ವಿಶ್ವದಾದ್ಯಂತ ಕೊರೋನಾ ಬಳಿಕ ಇದೀಗ ಎಬೋಲಾ (Ebola) ಆತಂಕ ಎದುರಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಎಬೋಲಾ ಆತಂಕದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಣೆ ಮಾಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಬಿಡುಗಡೆ ಮಾಡಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಬೋಲಾ ಭಾದಿತ ದೇಶಗಳಿಂದ ಬರುವ ಜನರ ಮೇಲೆ ನಿಗಾ ವಹಿಸಲು ಮುಂದಾಗಿದೆ. ದೇಶದಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಯಾವುದೇ ಆತಂಕ ಬೇಡ. ಕೇಸ್ ಬಂದರೆ ನಿಯಂತ್ರಣ ಮಾಡುತ್ತೇವೆ. ಜನರ ಭಯ ಪಡುವುದು ಬೇಡ ಎಂದಿದ್ದಾರೆ.ಇನ್ನೂ ಎಬೋಲಾ ನಿಯಂತ್ರಣಕ್ಕೆ ಮಾರ್ಗಸೂಚಿ ಜೊತೆಗೆ ಪಾಸಿಟಿವ್ ಆದ ವ್ಯಕ್ತಿಗಳಿಗೆ ಟ್ರೀಟ್‌ಮೆಂಟ್ ನೀಡಲು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಮತ್ತು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗಳನ್ನು ಗುರುತು ಮಾಡಲಾಗಿದೆ. ವೈದ್ಯರು ಸುರಕ್ಷತಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಲು ತಿಳಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ: ಐಡಿಎಸ್‌ಪಿ ಅಡಿಯಲ್ಲಿ ತೀವ್ರ ನಿಗಾ ವ್ಯವಸ್ಥೆ ಮತ್ತು ಅನುಮಾನಾಸ್ಪದ ಪ್ರಕರಣಗಳ ಮೇಲ್ವಿಚಾರಣೆ. ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ಕೇಂದ್ರದೊಂದಿಗೆ ನಿಗಾ. ಪ್ರತ್ಯೇಕ ಕ್ವಾರಂಟೈನ್ ಮತ್ತು ಐಸೋಲೇಷನ್ ಸೌಲಭ್ಯ, ರೆಫರಲ್ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಆರೋಗ್ಯ ಸಿಬ್ಬಂದಿಗೆ ತರಬೇತಿ ಮತ್ತು ಸೋಂಕು ನಿಯಂತ್ರಣ ಕ್ರಮಗಳ ಬಲಪಡಿಸಬೇಕು. ಅಗತ್ಯ ಪಿಪಿಇ ಕಿಟ್ ಮತ್ತು ಔಷಧಿ ಸಂಗ್ರಹಕ್ಕೆ ಸಿದ್ಧತೆ ಹಾಗೂ ತ್ವರಿತಾ ಪ್ರಕ್ರಿಯಾ ತಂಡಗಳನ್ನು ಸಜ್ಜುಗೊಳಿಸಬೇಕು.

ಎಬೋಲಾ ಹರಡುವುದು ಹೇಗೆ?

ಸೋಂಕಿತ ವ್ಯಕ್ತಿಗಳ ರಕ್ತ, ಅಂಗಗಳು, ದೇಹ ದ್ರವದೊಂದಿಗೆ ಸಂಪರ್ಕದಿಂದ, ಹಾಸಿಗೆ, ಬಟ್ಟೆ, ಸಿರಿಂಜ್‌ನಂತಹ ಕಲುಷಿತ ವಸ್ತುಗಳ ಸಂಪರ್ಕದಿಂದಲೂ ಎಬೋಲಾ ಹರಡುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ