”*

ಗಂಡ ಶಾಂತವಾಗಿ ಉತ್ತರಿಸಿದನು:

“ಇಲ್ಲ… ನನ್ನ ಮಗನೂ ಇದನ್ನೆಲ್ಲಾ ಕಲಿಯುತ್ತಾನೆ.

ಆದರೆ ಅವನು ಬದುಕಿನ ಅನುಭವಗಳಿಂದ ನಿಧಾನವಾಗಿ ಕಲಿಯುತ್ತಾನೆ.

ಆದರೆ ಹೆಣ್ಣುಮಗುವಿಗೆ ಈ ಗುಣಗಳು ಜನ್ಮಜಾತ.

ಹೆಣ್ಣುಮಗುವಿನ ತಂದೆಯಾಗುವುದು ಗಂಡನಿಗೆ ಒಂದು ಅಪಾರ ಹೆಮ್ಮೆ.”

ಹೆಂಡತಿ ಸ್ವಲ್ಪ ಯೋಚಿಸಿ ಹೇಳಿದಳು:

*“ಆದರೆ ಹೆಣ್ಣುಮಗು ಯಾವತ್ತಿಗೂ ನಮ್ಮ ಜೊತೆಯಲ್ಲಿರೋದಿಲ್ಲವಲ್ಲ?”*

ಗಂಡ ಸಮಾಧಾನದಿಂದ ಹೇಳಿದನು:

“ನೀನು ಹೇಳಿದ್ದು ಸರಿ.

ಆದರೆ ಅವಳು ಎಲ್ಲೇ ಹೋದರೂ, ಅವಳ ಹೃದಯದಲ್ಲಿ ನಾವು ಸದಾ ಇರುತ್ತೇವೆ.

ಹೆಣ್ಣುಮಗು ಎಂದರೆ ದೇವತೆಯಂತದ್ದು.

ಅವರು ಹುಟ್ಟುತ್ತಲೇ ತಂದೆ-ತಾಯಿಗೆ ಬೇಷರತ್ತಾದ ಪ್ರೀತಿ, ಕಾಳಜಿ ಮತ್ತು ಸಂತೋಷವನ್ನು ನೀಡುತ್ತಾರೆ.”

*ಎಲ್ಲಾ ಹೆಣ್ಣುಮಕ್ಕಳ ತಂದೆಗಳಿಗೆ ಈ ಹೃದಯಸ್ಪರ್ಶಿ ಸಾಲುಗಳು ಸಮರ್ಪಣೆ.*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ