Sj*

ಪೋಲಾ ಪ್ರವೀಣ್ ಕುಮಾರ್ ನಿರ್ಮಾಣದ ಹಾಗೂ ಗುರುಮೂರ್ತಿ ವಿ ನಿರ್ದೇಶನದ “ಶಿಖಂಡಿ” ಚಿತ್ರ ಈ ವಾರ (ಮೇ 15) ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಚಿತ್ರ ಜನರ ಮನಸ್ಸಿಗೆ ಹತ್ತಿರವಾಗಿದೆ.

shikhandi 1

ಮಹಾಭಾರತದಲ್ಲಿ ಬರುವ “ಶಿಖಂಡಿ” ಪಾತ್ರವನ್ನು ಆಧರಿಸಿರುವ ಕಥಾಹಂದರ ಹೊಂದಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ನಾಯಕನಾಗಿ ಯುವರಾಜ್ ಗೌಡ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸಿದ್ದಾರೆ. ಖ್ಯಾತಿ‌ ಈ ಚಿತ್ರದ ನಾಯಕಿ. ನಿಖಿಲ್, ನಿಖಿತಸ್ವಾಮಿ, ದೀಪಕ್ ಶೆಟ್ಟಿ, ನೀತು ವನಜಾಕ್ಷಿ, ರಾಘವೇಂದ್ರ (ರಾಗು), ಚಾಂದಿನಿ, ವೇದ, ಬಲ ರಾಜ್ವಾಡಿ, ನಯನ, ವಿಜಯ್ ಚೆಂಡೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಂಜು ಕವಿ ಸಂಗೀತ ನಿರ್ದೇಶನವಿರುವ “ಶಿಖಂಡಿ” ಚಿತ್ರಕ್ಕೆ ಪ್ರದ್ಯೋತನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸ್ವಾಮಿ ಮೈಸೂರು ಛಾಯಾಗ್ರಹಣ ಹಾಗೂ ಚಕ್ರಂ ಸಾಯಿ ಸಂಕಲನ ಈ ಚಿತ್ರಕ್ಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ