ಗಾಢ ಕಪ್ಪು ಬಣ್ಣದ ಕಲೆಗಳಂತೆ ಕಂಡುಬರುವ ಈ ಆ್ಯಕ್ನೆ ಸ್ಕಾರ್ಸ್ ನ್ನು ಜಡದಿಂದ ಮೂಲಭೂತವಾಗಿ ನಿವಾರಿಸಿಕೊಳ್ಳುವುದು ಹೇಗೆ ಎಂದು ವಿವರವಾಗಿ ತಿಳಿಯೋಣವೇ….?
ನಮ್ಮ ತರುಣಿಯರು ಹೊರಗಿನ ಓಡಾಟದ ಕೆಲಸಗಳಲ್ಲಿ ಸದಾ ಬಿರುಬಿಸಿಲು, ಧೂಳುಮಣ್ಣು, ಸ್ಟ್ರೆಸ್, ಹಾರ್ಮೋನ್ ಇಂಬ್ಯಾಲೆನ್ಸ್ ಇತ್ಯಾದಿಗಳಿಗೆ ಗುರಿಯಾಗುತ್ತಿರುತ್ತಾರೆ. ಇದರಿಂದ ಆ್ಯಕ್ನೆ, ಮೊಡವೆಗಳ ಗೋಳು ತಪ್ಪಿದ್ದಲ್ಲ. ಹಾಗಾಗಿ ಚರ್ಮದ ರೋಮರಂಧ್ರಗಳು ಕ್ಲೋಸ್ ಆಗಿಹೋಗುತ್ತವೆ. ಆ್ಯಕ್ನೆ ಮೊಡವೆಗಳು ಚರ್ಮದ ಪದರಗಳ ಒಳಗೆ ಆಳವಾಗಿ ಇಳಿಯಬಲ್ಲದು. ಇದು ಒಡೆದುಹೋದ ನಂತರ, ಕೊಲೋಜೆನ್ ಆ ಭಾಗದಲ್ಲಿ ಹನಿಗೂಡಲು ಟ್ರಿಗರ್ ಆಗುತ್ತದೆ. ಈ ಕಾರಣದಿಂದ ಆ್ಯಕ್ನೆ ಮೊಡವೆಗಳು ಮುಖದ ಆ ಭಾಗದಲ್ಲಿ ಕಲೆ ಉಳಿಸಿಬಿಡುತ್ತವೆ. ಇದನ್ನೇ ಆ್ಯಕ್ನೆ ಸ್ಕಾರ್ ಎನ್ನುತ್ತೇವೆ.
ಇಂಥ ಬ್ರೇಕ್ ಔಟ್ ನಂತರ ಮುಖದಲ್ಲಿ ಉಳಿಯುವ ಸ್ಕಾರ್ಸ್ ನ್ನು ತೊಲಗಿಸುವುದು ನಿಜಕ್ಕೂ ದೊಡ್ಡ ಸಮಸ್ಯೆಯೇ ಸರಿ. ಗಾಢ ಕಪ್ಪು ಬಣ್ಣದ ಕಲೆಗಳಂತೆ ಕಂಡುಬರುವ ಈ ಆ್ಯಕ್ನೆ ಸ್ಕಾರ್ಸ್, ತರುಣಿಯರನ್ನು ಬಲು ಹಿಂಸಿಸುತ್ತವೆ.
ಇಂಥ ಕಲೆಗಳು ಹಲವು ತಿಂಗಳಾದರೂ ಹೋಗೋದಿಲ್ಲ. ಸಾಮಾನ್ಯವಾಗಿ ಎಷ್ಟೋ ಬಗೆಯ ಮೊಡವೆಗಳ ಕಲೆಗಳು ತಮಗೆ ತಾವೇ ದೂರಾಗುವುದಿಲ್ಲ. ಹೀಗಿರುವಾಗ, ನಾವು ಹಲವಾರು ಬಗೆಯ ಕಾಸ್ಮೆಟಿಕ್ ಪ್ರಾಡಕ್ಟ್ಸ್ ಕೊಳ್ಳಬೇಕಾಗುತ್ತದೆ. ಅದರಲ್ಲೂ ಆ್ಯಕ್ನೆ ಸ್ಕಾರ್ಸ್ ನ್ನು ತೊಲಗಿಸಲು ಈ ಕೆಳಗಿನ ವಿಧಾನ ಅನುಸರಿಸಿ :
ಗ್ಲೈಕೋಲಿಕ್ ಆ್ಯಸಿಡ್
ಇದು ಒಂದು ಬಗೆಯ ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್ ಆಗಿದೆ. ಇದನ್ನು ಆಹಾರ ಪದಾರ್ಥಗಳಿಂದಲೂ ನಾವು ಪಡೆಯಬಹುದು. ಇದು ನಮ್ಮ ಚರ್ಮದ ಮೃತ ಕೋಶಗಳ ಮೇಲ್ಪದರ ತೊಲಗಿಸುವಲ್ಲಿ ಅತಿ ಕ್ರಿಯಾಶೀಲವಾಗಿದೆ. ಇದನ್ನು ಆ್ಯಕ್ನೆ, ಮೊಡವೆ, ಇವೆರಡರ ಕಲೆ, ಮುಖದಲ್ಲಿನ ಕಪ್ಪು ಉಂಗುರ ಇತ್ಯಾದಿ ನಿವಾರಿಸಲು ಬಳಸಬಹುದು. ಇದನ್ನು ಹಲವು ದೈನಿಕ ಫೇಸ್ ಕ್ಲೆನ್ಸರ್, ಸೀರಮ್ ಯಾ ಸ್ಪಾಟ್ ಟ್ರೀಟ್ ಮೆಂಟ್ ಕ್ರೀಮುಗಳಲ್ಲಿ ಬಳಸುತ್ತಾರೆ. ಅಧಿಕವಾಗಿ ಪೀಲ್ ಆಫ್ ಮಾಸ್ಕ್ ನಲ್ಲೂ ಈ ಆ್ಯಸಿಡ್ ಲಭ್ಯವಿದೆ. ಸ್ಕಾರ್ಸ್ ದೂರಗೊಳಿಸಲು ನಾವು ಇದನ್ನು ಬಳಸಬಹುದು. ಇದರಿಂದ ನಮಗೆ ಎಷ್ಟೋ ಲಾಭವಿದೆ.
ಸ್ಯಾಲಿಸಿಲಿಕ್ ಆ್ಯಸಿಡ್
ಇದು ಒಂದು ಶಕ್ತಿಶಾಲಿ ಎಕ್ಸ್ ಫಾಲಿಯೆಂಟ್ ಆಗಿದೆ. ಇದು ಆ್ಯಕ್ನೆ, ಮೊಡವೆಗಳ ಗುರುತಿನ ಕಲೆಗಳನ್ನು ನಿವಾರಿಸುವಲ್ಲಿ ಬಲು ಸಹಾಯಕ. ಇದರ ಬಳಕೆಯಿಂದ ಡೆಡ್ ಸೆಲ್ಸ್ ನಡುವಿನ ಬಂಧವನ್ನು ಮುರಿಯುತ್ತದೆ. ಹೀಗಾಗಿ ಅವು ಸುಲಭವಾಗಿ ತೊಲಗುತ್ತವೆ. ಇದರಿಂದ ಹೊಸ ಚರ್ಮ ಮೂಡಲು ಅನುವಾಗುತ್ತದೆ. ಸ್ಕಿನ್ ಪೋರ್ಸ್ ಕ್ಲೋಸ್ ಆಗದಂತೆ, ಎಕ್ಸ್ ಫಾಲಿಯೇಶನ್ ಅದನ್ನು ತಡೆಯುತ್ತದೆ, ಆ ಕಾರಣದಿಂದ ಮೊಡವೆಗಳು ಉಂಟಾಗುವುದು. ಇದರ ಬಳಕೆ ಆಯ್ಲಿ ಸ್ಕಿನ್ ಗೆ ಬಲು ಹಿತಕಾರಿ.
ಆ್ಯಕ್ನೆ ಮೊಡವೆಗಳ ಗುರುತು
ಕಲೆಯ ನಿವಾರಣೆಗಾಗಿ ಈ ಆ್ಯಸಿಡ್, ಅತ್ಯುತ್ತಮ ಪೀಲಿಂಗ್ ಏಜೆಂಟ್ ಗಳಲ್ಲಿ ಒಂದು ಎನಿಸಿದೆ. ಇದು ಮೊಡವೆಯ ಊತ, ರೆಡ್ ನೆಸ್ ತೊಲಗಿಸಿ, ಕ್ಲೋಸ್ಡ್ ಪೋರ್ಸ್ ನ್ನು ತೆರೆಸಿ, ಮೊಡವೆಗಳ ಗುರುತು ಸಿಗದಂತೆ ಮಾಡಬಲ್ಲದು! ಇದರ ಬಳಕೆಯಿಂದ ಡಲ್ ಸೆಲ್ಸ್ ಸಾಫ್ಟ್ ಲೂಸ್ ಆಗಿ, ಉದುರುತ್ತವೆ. ಹೀಗಾಗಿ ಗುರುತಿನ ಕಲೆ ತಂತಾನೇ ಹೋಗಿಬಿಡುತ್ತದೆ.
ಲ್ಯಾಕ್ಟಿಕ್ ಆ್ಯಸಿಡ್
ಇದೂ ಸಹ ಒಂದು ಆಮ್ಲವಾಗಿದ್ದು, ಇದರ ಬಳಕೆಯಿಂದ, ಕಠಿಣಕರ ಸೆಲ್ಸ್ ಸಹ ಸೆಪರೇಟ್ ಆಗುತ್ತವೆ, ಹೀಗೆ ಹೊಪ್ಪಳವಾಗಿ ಅದು ಉದುರಲು ಸಹಾಯ ಮಾಡುತ್ತದೆ.
ಹೀಗೆ ಚರ್ಮದ ಡೆಡ್ ಸೆಲ್ಸ್ ಇಂಥ ಸಂಪರ್ಕ ಹೊಂದಿದಾಗ, ಡೆಡ್ ಸೆಲ್ಸ್ ನ ಅತಿ ಹೊರಪದರ ತಂತಾನೇ ಕಳಚಿಬೀಳಲು ನೆರವಾಗುತ್ತದೆ. ಈ ರೀತಿ ಚರ್ಮದ ರಚನೆ ತಂತಾನೇ ಸುಧಾರಿಸುತ್ತದೆ. ಇದರ ಹೊರ ಪದರಗಳು ಹೀಗೆ ಶುಭ್ರಗೊಳ್ಳುತ್ತವೆ. ಈ ಆಮ್ಲ ಚರ್ಮದ ಹೊರಭಾಗದಲ್ಲಿ ಉತ್ತಮ ಎಕ್ಸ್ ಫಾಲಿಯೇಟರ್ ಆಗಿ ಕೆಲಸ ಮಾಡುತ್ತದೆ.
ಇದು ಡೆಡ್ ಸ್ಕಿನ್‌ನಿವಾರಿಸಿ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಸಂಪೂರ್ಣ ಮುಕ್ತಿ ಕೊಡುತ್ತದೆ. ಕಲೆರಹಿತ, ಕೋಮಲ ಚರ್ಮಕ್ಕಾಗಿ ನಾವು ಈ ಸ್ಕಿನ್ ಕೇರ್ ಆ್ಯಸಿಡನ್ನು ಬಳಸಿಕೊಳ್ಳಬಹುದು. ಇದು ಮುಖದಲ್ಲಿನ ಕಲೆಗಳನ್ನು ಸಂಪೂರ್ಣವಾಗಿ ತೊಲಗಿಸುವಲ್ಲಿಯೂ ಸಹಕಾರಿ.
ನಮ್ಮ ಚರ್ಮತಜ್ಞರು ಆಗಾಗ ವಿಟಮಿನ್ ಸಿ ಬಳಸಲು ಸಲಹೆ ನೀಡುತ್ತಿರುತ್ತಾರೆ. SPF 30-50 ಇರುವಂಥ ಲೋಶನ್ಸ್ ಬಳಸುವುದರಿಂದ, ಹಳೆಯ ಆ್ಯಕ್ನೆ ಸ್ಕಾರ್ಸ್ ಸಂಪೂರ್ಣ ನಿವಾರಣೆಯಾಗುತ್ತದೆ.
ಎಚ್ಚರಿಕೆ
ಮೇಲಿನ ಈ ಎಲ್ಲಾ ಅಂಶಗಳೂ, ಸೆಲಟರ್ನ್ ಓವರ್ ಹೆಚ್ಚಿಸುವಲ್ಲಿ ಪೂರಕ. ಅದರಲ್ಲೂ ಮುಖ್ಯವಾಗಿ ನಮ್ಮ ಚರ್ಮ ಸನ್ ಬರ್ನ್ಸ್ ಗೆ ಅತ್ಯಧಿಕ ಸಂವೇದನಾಶೀಲ ಆದಾಗ, ಮೇಲಿನ ಈ ಎಲ್ಲಾ ಎಚ್ಚರಿಕೆಗಳನ್ನೂ ನಾವು ಕಡ್ಡಾಯ ತೆಗೆದುಕೊಳ್ಳಲೇಬೇಕು.
– ಕೆ. ಚಂದ್ರಕಲಾ





