ಪತ್ನಿ ಮತ್ತೆ ಮತ್ತೆ ತಾಯಿಯ ಮೇಲೆ ಆರೋಪ ಮಾಡುತ್ತಿದ್ದಳು. ಆದರೆ ಪತಿ ಅವಳಿಗೆ ತನ್ನ ಮಾತಿನ ಮಿತಿ ಮೀರಬೇಡವೆಂದು ಮನವಿ ಮಾಡುತ್ತಿದ್ದ. ಆದರೂ ಪತ್ನಿ ಮೌನವಾಗದೆ ಜೋರು ಜೋರಾಗಿ ಟೇಬಲ್ ಮೇಲೆ ಕೈಸನ್ನೆ ಮಾಡುತ್ತಾ ಕೂಗಿ ಹೇಳುತ್ತಿದ್ದಳು ನಾನು ಚಿನ್ನದ ಹಾರವನ್ನು ಇಲ್ಲೇ ಟೇಬಲ್ ಮೇಲೆ ಇಟ್ಟಿದ್ದೆ, ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರು ಕೋಣೆಯೊಳಗೆ ಬಂದಿಲ್ಲ, ಮನೆಯಲ್ಲಿ ಮೂರನೆಯವರು ನಿಮ್ಮ ತಾಯಿಯೇ. ಹಾಗಾಗಿ ಅವರೇ ಅದನ್ನು ತೆಗೆದುಕೊಂಡಿದ್ದಾರೆ.

ಅಲ್ಲಿಯವರೆಗೂ ಸುಮ್ಮನಿದ್ದ ಪತಿ, ತನ್ನ ತಾಯಿಯ ಮೇಲೆ ಕಳ್ಳತನದ ಆರೋಪ ಬಂದ ಕೂಡಲೇ, ಅವನ ಸಂಯಮವನ್ನೇ ಮೀರಿಸಿತು. ಅವನು ತನ್ನ ಪತ್ನಿಯ ಕಪಾಳಕ್ಕೊಂದು ಜೋರಾಗಿ ಬಾರಿಸಿದ. ಇನ್ನೂ ಮದುವೆಯಾಗಿ ಮೂರು ತಿಂಗಳು ಕಳೆದಿರಲಿಲ್ಲ.

ಹೊಡೆತ ಹೆಂಡತಿಗೆ ಸಹನೆಯಾಗಲಿಲ್ಲ ಮನೆ ಬಿಟ್ಟು ಹೊರಟು ಬಿಟ್ಟಳು.. ಹಾಗೆ ಹೋಗುವಾಗ, ನಿಮಗೆ ತಾಯಿಯ ಮೇಲೆ ಯಾಕೆ ಇಷ್ಟು ಭರವಸೆ ? ಎಂದು ಕೇಳಿಯೇ ಬಿಟ್ಟಳು

ಪತಿ ನೀಡಿದ ಪ್ರತ್ಯುತ್ತರದಿಂದ ಬಾಗಿಲ ಹಿಂದೆ ಬಗ್ಗಿ ಹೋದ ಬಡಕಲು ಶರೀರದ ಹೆತ್ತವ್ವನ ಮನಸ್ಸಿನ ದುಃಖ ಕಣ್ಣಿನ ಮೂಲಕ ಧುಮ್ಮಿಕಿತು.

ಪತಿ ಪತ್ನಿಗೆ ತನ್ನ ಪೂರ್ವ ಇತಿಹಾಸವನ್ನು ಈ ರೀತಿ ಪರಿಚಯಿಸುತ್ತಾನೆ

ನಾನು ಚಿಕ್ಕವನಾಗಿರುವಾಗಲೇ ತಂದೆಯನ್ನು ಕಳೆದು ಕೊಂಡೆ, ನನ್ನ ಪಾಲನೆ ಪೋಷಣೆಗಾಗಿ ಹೆತ್ತ ಅವ್ವ ಬೇರೆಯವರ ಮನೆಯಲ್ಲಿ ಪಾತ್ರೆ ಮುಸುರೆ ತಿಕ್ಕಿ ಏನು ಸಂಪಾದಿಸಲು ಸಾಧ್ಯವಿತ್ತೋ ಅದರಿಂದ ಒಂದು ಹೊತ್ತಿನ ಊಟ ತರುತ್ತಿದ್ದಳು.

ತಾಯಿ ತಟ್ಟೆಯೊಂದರಲ್ಲಿ ನನಗೆ ಊಟ ಬಡಿಸಿ ಖಾಲಿ ಡಬ್ಬವನ್ನು ಮುಚ್ಚಿ ಇಡುತ್ತಿದ್ದಳು. ನನ್ನ ಊಟ ಇದರಲ್ಲಿದೆ ನೀನು ಊಟ ಮಾಡು ಅನ್ನುತ್ತಿದ್ದಳು. ನಾನು ಸಹ ಪ್ರತಿದಿನವೂ ಅರ್ಧ ಊಟ ಮಾಡಿ ಹೊಟ್ಟೆ ತುಂಬಿ ಹೋಯಿತು ಎಂದು ಎದ್ದು ಓಡುತ್ತಿದ್ದೆ. ಅಮ್ಮ ನನ್ನ ಎಂಜಿಲು ಊಟ ಮಾಡಿ ನನ್ನನ್ನು ಬೆಳೆಸಿ ದೊಡ್ಡವನಾಗಿ ಮಾಡಿ ನಾನು ಇಂದು ಮೂರು ಹೊತ್ತು ಊಟ ಸಂಪಾದಿಸುವ ಮಟ್ಟಕ್ಕೆ ತಂದಿದ್ದಾಳೆ ನನಗಾಗಿ ಅವಳು ತನ್ನ ಎಲ್ಲಾ ಇಚ್ಚೆಯನ್ನೇ ಕೊಂದಿದ್ದಾಳೆ.ಆ ತಾಯಿಗೆ ಈ ವಯಸ್ಸಿನಲ್ಲಿ ನಿನ್ನ ಚಿನ್ನದ ಹಾರದ ಹಸಿವು ಇರಲಿಕ್ಕಿಲ್ಲ.

ನನಗೆ ಮೂರು ತಿಂಗಳಿನಿಂದ ನಿನ್ನ ಪರಿಚಯ ಅಷ್ಟೇ, ನನ್ನ ಅವ್ವನ ತಪಸ್ಸನ್ನು ನಾನು ಇಪ್ಪತ್ತೈದು ವರುಷದಿಂದ ನೋಡುತ್ತಿದ್ದೇನೆ.

ಮಗನ ಮಾತನ್ನು ಕೇಳಿದ ಆ ಮುಗ್ಧ ಮಾತೆಗೆ ಕಂಬನಿ ನಯನಗಳಿಂದ ನಿಲ್ಲದೆ ಹರಿಯಿತು ಹೆತ್ತವ್ವನಿಗೆ ಅರ್ಥವೇ ಆಗಲಿಲ್ಲ ತಾನು ಮಗನಿಗೆ ಬಡಿಸಿದ ಅರ್ಧ ಊಟದ ಋುಣ ಅವನು ತೀರಿಸುತ್ತಿದ್ದಾನಾ? ಇಲ್ಲವೇ ಅವನು ಉಳಿಸಿದ ಅರ್ಧ ಊಟದ ಋುಣ ನಾನು ತೀರಿಸುತ್ತಿದ್ದೇನಾ?

#ಕಥೆಯಲ್ಲಾ ಇದು ವ್ಯಕ್ತಿಯ ವ್ಯಥೆ#

ಅಮ್ಮ ದೇವರಲ್ಲ, ಅವಳ ಮುಂದೆ ದೇವರು ಏನೇನೂ ಇಲ್ಲಾ.

ಈ ಕಥೆಯನ್ನು ನನ್ನ ತಂಗಿ ನಮಗೆ ವಾಟ್ಸಾಪ್ ಮುಖಾಂತರ ಕಳುಹಿಸಿದಾಗ ಈ ಕಥೆ ಏಕೋ ಸಂಪೂರ್ಣವಾಗಿರದೇ ಕೇವಲ ಒಂದೇ ದೃಷ್ಟಿಕೋನದಲ್ಲಿದೆ ಎಂದೆನಿಸಿ ನನ್ನ ಕಲ್ಪನೆಯಲ್ಲಿ ಕಥೆಯನ್ನು ಮುಂದುವರಿಸಿದ್ದೇನೆ.

ಹೊಸದಾಗಿ ಮದುವೆಯಾದ ಗಂಡನಿಂದ ಅಚಾನಕ್ಕಾಗಿ ಈ ರೀತಿಯ ಆಘಾತದಿಂದ ಮನನೊಂದ ಹೆಂಡತಿ, ‌ಕೋಪ ಮಾಡಿಕೊಂಡು ದಡದಡನೆ ಕೈಗೆ ಸಿಕ್ಕ ನಾಲ್ಕಾರು. ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಮನೆಯಿಂದ ಆಚೇ ಹೋಗ್ತಾಳೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ