ಶುಷ್ಕ, ನಿರ್ಜೀವ, ಸತತ ಉದುರುತ್ತಿರುವ ತಲೆಗೂದಲಿನಿಂದ ನೀವು ಟೆನ್ಶನ್ ಗೆ ಒಳಗಾಗಿದ್ದೀರಾ? ಹಾಗಿದ್ದರೆ ಈಗ ನಿಮ್ಮ ಕೂದಲಿಗೆ ಪ್ರೋಟೀನ್ ಟ್ರೀಟ್ ಮೆಂಟ್ ಅತ್ಯಗತ್ಯ....
ನಮ್ಮ ಕೂದಲಿನ 95% ಭಾಗ ಕೆರಾಟಿನ್ ಎಂಬ ಪ್ರೋಟೀನ್ ನಿಂದ ರೂಪುಗೊಂಡಿದೆ. ಈ ಪ್ರೋಟೀನ್ ಕೂದಲಿನ ಕ್ಯುಟಿಕಲ್ಸ್ ನ್ನು ಎಲ್ಲಾ ಕಡೆಯಿಂದಲೂ ಕವರ್ ಮಾಡಿ, ಒಂದು ಸುರಕ್ಷಾತ್ಮಕ ಪದರವಾಗಿ ಕಾಪಾಡುತ್ತದೆ, ಕೂದಲಿನ ಆರ್ದ್ರತೆಯನ್ನೂ ಉಳಿಸಿಕೊಡುತ್ತದೆ. ನಮ್ಮ ದೇಹದಲ್ಲಿ ಪ್ರೋಟೀನಿನ ಕೊರತೆ ಉಂಟಾದಾಗ ಯಾವ ರಾಸಾಯನಿಕ ಆರೈಕೆಯ ಅತ್ಯಧಿಕ ಬಳಕೆಯಾದಾಗ, ಕೂದಲು ಹೀಗೆ ಅಸ್ವಸ್ಥಗೊಂಡು, ನಿರ್ಜೀವವಾಗುತ್ತದೆ, ಕ್ರಮೇಣ ತನ್ನ ಸೌಂದರ್ಯ ಕಳೆದುಕೊಳ್ಳುತ್ತದೆ. ಇದರಿಂದಾಗಿ ಕೂದಲು ಬಲು ಡ್ರೈ ಆಗಿ, ಸತತ ಉದುರ ತೊಡಗುತ್ತದೆ. ಪ್ರೋಟೀನ್ ಟ್ರೀಟ್ ಮೆಂಟ್ ನಮ್ಮ ಕೂದಲಿಗೆ ಹೈಡ್ರೊಲೈಸ್ಡ್ ಪ್ರೋಟೀನ್ ಜೋಡಿಸುತ್ತದೆ ಹಾಗೂ ಮುಂದೆ ಕೂದಲಿಗೆ ಹಾನಿ ಆಗದಂತೆ ಕ್ಯುಟಿಕಲ್ಸ್ ನ ರಿಪೇರಿ ಮಾಡುತ್ತದೆ.
ಪ್ರೋಟೀನ್ ಟ್ರೀಟ್ ಮೆಂಟ್ ಅನೇಕ ವಿಧಗಳಲ್ಲಿ ಆಗುತ್ತದೆ. ಸೆಲೂನಿಗೆ ಹೋಗಿ ನೀವು ಕೂದಲಿಗಾಗಿ ಸಿಸ್ಟೇನ್/ಕೆರಾಟಿನ್ ಪ್ರೋಟೀನ್ ಟ್ರೀಟ್ ಮೆಂಟ್ ಪಡೆಯಬಹುದು ಅಥವಾ ಮನೆಯಲ್ಲೇ ಪ್ರೋಟೀನ್ ಹೇರ್ ಮಾಸ್ಕ್ ನಂಥ ಪ್ರೋಟೀನ್ ಆರೈಕೆ ಮಾಡಿಕೊಳ್ಳಬಹುದು. ಮನೆಮದ್ದಿಗಾಗಿ ಪ್ರತಿದಿನ ಸೂಕ್ತ ಪ್ರಮಾಣದ ಪ್ರೋಟೀನ್ ಸೇವನೆಯೂ ಅತಿ ಮುಖ್ಯ. ಇದರಿಂದ ನಿಮ್ಮ ಕೂದಲು ಸಶಕ್ತ, ಸ್ವಸ್ಥ ಆಗುತ್ತದೆ.
ಇದರ ಕುರಿತಾಗಿ ತಜ್ಞರು ಹೇಳುವುದೆಂದರೆ, ಕೆರಾಟಿನ್ ಟ್ರೀಟ್ ಮೆಂಟ್ ನಲ್ಲಿ ಕೂದಲಿನ ಒಳಭಾಗದಲ್ಲಿ ಬಾಂಡ್ ಸ್ಟ್ರಕ್ಚರ್ ನಲ್ಲಿ ಬದಲಾವಣೆ ತರಲು, ಕಡಿಮೆ ಪಿಂನ ಪ್ರೀಕರ್ಸರ್ ನಿಂದ ಹೇರ್ ಕ್ಯುಟಿಕ್ಸ್ ನ್ನು ಓಪನ್ ಮಾಡಬೇಕಾದುದು ಅನಿವಾರ್ಯ. ಕೆರಾಟಿನ್ ಟ್ರೀಟ್ ಮೆಂಟ್ ಕೂದಲನ್ನು ಸ್ವಸ್ಥವಾಗಿಸಲು ಡೈಸಲ್ಫೈಡ್ ಬಾಂಡ್ ನ್ನು ಮುರಿಯುತ್ತದೆ. ಇದು ತುಸು ಕ್ಲಿಷ್ಟಕರವಾದ ಬಾಂಡ್ ಬ್ರೇಕಿಂಗ್ ಆಗಿದೆ. ಹೀಗಾಗಿ ಇದರ ಪರಿಣಾಮ ಸಾಮಾನ್ಯವಾಗಿ 4-6 ತಿಂಗಳವರೆಗೂ ಉಳಿಯುತ್ತದೆ. ಆದರೆ ಸಿಸ್ಟೇನ್ ಟ್ರೀಟ್ ಮೆಂಟ್ ಡೈಸಲ್ಫೈಡ್ ಬಾಂಡ್ ನ್ನು ಪೂರ್ತಿ ಮುರಿಯದೆಯೇ, ಬಾಂಡ್ ನ್ನು ಮತ್ತೆ ವ್ಯವಸ್ಥಿತಗೊಳಿಸುತ್ತದೆ.
ಯಾರ ತಲೆಯ ನೆತ್ತಿ (ಸ್ಕಾಲ್ಪ್) ಭಾಗದ ಚರ್ಮ ಅತಿ ಸಂವೇದನಾಶೀಲ ಆಗಿರುತ್ತದೋ, ಅಲರ್ಜಿ ಇರುತ್ತದೋ, ಆಸ್ತಮಾದಂಥ ಉಸಿರಾಟದ ರೋಗವಿರುತ್ತದೋ, ಗರ್ಭವತಿ ಆಗಿದ್ದರೆ, ಸ್ತನ್ಯಪಾನ ಮಾಡಿಸುತ್ತಿದ್ದರೆ ಅಂಥವರಿಗೆ ವಿಶೇಷವಾಗಿ ಸಿಸ್ಟೇನ್ ಟ್ರೀಟ್ ಮೆಂಟ್ ಸರಿಹೊಂದುತ್ತದೆ. ಈ ಎರಡೂ ಬಗೆಯ ಚಿಕಿತ್ಸೆಗಳಲ್ಲಿ ಕೂದಲಿನಲ್ಲಿ ಕೆಮಿಕಲ್ ಬದಲಾವಣೆ ತರಲಿದೆ, ಹೀಗಾಗಿ ಹೇರ್‌ಸ್ಟ್ರೇಟ್ ನಿಂಗ್ ಗೆ ಹೋಲಿಸಿದಾಗ, ಇದು ಹೆಚ್ಚು ಪರಿಣಾಮಕಾರಿ.
ಹೆಚ್ಚಿನ ಲಾಭ
ಇದರಿಂದ ಹೆಚ್ಚಿನ ಲಾಭವಿದೆಯೇ ಎಂಬುದಕ್ಕೆ ತಜ್ಞರ ಅಭಿಪ್ರಾಯ, ಈ ಚಿಕಿತ್ಸೆ ಕೂದಲಿಗೆ ಉತ್ತಮ ವಿಧಾನ ಹಾಗೂ ನಂತರ ಸುಲಭವಾಗಿ ನಿಭಾಯಿಸಬಹುದಾಗಿದೆ. ಇದರಿಂದ ಕೂದಲು ಸ್ಟ್ರೇಟ್‌ಸ್ಮೂಥ್ ಆಗಲಿದೆ, ಹೀಗಾಗಿ ತಲೆ ಬಾಚುವಿಕೆ ಹಾಗೂ ಸ್ಟೈಲಿಂಗ್ ಸುಲಭ ಆಗಲಿದೆ. ಇದರಿಂದ ದಿನನಿತ್ಯದ ಗ್ರೂಮಿಂಗ್ ರೊಟೀನ್ ನಲ್ಲಿ ಸಮಯ ಉಳಿತಾಯಯವಾಗುತ್ತದೆ. ಕೆರಾಟಿನ್ ಟ್ರೀಟ್ ಮೆಂಟ್ ಸಿಸ್ಟೇನ್ ಟ್ರೀಟ್ ಮೆಂಟ್ ಗಿಂತಲೂ ಹೆಚ್ಚು ಸಶಕ್ತವಾಗಿದ್ದು, ಇದು ಗುಂಗುರು ಕೂದಲನ್ನು ಸ್ಟ್ರೇಟ್ ಗೊಳಿಸಲು ಹೆಚ್ಚು ನೆರವಾಗುತ್ತದೆ.





