ಎಡಪಂಥೀಯ ಇತಿಹಾಸಕಾರರು ಈ ಹಿಂದೆ ಬರೆದಿದ್ದ ತರ್ಕಕ್ಕೆ ನಿಲುಕದ ಇತಿಹಾಸದ ಬಗ್ಗೆ ಮರುಪರಿಶೀಲಿಸಿ ಬರೆಯುವ ಸಿದ್ಧತೆ ಈಗ ಶುರುವಾಗಿದೆ.

ಏಕೆಂದರೆ ಹೊಸ ಹುಡುಗರು ಬರೆಯಲು ಬರುತ್ತಿದ್ದಾರೆ.

ಇವರ ದೃಷ್ಟಿ ವೈಜ್ಞಾನಿಕ ಹಾಗೂ ತಾರ್ಕಿಕವಾಗಿದೆ.

ಮತ್ತು ದೊಡ್ಡ ವಿಷಯವೆಂದರೆ ಅವರು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ನಂಬಿಕೆಯನ್ನು ಹೊಂದಿದ್ದಾರೆ.

ಎಡಪಂಥೀಯರು ತಮ್ಮ ಆಟ ಆಡಿದಾಗ ಅವರಿಗೆ ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇರಲಿಲ್ಲ. ಹಾಗಾಗಿ ತಮ್ಮ ಮನಸೋಯಿಚ್ಚೆ ಇತಿಹಾಸ ಬರೆದಿದ್ದಾರೆ.

ಈಗ ಶುರುವಾಗಿದೆ #ನೈಜ ಭಾರತೀಯ ಇತಿಹಾಸ

#ಪುರಾಣದ ನೈಜತೆ

#ಭಾರತ ಉವಾಚ

अहिंसा परमो धर्मः धर्म हिंसा तथैव चः।

धर्मो रक्षति रक्षितः।

ಅಂದರೆ

ಅಹಿಂಸಾ ಪರಮೋ ಧರ್ಮಃ| ಧರ್ಮ ಹಿಂಸಾ ತಥೈವ ಚಾ||

ಧರ್ಮೋ ರಕ್ಷತಿ ರಕ್ಷಿತಃ|

IMG-20260413-WA0036

ಸತ್ಯವನ್ನು ತೆರೆದಿಡುವಿಕೆ :

ರಾವಣನು ಸೀತಾಮಾತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯುವಾಗ ಆತನ ಪುಷ್ಪಕ ವಿಮಾನದ ಮಾರ್ಗ ಯಾವುದು?

ಆ ದಾರಿಯಲ್ಲಿ ಅಡಗಿರುವ ವೈಜ್ಞಾನಿಕ ರಹಸ್ಯವೇನು??

ಲಕ್ಷಾಂತರ ವರ್ಷಗಳ ಹಿಂದೆ ಆ ಮಾರ್ಗದ ಮಾಹಿತಿ ಹೇಗಿತ್ತು???

ಈ ಪ್ರಶ್ನೆಗಳಿಗೆ ಉತ್ತರಗಳನ್ನು ಓದಿರಿ. ಇದು ಎಡಪಂಥೀಯ ಇತಿಹಾಸಕಾರರ ಕರಾಳ ಕುತಂತ್ರವನ್ನು ಬಯಲು ಮಾಡುತ್ತದೆ.

ಭಾರತೀಯ ಬಂಧುಗಳೇ!

ರಾವಣನು ಪಂಚವಟಿಯಿಂದ (ಈಗಿನ ನಾಸಿಕ್, ಮಹಾರಾಷ್ಟ್ರ) ಸೀತಾಮಾತೆಯನ್ನು ಅಪಹರಿಸಿ ಹಂಪಿ (ಕರ್ನಾಟಕ), ಲೇಪಾಕ್ಷಿ (ಆಂಧ್ರ ಪ್ರದೇಶ) ಮೂಲಕ ಪುಷ್ಪಕ ವಿಮಾನದ ಮೂಲಕ ಲಂಕೆಯನ್ನು ತಲುಪಿದನು.

ನಾಸಿಕ್, ಹಂಪಿ, ಲೇಪಾಕ್ಷಿ ಮತ್ತು ಲಂಕಾ ಒಂದೇ ಸಾಲಿನಲ್ಲಿರುವುದನ್ನು ನಾವು ಆಧುನಿಕ ತಂತ್ರಜ್ಞಾನದೊಂದಿಗೆ ತಾಳೆ ಹಾಕಿ ನೋಡಿದಾಗ ಆಶ್ಚರ್ಯವಾಗುತ್ತದೆ.

ಅಂದರೆ, ಪಂಚವಟಿಯಿಂದ ಲಂಕಾಕ್ಕೆ ಇದು ಅತ್ಯಂತ ಹತ್ತಿರದ ಮಾರ್ಗವಾಗಿದೆ.

ಆ ಸಮಯದಲ್ಲಿ ಹತ್ತಿರದ ಮಾರ್ಗವನ್ನು ಹೇಳುವ ಯಾವುದೇ ಗೂಗಲ್ ಮ್ಯಾಪ್ ಇರಲಿಲ್ಲ ಎಂದು ನೀವು ಈಗ ಭಾವಿಸುತ್ತೀರಿ.

ಹಾಗಾದರೆ ಹತ್ತಿರದ ಮತ್ತು ನೇರವಾದ ಮಾರ್ಗ ಯಾವುದು ಎಂದು ಆ ಸಮಯದಲ್ಲಿ ಹೇಗೆ ತಿಳಿದಿತ್ತು ??

ಅಂತಯೇ ಆ ಹಿಂದೂ ವಿರೋಧಿಗಳಲ್ಲಿನ ಅಹಂಕಾರದ ತೃಪ್ತಿಗಾಗಿಯಾದರೂ ವಾಲ್ಮೀಕಿ ಬರೆದ ರಾಮಾಯಣವನ್ನು ಒಂದು ‘ಮಹಾಕಾವ್ಯ’ ಎಂದು ಒಪ್ಪಿಕೊಳ್ಳೋಣ, ಆ ಕಾಲದಲ್ಲಿ ಗೂಗಲ್ ಮ್ಯಾಪ್ ಇರಲಿಲ್ಲ, ರಾಮಾಯಣವನ್ನು ಬರೆದ ವಾಲ್ಮೀಕಿಗೆ ಪಂಚವಟಿ ಹೇಗೆ ಗೊತ್ತಾಯಿತು. ಲಂಕಾದ ಭೂಮಿಯ ದೂರಕ್ಕೆ ನೇರ ರಸ್ತೆ ಯಾವುದು ಶಾರ್ಟ್‌ಕಟ್ ರಸ್ತೆ ಯಾವುದು???

ಮಹಾಕಾವ್ಯದಲ್ಲಿ ಯಾವುದೇ ಸ್ಥಳಗಳ ಪ್ರಸ್ತಾಪವನ್ನು ಘಟನೆಗಳನ್ನು ಹೇಳಲು ಬರುತ್ತಿತ್ತು.

ಆದರೆ ಪುಷ್ಪಕ ವಿಮಾನದ ಮೂಲಕ ತೀರಾ ಹತ್ತಿರದ ಮತ್ತು ನೇರವಾದ ಮಾರ್ಗವಾದ ಸೀತಾ ಅಪಹರಣಕ್ಕಾಗಿ ರಾವಣ ಬಳಸಿದ್ದನ್ನು ವಾಲ್ಮೀಕಿ ಆ ಸ್ಥಳಗಳನ್ನು ಮಾತ್ರ ಏಕೆ ಉಲ್ಲೇಖಿಸಿದ್ದಾರೆ ???

500 ವರ್ಷಗಳ ಹಿಂದೆಯೇ ಗೋಸ್ವಾಮಿ ತುಳಸಿದಾಸರಿಗೆ ಭೂಮಿಯಿಂದ ಸೂರ್ಯನ ಅಂತರ ಎಷ್ಟು ಎಂದು ತಿಳಿದಿದ್ದಂತೆಯೇ? (ಯುಗ್ ಸಹಸ್ತ್ರ ಯೋಜನ ದೂರದಲ್ಲಿದ್ದ ಭಾನುವನ್ನು (ಸೂರ್ಯ) = 152 ಸಹಸ್ರ ಲಕ್ಷ ಕಿಮೀ – ಹನುಮಾನ್ ಚಾಲಿಸಾ, ಹನುಮಂತನು ಸಿಹಿಯಾದ ಹಣ್ಣು ಎಂದು ಅಂದುಕೊಂಡು ತಿನ್ನಲು ಹೋದ)

ಆದರೆ ನಾಸಾ ಇತ್ತೀಚಿನ ವರ್ಷಗಳಲ್ಲಿ ಈ ದೂರವನ್ನು ಪತ್ತೆ ಮಾಡಿದೆ.

ಈಗ ಮುಂದೆ ನೋಡೋಣಾ…

ಪಂಚವಟಿಯು ಶ್ರೀರಾಮ ಲಕ್ಷ್ಮಣರು ಮತ್ತು ಸೀತಾಮಾತೆ ತಮ್ಮ ವನವಾಸದ ಸಮಯದಲ್ಲಿ ವಾಸಿಸುತ್ತಿದ್ದ ಸ್ಥಳವಾಗಿದೆ.

ಇತ್ತ ಶೂರ್ಪನಖಾ ಬಂದು ಲಕ್ಷ್ಮಣನನ್ನು ಮದುವೆಯಾಗಲು ಪೀಡಿಸತೊಡಗಿದಳು.

ಆಕೆಯ ಕಾಟವನ್ನು ತಾಳಲಾರದೆ ಲಕ್ಷ್ಮಣನು ಬೇರೆ ವಿಧಿಯಿಲ್ಲದೇ ಶೂಪರ್ಣಖಾಳ ಮೂಗನ್ನು ಕತ್ತರಿಸಿದನು. ಮತ್ತು ಇಂದು ನಾವು ಈ ಸ್ಥಳವನ್ನು ನಾಸಿಕ್ (ಮಹಾರಾಷ್ಟ್ರ) ಎಂದು ಕರೆಯುತ್ತೇವೆ.

ಮುಂದಿನದನ್ನು ನೋಡೋಣಾ

ರಾವಣನ ಪುಷ್ಪಕ ವಿಮಾನವು ಹೋಗುವ ದಾರಿಯಲ್ಲಿ, ಪರ್ವತದ ತುದಿಯಲ್ಲಿ ಕೆಲವು ವಾನರರು ಕುತೂಹಲದಿಂದ ಪುಷ್ಪಕ ವಿಮಾನವನ್ನು

ನೋಡುತ್ತಿರುವುದನ್ನು ಸೀತೆ ಅಲ್ಲಿಂದ ಕೆಳಗೆ ನೋಡಿದಳು, ಆಗ ಸೀತೆಯು ರಾಮನಿಗೆ ಆ ಮಾರ್ಗದ ಸುಳಿವು ಸಿಗಲು ಸಹಾಯವಾಗಬಹುದೆಂಬ ಆಲೋಚನೆಯಿಂದ, ತಾನು ತೊಟ್ಟಿದ್ದ ಆಭರಣಗಳನ್ನು, ತನ್ನ ಉಡುಪನ್ನು ಹರಿದು ಅದರಲ್ಲಿ ತನ್ನ ಕಟ್ಟಿ ಕೆಳಗೆ ಎಸೆದಳು, .

ಸೀತೆಯು ಆ ವಾನರರಿಗೆ ಆಭರಣಗಳನ್ನು ಎಸೆದ ಸ್ಥಳವೇ ಇಂದಿನ ಹಂಪಿ (ಕರ್ನಾಟಕ) ದಲ್ಲಿರುವ ‘ಋಷ್ಯಮೂಕ ಪರ್ವತ’.

ಇದಾದ ಅನಂತರ,

ಸೀತೆಯು ಜೋರಾಗಿ ಅಳುತ್ತಿರುವುದನ್ನು ಜಟಾಯು ಕಂಡನು.

ರಾಕ್ಷಸನು ತನ್ನ ವಿಮಾನದಲ್ಲಿ ಮಹಿಳೆಯನ್ನು ಬಲವಂತವಾಗಿ ಕರೆದೊಯ್ಯುತ್ತಿರುವುದನ್ನು ನೋಡಿದನು.

ಜಟಾಯು ಸೀತೆಯನ್ನು ರಕ್ಷಿಸಲು ರಾವಣನೊಂದಿಗೆ ಹೋರಾಡಿದನು.

ರಾವಣನು ತನ್ನ ಖಡ್ಗದಿಂದ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿದನು.

ಇದಾದ ಅನಂತರ, ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕಿಕೊಂಡು ಆ ಜಾಗ ತಲುಪಿದಾಗ, ಅವರು ಮೊದಲು ದೂರದಿಂದಲೇ ಜಟಾಯುವನ್ನು ಕಂಡು ಓ… ಹಕ್ಕಿ ಎಂದು ಕರೆದರು ಮತ್ತು ಆ ಸ್ಥಳದ ಹೆಸರು ದಕ್ಷಿಣ ಭಾರತೀಯ ಭಾಷೆಯಲ್ಲಿ ‘ಲೇ.. ಪಾಕ್ಷಿ’ (ಆಂಧ್ರ ಪ್ರದೇಶ) ಎಂದು ಹೆಸರಾಯಿತು.

ನಿಮಗೆ ಈಗ ಏನು ಅರ್ಥವಾಗಿದೆ? ಪಂಚವಟಿ—ಹಂಪಿ—ಲೇಪಾಕ್ಷಿ—ಲಂಕಾ.

ನೇರ ಮಾರ್ಗ

ಎಲ್ಲಕ್ಕಿಂತ ಹತ್ತಿರದ ಮಾರ್ಗ

Google Map ನ ಹೊರತೆಗೆಯಲಾದ ಫೋಟೋವನ್ನು ಈ ಕೆಳಗೆ ಹಾಕಿರುವೆ.

ತಮ್ಮ ಜ್ಞಾನ, ವಿಜ್ಞಾನ ಮತ್ತು ಸಂಸ್ಕೃತಿಯನ್ನು ಮರೆತಿರುವ ಭಾರತದ ಹಿಂದೂ ಬಂಧುಗಳೇ, ರಾಮಾಯಣವು ನಿಜವಾಗಿಯೂ ಪುರಾಣವಲ್ಲ.

ಇದು ಮಹರ್ಷಿ ವಾಲ್ಮೀಕಿ ಬರೆದ ನಿಜವಾದ ಇತಿಹಾಸ.

ಅದರ ಎಲ್ಲಾ ವೈಜ್ಞಾನಿಕ ಪುರಾವೆಗಳು ಇಂದು ಲಭ್ಯವಿದೆ.

ಅದಕ್ಕಾಗಿಯೇ ಯಾವುದೇ ಎಡಪಂಥೀಯರು ನಮ್ಮ ಸಂಸ್ಕೃತಿ, ಇತಿಹಾಸ, ಸಾಹಿತ್ಯವನ್ನು ಪುರಾಣ ಎಂದು ಕರೆದು ಜನರನ್ನು ದಾರಿ ತಪ್ಪಿಸುವ ಅಥವಾ ತಾವೇ ಮಹಾ ಪಂಡಿತರು ಎಂದು ತೋರಿಸಲು ಪ್ರಯತ್ನಿಸಿದಾಗ, ಅವನನ್ನು ಹಿಡಿದು ಕೂರಿಸಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿ.

ನನ್ನ ನಂಬಿಕೆಯ ಪ್ರಕಾರ, ಅವರು ಒಂದಕ್ಕೂ ಉತ್ತರಿಸಲು ಸಾಧ್ಯವಾಗುವುದಿಲ್ಲ.

ಈಗ ಇದೆಲ್ಲದರಲ್ಲೂ ಹಿಂದೂಗಳಾದ ನಿಮ್ಮ ಜವಾಬ್ದಾರಿ ಏನು?

ಈಗ ಟೀವಿಯಲ್ಲಿ ರಾಮಾಯಣ ನೋಡುವಾಗ ಅಲ್ಲಿ ಕಥೆ ನಡೆಯುತ್ತಿದೆ ಎಂದುಕೊಳ್ಳದೆ, ಇದು ನಮ್ಮ ಇತಿಹಾಸ ಎಂದು ಮನದಲ್ಲಿಟ್ಟುಕೊಳ್ಳುವುದೇ ನಿಮ್ಮ ಪಾಲಿನ ಜವಾಬ್ದಾರಿ.

ಈ ದೃಷ್ಟಿಯಿಂದ ರಾಮಾಯಣವನ್ನು ನೋಡಿ ಮತ್ತು ಅರ್ಥಮಾಡಿಕೊಳ್ಳಿ.

ಅದರಲ್ಲೂ ನಮ್ಮ ಮಕ್ಕಳಿಗೆ ಈ ದೃಷ್ಟಿಯನ್ನು ಕೊಡುವುದು ಅಗತ್ಯವಾಗಿದೆ, ಮಕ್ಕಳೇ, ನಮ್ಮ ರಾಮಾಯಣವು ಕಥೆಯಲ್ಲ, ಎಡಪಂಥೀಯರು ನಮ್ಮ ಸಂಸ್ಕೃತಿ, ಇತಿಹಾಸ, ಸಾಹಿತ್ಯವನ್ನು ಅಳಿಸಲು ಇನ್ನಿಲ್ಲದ ಪ್ರಯತ್ನಿ ಮಾಡಿದ್ದಾರೆ ಎಂದು ಬಾರಿ ಬಾರಿ ಮಕ್ಕಳಿಗೆ ಹೇಳುವುದು ಅವಶ್ಯಕ.

ಇಲ್ಲಿ, ನಾವು ನಿಮಗೆ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ವೈಜ್ಞಾನಿಕ ಪುರಾವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ.

ಆದ್ದರಿಂದ ಭಾರತದ ರಾಷ್ಟ್ರೀಯ ಸಂಸ್ಕೃತಿಯನ್ನು ಉಳಿಸುವ ಈ ಹೋರಾಟದಲ್ಲಿ, ಪುರಾವೆಗಳು ಮತ್ತು ಪ್ರಮಾಣಗಳು ನಿಮ್ಮ ಬಳಿ ಯಾವಾಗಲೂ ಲಭ್ಯವಿರಬೇಕು.

(ಮಾಹಿತಿ ಸಂಗ್ರಹ)

==========================

*ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ…

ಸನಾತನವೊಂದೇ ವಿಶ್ವ ಧರ್ಮ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ