ಇತ್ತೀಚೆಗಷ್ಟೆ ನಡೆದ ಅಮೆರಿಕಾದ ಚುನಾವಣೆಯಲ್ಲಿ, ಅತಿ ಹೆಚ್ಚು ವಯಸ್ಸಿನ (78 ವರ್ಷ) ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್‌ ತಮ್ಮ ಎದುರಾಳಿ, ಸದಾ ಸ್ತ್ರೀಪರ ಹಕ್ಕುಗಳ ಪರವಾಗಿ ನಿಲ್ಲುತ್ತಿದ್ದ ಕಮಲಾ ಹ್ಯಾರಿಸ್‌ ರನ್ನು ಸೋಲಿಸಿದ್ದಾರೆ. ಈ ಸೋಲು ಕೇಲ ಕಮಲಾರಿಗೆ ಮಾತ್ರ ಸಂಬಂಧಪಟ್ಟಿದ್ದೇ ಅಥವಾ ಅಮೆರಿಕಾದ ಎಲ್ಲಾ ಮಹಿಳೆಯರೂ ಇದರಿಂದ ಸೋತ ಹಾಗಾಯ್ತೇ? ವಿಶ್ವದ ಅತಿ ಶಕ್ತಿಶಾಲಿ ದೇಶದ ಹೆಂಗಸರು ತಮ್ಮ ಇಷ್ಟದ ಪ್ರತಿನಿಧಿಯನ್ನು ರಾಷ್ಟ್ರಪತಿ ಆಗಿಸುವಲ್ಲಿ ವಿಫಲರಾಗಿದ್ದಾರೆ. ಮುಂದಿನ 4 ವರ್ಷ ವಿಧಿಯಿಲ್ಲದೆ ಹೆದರಿ ನಡುಗುತ್ತಾ ಬಾಳಬೇಕಿದೆ.

ಅವರಲ್ಲಿ ಇಷ್ಟು ಮಾತ್ರ ಒಗ್ಗಟ್ಟು ಇರಲಿಲ್ಲವೇ? ಒಬ್ಬ ಲಂಪಟ, ಹೆಂಗಸರ ಹಕ್ಕುಗಳನ್ನು ನಿರ್ಲಕ್ಷಿಸುವ, ಬಣ್ಣ/ಕೋಮುವಾದಿ ತಾರತಮ್ಯದ ಬೇಜಾಬ್ದಾರಿಯುತ, ಅತಿ ವಿಲಾಸಪ್ರಿಯ ಸಿಡುಕವ ವೃದ್ಧನನ್ನು ಈ ಹುದ್ದೆಗೆ ಬಾರದಂತೆ ತಡೆಯಲು ಸಮರ್ಥರಾಗಲಿಲ್ಲವೇ? ಸದಾ ಹೆಂಗಸರ ಪರವಾಗಿ ಹೋರಾಡುತ್ತಾ, ಅಲ್ಲಿನ ಹೆಂಗಳೆಯರ ಪ್ರತಿನಿಧಿಯಾದ ಕಮಲಾರನ್ನು ಈ ಹುದ್ದೆಗೆ ಆರಿಸಬಾರದಿತ್ತೇ?

ಸುಪ್ರೀಂ ಕೋರ್ಟಿನ ರೋಲ್ V/S ವೆಡ್ ಕೇಸಿನ ತೀರ್ಪು ಹಾಗೂ ಗರ್ಭಪಾತದ ಕುರಿತಾಗಿ ಸಾಂವಿಧಾನಿಕ ಹಕ್ಕುಗಳ ನಿರ್ಣಯವನ್ನು ಮಣ್ಣು ಮುಕ್ಕಿಸಿದ ನಂತರ, ಅಮೆರಿಕಾದ ಮೊದಲ ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದು ಬಂದ ಮಹಾ ಕಂದಾಚಾರಿ, ಹೆಂಗಸರನ್ನು ಒಂದು ನಿರ್ಜೀವ ವಸ್ತುವೊಂದೇ ಪರಿಗಣಿಸುವ ಟ್ರಂಪ್‌ ರನ್ನು ಗೆಲ್ಲಿಸಬೇಕೇ? ಗರ್ಭಪಾತದ ಹಗರಣದ ಕುರಿತಾಗಿ ಅಲ್ಲಿನ ಬಹುತೇಕ ಹೆಂಗಸರು ಕಮಲಾರ ಬೆಂಬಲಿಗರಾಗಿದ್ದರು. ಆದರೆ ಈಕೆ ಚುನಾವಣೆಗೆ ನಿಂತಾಗ, ಮೊದಲ ಮಹಿಳಾ ರಾಷ್ಟ್ರಪತಿ ಆಗುವ ಕನಸನ್ನು ಮಣ್ಣು ಮುಕ್ಕಿಸಿದರು.

ಗೆಲುವಿಗಾಗಿ ಅಭ್ಯರ್ಥಿಗೆ 270 ಎಲೆಕ್ಟೋರ್‌ ವೋಟುಗಳ ಅಗತ್ಯವಿತ್ತು. ಟ್ರಂಪ್‌ ಗೆ 312 ಎಲೆಕ್ಟೋರ್‌ ನ ವೇಟ್‌ ಸಿಕ್ಕ! ಡೆಮೋಕ್ರೇಟ್‌ ಪಕ್ಷದ ಕಮಲಾರಿಗೆ ಮಾತ್ರ ಕೇವಲ 226 ಎಲೆಕ್ಟೋರ್‌ ನದಷ್ಟೇ ವೋಟುಗಳು ದೊರಕಿದ್ದವು. ರಿಪಬ್ಲಿಕನ್‌ ಪಕ್ಷ ಸೆನೆಟ್‌ಪ್ರತಿನಿಧಿ ಸಭಾ ಎರಡರ ಗೆಲುವನ್ನು ಪಡೆಯಿತು.

Kamala-1

ಗರ್ಭಪಾತ ಬ್ಯಾನ್ಕುರಿತಾದ ಸಂಘರ್ಷ

ಅಮೆರಿಕಾದ ಚುನಾವಣಾ ಅಭಿಯಾನದ ಮೂಲಕ ಅಬಾರ್ಶನ್‌ ಕುರಿತಾದ ಹಕ್ಕು ಒಂದು ದೊಡ್ಡ ಪಾತ್ರ ವಹಿಸಿತು. ಅಮೆರಿಕಾದ ಬಹುತೇಕ ಹೆಂಗಸರು ಗರ್ಭಪಾತಕ್ಕೆ ಕಾನೂನಿನ ಅನುಮತಿ ಬೇಕೆಂದು ಒತ್ತಾಯಿಸುತ್ತಿದ್ದರು. ಅವರೆಲ್ಲ ಅದನ್ನು ಹೆಣ್ಣಿನ ಜನ್ಮಸಿದ್ಧ ಹಕ್ಕು ಎಂದೇ ವಿಶ್ಲೇಷಿಸುತ್ತಾರೆ. ಕಮಲಾ ಅವರಿಗೆಲ್ಲ ತುಂಬು ಭರವಸೆ ನೀಡಿ, ತನ್ನ ಪಕ್ಷ ಅಧಿಕಾರಕ್ಕೆ ಬಂದರೆ, ದೇಶವಿಡೀ ಗರ್ಭಪಾತಕ್ಕೆ ಲೀಗ್‌ ಲೈಸನ್ಸ್ ಕೊಡಿಸುವುದಾಗಿ ಭರವಸೆ ತುಂಬಿದ್ದರು. ಆದರೆ ಈಗ ಟ್ರಂಪಣ್ಣ ಗೆದ್ದಿರುವುದರಿಂದ, ಈಗ ಈ ಮಂದಿ ಬಾಯಿಗೆ ಬೀಗ ಹಾಕಿಕೊಳ್ಳಬೇಕಿದೆ.

ಅಸಲಿಗೆ ಅಲ್ಲಿನ ಸುಪ್ರೀಂಕೋರ್ಟ್‌ 2022ರ ಜೂನ್‌ ತಿಂಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವ, ಸುಮಾರು 5 ದಶಕಗಳ ಹಳೆಯ ತೀರ್ಪನ್ನು ನಿರಾಕರಿಸಿತ್ತು. ಕೋರ್ಟ್‌ ಗರ್ಭಪಾತಕ್ಕೆ ನೈತಿಕ ಹಾಗೂ ಧಾರ್ಮಿಕ ರೂಪ ನೀಡಿ, ಅದು ತಪ್ಪು ಎಂದು ಸಾರಿತು! ಕೋರ್ಟ್‌ `ಆ್ಯಂಟಿ ಅಬಾರ್ಶನ್‌ ಲಾ’ನ್ನು ತನ್ನ ತೀರ್ಪಿನ ಪ್ರಕಾರ ಇನ್ನಷ್ಟು ಕಠಿಣಗೊಳಿಸುವ ಮಾತನಾಡಿತ್ತು. ಹೀಗಾಗಿ ಆ ದೇಶಾದ್ಯಂತ ಬಹುತೇಕ ಅಬಾರ್ಶನ್‌ ಕ್ಲಿನಿಕ್‌ ಗಳ ಬಾಗಿಲಿಗೆ ಬೀಗ ಜಡಿಯಲಾಡಿತು. ಇದರಿಂದ ದಿಕ್ಕೆಟ್ಟ ಎಷ್ಟೋ ಹೆಂಗಸರು ಕಾನೂನು ಬಾಹಿರವಾಗಿ ಕದ್ದು ಮುಚ್ಚಿ ಎಲ್ಲೆಲ್ಲೋ ಅಬಾರ್ಶನ್‌ ಮಾಡಿಸಿಕೊಳ್ಳ ತೊಡಗಿದರು.

ಅಬಾರ್ಶನ್ಹಕ್ಕಿನ ವಿರೋಧ

ಅಮೆರಿಕಾದ ರಾಷ್ಟ್ರಪತಿ ಚುನಾವಣೆಯ ಮೊದಲ ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್‌, ಅಬಾರ್ಶನ್‌ ಪರವಾಗಿ ಕಾನೂನು ಜಾರಿಗೊಳಿಸಲು ಒಪ್ಪಲೇ ಇಲ್ಲ, ಬದಲಿಗೆ ಅಲ್ಲಿನ ರಾಜ್ಯಗಳ ಆಡಳಿತ ವರ್ಗಕ್ಕೆ ಅದು ಬಿಟ್ಟದ್ದು ಎಂದರು. ಟ್ರಂಪ್‌ ರ ಆಡಳಿತ ಅಮೆರಿಕಾದ ಅಬಾರ್ಶನ್‌ ವಿರೋಧಿ ಆಂದೋಲನವನ್ನು ಸಮರ್ಥಿಸುವಲ್ಲಿ ಸ್ಪಷ್ಟ ಪಾತ್ರ ವಹಿಸಿತು. ರಾಷ್ಟ್ರಪತಿ ಆದ ನಂತರ ಆತ ಒಂದು `ಪ್ರೋಲೈಫ್‌’ ರಾಷ್ಟ್ರಪತಿ ಆಗುವ ಕುರಿತು ಸಮರ್ಥಿಸಿಕೊಂಡರು ಹಾಗೂ ಅಬಾರ್ಶನ್‌ ಗೆ ವಿರುದ್ಧ ಹಲವು ಪ್ರತಿಬಂಧಕಗಳನ್ನು ಹೇರಿದರು. ಟ್ರಂಪ್‌ ಮೂರು ಮಂದಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರನ್ನು ನೇಮಕಗೊಳಿಸಿ, ಗರ್ಭಪಾತದ ವಿರೋಧಿ ಆಂದೋಲನಕ್ಕೆ ಕರೆಕೊಟ್ಟರು. ಹೀಗಾಗಿ ಈ ಹಕ್ಕು ದಾರುಣವಾಗಿ ಕೊನೆಗೊಂಡಿತು.

ಟ್ರಂಪ್‌ ಈ ಫೆಡ್ರ್‌ ಜಜ್‌ ಗಳ ನಿಯುಕ್ತಿ ಸಮಯದಲ್ಲಿ, ಅಬಾರ್ಶನ್‌ ಗೆ ವಿರುದ್ಧ ಇದ್ದಂಥ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಿದರು. ಈ ಕಾರಣ ಬಹುತೇಕ ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಅಬಾರ್ಶನ್‌ ಸಮರ್ಥಕ ಕಾರ್ಯಕರ್ತರು ಈ ಕುರಿತು, ತಮ್ಮ ಆತಂಕ ಸಹ ವ್ಯಕ್ತಪಡಿಸಿದ್ದರು. ಅಬಾರ್ಶನ್‌ ಹಕ್ಕು ಹೆಂಗಸರಿಗೆ ಒಂದು ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ವಿಷಯವೇ ಆಗಿದ್ದರೂ, ಟ್ರಂಪಣ್ಣನ ನೀತಿಗಳ ಕಾರಣ, ಇದಕ್ಕೆ ಕಾನೂನಿನ ಮೊಹರು ಸಿಗದೆ, ಸಾಮಾಜಿಕ ಸವಾಲುಗಳನ್ನೂ ಎದುರಿಸುವಂತಾಯಿತು.

ಅಬಾರ್ಶನ್‌ ಕುರಿತಾಗಿ ಟ್ರಂಪ್‌ ರ ಎಲ್ಲಕ್ಕೂ ದೊಡ್ಡ ವಿವಾದಾಸ್ಪದ ಹೆಜ್ಜೆ ಎಂದರೆ, `ಮೆಕ್ಸಿಕೋ ಸಿಟಿ ಪಾಲಿಸಿ’ಯನ್ನು ರಿವೈವ್ ಮಾಡುವುದಾಗಿತ್ತು. ಈ ಮೂಲಕ ಅಮೆರಿಕಾ ಸರ್ಕಾರದಿಂದ ಯಾವ ಯಾವ ಅಂತಾರಾಷ್ಟ್ರೀಯ ಸಂಘಸಂಸ್ಥೆಗಳಿಗೆ ಆರ್ಥಿಕ ಸಹಾಯ ಒದಗಿಸಲಾಗುತ್ತಿತೋ ಅಂಥ ಏನಾದರೂ ಅಬಾರ್ಶನ್‌ ಸೇವೆ ಒದಗಿಸಿದ್ದೇ ಆದಲ್ಲಿ, ಈ ನೆರವು `ಬಂದ್‌’ ಎಂದು ಘೋಷಿಸಲಾಯಿತು! ತಮ್ಮ ಆರೋಗ್ಯ ಸುಧಾರಣೆಗಾಗಿ ಇಂಥ ಸಂಘಸಂಸ್ಥೆಗಳ ನೆರವು ಪಡೆಯಲು ಬಯಸಿದ ಬಹುತೇಕ ಹೆಂಗಸರಿಗೂ, ಸಕಾಲಕ್ಕೆ ನೆರವು ಸಿಗದೆ, ಎಷ್ಟೋ ಸಲ ಪ್ರಾಣಕಂಟಕ ಅವಘಡಗಳಿಂದ ಬದುಕುಳಿದಿದ್ದೇ ಹೆಚ್ಚಾಯಿತು.

ಮಹಿಳೆಯರತ್ತ ಟ್ರಂಪಣ್ಣನ ಕೀಳು ದೃಷ್ಟಿ

ಹೆಚ್ಚು ಮಂದಿ ಅಮೆರಿಕಾ ಹೆಂಗಸರು ಭಾವಿಸುವುದೆಂದರೆ, ಟ್ರಂಪ್‌ ರಾಷ್ಟ್ರಕ್ಕೆ ರಕ್ಷಕನಲ್ಲ, ಭಕ್ಷಕ ಅಂತ! ಅಮೆರಿಕನ್‌ ಇತಿಹಾಸದಲ್ಲಿ ಇದು ಒಂದು ವಿಚಿತ್ರ ತಿರುವು ಎಂದೇ ಹೇಳಬಹುದು. 2 ಸಲದ ರಾಷ್ಟ್ರಪತಿ ಚುನಾವಣೆಗಳಲ್ಲೂ ಇಬ್ಬರು ಮಹಿಳಾ ಅಭ್ಯರ್ಥಿಗಳ ವಿರುದ್ಧ ರಣರಂಗದಲ್ಲಿ ದಮ್ ಕಟ್ಟಿ ನಿಂತ ವ್ಯಕ್ತಿ ಎಂದರೆ ಅದು ಟ್ರಂಪ್‌ ಮಾತ್ರ. ಈತ ಮಹಿಳೆಯರತ್ತ ತೋರುವ ಕೀಳುದರ್ಜೆ ನಿಲುವು ಎಲ್ಲರಿಗೂ ಗೊತ್ತಿರುವಂಥದ್ದೇ. ಆತನ ಆ ದುರ್ಬುದ್ಧಿಯ ಪಟ್ಟಿ ಮಾಡಿದರೆ ಅದೇ ಒಂದು ಲೇಖನವಾದೀತು. ಡೊನಾಲ್ಡ್ ಟ್ರಂಪ್‌ ರಾಜಕೀಯವಾಗಿ ತನ್ನ ಮಾರ್ಗಕ್ಕೆ ಅಡ್ಡ ಬರುವ ಹೆಂಗಸರತ್ತ ಆಕ್ರಮಣ ನಡೆಸುವುದು, ಅವರನ್ನು ಅವಮಾನದಿಂದ ಕುಗ್ಗಿಸುವುದು, ಹೆದರಿಕೆ ಬೆದರಿಕೆಗಳಿಂದ ಕಂಪಿಸುವಂತೆ ಮಾಡಬಲ್ಲ ಚಾಣಾಕ್ಷ.

ಆತ ಹೆಂಗಸರನ್ನು ಭಯಪಡಿಸಲು ತನ್ನ ದೈಹಿಕ ಉಪಸ್ಥಿತಿ ಹಾಗೂ ಬಾಡಿ ಮ್ಯಾನರ್ಸ್‌ ಮೂಲಕ ಸಕಲ ಪ್ರಯತ್ನ ನಡೆಸುತ್ತಿರುತ್ತಾನೆ, ಪ್ರತ್ಯಕ್ಷ-ಪರೋಕ್ಷ ರೂಪಗಳಲ್ಲೂ ಗೊಡ್ಡು ಬೆದರಿಕೆಯೊಡ್ಡುತ್ತಾ, ಅವರ ಉನ್ನತ ಯೋಗ್ಯತೆ ಗಾಳಿಗೆ ತೂರಿಹೋಗುವಂತೆ ಮಾಡಬಲ್ಲ ಭೂಪತಿ. ಖುಲ್ಲಂಖುಲ್ಲ ಈತನ ವಿರುದ್ಧ ಹಲವು ಹೆಂಗಸರು ಲೈಂಗಿಕ ಭೇದಭಾವದ ಆರೋಪ ಹೊರಿಸಿದ್ದಾರೆ.

ಟ್ರಂಪ್‌ ನ ಟ್ವಿಟ್‌ ರ ಅಕೌಂಟ್‌ ನಲ್ಲಿ ಹೆಂಗಸರ ಲುಕ್ಸ್ ಕುರಿತಾಗಿ ಹಲವು ತರಹದ ವ್ಯಂಗ್ಯ, ಅಪಮಾನಭರಿತ ಟಿಪ್ಪಣಿಗಳಿರುತ್ತವೆ. ಈತ ಒಂದು ಸಲ, ಒಬ್ಬ `ಸೆಲೆಬ್ರಿಟಿ ಅಪ್ರೆಂಟಿಸ್‌’ ಅಭ್ಯರ್ಥಿಗೆ ಹೀಗೆ ಹೇಳಿದ್ದ, `ಆಕೆ ಮಂಡಿಯೂರಿ ಕುಳಿತರೆ ಒಂದು ಸುಂದರ ಭಂಗಿಯಾಗಬಹುದು!’ ಇಂಥ ದುಷ್ಕೃತ್ಯಗಳ ದೈತ್ಯರು ರಾಷ್ಟ್ರಪತಿಯಾಗಲಿಕ್ಕೆ ಅರ್ಹನೆಂದು ನಿಮಗೆ ಅನಿಸುವುದೇ?

ಹಿಲೆರಿ ಕ್ಲಿಂಟನ್‌ ತಮ್ಮ ಒಂದು ಪುಸ್ತಕದಲ್ಲಿ ಈತನ ಕುರಿತು ಹೀಗೆ ಬರೆಯುತ್ತಾರೆ, “ಆತನಿಗೆ ಹೆಂಗಸರನ್ನು ಕೀಳಾಗಿ ಕಾಣುವುದು ಹುಟ್ಟುಗುಣ. ಅದರಲ್ಲೂ ಚೆಲ್ಲು ಚೆಲ್ಲಾಗಿ ಆಡದೆ ಸಂಭಾವಿತರಂತೆ ಆತನ ಮುಂದೆ ನಡೆದುಕೊಳ್ಳುವವರನ್ನು ಬೇಕೆಂದೇ ಕೆಣಕುತ್ತಾ, ನಿಕೃಷ್ಟವಾಗಿ ವರ್ತಿಸುತ್ತಾನೆ. ನನ್ನನ್ನು ಹಲವು ಸಲ ಬೆದರಿಸಲು ಪ್ರಯತ್ನಿಸಿದ್ದಾನೆ!”

ತನ್ನ ಸಾರ್ವಜನಿಕ ಹಾಗೂ ಖಾಸಗಿ ಜೀವನದಲ್ಲೂ ಆತ ಸ್ಪಷ್ಟಪಡಿಸಿರುವುದು ಎಂದರೆ, ಹೆಂಗಸರು ಆತನ ಪಾಲಿಗೆ ಒಬ್ಬ ಮಾಮೂಲಿ ಮನುಷ್ಯರಲ್ಲ, ಬದಲಿಗೆ ಸೆಕ್ಸ್ ಗೊಂಬೆಗಳು ಮಾತ್ರ ಅಂತ! ಅದು ಎಲ್ಲಿಯವರೆಗೆ ಅಂದ್ರೆ, ಯಾವ ಹೆಂಗಸರನ್ನು ಆತ ಇಷ್ಟಪಡುತ್ತಾನೋ, ಹೊಗಳುತ್ತಾನೋ, ಅವರೂ ಸಹ ತಮ್ಮ ಅಂದಚೆಂದ ತೋರ್ಪಡಿಸಿಕೊಳ್ಳುವ ಗ್ಲಾಮರಸ್‌ ಗೊಂಬೆಗಳಷ್ಟೇ ಎಂಬುದನ್ನು ಖಾತ್ರಿಪಡಿಸಿಬಿಡುತ್ತಾನೆ.

ಈತ ತನ್ನ ವ್ಯವಹಾರಗಳನ್ನು ಕಛೇರಿ, ರೆಸಾರ್ಟ್ಸ್, ಟಿವಿ ಶೋಗಳಲ್ಲೂ ಸಹ ಭೇದಭಾವಪೂರ್ಣ ನೀತಿ ತೋರದೆ ಬಿಡಲಾರದಂಥ ದುರ್ಯೋಧನ, ದುಶ್ಶಾಸನ, ಕೀಚಕನೇ ಸರಿ. ಯಾವ ಹೆಂಗಸರು ಈತನಿಗೆ ಆಕರ್ಷಕವಾಗಿ ಕಂಡರೋ ಅವರನ್ನು ತೊಂದರೆಗೊಳಪಡಿಸುವುದು, ಯಾರು ಕುರೂಪಿಗಳಾಗಿ ಕಂಡರೋ, ಅಂಥವರನ್ನು ತನ್ನ ಪರಿಧಿಯ ಸಿಬ್ಬಂದಿಗೆ ಹೇಳಿ ಕೆಲಸ ಇಲ್ಲದಂತೆ ಮಾಡಿಬಿಡುತ್ತಾನೆ.

ಟ್ರಂಪ್‌ ತನ್ನ ಕಾರ್ಯ ಕಛೇರಿಗಳಲ್ಲಿ ಹೆಂಗಸರೊಂದಿಗೆ ನಡೆಸಿರುವ ದುರ್ವ್ಯವಹಾರ, ಭೇದಭಾವಗಳ ಕುರಿತಾಗಿ ದೊಡ್ಡ ರೆಕಾರ್ಡಿದೆ. ಆತನಿಗೆ ಯಾವ ಹೆಣ್ಣಾದರೂ ಇಷ್ಟ ಆಗಲಿಲ್ಲವೆಂದರೆ, ಅವರ ಬಾಡಿ ಶೇಮಿಂಗ್‌ ಮಾಡುವುದು ಈತನಿಗೊಂದು ಹವ್ಯಾಸ. ಅದೇ ಈತ ಯಾವ ಹೆಣ್ಣನ್ನಾದರೂ ಇಷ್ಟಪಟ್ಟರೆ, ಆಕೆಯನ್ನು ಸಿಕ್ಕಾಪಟ್ಟೆ ಹೊಗಳುತ್ತಾನೆ. ಅಂತೂ ಇಂತೂ ಕೆಲವರನ್ನಾದರೂ ಆದರಿಸಿದ್ದಾರೆಂದರೆ, ಅವರಿಂದ ಈತನಿಗೆ ಬೇಕಾದ ಕೆಲಸಗಳಾಗಿರುತ್ತವೆ ಎಂದೇ ಅರ್ಥ.

ಇಲಾನಾ ಟ್ರಂಪ್‌ (ಈತನ ಮೊದಲ ಪತ್ನಿ) ವಿಚ್ಛೇದನ ಪಡೆಯುವಾಗ ಹೇಳಿದ್ದೆಂದರೆ, ಈತ ಆಕೆಯನ್ನು ಎಷ್ಟೋ ಸಲ ಮಾನಭಂಗಕ್ಕೆ ಯತ್ನಿಸಿದ್ದ ಎಂದು! ಈತ ಒಂದು ಸಲ ತನ್ನ ಮಗಳು ಇಲಾಂಕಾಳ ಕುರಿತಾಗಿ, “ನನ್ನ ಮಗಳು ಇಲಾಂಕಾ 6 ಅಡಿ ಎತ್ತರ ಇದ್ದಾಳೆ, ಅವಳ ಬಾಡಿ ಮೈಕಟ್ಟು ಚೆನ್ನಾಗಿದೆ. ಮಾಡೆಲ್ ಆಗಿ ಚೆನ್ನಾಗಿ ಹಣ ಸಂಪಾದಿಸಿದ್ದಾಳೆ. ಅವಳೇನಾದರೂ ನನ್ನ ಮಗಳಾಗಿರದಿದ್ದರೆ, ನಾನು ಖಂಡಿತಾ ಅವಳೊಂದಿಗೆ ಡೇಟಿಂಗ್‌ ಗೆ ಹೋಗುತ್ತಿದ್ದೆ!”

ವಿರೋಧದ ನಡುವೆಚಳುವಳಿ

ಡೊನಾಲ್ಡ್ ಟ್ರಂಪ್‌ ಈ ಸಲ ಮತ್ತೆ ಅವಿರೋಧವಾಗಿ ಆಯ್ಕೆ ಆಗಿರುವುದರಿಂದ, ಮಹಿಳಾ ಹಕ್ಕು ಹಾಗೂ ಲೈಂಗಿಕ ಸಮಾನತೆ ಕುರಿತಾಗಿ ಮತ್ತೆ ಎಲ್ಲೆಲ್ಲೂ ಚರ್ಚೆಗಳು ಶುರುವಾಗಿವೆ. ಇದಕ್ಕೆ ಇಡೀ ಅಮೆರಿಕಾದಲ್ಲಿ `‌ಚಳುನಳಿ ‘ ಎಂಬ ಹೊಸ ಹೆಸರಿಡಲಾಗಿದೆ. ಮೂಲತಃ ದಕ್ಷಿಣ ಕೊರಿಯಾದಿಂದ ಹುಟ್ಟಿಬಂದ ಈ ‌ಚಳುವಳಿ. ದ. ಕೊರಿಯಾದಲ್ಲಿ ಎನ್ನಲು ಹೀಗೆ ಹೇಳುತ್ತಾ, ಅಲ್ಲಿನ ಕ್ರಾಂತಿಕಾರಿ ಹೆಂಗಸರು ಗಂಡಸರ ಜೊತೆ ಡೇಟಿಂಗ್‌, ಮದುವೆ, ಲೈಂಗಿಕ ಸಂಬಂಧ ನಿಷೇಧಿಸಿ, ಮಗು ಹೆರದೆ ಹಾಗೇ ಉಳಿಯಲು ಪ್ರೋತ್ಸಾಹ ನೀಡುವ ಚಳುವಳಿ ಆಗಿದೆ. ಇದನ್ನು ಅಮೆರಿಕಾದಲ್ಲಿ ಈ ವಿವಾದಾಸ್ಪದ ಚುನಾವಣೆಯ ನಂತರ, ತೆರೆದ ಮನದಿಂದ ಸ್ವಾಗತಿಸಲಾಗಿದೆ. ಇದರಲ್ಲಿ ಗರ್ಭಪಾತದ ಹಕ್ಕಿನಂಥ ಪ್ರಕರಣಗಳನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ಈ ಆಂದೋಲನದ ವಕ್ತಾರರ ತರ್ಕವೆಂದರೆ, ವಿಭಿನ್ನ ಸಾಮಾಜಿಕ ನೀತಿಗಳ ಕುರಿತಾಗಿ ಟ್ರಂಪ್‌ ರ ದೃಷ್ಟಿ, ಅದರಲ್ಲೂ ವಿಶೇಷವಾಗಿ ಅಬಾರ್ಶನ್‌ ಹಕ್ಕಿನ ಕುರಿತಾಗಿ ಆತನ ದೃಷ್ಟಿಕೋನ ಇತ್ಯಾದಿಗಳು ಅಲ್ಲಿನ ಹೆಂಗಸರು ಈತನ ವಿರುದ್ಧ ರೊಚ್ಚಿಗೆಬ್ಬಿಸಿದ್ದವು.

ಟ್ರಂಪ್‌ ಮತ್ತೆ ಆರಿಸಿ ಬಂದಿರುವುದರಿಂದ ಸೋಶಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್ ಗಳಲ್ಲಿ, ಅಲ್ಲಿನ ಹೆಂಗಸರು ‌ಬ್ಯಾನರ್‌ ಹಿಡಿದು ಹೋರಾಟ ನಡೆಸುತ್ತಾ, ಎಲ್ಲಿಡೆ ಮೀಡಿಯಾ ಪೋಸ್ಟ್ ಗಳಲ್ಲಿ ರಾರಾಜಿಸುತ್ತಾರೆ. ಈ ಮೂಲಕ ಅನೇಕ ಹೆಂಗಸರು ಚಳುವಳಿ ಸಮರ್ಥಿಸುತ್ತಾ, ಗಂಡಸರೊಂದಿಗೆ ಸಂಬಂಧ ಹೊಂದುವುದನ್ನು ವಿರೋಧಿಸುವ ರಾಲಿ ನಡೆಸುತ್ತಿದ್ದಾರೆ. ಈ ಚಳುವಳಿಯ ಸಾರಾಂಶ ಎಂದರೆ, ಗಂಡಸರು ಹೆಂಗಸರ ದೈಹಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಬಯಸಿದರೆ, ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂಬುದು ಅವರ ನಿಲುವು.

ಜಿ. ಪಂಕಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ