ರಾಘವೇಂದ್ರ ಅಡಿಗ ಎಚ್ಚೆನ್.

ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಬ್ಯಾನರ್ವನಡಿಯಲ್ಲಿ *ಪ್ರೇಮ್ ಮತ್ತು ರಕ್ಷಿತಾ ಪ್ರೇಮ್* ನಿರ್ಮಾಣದ ಹೊಸ ಚಿತ್ರ ಘೋಷಣೆ ಆಗಿದೆ.
ಪ್ರೇಮ್  ಶಿಷ್ಯ,ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ
*ಮಂಜುನಾಥ್ ಬಿ.ಎಸ್* ನಿರ್ದೇಶನದ *ರಾಣ* ನಾಯಕನಟನಾಗಿ ಅಭಿನಯಿಸುತ್ತಿರುವ ಚಿತ್ರದ ಟೈಟಲ್ ಇಡಿಯೆಟ್ ಎಂದಿದೆ.

FB_IMG_1774939396487

ರಕ್ಷಿತಾ ಪ್ರೇಮ್ ಅವ್ರ ಹುಟ್ಟುಹಬ್ಬದ ಪ್ರಯುಕ್ತ ಇಂದು ಟೈಟಲ್ ಅನಾವರಣಗೊಳಿಸಲಾಗಿದೆ. ವಿಶೇಷ ಅಂದ್ರೆ ರಕ್ಷಿತಾ ಪ್ರೇಮ್ ಅಭಿನಯದ ಚೊಚ್ಚಲ ತೆಲುಗು ಚಿತ್ರದ ಹೆಸರು ‘ಇಡಿಯೆಟ್’ ಇದೀಗ ಅವರೇ ನಿರ್ಮಾಣದ ಚಿತ್ರಕ್ಕೆ ಈ ಟೈಟಲ್ ಇಟ್ಟಿರೋದು ವಿಶೇಷ. ನಿರ್ದೇಶಕ ಮಂಜುನಾಥ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ.ವಿಲಿಯಂ ಡೆವಿಡ್ ಅವರ ಛಾಯಾಗ್ರಹಣ, ರೋಮಿಯೋ ಅವರ ಸಂಗೀತ ಈ ಚಿತ್ರಕ್ಕಿರಲಿದೆ.

FB_IMG_1774939394712

“ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್” ಇದು ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ
​ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆ “ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್” (Phoenix Prems Studios) ಅನ್ನು ರಾಮನವಮಿಯ ಶುಭದಿನದಂದು ಘೋಷಣೆ ಮಾಡಿದ್ದರು
​ಕೇವಲ ದೊಡ್ಡ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಹೊಸ ಆಲೋಚನೆ ಮತ್ತು ಅದ್ಭುತ ಪ್ರತಿಭೆ ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬ್ಯಾನರ್ ಪ್ರಾರಂಭಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಸೆ ನೀಡಲು ಪ್ರೇಮ್-ರಕ್ಷಿತಾ ದಂಪತಿ ಮುಂದಾಗಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ