– ರಾಘವೇಂದ್ರ ಅಡಿಗ ಎಚ್ಚೆನ್.
ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಬ್ಯಾನರ್ವನಡಿಯಲ್ಲಿ *ಪ್ರೇಮ್ ಮತ್ತು ರಕ್ಷಿತಾ ಪ್ರೇಮ್* ನಿರ್ಮಾಣದ ಹೊಸ ಚಿತ್ರ ಘೋಷಣೆ ಆಗಿದೆ.
ಪ್ರೇಮ್ ಶಿಷ್ಯ,ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ
*ಮಂಜುನಾಥ್ ಬಿ.ಎಸ್* ನಿರ್ದೇಶನದ *ರಾಣ* ನಾಯಕನಟನಾಗಿ ಅಭಿನಯಿಸುತ್ತಿರುವ ಚಿತ್ರದ ಟೈಟಲ್ ಇಡಿಯೆಟ್ ಎಂದಿದೆ.

ರಕ್ಷಿತಾ ಪ್ರೇಮ್ ಅವ್ರ ಹುಟ್ಟುಹಬ್ಬದ ಪ್ರಯುಕ್ತ ಇಂದು ಟೈಟಲ್ ಅನಾವರಣಗೊಳಿಸಲಾಗಿದೆ. ವಿಶೇಷ ಅಂದ್ರೆ ರಕ್ಷಿತಾ ಪ್ರೇಮ್ ಅಭಿನಯದ ಚೊಚ್ಚಲ ತೆಲುಗು ಚಿತ್ರದ ಹೆಸರು ‘ಇಡಿಯೆಟ್’ ಇದೀಗ ಅವರೇ ನಿರ್ಮಾಣದ ಚಿತ್ರಕ್ಕೆ ಈ ಟೈಟಲ್ ಇಟ್ಟಿರೋದು ವಿಶೇಷ. ನಿರ್ದೇಶಕ ಮಂಜುನಾಥ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ.ವಿಲಿಯಂ ಡೆವಿಡ್ ಅವರ ಛಾಯಾಗ್ರಹಣ, ರೋಮಿಯೋ ಅವರ ಸಂಗೀತ ಈ ಚಿತ್ರಕ್ಕಿರಲಿದೆ.

“ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್” ಇದು ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ
ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆ “ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್” (Phoenix Prems Studios) ಅನ್ನು ರಾಮನವಮಿಯ ಶುಭದಿನದಂದು ಘೋಷಣೆ ಮಾಡಿದ್ದರು
ಕೇವಲ ದೊಡ್ಡ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಹೊಸ ಆಲೋಚನೆ ಮತ್ತು ಅದ್ಭುತ ಪ್ರತಿಭೆ ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬ್ಯಾನರ್ ಪ್ರಾರಂಭಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಸೆ ನೀಡಲು ಪ್ರೇಮ್-ರಕ್ಷಿತಾ ದಂಪತಿ ಮುಂದಾಗಿದ್ದಾರೆ.





