ರೀ….ಹಾಲು ಬಂದಿದ್ದರೆ ತಗೊಂಡು ಬನ್ನಿ,
ಪೇಪರ್ ಬಂತಾ ನೋಡಿ,
ಆ ದೀಪ ಯಾಕೊ ಹತ್ತುತ್ತಿಲ್ಲಾ ಸ್ವಲ್ಪ ನೋಡಿ,
ಈ ಫ್ಯಾನಲ್ಲಿ ಗಾಳಿನೇ ಬರ್ತಿಲ್ಲಾರಿ,
ಈ ಗ್ಯಾಸ್ ಸಿಲೆಂಡರ್ ಸ್ವಲ್ಪ ಜೋಡಿಸಿಕೊಡಿ,
ಆ ತೊಳೆಯೊ ತಟ್ಟೆ ಲೋಟ ಸ್ವಲ್ಪ ಈ ಕಡೆ ಕೊಡ್ತಿರಾ..
ಇವತ್ತು ಹಾಸಿಗೆ ಬೆಡ್ ಸ್ಪ್ರೆಡ್ ಬದಲಾಯಿಸಬೇಕು ರಿ..
ಒಲೆ ಮೇಲೆ ಹಾಲಿಟ್ಟಿದ್ದೇನೆ ಸ್ವಲ್ಪ ನೋಡ್ತಿರಾ…

ವಾಷಿಂಗ್ ಮಿಷನ್ನಿಗೆ ಬಟ್ಟೆ ಹಾಕಿದ್ದೇನೆ, ಸ್ಪಲ್ಪ ಒಣಹಾಕ್ತಿರ ಪ್ಲೀಸ್..
ರಿ….ಗ್ಯಾಸ್ ಮೇಲೆ ಕುಕ್ಕರ್ ಇಟ್ಟಿದ್ದೇನೆ, ಮೂರು ವಿಷಲ್ ಆದಕೂಡ್ಲೆ ಆರಿಸಿಬಿಡ್ತಿರಾ…
ರಿ…ಮೇಲುಗಡೆ ತುಂಬಾ ಬಲೆ ಕಟ್ಟಿಬಿಟ್ಟಿದೆ, ನನಗೆ ಸಿಗೊದಿಲ್ಲ ಸ್ವಲ್ಪ ಗುಡಿಸಿಕೊಡ್ತೀರಾ…
ಹಗ್ಗದ ಮೇಲೆ ಹರವಿದ ಬಟ್ಟೆ ಒಣಗಿದೆ, ಮಳೆ ಬರೊಹಾಗಿದೆ, ಮಡಿಸಿಟ್ಟು ಬಿಡ್ರಿ..
ಪೇಟೆಕಡೆ ಹೋದಾಗ ಆ ಟೈಲರ್ ಹತ್ರಾ ಹೋಗಿ ನನ್ನ ಬಟ್ಟೆ ಹೊಲಿದು ಆಗಿದೆಯಾ ಕೇಳ್ರಿ..
ರೀ…..ಮಗುಗೆ ಸ್ವಲ್ಪ ಸ್ನಾನಾ ಮಾಡಿಸ್ತೀರ,
ರೀ…..ಮರ್ತೇ ಹೋಯ್ತು, ನೀವು ಸ್ನಾನ ಮಾಡೊಕೆ ಮುಂಚೆ ಟಾಯ್ಲೆಟ್ ಒಂದು ಚೂರು ತೊಳೆದು ಬಿಡ್ರಿ ತುಂಬಾ ಗಲೀಜಾಗಿದೆ….
ಹಾಗೇ ತಿಂಡಿ ತಿಂದೋರು ತಟ್ಟೆ ಲೋಟ ಸಿಂಕ್ ನಲ್ಲಿ ಹಾಕ್ತಿರಾ….
ಈ ತರಹದ ಕೆಲಸಗಳ ಸರಮಾಲೆ ಧರಿಸಿ; ಮನೆಯಲ್ಲಿ ಏನೂ ಕೆಲಸವಿಲ್ಲದ ಯಜಮಾನರಿಗೆ ಉರುಫ್ ಗಂಡಂದಿರಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು.





