– ರಾಘವೇಂದ್ರ ಅಡಿಗ ಎಚ್ಚೆನ್.
“ಅಂತ” ಸಿನಿಮಾದಲ್ಲಿ ನಾನು ನಾಯಕನ ತಂಗಿ ಪಾತ್ರ ಮಾಡಿದ್ದೆ ಆ ಪಾತ್ರದಲ್ಲಿ ಲಂಗ ರವಿಕೆ ಧರಿಸಿ ನಟಿಸಲು ಮುಜುಗರ ಆಗಿತ್ತು ಎಂದು ನಟಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹೇಳಿದ್ದಾರೆ
‘ದಿನಾಂಕ : 18.04.2026 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 246 ನೇ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಖ್ಯಾತ ನಟಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜಯಮಾಲ ಅವರು ಮನೆಯಂಗಳದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

‘ಅಂತ’ ಸಿನಿಮಾದಲ್ಲಿ ನಾಯಕಿಯ ತಂಗಿ ಪಾತ್ರದಲ್ಲಿ ನಟಿಸಿದೆ. ಲಂಗ ಮತ್ತು ರವಿಕೆ ಧರಿಸಿ ಅಭಿನಯಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಈ ಪಾತ್ರದಲ್ಲಿ ನಟಿಸುವುದಿಲ್ಲ ಎಂದಿದ್ದೆ. ಆದರೆ, ನೃತ್ಯ ನಿರ್ದೇಶಕ ಜಯರಾಂ ಅವರು ನನ್ನ ಒಪ್ಪಿಸಿದರು. ನಿನಗೆ ಅಪವಾದ ಬಾರದ ರೀತಿಯಲ್ಲಿ ನೃತ್ಯ ಸಂಯೋಜನೆ ಮಾಡುತ್ತೇನೆ. ನಿನಗೆ ಈ ಪಾತ್ರ ಹೆಸರು ತಂದುಕೊಡುತ್ತದೆ ನಟಿಸು ಎಂದರು. ಅವರ ಮಾತಿಗೆ ಬೆಲೆ ಕೊಟ್ಟು ಮುಜಗರದಿಂದಲೇ ನಟಿಸಿದ ಪಾತ್ರ ಕ್ಲಿಕ್ ಆಯ್ತು. ಬೇರೆ ಭಾಷೆಗಳಲ್ಲೂ ಈ ಸಿನಿಮಾ ಮಾಡುವಾಗ ನನಗೆ ಕರೆ ಬಂತು ಎಂದು ಜಯಮಾಲಾ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದ ನಟಿ
ಮಂಗಳೂರಿನ ಪಣಂಬೂರು ಬಂದರುಗಾಗಿ ಸೂರು ಕಳೆದು ಕೊಂಡವರ ಕುಟುಂಬ ನಮ್ಮದು. ಪೋರ್ಟ್ ಬರುತ್ತೆ ಎಂದು ನಮ್ಮನೆಲ್ಲಾ ಕಾಟಿಪಳ್ಳಗೆ ಎತ್ತಂಗಡಿ ಮಾಡಿದರು. ನಾನು ಮೂರೂವರೆ ವರ್ಷದಳು ಇದ್ದಾಗ ನಮ್ಮ ತಂದೆ ಸಂಸಾರ ಸಮೇತ ಚಿಕ್ಕಮಗಳೂರಿಗೆ ವಲಸೆ ಬಂದರು. ನಮ್ಮದು ತುಂಬಾ ಬಡತನದ ಕುಟುಂಬ. ಸಣ್ಣ, ಸಣ್ಣ ಮಕ್ಕಳೊಂದಿಗೆ ಊರಿನಿಂದ ಬೇರೆ ಊರಿಗೆ ಹೋಗಿ ಬದುಕುವ ಯಾತನೆ ತಾಯಿಯನ್ನು ಕಾಡಿತ್ತು. ನಾವು ಒಟ್ಟು 7 ಮಂದಿ ಮಕ್ಕಳು. ಬಡನತದಲ್ಲೇ ಬಾಲ್ಯ ಕಳೆಯಿತು. ನನಗೆ 8 ವರ್ಷವಿದ್ದಾಗಲೇ ಬಡತನ ನೀಗಿಸಲು 10 ರೂ.ಸಿಗುತ್ತೆ ಎಂಬ ಕಾರಣದಿಂದ ಆರ್ಕೇಸ್ಟ್ರಾದಲ್ಲಿ ಹಾಡು, ಹಾಡಲು ಆರಂಭಿಸಿದೆ. ನಂತರ ನೃತ್ಯ ಮಾಡಲು ಶುರುಮಾಡಿದೆ. ಡಾನ್ಸ್ ಮಾಡಿದಕ್ಕೆ 25 ರೂ. ಸಿಗುತ್ತಿತ್ತು ಎಂದು ನೋವಿನ ದಿನಗಳನ್ನು ನೆನಪಿಸಿಕೊಂಡರು.

ನಾನು, ಸಣ್ಣವಳಿದ್ದಾಗ ಅಪ್ಪ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಶಾಲೆಗೆ ಹೋಗಿ ಓದಬೇಕು ಎಂಬ ಆಸೆಯಿದ್ದರೂ, ಅನಿವಾರ್ಯವಾಗಿ ಬಣ್ಣದ ಲೋಕಕ್ಕೆ ಹೆಜ್ಜೆಯಿರಿಸಿದೆ ಎಂದರು.

ರಾಜ್ ಕುಮಾರ್ ಅವರ 7 ಸಿನಿಮಾಗಳಲ್ಲಿ ನಟಿಸಿದ್ದೇನೆ. ಭಾರತೀಯ ಚಿತ್ರರಂಗದ ಹಲವು ನಟಿಯರು ರಾಜ್ ಕುಮಾರ್‌ಅವರ ಸಿನಿಮಾದಲ್ಲಿ ನಟಿಸಲು ಕಾಯುತ್ತಿದ್ದ ಕಾಲದಲ್ಲಿ ನಾನು ಅವರ ಸಿನಿಮಾದ ನಾಯಕಿಯಾಗಿ ನಟಿಸಿದ್ದೇ ನಮ¬¾ ಪುಣ್ಯ ಎಂದು ಹೇಳಿದರು.
16ನೇ ವಯಸ್ಸಿಗೇ ಡಾ.ರಾಜ್‌ಕುಮಾರ್ ಅವರ ಸಿನಿಮಾಕ್ಕೆ ನಾನು ನಾಯಕಿ**

ತುಳು ಸಿನಿಮಾದಲ್ಲಿ ನಟಿಸಿದ್ದ ನನ್ನನ್ನು ನಿರ್ದೇಶಕ ಸಿದ್ದಲಿಂಗಯ್ಯ ಅವರು ‘ಭೂತಯ್ಯನ ಮಗ ಅಯ್ಯು’ ಸಿನಿಮಾದಲ್ಲಿ ಸಣ್ಣ ಪಾತ್ರ ನೀಡಿದರು. ರಾಜ್ ಕುಮಾರ್‌ಅವರ ಸಹೋದರ ವರದಪ್ಪ ಅವರು ಆ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಪಾರ್ವತಮ್ಮ ಅವರು ರಾಜ್ ಕುಮಾರ್‌ಅವರ “ಪ್ರೇಮದ ಕಾಣಿಕೆ” ಸಿನಿಮಾಕ್ಕೆ ಹೊಸ ನಾಯಕಿಯನ್ನು ಹುಡುಕಾಡುತ್ತಿದ್ದರು. ಆ ವೇಳೆ ವರದಪ್ಪ ಅವರು ನನ್ನ ಹೆಸರನ್ನು ಸೂಚಿಸಿದ್ದರು. ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ತಂಗಿದ್ದ ನನ್ನನ್ನು, ಹೈಲ್ಯಾಂಡ್ ಹೋಟೆಲ್ ಗೆ ಕರೆಯಿಸಿ ಮೇಕಪ್ ಹಾಕಿದರು. ಹೀಗಾಗಿ, 16ನೇ ವಯಸ್ಸಿನಲ್ಲಿರುವಾಗಲೇ ರಾಜ್ ಕುಮಾರ್‌ಅವರೊಂದಿಗೆ ನಾಯಕಿ ನಟಿಯಾಗಿ ನಟಿಸಿದೆ ಎಂದು ಜಯಮಾಲ ಸ್ಮರಿಸಿದರು.

ಚಿತ್ರರಂಗ ಈಗ ಉದ್ಯಮವಾಗಿದೆ
ಬೆಳ್ಳಿತೆರೆ ಈಗ ಬೆಳ್ಳಿತೆರೆಯಾಗಿ ಉಳಿದಿಲ್ಲ. ಡಿಜಿಟಲೀಕರಣ, ಒಟಿಪಿ ಎಲ್ಲವೂ ಕರಳು ಹಿಂಡುವಂತೆ ಮಾಡಿವೆ. ಡಬ್ಬಿಂಗ್ ಬೇಡ ಎಂದು ರಾಜ್ ಕುಮಾರ್ ಸೇರಿದಂತೆ ನಾವೆಲ್ಲರೂ ಹೋರಾಟ ನಡೆಸಿದ್ದೆವು. ಆದರೆ, ಈಗ ಪ್ಯಾನ್ ಇಂಡಿಯಾ ಕಲ್ಪನೆ ಬಂದಿದೆ. ಒಂದು ಬಟನ್ ಒತ್ತಿದರೆ ಎಲ್ಲ ಭಾಷೆಗಳು ಬರುತ್ತವೆ. ಚೆನ್ನೈಯಿಂದ ಬೆಂಗಳೂರಿಗೆ ಕನ್ನಡ ಚಿತ್ರರಂಗ ಬಂದಾಗ ಸರ್ಕಾರ ಹಲವು ಭರವಸೆ ನೀಡಿತ್ತು. ಮಲ್ಟಿಫೆಕ್ಸ್‌ಗಳಲ್ಲಿ ನಮ್ಮ ಸಿನಿಮಾಗಳು ನೋಡಬಹುದು ಎಂದು ಕನಸು ಕಂಡಿದ್ದೇವೆ. ಆದರೆ ಈಗ ಚಿತ್ರರಂಗ ಉದ್ಯಮವಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು
ರಾಜಕೀಯದಲ್ಲಿ ಸಿದ್ದರಾಮಯ್ಯ ನನ್ನ ದೇವತಾ ಸ್ವರೂಪಿ

ನನಗೆ ರಾಜಕೀಯ ಹೀರೋಯಿನ್ ಮಾಜಿ ಪ್ರಧಾನಿ ಇಂದಿರಾಗಾಂಧಿ. ನನ್ನ ರಾಜಕೀಯ ಹೀರೋ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು. ಅವರ ಅನ್ನಭಾಗ್ಯಯೋಜನೆ ನನ್ನ ನೆಚ್ಚಿನ ಯೋಜನೆಯಾಗಿದೆ. ನನಗೆ ಡಾ.ರಾಜ್ ಕುಮಾರ್ ಅವರು ಸಿನಿಮಾ ಕ್ಷೇತ್ರದ ದೇವತಾ ಸ್ವರೂಪಿಯಾ ಗಿದ್ದಾರೆ. ಅದೇ ರೀತಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವತಾ ಸ್ವರೂಪಿ ಎಂದು ಹಿರಿಯ ನಟಿ ಜಯಮಾಲ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಬಿ.ಎಸ್.

ಮಂಜುನಾಥಸ್ವಾಮಿ, (ಕ.ಆ.ಸೇ) ಅವರು ಮನೆಯಂಗಳದ ಅತಿಥಿಯನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಬನಶಂಕರಿ ವಿ ಅಂಗಡಿಯವರು, ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು, ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.





