ಮಳೆಗಾಲದ ದಿನಗಳಲ್ಲಿ ನಮ್ಮ ಸ್ಕಾಲ್ಪ್ ಗೆ ಖಂಡಿತಾ ಎಕ್ಸ್ ಟ್ರಾ ಕೇರ್ ಅಗತ್ಯವಿದೆ. ಅದನ್ನು ಮಾಡುವುದು ಹೇಗೆ....?

ಕೂದಲು ನಮ್ಮ ಓವರ್‌ ಆಲ್ ಲುಕ್ಸ್ ಸುಧಾರಿಸುವಲ್ಲಿ ಹಿರಿಯ ಪಾತ್ರ ವಹಿಸುತ್ತದೆ. ಆದರೆ ಇಂಥ ಕೂದಲೇ ಮಳೆಯಿಂದಾಗಿ ಅಂಟಂಟಾದರೆ ಏನು ಮಾಡುವುದು? ವಾತಾವರಣದಲ್ಲಿ ಆರ್ದ್ರತೆ ಹೆಚ್ಚುವುದರಿಂದ ಮಳೆಗಾಲದಲ್ಲಿ ಹೀಗಾಗುವುದು ಸಹಜ. ಅದು ಇರಿಟೇಶನ್‌ ಹೆಚ್ಚಿಸಿ, ಒಟ್ಟಾರೆ ಸೌಂದರ್ಯ ಬಿಗಡಾಯಿಸುವಂತೆ ಮಾಡುತ್ತದೆ.

ಇಷ್ಟು ಮಾತ್ರವಲ್ಲದೆ, ಮಳೆಗಾಲದಲ್ಲಿ ಸ್ಕಾಲ್ಪ್ ಗೆ (ತಲೆಯ ನೆತ್ತಿ) ಸಂಬಂಧಿಸಿದ ಅನೇಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಇದರಿಂದ ತಲೆಯಲ್ಲಿ ಸದಾ ತುರಿಕೆ, ಕಡಿತ, ನವೆ ತಪ್ಪಿದ್ದಲ್ಲ. ಕೆರೆದೂ ಕೆರೆದೂ ರಕ್ತ ಬಂದರೂ ಆಶ್ಚರ್ಯವಿಲ್ಲ. ಈ ಕಾರಣ ಸ್ಕಾಲ್ಪ್ ನಲ್ಲಿ ತೇದ ತಲೆಹೊಟ್ಟು ಸಹ ಹೆಚ್ಚಾಗುತ್ತದೆ. ಇದರಿಂದ ಮುಂದೆ ಚರ್ಮದ ಸೋಂಕು ತಪ್ಪಿದ್ದಲ್ಲ. ಹೀಗಾಗಿ ಕೂದಲು ಹಾಳಾಗುವುದಲ್ಲದೆ, ಅದರ ಬೆಳವಣಿಗೆಯೂ ಕುಂಠಿತಗೊಳ್ಳುತ್ತದೆ.

ಕೂದಲನ್ನು ಮತ್ತೆ ಮತ್ತೆ ತೊಳೆಯಬೇಡಿ

ಮಳೆಗಾಲದಲ್ಲಿ ಮತ್ತೆ ಮತ್ತೆ ಕೂದಲನ್ನು ತೊಳೆಯಲು ಹೋಗಬೇಡಿ. ಅದನ್ನು ಹೆಚ್ಚಾಗಿ ತೊಳೆದಷ್ಟೂ ಸ್ಕಾಲ್ಪ್ ನ ಆರ್ದ್ರತೆ ಹೆಚ್ಚುತ್ತದೆ. ವಾತಾವರಣದಲ್ಲಿ ಅದು ಈಗಾಗಲೇ ಹೆಚ್ಚಿರುವುದರಿಂದ, ಇದು ಇನ್ನಷ್ಟು ಸಮಸ್ಯೆಗಳಿಗೆ ದಾರಿಯಾಗುತ್ತದೆ. ಇದರಿಂದ ಕೂದಲು ಆಯ್ಲಿ ಸಹ ಆಗಬಹುದು, ಜೊತೆಗೆ ಉದುರುವಿಕೆ ಹೆಚ್ಚಾಗಬಹುದು.

ಈ ಸಮಸ್ಯೆಗಳಿಂದ ಪಾರಾಗಲು, ಕೂದಲನ್ನು ಮತ್ತೆ ಮತ್ತೆ ತೊಳೆಯಬೇಡಿ. ಮಳೆಗಾಲದಲ್ಲಿ ವಾರಕ್ಕೆ ಹೆಚ್ಚೆಂದರೆ 1-2 ಬಾರಿ ತೊಳೆಯುವುದೇ ಲೇಸು.

ಹಾರ್ಶ್ಶಾಂಪೂ ಬೇಡ

ಶಾಂಪೂ ಬಳಸುವಾಗ ವಹಿಸಬೇಕಾದ ಮುಖ್ಯ ಮುನ್ನೆಚ್ಚರಿಕೆ ಎಂದರೆ, ನೀವು ಬಳಸುವ ಶಾಂಪೂ, ಹೆವಿ ಕೆಮಿಕಲ್ಸ್ ನಿಂದ ಹಾರ್ಶ್‌ ಆಗಿರಬಾರದು. ಅದರಿಂದ ನಿಮ್ಮ ಕೂದಲು, ಸ್ಕಾಲ್ಪ್ ಗೆ ಹಾನಿ ತಪ್ಪಿದ್ದಲ್ಲ. ಇದರಿಂದ ಕೂದಲಿನ ನೈಸರ್ಗಿಕ ಬಣ್ಣ ಹಾಳಾಗುತ್ತದೆ. ಅಷ್ಟು ಮಾತ್ರವಲ್ಲ, ಅಲರ್ಜಿ ಹೆಚ್ಚುತ್ತದೆ. ಇದರಿಂದ ನೆತ್ತಿಯಲ್ಲಿ ಹೊಪ್ಪಳ ಏಳುತ್ತದೆ, ತುರಿಕೆ ಕಡಿತ ತಪ್ಪಿದ್ದಲ್ಲ.

ಆ್ಯಪಲ್ ಸೈಡರ್ವಿನಿಗರ್ಶಾಂಪೂ

ತಲೆಯಲ್ಲಿ ಹೆಚ್ಚಿದ ಅತ್ಯಧಿಕ ಆರ್ದ್ರತೆಯಿಂದ, ಆ ಭಾಗದ ಚರ್ಮದ Ph  ಲೆವೆಲ್ ‌ಸಹ ಕೆಡುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಮಳೆಗಾಲದಲ್ಲಿ ಆ್ಯಪಲ್ ಸೈಡರ್‌ ವಿನಿಗರ್‌ ಶಾಂಪೂ ಬಳಸುವುದೇ ಸರಿ. ಇದಕ್ಕಾಗಿ ನೀವು `ವಾಲೋ' ಪ್ರಾಡಕ್ಟ್ಸ್ ಖರೀದಿಸಿ.

ಸ್ಕಾಲ್ಪ್ ಸ್ಕ್ರಬ್ಬಳಸಿಕೊಳ್ಳಿ

ನಾವು ಮುಖಕ್ಕೆ ಫೇಸ್‌ ಸ್ಕ್ರಬ್‌ ಬಳಸುವಂತೆಯೇ, ಮಳೆಗಾಲದಲ್ಲಿ ನಮ್ಮ ಸ್ಕಾಲ್ಪ್ ಕೇರ್‌ ಗಾಗಿ ವಿಶೇಷ ಎಚ್ಚರಿಕೆ ವಹಿಸಬೇಕು. ಆಗಲೇ ಕೂದಲಿಗೆ ಉತ್ತಮ ಶೈನಿಂಗ್‌ ಬರುವುದು.

ಇದಕ್ಕಾಗಿ ರೆಡಿಮೇಡ್‌ ಸ್ಕಾಲ್ಪ್ ಸ್ಕ್ರಬ್‌ ಬಳಸಿರಿ. ಇದರಿಂದ ನೆತ್ತಿ ಭಾಗದ ಎಕ್ಸ್ ಫಾಲಿಯೇಶನ್‌ ಸುಸೂತ್ರವಾಗುತ್ತದೆ. ಇದು ನೆತ್ತಿಯ ಹೆಚ್ಚುವರಿ ಡೆಡ್‌ ಸ್ಕಿನ್‌ ತೊಲಗಿಸುವಲ್ಲಿ ಫಲಕಾರಿ. ಹಾಗೆಯೇ ತಲೆಹೊಟ್ಟು, ಜಿಡ್ಡಿನಂಶ ದೂರವಾಗುತ್ತದೆ.

ಆಯ್ಲಿಂಗ್ತಪ್ಪಿಸಬೇಡಿ

ಮಳೆಗಾಲದಲ್ಲಿ ಚರ್ಮದ ಜೊತೆ ಜೊತೆಗೆ ಕೂದಲಿಗೂ ಹೆಚ್ಚಿನ ಪೋಷಣೆ ಒದಗಿಸಬೇಕು. ಇದು ನಿಮಗೆ ರೆಗ್ಯುಲರ್‌ ಆಯ್ಲಿಂಗ್ ಡೀಪ್‌ ಕಂಡೀಶನಿಂಗ್‌ ನಿಂದ ದೊರಕುತ್ತದೆ. ಹೀಗಾಗಿ ಪ್ರತಿ ವಾರ ತಪ್ಪದೆ ಕೂದಲಿಗೆ, ನೆತ್ತಿಗೆ ಎಣ್ಣೆ ಒತ್ತಿಕೊಂಡು ಮಸಾಜ್‌ ಮಾಡಿ. ಪ್ರತಿ 15 ದಿನಗಳಿಗೊಮ್ಮೆ ಡೀಪ್‌ ಕಂಡೀಶನಿಂಗ್‌ ಸಹ ಮಾಡಿ. ಇದರ ಉತ್ತಮ ಪೋಷಣೆ ದೊರೆತು, ಕೂದಲು ಹೆಚ್ಚು ಆರೋಗ್ಯಕರ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ