ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮೃತ ಮಕ್ಕಳನ್ನು ನಗನೂರಿನ ರಾಜೀವ್ ಬಾಲಪ್ಪ ಅವರ ಮಕ್ಕಳಾದ ಶರತ್(6), ಹನುಮೇಶ್(7), ಮಲ್ಲಪ್ಪ ಬಾಲಪ್ಪ ಅವರ ಪುತ್ರ ಕಿರಣ್​​​(6) ಹಾಗೂ ರಾಜೀವ್ ಅವರ ಸಹೋದರಿ ಗುಬ್ಬಮ್ಮ ಅವರ ಪುತ್ರಿ ಬಸಮ್ಮ(11) ಎನ್ನಲಾಗಿದೆ.

ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ.

ರೈತರ ಅನುಕೂಲಕ್ಕಾಗಿ ನಿರ್ಮಿಸಿದ್ದ ಈ ಕೃಷಿ ಹೊಂಡವು ರಕ್ಷಣಾ ಬೇಲಿ ಇಲ್ಲದೆ ಎಳೆಯ ಕಂದಮ್ಮಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ನಾಲ್ವರು ಮಕ್ಕಳು ಜಲಸಮಾಧಿಯಾದ ವಿಷಯ ತಿಳಿದು ಪೋಷಕರು ಮತ್ತು ಸಂಬಂಧಿಕರಿಗೆ ಆಕ್ರಂದನ ಮುಗಿಲು ಮುಟ್ಟಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ