ರಾಘವೇಂದ್ರ ಅಡಿಗ ಎಚ್ಚೆನ್.

ಅಮೆರಿಕ-ಇರಾನ್-ಇಸ್ರೇಲ್ ನಡುವಣ ಯುದ್ಧದಿಂದಾಗಿ ದಾವಣಗೆರೆಯ ಆಟೋ ಚಾಲಕರು ಗ್ಯಾಸ್ ಸಿಗದೆ ಹೈರಾಣಾಗಿದ್ದಾರೆ. ಗ್ಯಾಸ್‌ಗಾಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಪರಿಸ್ಥಿತಿ ಇದೆ. ಇಂತಹ ಸಂದಿಗ್ಧತೆಯಲ್ಲಿ ನಟ ಧ್ರುವ ಸರ್ಜಾ ದಾವಣಗೆರೆ ಆಟೋ ಚಾಲಕರ ನೆರವಿಗೆ ಧಾವಿಸಿದ್ದಾರೆ.
ನಗರದ ಹದಡಿ ರಸ್ತೆಯಲ್ಲಿರುವ ಮಾಗನೂರು ಬಸಪ್ಪ ಎಲ್ಪಿಜಿ ಬಂಕ್ನಲ್ಲಿ 500 ಆಟೋಗಳಿಗೆ ತಲಾ 300 ರೂಪಾಯಿ ವೆಚ್ಚದಲ್ಲಿ 3.5 ಲೀಟರ್ ಉಚಿತವಾಗಿ ಗ್ಯಾಸ್ ಹಾಕಿಸುವ ಮೂಲಕ ಧ್ರುವ ಸರ್ಜಾ ಆಟೋ ಚಾಲಕರ ಪಾಲಿಗೆ ಹೀರೋ ಆಗಿದ್ದಾರೆ. ತಮ್ಮ ನಟನೆಯ ‘ಕೆಡಿ’ ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಅವರು ಸಹಾಯಹಸ್ತ ಚಾಚಿದ್ದಾರೆ.
ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ರಾಜ್ಯದಲ್ಲಿ ಆಟೋ ಚಾಲಕರು ಅನುಭವಿಸುತ್ತಿರುವ ಎಲ್ಪಿಜಿ ಸಮಸ್ಯೆಯನ್ನು ಸರ್ಕಾರಗಳು ಮಧ್ಯಪ್ರವೇಶಿಸಿ ಬಗೆಹರಿಸಬೇಕು ಎಂದು ಈ ಹಿಂದೆ ದ್ರುವ ಸರ್ಜಾ ಮನವಿ ಮಾಡಿದ್ದರು.
ಆಟೋ ಚಾಲಕರು ಪ್ರತಿಕ್ರಿಯಿಸಿ, “ಧ್ರುವ ಸರ್ಜಾ ಅಣ್ಣನವರು ಒಂದು ಆಟೋಗೆ 300 ರೂಪಾಯಿಯಂತೆ 3.5 ಲೀಟರ್ ಗ್ಯಾಸ್ ಹಾಕಿಸಿದ್ದಾರೆ. ಅವರ ಕೆ.ಡಿ ಚಿತ್ರದ ಪ್ರಯುಕ್ತ ಈ ಕೆಲಸ ಮಾಡಿದ್ದಾರೆ. ದಾವಣಗೆರೆ ಆಟೋ ಚಾಲಕರ ಪರವಾಗಿ ಅವರಿಗೆ, ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ. ಕೆ.ಡಿ ನೂರು ದಿನಗಳನ್ನು ಪೂರೈಸಲಿ. ಧ್ರುವ ಸರ್ಜಾ ಅಣ್ಣನವರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ಆಶಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ