– ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು: ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಬುದ್ಧ ಮತ್ತು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಹಾಗೂ 22 ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಹೇಳಿದರು.

ಭಾನುವಾರ 24 ರಂದು ಸಂಜೆ 4 ಗಂಟೆಗೆ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೊದಲಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವ್ಯಕ್ತಿಗಳು ಭಾಗವಹಿಸುವರು ಎಂದರು.

IMG-20260523-WA0002

ಟಿವಿ5 ಕನ್ನಡ ಚಾನೆಲ್ ನ ಪ್ರಧಾನ ಸಂಪಾದಕ ರಮಾಕಾಂತ್ ಆರ್ಯಾನ್, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಹಿರಿಯ ವಕೀಲರಾದ ಪ್ರೇಮಿಳಾ ನೇಸರ್ಗಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ, ಹೋರಾಟಗಾರ ಗಂಡಸಿ ಸದಾನಂದಸ್ವಾಮಿ ವಹಿಸಿದರೆ. ಮುಖ್ಯ ಅತಿಥಿಗಳಾಗಿ ಉಪ ಪೋಲಿಸ್ ಆಯುಕ್ತ (ಡಿಸಿಪಿ) ಡಾ.ಹೆಚ್.ಮಂಜುನಾಥ ಬಾಬು, ಥರ್ಡ್ ಐ ಯೂಟ್ಯೂಬ್ ಸಂಸ್ಥಾಪಕ ಸುಬ್ರಹ್ಮಣ್ಯ ಎಸ್ ಹಂಡಿಗೆ, ಸಂಜೀವಿನಿ ರೇಖಿ ಹೀಲಿಂಗ್ ಸೆಂಟರ್ ನ ಸಂಸ್ಥಾಪಕ ಅಧ್ಯಕ್ಷೆ ಡಾ.ವಿ.ಭರಣಿ ರಾಜು, ಪತ್ರಕರ್ತ ಶಿವರಾಜ್ ಮೌರ್ಯ, ಇವೆಂಟ್ ಕೊ-ಆರ್ಡಿನೇಟರ್ ಚಂದ್ರಿಕಾ ಬಿ.ವಿ ವಹಿಸಲಿದ್ದಾರೆ ಎಂದು ಕಿಶೋರ್ ಹೇಳಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ