ಈ ಉರಿ ಬೇಸಿಗೆಯ ದಿನಗಳಲ್ಲಿ ಹೆಂಗಸರು ತಮ್ಮ ಚರ್ಮದ ಆರೈಕೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಗಮನಿಸೋಣವೇ….?
ಧೂಳು, ಕೊಳೆ, ಸನ್ ಬರ್ನ್, ಟ್ಯಾನಿಂಗ್ ಇತ್ಯಾದಿ ಅನೇಕ ಸಮಸ್ಯೆಗಳು ಬೇಸಿಗೆಯಲ್ಲಿ ಎಲ್ಲರನ್ನೂ ಕಾಡುತ್ತದೆ. ಯಾವ ವಯಸ್ಸಿನವರೇ ಆಗಲಿ, ಇಂಥ ಸೀಸನ್ ನಲ್ಲಿ ತಮ್ಮ ಚರ್ಮದ ಆರೈಕೆಯ ಕಡೆಗೆ 100% ಗಮನ ಹರಿಸಲೇಬೇಕು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಪ್ರಾಡಕ್ಟ್ಸ್ ಲಭ್ಯ. ಇದನ್ನೆಲ್ಲ ನಮ್ಮ ಡೇಲಿ ರೊಟೀನ್ ನಲ್ಲಿ ಬಳಸಿಕೊಳ್ಳುತ್ತಾ, ಮುಖದಲ್ಲಿ ಒಂದು ನವೀನ ಬಗೆಯ ನಳನಳಿಸುವ ಲವಲವಿಕೆ ತರಬಹುದು. ಈ ಪ್ರಾಡಕ್ಟ್ಸ್ ಯಾವುವು ಎಂದು ವಿವರ ತಿಳಿಯೋಣವೇ….?
ಬೆಸ್ಟ್ ಕ್ಲೆನ್ಸಿಂಗ್ ಬ್ರಾಂಡ್ಸ್ ಬಯೋಟಿಕ್ ಬಯೋ ಬೆರಿಬೆರಿಯ ಹೈಡ್ರೇಟಿಂಗ್ ಕ್ಲೆನ್ಸರ್ : ಇದರಿಂದ ನಮ್ಮ ಚರ್ಮ ಹೊಳೆ ಹೊಳೆಯುವ, ಸ್ವಚ್ಛ, ಶುಭ್ರ, ಮೃದು, ಕೋಮಲ ಗುಣ ಹೊಂದುತ್ತದೆ. ಇದರ ಬೆಲೆ ರೂ.300, ಇದರಲ್ಲಿ 120 ಎಂಎಲ್ ಕ್ಲೆನ್ಸರ್ ಇರುತ್ತದೆ.
ಪ್ಲಮ್ ಕ್ಲೆನ್ಸಿಂಗ್ ಲೋಶನ್ : ಈ ಕ್ಲೆನ್ಸಿಂಗ್ ಲೋಶನ್ ನಿಂದ ಚರ್ಮ ಹೆಚ್ಚಿನ ಹೊಳಪು ಗಳಿಸುತ್ತದೆ. ಇದರಿಂದ ನಮ್ಮ ಚರ್ಮ ಎಷ್ಟೋ ಮೃದುವಾಗುತ್ತದೆ. ಇದರಿಂದ ನಮ್ಮ ಚರ್ಮ ಹೆಚ್ಚಿನ ಪೋಷಣೆ ಪಡೆಯುತ್ತದೆ. ಇದರ 200 ಎಂಎಲ್ ಶೀಶೆಯ ಬೆಲೆ ಸುಮಾರು ರೂ.400 ಆಗುತ್ತದೆ.
ಸ್ಯಾಂಡಲ್ ಕ್ಲೆನ್ಸಿಂಗ್ ಮಿಲ್ಕ್ : ಇದು ನಮ್ಮ ಚರ್ಮದ ಕೊಳಕನ್ನು ಸಂಪೂರ್ಣ ತೊಲಗಿಸಿ, ಅದನ್ನು ಆಯಿಲ್ ಫ್ರೀಗೊಳಿಸಲು ಬಹಳಷ್ಟು ನೆರವಾಗುತ್ತದೆ. ಇದರ ಬೆಲೆ ಸುಮಾರು ರೂ. 300.
ಆಕ್ಸಿಗ್ಲೋ ಆ್ಯಲೋವೆರಾ ಕ್ಲೆನ್ಸಿಂಗ್ ಮಿಲ್ಕ್ : ಇದು ಸಹ ಬೆಸ್ಟ್ ಕ್ಲೆನ್ಸರ್ ಗಳ ಪಟ್ಟಿಗೆ ಸೇರುತ್ತದೆ. ಇದು ಸಿಟ್ರಸ್ ಆ್ಯಲೋವೆರಾಗಳ ಅತ್ಯುತ್ತಮ ಸಂಗಮವಾಗಿ ರೂಪುಗೊಂಡಿದೆ. ಆ್ಯಲೋವೆರಾದಿಂದ ಚರ್ಮ ಉತ್ತಮವಾಗಿ ಮಾಯಿಶ್ಚರೈಸ್ ಗೊಂಡು ಸಾಫ್ಟ್ ಆಗುತ್ತದೆ. ಸಿಟ್ರಸ್ ಚರ್ಮದ ಆಳಕ್ಕೆ ಇಳಿದು ಆಂತರಿಕ ಭಾಗದಲ್ಲೂ ಕ್ಲೆನ್ಸಿಂಗ್ ಮಾಡುತ್ತದೆ. ಇದರ 120 ಎಂಎಲ್ ನ ಶೀಶೆಯ ಬೆಲೆ ಸುಮಾರು ರೂ. 200.
ಲೋರಿಯ್ ಪ್ಯಾರಿಸ್ ಗ್ಲೈಕಾಲಿಕ್ ಬ್ರೈಟ್ ಫೇಸ್ ಕ್ಲೆನ್ಸರ್ : ಇದನ್ನು ನಿಯಮಿತವಾಗಿ ಬಳಸುತ್ತಾ ಚರ್ಮವನ್ನು ಬ್ರೈಟ್, ಗ್ಲೋಯಿಂಗ್ ಹಾಗೂ ಹೆಲ್ದಿ ಮಾಡಿಕೊಳ್ಳಬಹುದು. ಇದು ಚರ್ಮವನ್ನು ಡೀಪ್ ಕ್ಲೆನ್ಸಿಂಗ್ ಮಾಡಿ, ಡಾರ್ಕ್ ಸ್ಪಾಟ್ಸ್ ನ್ನು ತಗ್ಗಿಸುತ್ತದೆ. ಇದು ಮೊಡಲೆ, ಆ್ಯಕ್ನೆಗಳಂಥ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇದರ 100 ಎಂಎಲ್ ಶೀಶೆಗೆ ಬೆಲೆ ಸುಮಾರು ರೂ. 400.
ಇದರ ಹೊರತಾಗಿಯೂ ನಿಮಗೆ ಮಾರುಕಟ್ಟೆಯಲ್ಲಿ ಇನ್ನಷ್ಟು ಉತ್ತಮವಾದ, ದುಬಾರಿ ಪ್ರಾಡಕ್ಟ್ಸ್ ಸಹ ಲಭ್ಯ.
ಮಾಯಿಶ್ಚರೈಸರ್ ಪಾಂಡ್ಸ್ ಸೂಪರ್ ವೈಟ್ ಜೆಲ್ ಮಾಯಿಶ್ಚರೈಸರ್ : ಇದರಲ್ಲಿ ನಾನ್ ಆಯ್ಲಿ ಜೆಲ್ ಫಾರ್ಮುಲಾ ಇದೆ. ಇದು ಲೈಟ್ ವೆಯ್ಟ್ ಸಹ ಹೌದು. ಇದು ಚರ್ಮವನ್ನು 24 ಗಂಟೆ ಕಾಲ ಮಾಯಿಶ್ಚರೈಸ್ಡ್ ಆಗಿ ಇಡುತ್ತದೆ. ಇದರ ಬೆಲೆ ಸುಮಾರು ರೂ. 200.
ನ್ಯೂಟ್ರೊಜೆಲಾ ಆಯಿಲ್ ಫ್ರೀ ಫೇಶಿಯಲ್ ಮಾಯಿಶ್ಚರೈಸರ್ : ಇದು 100% ಆಲ್ಕೋಹಾಲ್ ಫ್ರೀ ಹಾಗೂ ಅಲರ್ಜಿ ಟೆಸ್ಟೆಡ್. ಇದರ ಬೆಲೆ ಸುಮಾರು ರೂ. 400.
ಬೋಟಿಕ್ ಬಯೋ ಮಾರ್ನಿಂಗ್ ಸೆಕ್ಟರ್ ಸನ್ ಸ್ಕ್ರೀನ್ ಅಲ್ಟ್ರಾ ಸ್ಮೂದಿಂಗ್ ಫೇಸ್ ಲೋಶನ್ : ಈ ಲೋಶನ್ 30 SPF ಹೊಂದಿದೆ. ಇದು ಅಪ್ಪಟ ನೈಸರ್ಗಿಕ. ಇದು ಬಲು ಅಚ್ಚುಕಟ್ಟಾಗಿ ಸನ್ ಸ್ಕ್ರೀನ್ ಕೆಲಸವನ್ನು ನಿಭಾಯಿಸುತ್ತದೆ. ಇದರ 120 ಎಂಎಲ್ ಶೀಶೆಯ ಬೆಲೆ ರೂ.200.

ಲ್ಯಾಕ್ಮೆ ಪೀಚ್ ಮಿಲ್ಕ್ ಮಾಯಿಶ್ಚರೈಸರ್ : ಇದು ಬಲು ಲೈಟ್ ಆದುದು. ಇದು 24 SPF ಹೊಂದಿದೆ. ಈ ಮಾಯಿಶ್ಚರೈಸರ್ ಚರ್ಮದಲ್ಲಿ ಬಲು ಬೇಗ ವಿಲೀನಗೊಳ್ಳುತ್ತದೆ. ಇದನ್ನು ಹಚ್ಚಿಕೊಂಡ 12 ಗಂಟೆಗಳವರೆಗೂ ನೀವು ಮತ್ತೆ ಎರಡನೇ ಸಲ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕಾದ ಅಗತ್ಯವಿಲ್ಲ.
ಇವಿಷ್ಟು ಮಾತ್ರವಲ್ಲದೆ, ಇನ್ನೂ ಅನೇಕ ಬಗೆಯ ಮಾಯಿಶ್ಚರೈಸರ್ ಗಳು ಮಾರುಕಟ್ಟೆಯಲ್ಲಿ ಲಭ್ಯ.
ಸನ್ ಸ್ಕ್ರೀನ್ ಬ್ರಿಟನ್ UV ಡಾಕ್ಸ್ ಸನ್ ಸ್ಕ್ರೀನ್ ಲೋಶನ್ : ಇದು ನಿಮ್ಮನ್ನು ಸೂರ್ಯನ UVA/ UVB ಕಿರಣಗಳಿಂದ ರಕ್ಷಿಸುತ್ತದೆ. ಇದರ ಬೆಲೆ ಕೇವಲ ರೂ.1200 ಮಾತ್ರ.
ನ್ಯೂಟ್ರೊಜೆಲಾ ಅ್ಟ್ರಾ ಶಿಮರ್ ಡ್ರೈಟಚ್ ಸನ್ ಬ್ಲಾಕ್ : ಇದು 50 SPF ಹೊಂದಿದೆ. ಈ ಸನ್ ಸ್ಕ್ರೀನ್ ನಲ್ಲಿ ಡ್ರೈಟಚ್ ಫೀಚರ್, ಒಂದು ಮ್ಯಾಟ್ ಫಿನಿಶ್ ನೀಡುತ್ತದೆ. ಚರ್ಮದ ಮೇಲೆ ಏರುತ್ತಿರುವ ವಯಸ್ಸಿನ ದುಷ್ಪರಿಣಾಮಗಳನ್ನು ತಡೆದು, ಬಿರು ಬಿಸಿಲಿನಿಂದ ಆಗುವ ಹಾನಿಯನ್ನೂ ಇದು ತಡೆಗಟ್ಟಬಲ್ಲದು. ಇದರ ಬೆಲೆ ಸುಮಾರು ರೂ.400.
ಲಾ ಶೀಲ್ಡ್ ಸನ್ ಸ್ಕ್ರೀನ್ ಜೆಲ್ : ಇದು ಜೆಲ್ ಬೇಸ್ಡ್ ಸನ್ ಸ್ಕ್ರೀನ್. ಇದರಲ್ಲಿ ಸೂರ್ಯನ UVA/UVB ಕಿರಣಗಳ ವಿರುದ್ಧ ಹೋರಾಡಿ, ಹಾನಿ ಆಗದಂತೆ ರಕ್ಷಣೆ ಕೊಡಿಸುತ್ತದೆ.
ಮಾಮಾ ಅರ್ಥ್ ಹೈಡ್ರೋಜೆಲ್ ಇಂಡಿಯನ್ ಸನ್ ಸ್ಕ್ರೀನ್ : ಇದು 50 SPF ಅಂಶದಿಂದ ಕೂಡಿದೆ. ಇದರ ಜೆಲ್ ಬೇಸ್ಡ್ ಫಾರ್ಮುಲಾ ಅತ್ಯುತ್ತಮ ಪರಿಣಾಮ ನೀಡುತ್ತದೆ. ಇದು ಚರ್ಮವನ್ನು ಉನ್ನತವಾಗಿ ಹೈಡ್ರೇಟ್ ಗೊಳಿಸುತ್ತದೆ. ಇದರ ಬೆಲೆ ಸುಮಾರು ರೂ. 500.
ಇದರ ಹೊರತಾಗಿಯೂ ಮಾರುಕಟ್ಟೆಯಲ್ಲಿ ಹಲವು ಬಗೆಯ ಅತ್ಯುತ್ತಮ, ದುಬಾರಿ ಸನ್ ಸ್ಕ್ರೀನ್ ಲಭ್ಯ.
ಈ ಎಲ್ಲಾ ಉತ್ಕೃಷ್ಟ ಬ್ಯೂಟಿ ಪ್ರಾಡಕ್ಟ್ಸ್ ಯಾವುದೇ ಮೆಡಿಕಲ್/ಕಾಸ್ಮೆಟಿಕ್ ಸ್ಟೋರ್ ಗಳಲ್ಲಿ ಸುಲಭ ಲಭ್ಯ. ಜೊತೆಗಿವೆ ಇದು ಆನ್ ಲೈನ್ ನಲ್ಲಿಯೂ ಸಿಗುತ್ತದೆ.
– ಜಿ. ಪ್ರಿಯಾಂಕಾ





