ಕೆಲವು ಜನರ ಎಂದಿನ ಬಾಳಹಳಿ ತಪ್ಪಿ ಹೇಗೋ ಹರಿದರೆ, ಏನು ಬೇಕಾದರೂ ಆದೀತು. ಇದು ದೆಹಲಿಯ 42 ವರ್ಷದ ಹೆಂಗಸು ಹಾಗೂ ಆಕೆಯ 5, 18 ವರ್ಷದ ಹೆಣ್ಣುಮಕ್ಕಳ ಕರುಣಾಜನಕ ಆತ್ಮಹತ್ಯೆಯಿಂದ ಸ್ಪಷ್ಟವಾಗುತ್ತದೆ. ದೊರೆತಂಥ ತುಸು ಫ್ಯಾಕ್ಟ್ಸ್ ಆಧರಿಸಿ ನೋಡಿದರೆ, ಒಂದು ಮದುವೆ ಮುರಿದ ನಂತರ, ಪೂಜಾ ಎಂಬ ಈ ಹೆಂಗಸು ಅನೇಕ ಗಂಡಸರೊಂದಿಗೆ ಸಂಪರ್ಕ ಹೊಂದಿದ್ದಳು. ಆಕೆ ದೆಹಲಿಯ ಮೋಲರ್‌ ಬಂದ್‌ ಏರಿಯಾದಲ್ಲಿ ಒಂದೇ ಕೋಣೆಯ ಫ್ಲಾಟ್‌ ನಲ್ಲಿದ್ದಳು. ಈಕೆ ಈಗಾಗಲೇ ಒಬ್ಬ ಲಿವಿಂಗ್‌ ಪಾರ್ಟನರ್‌ ನ ಹತ್ಯೆಯ ಆರೋಪ ಸಹ ಎದುರಿಸುತ್ತಿದ್ದಳು. ನಂತರ ಆಕೆ ಮತ್ತು ಅವಳ 25ರ ಮಗ ಜೇಲು ಸೇರಬೇಕಾಯಿತು. ಆದರೆ ಹೇಗೋ ಏನೋ ಅದರಿಂದ ಬಿಡುಗಡೆ ಆಗಿತ್ತು. ಆಕೆಯ ಎರಡನೇ ಲಿವ್ ಇನ್‌ ಪಾರ್ಟ್‌ನರ್‌ ನ ಸಾವು ಸಹ ಕೆಲವು ದಿನಗಳ ಹಿಂದೆ ಆಗಿತ್ತು. ಅವಳ ಕೆಲಸ ಹೋಗಿತ್ತು. ಇದರಿಂದ ಹತಾಶಳಾದ ಈಕೆ, ಇಬ್ಬರು ಹೆಣ್ಣುಮಕ್ಕಳ ಸಮೇತ ಆತ್ಮಹತ್ಯೆಗೆ ಶರಣಾದಳು.

ಇದುವರೆಗೂ ಸ್ಪಷ್ಟವಾಗದ ಸಂಗತಿ ಎಂದರೆ, ಇಂಥ ಹೆಂಗಸರ ಜೀವನ ಹೇಗೋ ಸೊಟ್ಟಂಪಟ್ಟ ಜರುಗಿದರೂ, ಹೀಗೆಲ್ಲ ಏಕೆ ಆಗುತ್ತದೆ? 25ರ ಮಗ, 18ರ ಹಿರಿ ಮಗಳು, 5ರ ಕಿರಿಮಗಳು, ಬಾಡಿಗೆಯ 1 ಕೋಣೆಯ ಮನೆ, ನೀಟ್‌ ಡ್ರೆಸ್‌, ಫೋಟೋದಿಂದ ಅನುಕೂಲಸ್ಥ ಹೆಣ್ಣು, ಮೂವರು ಮಕ್ಕಳೊಂದಿಗೆ ಈಕೆ ಹೇಗೆ ತಾನೇ ಜೀವನ ನಡೆಸುತ್ತಾಳೆ?

ಈ ತರಹದ ಜನರಲ್ಲಿ, ಹೆಣ್ಣುಮಕ್ಕಳೂ ಸೇರಿರುವಾಗ, ಇಂಥವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಏಕೆಂದರೆ ಸಪೋರ್ಟ್‌ ಮಾಡುವ ಫ್ಯಾಮಿಲಿ ಮೆಂಬರ್‌ ಕಡಿಮೆ ಆಗುತ್ತಿದ್ದಾರೆ. ತಾಯಿ ತಂದೆ ಇದ್ದರೂ ಅವರೇನೂ ಸತ್ತಿರುವುದಿಲ್ಲ, ಬಹುಶಃ ಬೇರೆ ಬೇರೆ ಆಗಿರಬಹುದು, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸದೆ, ಹೇಗೋ ಚಿಂದಿಯಾದ ತಮ್ಮ ಬದುಕನ್ನು ಮುನ್ನಡೆಸಲು ಬಯಸುತ್ತಾರೆ.

ಎಲ್ಲಕ್ಕಿಂತ ದುಃಖದ ಸಂಗತಿ ಎಂದರೆ, ಸಮಾಜ ಯಾವ ಸರ್ಕಾರ, ಇವೆಲ್ಲಕ್ಕಿಂತ ಹಿರಿದಾದ ಧರ್ಮ, ಹೀಗೆ ಪೀಡಿತ ವ್ಯಕ್ತಿಗಳಿಗೆ ಯಾವ ಆಸರೆಯನ್ನೂ ನೀಡದು. ಸಮಾಜ ಅತ್ತ ತನ್ನ ನಿಯಮಗಳನ್ನು ಹೇರುತ್ತಿದ್ದರೆ, ಸರ್ಕಾರ ಎಲ್ಲ ರೀತಿಯ ತೆರಿಗೆ ಕೇಳುತ್ತದೆ. ಧರ್ಮ ಕೇವಲ ಕನಸು ತೋರಿಸಿ, ಅಂಗೈಲಿ ಆಕಾಶ ತೋರಿಸಿ, ದಾನದಕ್ಷಿಣೆ ಕಿತ್ತುಕೊಳ್ಳುತ್ತದೆ. ಆದರೆ ಇಂಥ ತೊಂದರೆಗೊಳಗಾದ ಹೆಂಗಸರ ರಕ್ಷಣೆಗೆ ಯಾರೂ ಬರುವುದಿಲ್ಲ.

ಸರಿ ತಪ್ಪುಗಳ ಅಂತರ ಮರೆತ ಇಂಥ ಹೆಂಗಸರು, ತನ್ನ ಮೊದಲ ಪತಿ, ನಂತರದ ಪ್ರೇಮಿಗಳು, ಲಿವ್ ‌ಇನ್‌ ಪಾರ್ಟ್‌ ನರ್‌ ಗಳೇ ಬಲಿ ಆಗಿಹೋಗುತ್ತಾರೆ, ಅಥವಾ ತಾನೇ ಅವರನ್ನು ಬೇಟೆ ಆಡುತ್ತಾರೆ. ಈ ಯಾವ ವಿಷಯಗಳನ್ನೂ ತಿಳಿದುಕೊಳ್ಳುವ ಆಸಕ್ತಿ ಸಮಾಜದ ಯಾರಿಗೂ ಇರುವುದಿಲ್ಲ. ತಂತಮ್ಮ ಬಿಝಿ ಲೈಫ್‌ ನಲ್ಲಿ ಯಾರೂ ಇಂಥ ಹೊರಗಿನವರ ಆಪತ್ತನ್ನು ಮನೆಗೆ ತರಲು ಬಯಸುವುದಿಲ್ಲ. ಆದರೆ ಯಾಕೆ ಸಮಾಜ, ಸಮುದಾಯ, ನಗರ, ಕಾನೂನು, ನಿಯಮಗಳು ಅದರಲ್ಲಿ ಮುಳುಗಿದ ಜನರಿಗೆ ಸರಿ ದಾರಿ ತೋರುವವರು, ಕೈ ಹಿಡಿದು ನಡೆಸುವವರು, ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವವರು ಯಾಕಿಲ್ಲ? ಮಾನವರು ಇಂಥ ದೊಡ್ಡ ಬದುಕು ರೂಪಿಸಿಕೊಂಡು, ವಿಜ್ಞಾನದಿಂದ ಮುನ್ನಡೆಯುತ್ತಾ, ಕೆಲವರು ಮಾತ್ರ ಹೀಗೆ ಅಸಹಾಯಕರಾಗಿ ದಾರಿತಪ್ಪಿ ಹೋಗುತ್ತಾರೇಕೆ? ಬದುಕಿನ ಗಾಡಿಯಲ್ಲಿ ಸುಗಮವಾಗಿ ಚಲಿಸಲಾರದ ಇವರನ್ನು ನಡುದಾರಿಯಲ್ಲಿ ಹೀಗೆ ತಳ್ಳಿಬಿಡುವುದೇಕೇ?

ಪೂಜಾ ಕೆಲವು ತಪ್ಪು ಮಾಡಿರಬಹುದು, ಕೆಲವು ತಪ್ಪುಗಳನ್ನು ಅವಳ ಸಂಗಾತಿಗಳು ಮಾಡಿರಬಹುದು, ಆದರೆ ಇಂಥ ಅಸಹಾಯಕರ ಕೊನೆ ಕೇವಲ ಕೊಲೆ ಅಥವಾ ಆತ್ಮಹತ್ಯೆಯಲ್ಲಿ ಮುಗಿಯಬೇಕೇ? ಇದಂತೂ ನಿಜಕ್ಕೂ ವಿಷಾದವೇ ಸರಿ. ಸತ್ತವರ ತಪ್ಪು ಹುಡುಕುವ ಸಮಯವಲ್ಲ ಇದು, ಜೊತೆಗಿದ್ದೂ ಇಂಥವರಿಗೆ ಏನೂ ಮಾಡಲಾಗದ ಸಮಾಜದ ತಪ್ಪುಗಳನ್ನು ಹುಡುಕಬೇಕಿದೆ. ಇಂಥ ಚದುರಿಹೋದ ಜನರಿಗೆ ಸುರಕ್ಷತೆ ಒದಗಿಸಲಾರದೆ, ಸಪೋರ್ಟ್‌ ಮಾಡಲಾರದವರ ತಪ್ಪು ತಿದ್ದಬೇಕಿದೆ.

ಗ್ರಾಹಕರ ಅನಿವಾರ್ಯತೆ ಉಸಿರುಗಟ್ಟಿಸುವ ಪರಿ

ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳು ಈಗ ಕೋಟ್ಯಧಿಪತಿ ಕಂಪನಿಗಳಾದ ಕ್ವಿಕ್‌ ಡೆಲಿವರಿಯ ವಾರ್‌ ನಿಂದ ತತ್ತರಿಸುತ್ತಿವೆ. ಝೆಪ್ಟೊ, ಬ್ಲಿಂಕಿಟ್‌, ಸ್ವಿಗ್ಗಿ, ಬಿಗ್‌ ಬ್ಯಾಸ್ಕೆಟ್‌ ನಂಥ ಕಂಪನಿಗಳು ಕೇವಲ 10-15 ನಿಮಿಷಗಳಲ್ಲೇ ಮನೆಬಾಗಿಲಿಗೇ ಸಾಮಗ್ರಿ ಒದಗಿಸುತ್ತಾ, ಒಬ್ಬಂಟಿ ಮಾಲೀಕರ ಅಧೀನದಲ್ಲಿ ನಡೆಯುತ್ತಿರುವ 100-200 ಅಡಿ ಅಂಗಡಿಗಳ ಕದ ಹಾಕಿಸುತ್ತಿವೆ. ಇಂದಿನ ಹೊಸ ಪೀಳಿಗೆಯಂತೂ ಅಕ್ಷರಶಃ ಎಲ್ಲದಕ್ಕೂ ಮೊಬೈಲ್ ‌ಮೇಲೆ ಅವಲಂಬಿತ. ಈ ತರಹದ ಕ್ಲಿಕ್ಕಿಸುವ ಇ-ಕಾಮರ್ಸ್‌ ಕಂಪನಿಗಳ ಜಾಲಕ್ಕೆ ಮರುಳಾಗುತ್ತಿವೆ. ಈ ಪೀಳಿಗೆಗಂತೂ ಪರಿಚಿತ ಅಂಗಡಿಯವರ ಬಳಿ ಸಾಮಗ್ರಿ ಕೊಳ್ಳುವ ವ್ಯಾಲ್ಯೂ ಏನೆಂದೇ ತಿಳಿದಿಲ್ಲ.

ಫೇಸ್‌ ಲೆಸ್‌ ಕ್ವಿಕ್‌ ಕಾಮರ್ಸ್‌ ಡೆಲಿವರಿ ಕಂಪನಿಗಳು ಈಗಂತೂ ಅಗ್ಗದ ಸಾಮಗ್ರಿ ಒದಗಿಸುತ್ತಿವೆ. ಆದರೆ ಇವು ಮಾರುಕಟ್ಟೆಯನ್ನು ಸಂಪೂರ್ಣ ಆಕ್ರಮಿಸಿದ ನಂತರ ಗೂಗಲ್, ಅಡೋಬ್ ವಿಂಡೋಸ್‌ ತರಹ ಮನೋಪಲಿಯ ಲಾಭ ಪಡೆದು ತಾವು ಆಡಿದ್ದೇ ಆಟ ಎಂದು ಮಾಡುತ್ತವೆ. ಓಲಾ, ಊಬರ್‌ ರೈಡ್ಸ್ ನದೂ ಇದೇ ಸ್ಥಿತಿ ಆಗಿದೆ, ಇಲ್ಲಿ ಜನರು ಇವರ ನಿಯಮಕ್ಕೆ ತಕ್ಕಂತೆಯೇ ಹೊರಡಬೇಕು. ಹಿಂದಿನ ಕಾಲದ ಮಾಮೂಲಿ ಟ್ಯಾಕ್ಸಿಗಳು ಇವುಗಳ ದೆಸೆಯಿಂದ ಮಂಗಮಾಯ ಆಗಿವೆ.

ಕ್ವಿಕ್‌ ಕಾಮರ್ಸ್‌ ನಲ್ಲಿ ನಿಮಗೆ ಬೇಗ ಬೇಗ ಸಾಮಗ್ರಿ ಮನೆ ಬಾಗಿಲಿಗೇ ತಲುಪುತ್ತದೆ ಎಂಬುದೇನೋ ನಿಜ, ಆದರೆ ಇದೆಷ್ಟು ದುಬಾರಿ ಎಂದು ನಿಮಗೆ ಗೊತ್ತೇ? ಇವೆಲ್ಲ ದುಬಾರಿ ಬಿಗ್‌ ಸಾಫ್ಟ್ ವೇರ್ಸ್‌ ನ್ನು ಆಧರಿಸಿ ನಡೆಯುತ್ತವೆ. ಲಕ್ಷಾಂತರ ಮಂದಿ ಇದರ ಬ್ಯಾಕ್‌ ಎಂಡ್‌ ಸಂಭಾಳಿಸುತ್ತಾರೆ, ಹೀಗಾಗಿ ಇವೆಲ್ಲದಕ್ಕೂ ಗ್ರಾಹಕರೇ ಹಣ ಕಕ್ಕಬೇಕು.

ಈ ಕಂಪನಿಗಳು ಮಾರುವ ಹಣ್ಣು, ತರಕಾರಿ ಇತ್ಯಾದಿ ನೀವು ಸಿಟಿ ಮಾರ್ಕೆಟ್‌ ನಲ್ಲಿ ನೇರ ಕೊಂಡರೆ, ಅವು ಟೆಂಡರ್ ಆಧಾರಿತವಾದುದರಿಂದ, ಕ್ವಾಲಿಟಿ ಕಂಟ್ರೋಲ್ ಕ್ರಮೇಣ ಮಾಯವಾಗುತ್ತಿದೆ. ಈ ಕಂಪನಿಗಳಿಂದ ಕಲಿತಂಥ ಸುಶಿಕ್ಷಿತರೂ ಸತತ ಟೋಪಿ ಹಾಕಿಸಿಕೊಳ್ಳುತ್ತಿರುತ್ತಾರೆ. ಇಂಥವರಿಗೆ ಹಣ್ಣು ತರಕಾರಿ ಮಂಡಿ ಬಗ್ಗೆ ಎಲ್ಲಿಂದ ತಿಳಿಯಬೇಕು? ಹಣದ ಆಧಾರದಿಂದ ಈ ವ್ಯಾಪಾರ ಜೋರಾಗಿದೆ. ಇಂಥ ಕಂಪನಿಗಳು ರೈತರು, ದಲ್ಲಾಳಿ, ಡೆಲಿವರಿ ಬಾಯ್ಸ್, ಗ್ರಾಹಕರನ್ನೂ ಬಿಡದೆ ಜಿಗಣೆಗಳಂತೆ ರಕ್ತ ಹೀರುತ್ತವೆ.

ಒಂದು ಸಲ ಸೋಫಾದಲ್ಲಿ ಸೆಟಲ್ ಆಗಿ ಮೊಬೈಲ್ ಒತ್ತುತ್ತಾ ಈ ಅಭ್ಯಾಸ ರೂಢಿಸಿಕೊಂಡ ಜನತೆ, ಎಂದೆಂದೂ ಎದ್ದು ಹೋಗಿ ಅಂಗಡಿಗಳಿಂದ ಸಾಮಗ್ರಿ ಕೊಳ್ಳುವುದಿಲ್ಲ ಎಂಬುದು ಇವರಿಗೆ ಚೆನ್ನಾಗಿ ಗೊತ್ತು. ಅಬ್ಬಬ್ಬಾ ಅಂದ್ರೆ, ಬೇರೆ ಕಂಪನಿಗಳೊಂದಿಗೆ ಹೋಲಿಸಿ, ಇರುವುದರಲ್ಲಿ ಅಗ್ಗವಾದವುಗಳನ್ನು ಕೊಳ್ಳಬಹುದಷ್ಟೆ. ಮಂಡಿಯ ಅಗ್ಗದ ದರ ಅವರಿಗೆಲ್ಲಿಂದ ತಿಳಿದೀತು?

ಸಾಮಾನ್ಯವಾಗಿ ಎಲ್ಲಾ ದಂಧೆಗಳಲ್ಲೂ ನಡೆಯುವಂತೆಯೇ, ಮನೋಪಲಿ ಕೈಗೆ ಬರುತ್ತಿದ್ದಂತೆಯೇ ಗ್ರಾಹಕರು ಇದಕ್ಕೆ  ಅಂಟಿಕೊಂಡು ಸಿಕ್ಕಿ ಹಾಕಿಕೊಳ್ಳುತ್ತಾರೆ. ಸಿಂಬಳದಲ್ಲಿನ ನೊಣದಂತೆ ಅದೇ ಕಂಪನಿಗೇ ಅಂಟಿಬಿದ್ದು ಅಲ್ಲೇ ಖರೀದಿಸುತ್ತಿರುತ್ತಾರೆ, ಅಂಥ ಪ್ರಲೋಭನೆಗಳನ್ನು ಅವು ಒಡ್ಡುತ್ತವೆ. ಇಂಥ 4-5 ಕಂಪನಿಗಳು ಬೆರೆತು ಫೈಲ್ ವ‌ರೆಗೂ ರೆಡಿ ಮಾಡಿ ತನಗೆ ಬೇಡದ ಗ್ರಾಹಕರನ್ನು ಬ್ಲ್ಯಾಕ್‌ ಲಿಸ್ಟ್ ಸಹ ಮಾಡಿಬಿಡುತ್ತವೆ. ಇದೇ ತರಹ ಏರ್‌ ಲೈನ್ಸ್ `ನೋ ಫ್ಲೈ’ ಹೆಸರಲ್ಲಿ ಗ್ರಾಹಕರ ಪಟ್ಟಿ ಮಾಡಿ ಅವರನ್ನು ಬದಿಗೊತ್ತುತ್ತಿ. ಬ್ಯಾಂಕುಗಳು ಸಿಬಿಲ್ ಸ್ಕೋರ್‌ ಹೆಸರಲ್ಲಿ ಹೀಗೇ ಮಾಡುತ್ತವೆ.

ಸರ್ಕಾರಿ ರೇಶನ್‌ (ನ್ಯಾಯಬೆಲೆ….?) ಅಂಗಡಿಗಳ ತರಹದ ಏಕಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಈ ಕಂಪನಿಗಳು ಮೆರೆಯುತ್ತಿವೆ. ಈಸ್ಟ್ ಇಂಡಿಯಾ ಕಂಪನಿಯು 17ನೇ ಶತಮಾನದಲ್ಲಿ ಬಂದೂಕು, ಗುಂಡುಗಳ ಆಧಾರದಿಂದ ಪ್ರತಿಸ್ಪರ್ಧಿಗಳನ್ನು ಓಡಿಸಿ ಭಾರತೀಯರನ್ನು ಶೋಷಿಸುತ್ತಿದ್ದಂತೆ, ಇವು ಎಗ್ಸಿಬಿಷನ್‌, ಮರ್ಜರ್‌ ಹೆಸರಲ್ಲಿ ಮೂಡುತ್ತಿವೆ. ಹೊಸ ಜನರೇಶನ್‌ ನವರು ಅಸಲಿಗೆ ಜನರೇಶನ್‌ ಬ್ಲೈಂಡ್‌ ಆಗುತ್ತಿದ್ದಾರೆ.

ವಿನಾಶಕಾರಿ ಷಡ್ಯಂತ್ರಗಳು ಅತಿ ಆಳವಾಗುತ್ತಿವೆಯೇ?

ಬೆಂಗಳೂರಿನಲ್ಲಿ ಅತುಲ್ ‌ಸುಭಾಷ್‌ ನ ಆತ್ಮಹತ್ಯೆ ವಿಡಿಯೋ, ಲಾಂಗ್‌ ಸೂಯಿಸೈಡ್‌ ನೋಟ್‌ ಅಥವಾ ಮೇರಠ್‌ ನಲ್ಲಿ ವಿವಾಹಿತೆ ಮುಸಕಾನ್‌ ಮತ್ತವಳ ಪ್ರೇಮಿ ಕೂಡಿ, ಅವಳ ಗಂಡನನ್ನು ಕೊಂದು ಸಿಮೆಂಟ್‌ ಡ್ರಂನಲ್ಲಿ ಹುದುಗಿಸಿಟ್ಟ ಪ್ರಕರಣಗಳಿಂದ ಎದ್ದಂಥ ಕೂಗಾಟ ರಂಪಾಟಗಳು, ಅದೇಕೋ ಪಾಟ್ನಾದ ಡಾಕ್ಟರ್‌ ಪ್ರಕರಣದಲ್ಲಿ ನಡೆಯಲಿಲ್ಲ. ಆತ ತನ್ನ 4 ಸಹೋದ್ಯೋಗಿಗಳ ಜೊತೆ, ಕೌಟುಂಬಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪತ್ನಿಯನ್ನೇ ಹತ್ಯೆ ಮಾಡಿದಾಗ, ಏನೇನೂ ಗಲಭೆ ಆಗಲಿಲ್ಲ.

ಹಿಂದಿನ ದಶಕಗಳಲ್ಲಿ ಹೆಂಗಸರಿಗೆ ಸಿಕ್ಕ ಹಕ್ಕುಗಳು, ವರದಕ್ಷಿಣೆ ಪಿಡುಗು, ಭ್ರೂಣ ಹತ್ಯೆ, ಕೌಟುಂಬಿಕ ಹಿಂಸೆ ಇತ್ಯಾದಿಗಳ ವಿರುದ್ಧ ರಚಿಸಲಾದ ಹೊಸ ಕಾನೂನುಗಳಿಂದಾಗಿ, ಇದೀಗ ಸಾಂಪ್ರದಾಯಿಕ ಪೌರಾಣಿಕ ಕಾನೂನನ್ನು ಮತ್ತೆ ಲಾಗೂ ಮಾಡುವ ಪ್ರಯತ್ನದಲ್ಲಿ ಒಂದು ಹೊಸ ಕೂಗು ಎದ್ದಿದೆ, ಗಂಡು ಎಷ್ಟೇ ಹತ್ಯೆ ಮಾಡುತ್ತಿರಲಿ, ಆತ ಪತ್ನಿ ಎದುರು ಮಾತ್ರ ಅಸಹಾಯಕ. ಏಕೆಂದರೆ 2014ಕ್ಕೂ ಹಿಂದೆ ಬಂದಂಥ ಬಹಳಷ್ಟು ಕಾನೂನು ಕ್ರಮಗಳು ಹೆಣ್ಣಿಗೆ ಎಷ್ಟೋ ಹಕ್ಕು ನೀಡಿವೆ.

ಒಂದು ಕೊಳೆತ ರಣನೀತಿಯ ತಂತ್ರದ ಹಾಗೆ ಜೀವನದ ಪ್ರತಿ ಹಂತದಲ್ಲೂ ಧರ್ಮ, ಸಂಪ್ರದಾಯ, ಪೌರಾಣಿಕ ಪರಂಪರೆ, ಪೂಜೆ ಪುನಸ್ಕಾರ, ದಾನಪುಣ್ಯಗಳನ್ನು ಮುಂದೊಡ್ಡುತ್ತಾ, ಅನಾದಿ ಕಾಲದಿಂದಲೂ ಹೆಣ್ಣಿನ ಕಾಲಿಗೆ ಬೇಡಿ ಹಾಕಿ ಅವಳನ್ನು 4 ಗೋಡೆಗಳ ಮಧ್ಯೆ ಬಂಧಿಸಿಡಲಾಯಿತು.

ಪಾಟ್ನಾದ ಈ ಪ್ರಕರಣದಲ್ಲಿ ಖಾಸಗಿ ಏಷ್ಯಾ ಹಾಸ್ಪಿಟಲ್ ನ ಡೈರೆಕ್ಟರ್‌ ಸುರಭಿ ರಾಜ್‌ ಳನ್ನು ಕಳೆದ ಮಾರ್ಚ್‌ ನಲ್ಲಿ ಗುಂಡಿನ ಮಳೆಗರೆದು ಅದೇ ಆಸ್ಪತ್ರೆಯಲ್ಲಿ ಘೋರವಾಗಿ ಹತ್ಯೆ ಮಾಡಲಾಯಿತು. ಪೊಲೀಸರು ಪತಿ ಸಮೇತ ಆತನ ನಾಲ್ವರು ಸಹಾಯಕರನ್ನೂ ಬಂಧಿಸಿದರು. ಈ ಪತಿ ಕುರಿತು ಇನ್ನೂ ಸಂದೇಹಗಳಿವೆ. ಆತ ತನ್ನ ಪತ್ನಿಯ ಆಸ್ಪತ್ರೆ ವ್ಯವಹಾರದಲ್ಲಿ ತಾನೇ ಹೇರಾಫೇರಿ ಮಾಡುತ್ತಿದ್ದ ಅಂತ. ಜೊತೆಗೆ ಅಲ್ಲಿನ ಸಿಬ್ಬಂದಿಯೊಬ್ಬಳ ಜೊತೆ ಆತನಿಗೆ ಅನೈತಿಕ ಸಂಬಂಧದ ಶಂಕೆಯೂ ಇದೆ. ಈ ತರಹದ ಹಗರಣಗಳು ನಮ್ಮ ದೇಶದಲ್ಲಿ ದಿನೇ ದಿನೇ ಅದೆಷ್ಟು ನಡೆಯುತ್ತಿವೆಯೋ? ಇದನ್ನು ಮಾಮೂಲಿ ಕೊಲೆ ಅಪರಾಧ ಎಂದೇ ಪರಿಗಣಿಸಲಾಗಿದೆ.

ಇದಕ್ಕೆ ವಿರುದ್ಧವಾಗಿ ಒಬ್ಬ ಉದ್ಯೋಗಸ್ಥ ಹೆಣ್ಣು ಧೈರ್ಯವಹಿಸಿ ಕಾನೂನಿನ ಧೈರ್ಯದಿಂದ ತನ್ನ ಪತಿಯನ್ನು ಹೀಗೇ ಕೊನೆಗಾಣಿಸಿದಳಾದರೆ, ಎಲ್ಲೆಲ್ಲೂ ಕೂಗಾಟ ರಂಪಾಟ ಏಳುತ್ತದೆ. ಇದಂತೂ ದೊಡ್ಡ ಷಡ್ಯಂತ್ರವೇ ಸರಿ, ಬೇಕೆಂದೇ ಹೆಣ್ಣು ಮಾಡುವ ಕುತಂತ್ರಗಳನ್ನು ಉತ್ಪ್ರೇಕ್ಷಿಸಿ ಹೇಳಾಗುತ್ತದೆ. ಆ ರೀತಿ ಮಾಡಿ ಕಾನೂನು ಮಾಡಿದ ಕೋರ್ಟ್‌, ಪೊಲೀಸ್‌ ಫೀವರ್ಸ್‌ನ ಬಾಯಿ ಬಡಿಯಲಾಗುತ್ತಿದೆ. ಹೆಣ್ಣಿನ ಇಂಥ ಪ್ರಕರಣದಲ್ಲಿ, ಅವಳಿಗೆ ಪತಿಯೇ ದೈವ, ಹೀಗೆಲ್ಲ ಮಾಡಬಹುದೇ? ಪೌರಾಣಿಕ ಪುಣ್ಯಕಥೆ ನೋಡಿ, ಪಾಶ್ಚಾತ್ಯ ಸಂಸ್ಕೃತಿ ಬೇಡ ಎಂದು ಹಿತೋಪದೇಶ ನೀಡಲಾಗುತ್ತದೆ. ಎಷ್ಟೋ ಜಜ್‌ ಗಳು ಇಂಥ ನಿರ್ಣಯ ಹೇಳಿದ್ದಾರೆ, ಅದರಲ್ಲಿ ಹೆಣ್ಣಿಗೆ ಉಪದೇಶ ತಪ್ಪಿದ್ದಲ್ಲ. ಆಕೆ ಪತಿಯ ಪ್ರೇಯಸಿಯನ್ನು ಸಹಿಸಬೇಕು, ಆತನ ಹೊಡೆತಬಡಿತ ಸಹಿಸಿ, ಅತ್ತೆಮನೆಯವರ ಕಾಟ ಸಹಿಸಿ, ತೆಪ್ಪಗೆ ವರದಕ್ಷಿಣೆ ಹಣ ತಂದುಕೊಟ್ಟು…. ಇತ್ಯಾದಿ ಎಲ್ಲಾ ಸಹಿಸಬೇಕು.

1947ರ ನಂತರ ಹೆಣ್ಣಿಗೆ ಸಿಕ್ಕ ಅವಕಾಶಗಳಿಂದಾಗಿ ಆಕೆಗೆ ಸಂಘರ್ಷ ಕಡಿಮೆ ಆಯ್ತು, ಆಡಳಿತ ನಡೆಸುವವರಿಗೆ ದೂರದೃಷ್ಟಿ ಹೆಚ್ಚಾಯಿತು. ಕೆಲವು ಪ್ರಕರಣಗಳಲ್ಲಷ್ಟೇ ಜನತೆ ರೋಷಾವೇಶದಿಂದ ಹೋರಾಡಿವೆ, ಉದಾ: ರಾಮಮಂದಿರ, ಗೋಪೂಜೆಗಳ ವಿರುದ್ಧ ಮಾಡಿದಂತೆ. ಈಗ ಹೆಣ್ಣನ್ನು ಮತ್ತೆ ಹಿಂದಿನಂತೆಯೇ ಪೂಜೆ ಪುನಸ್ಕಾರ, ಪ್ರವಚನ, ಪತಿಯೇ ದೈವ ಎಂದೆನ್ನುವ ತೀರ್ಪುಗಳ ಸುರಿಮಳೆ ಶುರುವಾಗಿದೆ. ಪಾಪ, ಹೆಣ್ಣು ಏನು ತಾನೇ ಮಾಡಬಲ್ಲಳು? ತಿಳಿವಳಿಕೆ ಹೆಚ್ಚಿರದ, ತನ್ನ ಪರವಾಗಿ ಹೇಳಿಕೊಳ್ಳಲು ಬಾಯಿಲ್ಲದ ಅವಳು ಮೂಕ ಹಕ್ಕಿಯೇ ಸರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ