ಆಫ್ಘಾನಿಸ್ತಾನ್‌, ಬಾಂಗ್ಲಾದೇಶ್‌, ಪಾಕಿಸ್ತಾನ್‌, ಸಿರಿಯಾದ ದೇಶಗಳಲ್ಲಿ ಯಶಸ್ವಿಯಾಗಿ ಬೇರೂರುತ್ತಿರುವ ತಾಲಿಬಾನಿ ತರಹದ ಕಂದಾಚಾರ ಮುಸ್ಲಿಮರಿಗೆ ಕಂಟಕವಾಗಿದೆ. ಭಾರತದಲ್ಲಿ ವಿಹಿಂಪ ಸಂಘಗಳು ಮಾಡುತ್ತಿರುವುದೂ ಇದೇ. ಅಮೆರಿಕಾದಲ್ಲಿ ಟ್ರಂಪಣ್ಣನ ಸೇನೆಯಾದ ಹೊರಡಿಸಿರುವ ಸ್ಲೋಗನ್‌ ಈಗ ಸಣ್ಣಪುಟ್ಟ ಸೇರಿದಂತೆ ಬಹುತೇಕ ದೇಶಗಳಿಗೂ ಹರಡುತ್ತಿದೆ. ಹೊಸ ಉದಾ ನೇಪಾಳಿನದ್ದು, ಅಲ್ಲಿನ ರಾಷ್ಟ್ರೀಯ ಪ್ರಜಾತಾಂತ್ರಿಕ ಪಕ್ಷ ತಮ್ಮ ರಾಜಮನೆತನದ ಅಧಿಕಾರ ವಾಪಸ್ಸು ಬರಲೆಂದು ಜನರನ್ನು ಒಟ್ಟುಗೂಡಿಸುತ್ತಿದೆ, ಧರಣಿ ನಡೆಸುತ್ತಿದೆ, ಅಲ್ಲಿನ ಚುನಾಯಿತ ಸರ್ಕಾರ ಇದರಿಂದ ತತ್ತರಿಸುತ್ತಿದೆ.

ಈ ಎಲ್ಲಾ ಕಡೆಯೂ ಒಂದು ವಿಷಯ ಒಂದೇ ರೀತಿ ಆಗಿದೆ. ರಾಜಕೀಯ, ಸಮಾಜದಲ್ಲಿ ಧರ್ಮದ ಗುತ್ತಿಗೆದಾರರ ಪುನಾಪ್ರವೇಶ ಆಗಿದೆ. ಎಲ್ಲಾ ಕಡೆ ರಾಜಕೀಯಕ್ಕಿಂತ ಹೆಚ್ಚಾಗಿ, ಆಡಳಿತ ನಡೆಸುವುದಕ್ಕಿಂತ ಹೆಚ್ಚಾಗಿ ದೇವರು, ಮಂದಿರ, ಜೀಸಸ್‌, ಚರ್ಚು, ಅಲ್ಲಾ, ಮಸೀದಿಗಳ ತಾಕತ್ತು ಕಂಡುಬರುತ್ತಿವೆ. ಇದರಿಂದ ಇನ್ನೇನಿಲ್ಲದಿದ್ದರೂ ದಾನಪುಣ್ಯಗಳ ಕೀರ್ತಿ ಹೆಚ್ಚಿದೆ,  ಹೆಂಗಸರ ಗುಲಾಮಗಿರಿ ಹೆಚ್ಚುತ್ತಿದೆ, ಭೇದಭಾವ ಹೆಚ್ಚುತ್ತಿದೆ!

ಧರ್ಮದ ಸೂತ್ರಕ್ಕೆ ತಕ್ಕಂತೆ ಕುಣಿಯುತ್ತಿರುವ, ಧರ್ಮದಿಂದ ನಿವ್ವಳ ಲಾಭ ಗಿಟ್ಟಿಸುತ್ತಿರುವ ಈ ಮಂದಿ ರಾಷ್ಟ್ರವಾದ, ಮಹಾನ್ ದೇಶ ಮಾಡಿಬಿಡು, ಇತಿಹಾಸದ ಕಪ್ಪು ಪುಟ ಸುಡುತ್ತಾ ಅಥವಾ ಅದಕ್ಕೆ ಮಸಿ ಸವರುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಬೆಲೆ ತೆರಬೇಕಾಗಿರುವವರು ಮಾತ್ರ ಪ್ರತಿ ಜಾಗದಲ್ಲೂ ಹೆಂಗಸರೇ ಆಗಿದ್ದಾರೆ. ಭಾರತದಲ್ಲಿ ಹೆಂಗಸರಿಗೆ ತಲೆ ಮೇಲೆ ಕಲಶ ಹೊತ್ತು ನಡೆಯುವ, ಕೊರೆಯುವ ಚಳಿಯಲ್ಲಿ ತಣ್ಣನೆ ನದಿ ನೀರಿನ ಸ್ನಾನ ಮಾಡುವ ಪಾಠಗಳಾಗುತ್ತವೆ. ಮುಸ್ಲಿಂ ದೇಶಗಳಲ್ಲಿ ಪ್ರಾಚೀನ ಕಂದಾಚಾರ ಪಾಲಿಸಲು ಬುರ್ಕಾಗಳಲ್ಲಿ ಬಂಧಿಸಿಡಲಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕಲಿತ ಹೆಣ್ಣನ್ನೂ ಬಿಡದೆ, ಮನೆಯ ಒಳಗೂ ಹೊರಗೂ ದುಡಿಯುವ ಆಧುನಿಕ ಹೆಣ್ಣನ್ನೂ ಸಹ ಸಂಗಾತಿ ಆರಿಸುವ ಹಕ್ಕಿಲ್ಲದಂತೆ, ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕಿಲ್ಲದಂತೆ ಮಾಡಿಟ್ಟಿದ್ದಾರೆ. ಎಲ್ಲಾ ಕಡೆ ಚರ್ಚ್‌ ಮಾತ್ರ ಹೊಳೆಯುತ್ತಿದೆ, ಮಸೀದಿಗಳ ನವೀಕರಣ ಆಗುತ್ತಿದೆ, ಮಂದಿರಗಳಲ್ಲಿ ಮೊಸಾಯಿಕ್‌ ನೆಲ ಥಳಗುಟ್ಟುತ್ತಿದೆ!

ಈ ಹೊಸ ಕ್ರಾಂತಿಯನ್ನು ಪ್ರತಿ ಕ್ರಾಂತಿ ಎನ್ನುವುದೇ ಸರಿಯೇನೋ, 2 ಶತಮಾನಗಳ ಸುಧಾರಣೆಗಳನ್ನು ಸಮಾಪ್ತಿಗೊಳಿಸುವ  ಪ್ರಯತ್ನ ಎನ್ನುವುದೇ ಹೆಚ್ಚು ಸರಿಯಾದೀತು ಹೆಂಗಸರನ್ನು ಪ್ರಾಚೀನ ಕಾಲದ ದಾಸ್ಯಕ್ಕೆ ತಳ್ಳುವುದೇ ಇದರ ಗುರಿ. ಇದರ ಜನಕರಿಗೆ ರಾಜಕೀಯದ ಅಧಿಕಾರದ ಚಿಂತೆ ಕಡಿಮೆ, ಮನೆಗಳ ಆಡಳಿತದ ಚಿಂತೆಯೇ ಹೆಚ್ಚಾದಂತಿದೆ. ಇದು ಸ್ತ್ರೀಪುರುಷರ ದ್ವಂದ್ವದ ಗುರುತು. ಹೆಂಗಸರನ್ನು ಹೆಚ್ಚಿಗೆ ಎಲ್ಲದಕ್ಕೂ ಸೇರಿಸಿಕೊಳ್ಳಬಾರದು, ಆಸ್ತಿ ತಮ್ಮ ಹೆಸರಲ್ಲಿ ಉಳಿಸಿಕೊಳ್ಳಲು, ಹೆಣ್ಣು ಸದಾ ಗಂಡಿನ ಅಡಿಯಾಳಾಗಿರಲು, ಶಿಕ್ಷಣ ಪಡೆಯದಿರಲು, ತನ್ನಿಷ್ಟದಂತೆ ಗಂಡನನ್ನು ಆರಿಸಿಕೊಳ್ಳುವ, ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳುವ ಅವಕಾಶ ನೀಡದಂತೆ ತಡೆ ಒಡ್ಡುತ್ತಿದ್ದಾರೆ.

ಅಮೆರಿಕಾ, ಭಾರತ, ಯೂರೋಪ್‌, ಚೀನಾ, ಜಪಾನ್‌ ದೇಶಗಳಲ್ಲಿ ಎಲ್ಲೆಡೆ ಇಂಥದ್ದೇ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ. ಈ ಪರಿಸ್ಥಿತಿ ಅಧಿಕಾರದ್ದಾಗಿರಬಹುದು, ಅದರ ಹತ್ತಿರದ್ದೇ ಇರಬಹುದು, ಪ್ರಜಾಪ್ರಭುತ್ವವನ್ನು ಹೆಂಗಸರ ಲೋಕತಾಂತ್ರಿಕ, ಸರ್ಸಮಾನತೆಯ, ಸಮಾನ ಗೌರವಾದರಗಳ, ತಮ್ಮ ನಿರ್ಧಾರ ತಾವೇ ತೆಗೆದುಕೊಳ್ಳುವ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ.

ನೇಪಾಳ ಒಂದು ಪುಟ್ಟ ದೇಶ. ಆದರೆ ಅಲ್ಲಿ ಅಂತೂ ಇಂತೂ ರಾಜಮನೆತನದ ಆಡಳಿತವಿದ್ದರೂ, ಅಲ್ಲಿನ ಹೆಂಗಸರನ್ನು ಗಂಡಸರ ಗುಲಾಮರನ್ನಾಗಿಸಿಕೊಂಡಿತ್ತು, ಅದರಿಂದ ಈಗ ತುಸು ಬಿಡುಗಡೆ ಸಿಕ್ಕಿದೆ. ಅಲ್ಲಿ ಕಮ್ಯುನಿಸ್ಟ್ ಪಕ್ಷಗಳು ಸಾಮಾನ್ಯರ ಹಕ್ಕಿಗಾಗಿ ಹೋರಾಡಿ ಅಧಿಕಾರ ಪಡೆದಿತ್ತು, ಹೆಂಗಸರಿಗೂ ಅವರ ಹಕ್ಕು ಕೊಡಿಸಿತ್ತು. ಅವರು ಪ್ರಾಪರ್ಟಿಗಳಾಗಿ ಭಾರತ ಹಾಗೂ ಇನ್ನಿತರ ದೇಶಗಳ ದೇಹ ವ್ಯಾಪಾರದ ಸಾಮಗ್ರಿ ಆಗದೆ ತಮ್ಮ ಮನಸ್ಸಿನಂತೆ ನಡೆದುಕೊಳ್ಳುವ ಹಕ್ಕು ಪಡೆಯುತ್ತಿದ್ದಾರೆ. ಇದೀಗ ಮತ್ತೆ  ಹಿಂದೂ ರಾಷ್ಟ್ರ ಎಂಬ ಹೆಸರಲ್ಲಿ ಪೂಜೆ ಪುನಸ್ಕಾರಗಳ ನೆಪದಲ್ಲಿ 4 ಗೋಡೆಗಳ ಮಧ್ಯೆ ಬಂಧಿಸಿಡಲಾಗುತ್ತಿದೆ. ಇರಾನ್‌, ಆಫ್ಘಾನಿಸ್ತಾನ್‌, ಲಿಬಿಯಾಗಳಲ್ಲಿ ಇಸ್ಲಾಮಿಕ್‌ ದಂಧೆಗಳಿಂದ ಹೀಗೆಯೇ ನಡೆಯುತ್ತಿದೆ.

ಧರ್ಮಕ್ಕೆ ಆಡಳಿತ ನಡೆಸುವ ಅಭಿರುಚಿ ಇಲ್ಲ. ಏಕೆಂದರೆ ಶಾಸಕರು ಜನತೆಗಾಗಿ ಬಹಳಷ್ಟು ಮಾಡಬೇಕಾಗುತ್ತದೆ. ಧರ್ಮದ ಅಭಿರುಚಿ ಇರುವುದೆಲ್ಲ ಅದಕ್ಕೆ ಬೇಕಾದಂತೆ ರೆಡಿಮೇಡ್‌ ಲಾಭಕಾರಿ ಅಂಶಗಳು ಮಾತ್ರ. ಸೇವಕರು ಬೇಕು, ಏನೂ ಮಾಡದಿದ್ದರೂ ಜನತೆಗೆ ಬೇಕಾದ ವಿಷಯಗಳಲ್ಲಿ ಮೂಗು ತೂರಿಸಿ ಅವರ ನೆಮ್ಮದಿ ಹಾಳು ಮಾಡುತ್ತದೆ. ಹುಟ್ಟಿನಿಂದ ಸಾಯುವವರೆಗೆ ಸಾಮಾನ್ಯ ಜನರನ್ನು ಅವರ ಹೆಂಗಸರ ನೆರವಿನಿಂದ ಕಂಟ್ರೋಲ್ ಮಾಡುವ ಉಪಾಯವನ್ನು, ಧರ್ಮ ಪ್ರಾಚೀನ ಕಾಲದಲ್ಲೇ ಕಲಿತಿತ್ತು.

ಈಗ 21ನೇ ಶತಮಾನದಲ್ಲಿ ಇಂಥ ಸೂಕ್ಷ್ಮಗಳನ್ನು ವಾಪಸ್ಸು ನೀಡಲಾಗುತ್ತಿದೆ, ಸೋಶಿಯಲ್ ಮೀಡಿಯಾ ಟೆಕ್ನಿಕಲ್ ಈ ನಿಟ್ಟಿನಲ್ಲಿ ದೊಡ್ಡ ಕೆಲಸ ಮಾಡುತ್ತಿದೆ. ಹೆಂಗಸರನ್ನು ಮೊಬೈಲ್ ‌ಮೂಲಕ ಕಟ್ಟಿಹಾಕಿ, ಅವರಿಗೆ ಧರ್ಮದ ದುರಾಚಾರ ಬೋಧಿಸುತ್ತಾ ಮೂಢನಂಬಿಕೆಯ ಜಾಲವನ್ನು ಯಶಸ್ವಿಯಾಗಿ ಹಬ್ಬಿಸಲಾಗುತ್ತಿದೆ.

ವಿಚ್ಛೇದನದ ನಂತರ ಮಕ್ಕಳ ಮೇಲಿನ ಹಕ್ಕು ಯಾರದು?

ಸುಪ್ರೀಂ ಕೋರ್ಟ್‌ ಒಂದು ವಿವಾದದಲ್ಲಿ ಹೇಳಿರುವುದು ಎಂದರೆ, 8 ವರ್ಷದ ಒಂದು ಹೆಣ್ಣು ಮಗುವಿನ ಕಸ್ಟಡಿಯನ್ನು ತಿಂಗಳ ಮೊದಲ 15 ದಿನ ತಂದೆಗೆ ಹಾಗೂ ಉಳಿದ 15 ದಿನ ತಾಯಿಗೆ ನೀಡುವುದು ತಪ್ಪು ಎಂದಿದೆ. ಅದರಲ್ಲೂ ತಂದೆ ಮಗಳಿಗೆ ಮನೆಯಲ್ಲದೆ ಹೋಟೆಲ್ ‌ಊಟ ಕೊಡಿಸುತ್ತಾ ಸಾಗುವುದು ಖಂಡಿತಾ ತಪ್ಪು ಎಂದು ಖಂಡಿಸಿದೆ. ಸುಪ್ರೀಂ ಕೋರ್ಟ್‌ ತನ್ನ ಕೆಳಗಿನ ಕೋರ್ಟಿನ 15 ದಿನಗಳ ಆದೇಶ ರದ್ದುಗೊಳಿಸುತ್ತಾ, ಅದರ ಬದಲು ತಿಂಗಳಲ್ಲಿ ಯಾವಾಗಲಾದರೂ 22 ದಿನ ಆ ಮಗು ತಂದೆಯ ಜೊತೆಗಿರಲಿ, ಎಂದಿದೆ!

ಈ ವಿವಾದ ನಿಜಕ್ಕೂ ಸಾಮಾನ್ಯರ ಅರಿವಿಗೆ ಮೀರಿದ್ದು. ಪತಿಪತ್ನಿ ತಮ್ಮ ಜಗಳನ್ನು ಮಕ್ಕಳ ಮೇಲೇಕೆ ಹೇರಬೇಕು? ಸಿಂಗಾಪುರ್ ನಲ್ಲಿ ಕೆಲಸ ಮಾಡುವ ತಂದೆ, ಈ ಜಗಳಕ್ಕಾಗಿ ತಿಂಗಳಲ್ಲಿ 15 ದಿನ ತಿರುವನಂತಪುರದ ಒಂದು ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸಿಸಲು ಬರುತ್ತಿದ್ದ. ಆಗ ಪತ್ನಿ ಸುಪ್ರಿಂ ಕೋರ್ಟಿಗೆ ದೂರಿದ್ದು ಎಂದರೆ, ಆತ ತನ್ನ ಮಗಳಿಗಾಗಿ ಸುತ್ತಮುತ್ತಲ ಹೋಟೆಲ್ ನಿಂದ 15 ದಿನ ಊಟ ತಿಂಡಿ ಕೊಡಿಸುತ್ತಾನೆ, ಅದರಿಂದ ಮಗಳ ಆರೋಗ್ಯ ಹಾಳು ಎಂದಿದ್ದಾಳೆ.

ಇಲ್ಲಿ ತಂದೆ ತನ್ನ ಮಗುವಿನ ತಾಯಿಯ ಜೊತೆ ಕಾಂಪ್ರಮೈಸ್‌ ಆಗಲು ಸಾಧ್ಯವಿಲ್ಲದಿದ್ದರೆ, ಮಗುವನ್ನು ತಾಯಿಯ ಸುಪರ್ದಿಗೇ ಒಪ್ಪಿಸುವುದು, ಈ ಸಂದರ್ಭದಲ್ಲಿ ಸರಿಹೋಗುತ್ತಿತ್ತೇನೋ! ತಾಯಿ ಇಲ್ಲಿ ತನ್ನ ಮಗುವನ್ನು ಬೇರೆ ಕಾರಣಗಳಿಂದ ತಂದೆಯ  ಬಳಿ ಬಿಡಲು ಬಯಸದಿದ್ದಾಗ ಇದೇ ಸರಿ. ಇಂಥ ವಿವಾದ ಕೋರ್ಟಿಗೆ ಹೋಗಲೇಬಾರದು. ತಾಯಿ ಮಗುವಿನ ಮೇಲೆ ಹಕ್ಕು ಚಲಾಯಿಸ ಬಯಸಿದರೆ, ತಂದೆ ಮಗುವನ್ನು ಭೇಟಿ ಆಗಲು ಬಿಡದಿದ್ದರೆ, ಆಗ ತಂದೆ ತಾನು ಮಗುವಿನ ತಾಯಿ ಬಳಿ ಕಾಂಪ್ರಮೈಸ್‌ ಆಗದ ಕಾರಣ, ಅದಕ್ಕೆ ಈ ಬೆಿಲೆ ತೆರಲೇಬೇಕು ಎಂದು ಸಹಜವಾಗಿ ಸುಮ್ಮನಾಗುವುದೇ ಸರಿ, ಅದೂ ಮಗುವಿನ ಒಪ್ಪಿಗೆ ಇದ್ದಾಗ ಮಾತ್ರ. ಈ ರೀತಿ ಮಗುವಿನ ಜವಾಬ್ದಾರಿ ವಹಿಸಬಯಸಿದರೆ ಅದು ಅವರವರ ಮರ್ಜಿ.

ವಿಶ್ವದೆಲ್ಲೆಡೆಯ ಕೋರ್ಟುಗಳು ಇದೇ ತರಹದ ಕೇಸುಗಳಿಂದ ತುಂಬಿಹೋಗಿವೆ. ಇದರಲ್ಲಿ ಎರಡೂ ಪಕ್ಷಗಳು ಮಗುವಿನ ಕಸ್ಟಡಿಗಾಗಿ ಕೋರ್ಟು, ವಕೀಲರು ಎಂದು ತೆರುತ್ತಲೇ ಇರುತ್ತಾರೆ. ಇದು ಮಗವಿನ ಭವಿಷ್ಯದ ಬಂಡವಾಳಕ್ಕೆ ಮೂಲ, ಅದನ್ನೇಕೆ ಕಂಡವರಿಗೆ ತೆರಬೇಕು? ತಮ್ಮಿಬ್ಬರ ಇಗೋ ತೃಪ್ತಿಗಾಗಿ ಹೀಗೆ ಹಣ ಪೋಲು ಮಾಡಿಕೊಳ್ಳುತ್ತಾರೆ.

ಮಗು ತಾಯಿಯ ಬಳಿ ಬೆಳೆಯುವುದೇ ಸೂಕ್ತ ಎಂದು ಒಪ್ಪುವುದರಲ್ಲಿ 2 ಮಾತಿಲ್ಲ. ಅದರ ಖರ್ಚನ್ನು ತಂದೆ ಕೊಡಬೇಕಾದ್ದು ನ್ಯಾಯ. ಇದು ಮದುವೆಯ ಒಂದು ಸಹಜ ಪ್ರಕ್ರಿಯೆ. ಏಕೆಂದರೆ ಮಗು ಇಬ್ಬರಿಗೂ ಸೇರಿದ್ದು, ಗರ್ಭದಲ್ಲಿ ಹೊತ್ತು, ಹೆತ್ತು, ಹಾಲೂಡಿಸಿದ್ದು ತಾಯಿಯಾದರೂ ಅದಕ್ಕೆ ಕಾರಣನಾದವನು ತಂದೆ.

ಇನ್ನೊಂದು ಕೇಸಿನಲ್ಲಿ ಹೈಕೋರ್ಟ್‌ 3 ವರ್ಷದ ಮಗುವಿನ ಕಸ್ಟಡಿಯನ್ನೂ ತಂದೆಗೇ ಕೊಟ್ಟಿತ್ತು. ಮದುವೆ ಮುರಿಯಬಾರದು, ಅದನ್ನು ಉಳಿಸಿಕೊಳ್ಳಲೆಂದೇ ಕೋರ್ಟ್‌ ಹೀಗೆ ಮಾಡುತ್ತಿರಬೇಕು. ಹೀಗಾಗಿ ಅದರ ತೀರ್ಪು ಅನ್‌ ಜಸಿಫೈಡ್‌ ಎನಿಸಿದೆ. ಆ ಕೇಸಿನಲ್ಲಿ ಸಿಂಗಾಪುರದಲ್ಲಿ ವಾಸಿಸುವ ತಂದೆ, ಪ್ರತಿ ತಿಂಗಳೂ 15 ದಿನ ಬಂದು ಇಲ್ಲಿ ಹೇಗೆ ತಾನೇ ವಾಸಿಸಲು ಸಾಧ್ಯ? ಏನೇ ಆಗಲಿ ತೀರ್ಪು ತಪ್ಪೇ! ಸುಪ್ರೀಂ ಕೋರ್ಟ್‌ ಸಹ ಇಂತಹ ಪೇರೆಂಟ್ಸ್ ಹಠದೆದುರು ಅಸಹಾಯಕವಾಗುತ್ತಿದೆ ಎನಿಸುತ್ತದೆ.

ಮಕ್ಕಳಿಗಾಗಿ ಪೇರೆಂಟ್ಸ್ ತಮ್ಮ ವಿವಾದ ಬಿಟ್ಟುಕೊಡುವುದೇ ಸರಿ, ಆದರೆ ಹಾಗೇನೂ ಆಗುವುದಿಲ್ಲ. ವಿವಾದ ತೀವ್ರವಾದಾಗ ತಂದೆಯೇ ತ್ಯಾಗಕ್ಕೆ ಸಿದ್ಧನಾಗಬೇಕಾಗುತ್ತದೆ. ಆಗ ತಾಯಿಯಾದವಳು ಒಂಟಿಯಾಗಿಯೇ ಮಗುವನ್ನು ಸಲಹಬೇಕು, ಈ ನೆಪದಲ್ಲಿ ಇತರ ಗಂಡಸರ ಸಂಪರ್ಕ ಹೊಂದಬಾರದು. ಈ ಕೇಸ್‌ ನಲ್ಲಿ ತಾಯಿ ತನ್ನ ಪೇರೆಂಟ್ಸ್ ಬಳಿ ವಾಸಿಸಲು ಹೋದಳು, ಇದೂ ಒಂದು ವಿಧದಲ್ಲಿ ತಾಯಿ ಮಾಡುತ್ತಿರುವ ತ್ಯಾಗ. ತಂದೆಯ ತ್ಯಾಗ ಹಣದ ಕುರಿತಾಗಿದೆ, ಅದು ಕಡಿಮೆಯೇ ಸರಿ.

ಧರ್ಮದಿಂದ ಸಾವು ಇದೆಂಥ ತಪ್ಪು ತಿಳಿವಳಿಕೆ?

ಯಾವ ರೀತಿ ನೋವು ನರಳಾಟ ಸೇಡಿನ ಕ್ರಮದ ಬೇಡಿಕೆ ಪಹಲ್ಗಾಮ್ ನಲ್ಲಿ ನಡೆಯಿತೋ, ಅದರ ಅಂಶ ಮಾತ್ರ ಮಹಾಕುಂಭದಲ್ಲಿ ನಡೆದ ಕಾಲ್ತುಳಿತದಿಂದ ಆಗಲಿಲ್ಲವೇ? ಅಥವಾ ಮೇ ತಿಂಗಳಲ್ಲಿ ಗೋವಾದ ಶೀರ್‌ ಗಾಂವ್ ‌ಮಂದಿರದ ವೈರಾಯಿ ದೇವಿಯ ಗುಡಿಯಲ್ಲಿ ನಡೆಯಲಿಲ್ಲವೇ? ಸಾವು ಅಂದ ಮೇಲೆ ಸಾವು. ಅದರಲ್ಲೂ ಧರ್ಮದ ನೆರಳಲ್ಲಿ ನಡೆದ ಸಾವು ಇನ್ನೂ ಘೋರ, ಅದು ಹೆಚ್ಚಿನ ದುಃಖ ಕೊಡುತ್ತದೆ. ಪಹಲ್ಗಾಮ್ ಸಾವಿನ ಹಿಂದೆ ಧರ್ಮವಿದೆ, ಮಹಾಕುಂಭದ ಸಾವಿನ ಹಿಂದೆಯೂ ಧರ್ಮವಿದೆ, ಗೋವಾದ ಸಾವಿನ ಹಿಂದೆಯೂ ಧರ್ಮವಿದೆ.

ಯಾವ ಧರ್ಮ ಕಾಪಾಡಲು ಎಂದಿದೆಯೋ, ಯಾವುದು ಉದ್ಧಾರ ಮಾಡಲಿದೆಯೋ, ಸಂಕಟದಿಂದ ಪಾರು ಮಾಡುತ್ತದೋ, ಧನಧಾನ್ಯ ತರುತ್ತದೋ, ಸುಖಸಮೃದ್ಧಿ ನೀಡುತ್ತದೋ, ಮುಂದಿನ ಜನ್ಮದಲ್ಲಿ ಯಾವ ಈ ಸಾವಿನ ನಂತರ ನೆಮ್ಮದಿ ನೀಡಲಿದೆಯೋ, ಅದು ಸಾಮಾನ್ಯ ವ್ಯಕ್ತಿಗಳ ಅಭಾವಕ್ಕೆ ಹೇಗೆ ಕಾರಣವಾದೀತು? ಹೆಂಗಸರನ್ನು ಯಾಕೆ ವಿಧವೆ ಮಾಡಬೇಕು? ಮಕ್ಕಳನ್ನೇಕೆ ಅನಾಥರಾಗಿಸಬೇಕು? ಸಂಪಾದಿಸುವವರ ಪ್ರಾಣ ಹೀರಿದ ನಂತರ ಏಕೆ ಮಹಾನ್‌ ಎನಿಸಬೇಕು? ಇದೆಂಥ ತಪ್ಪು ತಿಳಿವಳಿಕೆ!

ಗೋವಾದಲ್ಲಿ ಸಾವಿಗೆ ಕಾರಣ ಕೇವಲ ಆ ಅಂಧಭಕ್ತರು ಮಾತ್ರವಲ್ಲ, ಚಿಕ್ಕ ಮಂದಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ನುಗ್ಗಿ ಬಂದರು. ಇಲ್ಲಿ ಅವರನ್ನು ಆ ಪಾಟಿ ಅಲ್ಲಿಗೆ ಬರಮಾಡಿಕೊಂಡರು, ಅಂಥ ಕಡೆ ಬಂದರೆ ಏಳಿಗೆ, ಸುಖಸಮೃದ್ಧಿ ಲಭ್ಯ ಎಂದು ನಂಬಿಸಿದರು. ಇಂಥ ಕಾಲ್ತುಳಿತ ನಡೆಯುವುದಾದರೂ ಏಕೆ? ಬೇಗ ದೇವರ ದರ್ಶನವಾಗಿ ಅಖಂಡ ಪುಣ್ಯ ಪ್ರಾಪ್ತಿ, ಬೇಗ ಬೇಗ ಆಗಿಬಿಡಲಿ ಎಂಬ ಧಾವಂತ! ಆಗ ಯಾವ ಡಿಸಿಪ್ಲಿನೂ ಅಲ್ಲಿ ಉಳಿದಿರುವುದಿಲ್ಲ.

ಯಾವ ರೀತಿ ನೇರ ದಾರಿಯಲ್ಲಿ ಬಂದು ದರ್ಶನ ಪಡೆಯಬೇಕು ಎಂದು ಕಲಿಸದ ಅಂಥ ಧರ್ಮವಾದರೂ ಏಕೆ ಬೇಕು? ಧರ್ಮದ ಗುತ್ತಿಗೆದಾರರು ಹೇಳುವುದೆಂದರೆ ಯಾವಾಗ ಬರಬೇಕು, ಎಷ್ಟು ಹೊತ್ತಿಗೆ ಪೂಜೆ, ಅದಕ್ಕಾಗಿ ಏನೇನು ಸಾಮಗ್ರಿ ತರಬೇಕು, ಎಷ್ಟು ಚಂದಾ ಕಕ್ಕಬೇಕು, ಏನು ಧರಿಸಬೇಕು, ಏನು ಬಾರದು….. ಆದರೆ ಎಂದೂ ಭಕ್ತರಿಗೆ ಹೇಗೆ ಸಾವಧಾನವಾಗಿ ಶಿಸ್ತಿನಿಂದ ಬರಬೇಕು, ಹೇಗೆ ನಿಂತಿರಬೇಕು, ಒಬ್ಬೊಬ್ಬರಾಗಿ ಸಾಲಿನಲ್ಲಿ ಬರಬೇಕು, ತಮ್ಮ ಸರತಿಗಾಗಿ ಕಾಯಬೇಕು ಎಂಬುದನ್ನು ಧರ್ಮ ಏಕೆ ಕಲಿಸದು? ಇದನ್ನು ಆಡಳಿತ ಮಂದಿ ಏಕೆ ನಡೆಸಬೇಕು? ಪೊಲೀಸರೇಕೆ ಮಾಡಬೇಕು? ಇದನ್ನೆಲ್ಲ ಆ ಸರ್ವಶಕ್ತಿಯುಳ್ಳ ಗಂಗಾಮಾತೆ, ದೇವದೇವಿಯರೇಕೆ ವಹಿಸಿಕೊಳ್ಳುವುದಿಲ್ಲ? ಅವರೆಲ್ಲ ಸರ್ವಶಕ್ತರು, ಸರ್ವವ್ಯಾಪಿ, ಸರ್ವಜ್ಞಾನಿಗಳಲ್ಲವೇ….?

ಇಲ್ಲಿ ಹೆಂಗಸರ ದುರ್ದೆಶೆ ಅತ್ಯಂತ ಹೀನಾಯವಾದುದು. ಅವರು ಮೈಲಿಗಟ್ಟಲೇ ನಡೆದು ಬರಬೇಕು, ಅದಕ್ಕಾಗಿ ಆಹಾರ ರೆಡಿ ಮಾಡಿ ತರಬೇಕು, ಸಣ್ಣ ಮಕ್ಕಳಿದ್ದರೆ ಅವನ್ನೂ ಹೊತ್ತುಕೊಳ್ಳಬೇಕು. ಅವರೇ ಹೇಗಾದರೂ ಹೊಡೆದಾಡಿ ಮುಂದಿನ ಮಾರ್ಗ ನೋಡಿಕೊಂಡು ಹೊರಡಬೇಕು, ಏಕೆಂದರೆ ಈಗಾಗಲೇ ಅವನ ಬ್ರೇನ್‌ ವಾಶ್‌ ಆಗಿಹೋಗಿದೆ. ಪತಿಯ ಕೋಪ, ಅತ್ತೆಮಾವನ ಮುನಿಸು, ಹಣದ ಕೊರತೆ, ಮಗಳ ಮದುವೆ, ಮನೆಯವರೆಲ್ಲರ ಕ್ಷೇಮಕ್ಕಾಗಿ ಆಕೆ ಮಾಡುತ್ತಿರುವ ಪೂಜೆ ಪುನಸ್ಕಾರ ಆಕೆಯದೇ ಜವಾಬ್ದಾರಿ. ಆಕೆ ತನ್ನ ತುಕ್ಕು ಹಿಡಿದ ಜ್ಞಾನ, ಸಣ್ಣ ಬುದ್ಧಿಯ ನೆರವಿನಿಂದ ಮೆಂಟಲ್ ಇನ್‌ ಫೆಕ್ಟೆಡ್‌ ಆದಕಾರಣ, ಇಂಥ ಕಾಲ್ತುಳಿತಕ್ಕೆ ಬಲಿಯಾಗುತ್ತಾಳೆ. ಒಮ್ಮೆ ಅಕಾಲಿಕ ಸಾವು, ಒಮ್ಮೆ ವೈಧವ್ಯ, ಮಕ್ಕಳ ಅಗಲಿಕೆ ಕಟ್ಟಿಟ್ಟ ಬುತ್ತಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ