ರಾಘವೇಂದ್ರ ಅಡಿಗ ಎಚ್ಚೆನ್.

ಸುಮಾರು ಏಳು ಶತಮಾನಗಳ ಹಿಂದಿನ ಕಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರ ಉಗ್ರಾಯುದಂ, ಈ ಹಿಂದೆ ಸುರಮ್ ಮೂವೀಸ್ ಲಾಂಛನದಲ್ಲಿ ನಿದ್ರಾದೇವಿ ಸೆಕ್ಸ್‌ ಡೋರ್ ಎಂಬ ಚಿತ್ರವನ್ನು ನಿರ್ಮಿಸಿದ್ದ ಜಯರಾಮ್‌ ದೇವಸಮುದ್ರ ಅವರ ಬ್ಯಾನರ್ ನ ಮತ್ತೊಂದು ಚಿತ್ರವಾಗಿ ಉಗ್ರಾಯುಧಮ್ ಮೂಡಿಬರಲಿದೆ, ಈ ಮೂಲಕ ಏಳು ಶತಮಾನಗಳ ಹಿಂದಿನ ಪಿರಿಯಾಡಿಕ್ ಡ್ರಾಮಾ ಕಥೆಯನ್ನು ಪುನೀತ್ ರುದ್ರನಾಗ್ ಅವರು ಹೇಳುತ್ತಿದ್ದಾರೆ.
ಈ ಚಿತ್ರದಲ್ಲಿ ನಾಯಕನಾಗಿ ನಟ ರೋರಿಂಗ್‌ಸ್ಟಾರ್ ಶ್ರೀಮುರಳಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ, ಅವರ ಜತೆ ನಾಯಕಿಯಾಗಿ ಕಾಂತಾರಾ ಚಿತ್ರದ ಖ್ಯಾತಿಯ ನಟಿ ಸಪ್ತಮಿಗೌಡ ಅವರು ಇದೇ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಈ ಮೂಲಕ ಕಾಂತಾರ ಬೆಡಗಿ ಸಪ್ತಮಿಗೌಡ ಅವರು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ನಾಯಕಿಯಾಗಿದ್ದಾರೆ. ಸದ ನಿರ್ಮಾಣ ಹಂತದಲ್ಲಿರುವ ಈ ಚಿತ್ರಕ್ಕೆ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದರೂ, ಮೂಲಗಳ ಪ್ರಕಾರ ಸಪ್ತಮಿಗೌಡ ಅವರು ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ.

ugram

ಉಗ್ರಾಯುಧಂ ಚಿತ್ರದಲ್ಲಿ ಶ್ರೀಮುರಳಿ ಅವರು ಐತಿಹಾಸಿಕ ಸನ್ನಿವೇಶಕ್ಕೆ ಅನುಗುಣವಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಪ್ತಮಿಗೌಡ ಅವರು ಕೂಡ ರಾಜಮನೆತನದ ಸುಂದರಿಯ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದರೂ, ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಡಾಲಿ ಧನಂಜಯ್ ನಟನೆಯ ‘ಪಾಪ್‌ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸಪ್ತಮಿ ಗೌಡ ಅವರು ಹೊಂಬಾಳೆ ಫಿಲಂಸ್‌ ನಿರ್ಮಿಸಿದ, ರಿಷಬ್‌ ಶೆಟಿ ಅವರ ನಿರ್ದೇಶನದ ಕಾಂತಾರ ಚಿತ್ರದ ಮೂಲಕ ಖ್ಯಾತಿ ಗಳಿಸಿದರು. ಅಂದಿನಿಂದ ಈ ನಟಿ ಹಿಂದಿ ಮತ್ತು ತೆಲುಗು ಭಾಷೆಗಳಿಗೂ ಸಹ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ‘ದಿ ರೈಸ್ ಆಫ್ ಆಶೋಕ ಚಿತ್ರದಲ್ಲಿ, ಸಪ್ತಮಿ ಗೌಡ ನಟಿಸಿದರು.
ನಿರ್ದೇಶಕ ಪುನೀತ್ ರುದ್ರನಾಗ್ ಅವರು ಚಿತ್ರದ ಕುರಿತಂತೆ ಮಾತಾಡುತ್ತ ಇದು ಏಳು ನೂರು ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮಾ ಕಥೆಯ ಚಿತ್ರ, ಸಕಲೇಶಪುರದ ಬಳಿ 135 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಅದ್ಧೂರಿ ಸೆಟ್ ಹಾಕಿ, ಅಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ. ನಾನು ಅಣ್ಣಾವ್ರ ಅಭಿಮಾನಿ. ಅವರ ಅಭಿನಯದ ಸಾಕಷ್ಟು ಐತಿಹಾಸಿಕ ಚಿತ್ರಗಳನ್ನು ನೋಡಿದ್ದೇನೆ.
ಅದೇ ನನಗೆ ಈ ಚಿತ್ರವನ್ನು ನಿರ್ದೇಶನ ಮಾಡಲು ದೊಡ್ಡ ಸ್ಫೂರ್ತಿ, ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಯಾವುದೇ ಕೊರತೆಬಾರದ ಹಾಗೆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಮ್ಮ ಚಿತ್ರದಲ್ಲಿ ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ದೊಡ್ಡ ತಂಡವೇ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಉಗ್ರಾಯುಧಂ ಚಿತ್ರಕ್ಕೆ ಸಂಕೇತ್ ಅವರ ಛಾಯಾಗ್ರಹಣ ಮತ್ತು ಅಮರ್ ಅವರ ಕಲಾ ನಿರ್ದೇಶನವಿದ್ದರೆ,
ಈಮಧ್ಯೆ, ಸಪ್ತಮಿಗೌಡ ಧನಂಜಯ್ ಜೊತೆಗೆ ಹಲಗಲಿ ಚಿತ್ರದಲ್ಲೂನುತ್ತಿದ್ದು, ಸುಕೇ‌ನಾಯಕ್‌ ಅವರ ನಿರ್ದೇಶನದ ಮತ್ತೊಂದು ಐತಿಹಾಸಿಕ ಚಿತ್ರವು ಚಿತ್ರೀಕರಣದ ಹಂತದಲ್ಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ