ಬೆಂಗಳೂರಿನ ವಿಲ್ಸನ್ ಗಾರ್ಡನ್ ಸ್ಮಶಾನ. ಸಂಜೆ 4 ಗಂಟೆ. ಚಿತೆಗೆ ಕೊಳ್ಳಿ ಇಡೋ ಸಮಯ.

83 ವರ್ಷದ ರಾಮಪ್ಪ ಅವರು ನೆನ್ನೆ ತೀರಿ ಹೋಗಿದ್ದರು. ರಿಟೈರ್ಡ್ ಹೆಡ್‌ಮಾಸ್ಟರ್. ಊರಿಗೆಲ್ಲಾ ‘ರಾಮಪ್ಪ ಮೇಷ್ಟ್ರು’ ಅಂತಲೇ ಫೇಮಸ್. 38 ವರ್ಷ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ, ಸಾವಿರಾರು ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದವರು.

ಆದ್ರೆ ಇವತ್ತು ಅವರ ಅಂತ್ಯಸಂಸ್ಕಾರಕ್ಕೆ ಬಂದಿದ್ದು ಕೇವಲ 6 ಜನ. ಮಗಳು ಸುಮಾ, ಅಳಿಯ ಮೋಹನ್, ಇಬ್ಬರು ಮೊಮ್ಮಕ್ಕಳು, ಪಕ್ಕದ ಮನೆ ಶಂಕರ್, ಮತ್ತು ಪೇಪರ್ ಹಾಕೋ ಹುಡುಗ ರವಿ.

ಮಗ ವಿನಯ್? ಅವನು ಅಮೆರಿಕದಲ್ಲಿ. “ಡ್ಯಾಡ್ , ಐ ಕೆನಾಟ್ ಕಮ್ . ಪ್ರಾಜೆಕ್ಟ್ ಡೆಡ್ ಲೈನ್ . ಐ ವಿಲ್ ಅಟೆಂಡ್ ವಯಾ ಜೂಮ್ ” ಅಂತ ಮೇಲ್ ಮಾಡಿದ್ದ.

ಸುಮಾ ಅಳುತ್ತಾ ಹೇಳಿದಳು: “ಅಪ್ಪ, ನಿಮ್ಮ ಮಗ ವೀಡಿಯೋ ಕಾಲ್‌ನಲ್ಲಿ ನೋಡ್ತಾನೆ. ಬೇಜಾರ್ ಮಾಡ್ಕೋಬೇಡಿ.”

ಚಿತೆಗೆ ಕೊಳ್ಳಿ ಇಡೋಕೆ ಪುರೋಹಿತರು ಹೇಳಿದರು: “ಮಗ ಇಲ್ಲಾಂದ್ರೆ ಮಗಳು ಕೊಳ್ಳಿ ಇಡಬಹುದು.”

ಸುಮಾ ಕೊಳ್ಳಿಯನ್ನು  ಕೈಯಲ್ಲಿ ಹಿಡಿದಳು. ಕೈ ನಡುಗುತ್ತಿತ್ತು. ಆಗಲೇ ಸ್ಮಶಾನದ ಗೇಟ್ ಹತ್ರ ಗದ್ದಲ ಕೇಳಿಸಿತು.

ಸುಮಾರು 200 ಜನ ಸ್ಮಶಾನದ ಒಳಗೆ ಓಡಿ ಬಂದರು. ಎಲ್ಲರ ಕೈಯಲ್ಲಿ ಹೂವು, ಹಾರ. ಮುಂದೆ ಬಂದವನು 45 ವರ್ಷದ ವ್ಯಕ್ತಿ, ಪೋಲೀಸ್ ಯೂನಿಫಾರ್ಮ್‌ನಲ್ಲಿ – ACP ರುದ್ರ.

“ನಿಲ್ಲಿ! ಕೊಳ್ಳಿ ಇಡಬೇಡಿ!” ರುದ್ರ ಕೂಗಿದ.

ಎಲ್ಲರೂ ಶಾಕ್. ಸುಮಾ ಕೇಳಿದಳು: “ಯಾರು ನೀವು?”

ರುದ್ರ ರಾಮಪ್ಪ ಮೇಷ್ಟ್ರ ಕಾಲಿಗೆ ನಮಸ್ಕಾರ ಮಾಡಿದ. ಕಣ್ಣಲ್ಲಿ ನೀರು. “ಮೇಡಂ, ನಾನು ರುದ್ರ. 2005ನೇ ಬ್ಯಾಚ್. ನಿಮ್ಮ ಅಪ್ಪನ ಸ್ಟೂಡೆಂಟ್. ಇವರು ಇಲ್ಲಾಂದ್ರೆ ನಾನು ಇವತ್ತು ACP ಆಗ್ತಿರಲಿಲ್ಲ, ರೌಡಿ ಆಗ್ತಿದ್ದೆ.”

ಹಿಂದೆ ಇದ್ದವರೆಲ್ಲ ಒಬ್ಬೊಬ್ಬರೇ ಮುಂದೆ ಬಂದರು.

ಡಾಕ್ಟರ್ ಸುಧಾ: “ನಾನು 10ನೇ ಕ್ಲಾಸಲ್ಲಿ ಫೇಲ್ ಆಗಿದ್ದೆ. ಮೇಷ್ಟ್ರು ದಿನಾ ಸಂಜೆ ಫ್ರೀ ಟ್ಯೂಷನ್ ಮಾಡಿ ಪಾಸ್ ಮಾಡಿಸಿದರು. ಇವತ್ತು ನಾನು ಸರ್ಜನ್.”

IAS ಅಧಿಕಾರಿ ಮಂಜುನಾಥ್: “ನನ್ನ ತಂದೆ ಕುಡುಕ. ಸ್ಕೂಲ್ ಫೀಸ್ ಕಟ್ಟಿರಲಿಲ್ಲ. ಮೇಷ್ಟ್ರು ತಮ್ಮ ಸಂಬಳದಿಂದ ಕಟ್ಟಿದರು. ‘ಮುಂದೆ ದೇಶ ಸೇವೆ ಮಾಡು’ ಅಂದರು.”

ಲಾಯರ್, ಇಂಜಿನಿಯರ್, ಟೀಚರ್, ಬಸ್ ಡ್ರೈವರ್, ಆಟೋ ಡ್ರೈವರ್, ಪ್ರಗತಿಪರ ರೈತ ಎಲ್ಲರೂ ಒಂದೇ ಮಾತು – “ಮೇಷ್ಟ್ರು ನಮಗೆ ದಾರಿ ತೋರಿಸಿದರು.”

ರುದ್ರ ಹೇಳಿದ: “ಮೇಡಂ, ನಮಗೆ ಎರಡುವರೆಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಗೊತ್ತಾಯ್ತು. ‘ರಾಮಪ್ಪ ಮೇಷ್ಟ್ರು ಇನ್ನಿಲ್ಲ’ ಅಂತ. ಒಂದೂವರೆ ಗಂಟೆಯಲ್ಲಿ 200 ಜನ ಸೇರಿದ್ವಿ. ಇವರೆಲ್ಲ ಮೇಷ್ಟ್ರ ಮಕ್ಕಳು.”

ಸುಮಾ ದಂಗಾದಳು. “ಅಪ್ಪ ಯಾವತ್ತೂ ಹೇಳಲಿಲ್ಲ…”

“ಹೇಳೋಲ್ಲ ಮೇಡಂ. ಮೇಷ್ಟ್ರು ಯಾವತ್ತೂ ‘ನಾನು ಮಾಡಿದೆ’ ಅಂತ ಹೇಳಲಿಲ್ಲ. ಸುಮ್ಮನೆ ಮಾಡ್ತಾ ಹೋದರು.”

ಪುರೋಹಿತರು ಕೇಳಿದರು: “ಈಗ ಕೊಳ್ಳಿ ಯಾರು ಇಡೋದು?”

ರುದ್ರ ಮುಂದೆ ಬಂದ: “ನಾವು 200 ಜನ ಇದ್ದೀವಿ. ಎಲ್ಲರೂ ಇಡ್ತಿವಿ ಮೇಷ್ಟ್ರು 200 ಮಕ್ಕಳ ಅಪ್ಪ. ಒಬ್ಬ ಮಗ ಬರಲಿಲ್ಲದಿದ್ದರೆ ಏನು? ನಾವು ಇದ್ದೀವಿ.”

ಮೊದಲಿಗೆ

200 ಜನ ದೀಪ ಹಚ್ಚಿದರು. ಇಡೀ ಸ್ಮಶಾನ ಬೆಳಕಾಯ್ತು. “ರಾಮಪ್ಪ ಮೇಷ್ಟ್ರಿಗೆ ಜೈ” ಅಂತ ಘೋಷಣೆ ಮೊಳಗಿತು.

ill-father-lying-hospital-bed-his-worried-son-52190307

ನಂತರ ಮಗಳು ಸುಮಾ ಕೊಳ್ಳಿ ಇಡಲು ಸಜ್ಜಾದಳು.

ಅದೇ ಸಮಯಕ್ಕೆ ಸುಮಾಳ ಫೋನ್ ರಿಂಗ್ ಆಯ್ತು. ಜೂಮ್ ಕಾಲ್ – ವಿನಯ್.

“ಸುಮಾ , ಇಸ್ ಇಟ್ ರೆಡಿ ? ಐ ಹಾವ್ ಎ ಮೀಟಿಂಗ್ ಇನ್ 10 ಮಿನಿಟ್ .”

ಸುಮಾ ಫೋನ್ ಲೌಡ್‌ಸ್ಪೀಕರ್ ಹಾಕಿದಳು. ವಿನಯ್ ಸ್ಕ್ರೀನ್‌ನಲ್ಲಿ 200 ಜನ ನೋಡಿದ. ಎಲ್ಲರೂ ಅವನನ್ನೇ ನೋಡ್ತಾ ಇದ್ದರು.

ರುದ್ರ ಫೋನ್ ತಗೊಂಡ: “ವಿನಯ್ ಸರ್, ನಾನು ACP ರುದ್ರ. ನಿಮ್ಮ ಅಪ್ಪನ ಸ್ಟೂಡೆಂಟ್.”

“ಒಹ್ ಹಾಯ್ … ನೈಸ್ ಟು ಮೀಟ್ ಯು …”

“ಸರ್, ಒಂದು ಮಾತು ಕೇಳ್ಬಹುದಾ? ನಿಮ್ಮ ಅಪ್ಪ 38 ವರ್ಷ ಸಾವಿರಾರು ಮಕ್ಕಳಿಗೆ ಅಪ್ಪ ಆಗಿದ್ದರು. ಆದ್ರೆ ಕೊನೆ ಗಳಿಗೆಯಲ್ಲಿ ತನ್ನ ಸ್ವಂತ ಮಗನ ಮುಖ ನೋಡಲಿಲ್ಲ. ಯಾಕೆ ಸರ್?”

ವಿನಯ್ ಸೈಲೆಂಟ್. “ಐ ಆಮ್ ಬ್ಯುಸಿ …”

“ಬ್ಯುಸಿ ? ಸರ್, ನಿಮ್ಮ ಅಪ್ಪ ನಿಮಗೆ ‘ಬ್ಯುಸಿ’ ಅಂತ ಯಾವತ್ತಾದ್ರೂ ಹೇಳಿದ್ರಾ? ಜ್ವರ ಬಂದಾಗ ರಾತ್ರಿ ಎದ್ದು ಡಾಕ್ಟರ್ ಹತ್ರ ಕರ್ಕೊಂಡು ಹೋಗಲಿಲ್ವಾ? ಸ್ಕೂಲ್ ಫೀಸ್‌ಗೆ ಓವರ್‌ಟೈಮ್ ಮಾಡಲಿಲ್ವಾ?”

ವಿನಯ್ ತಲೆ ತಗ್ಗಿಸಿದ.

ಸುಮಾ ಪರ್ಸ್ ನಿಂದ ಮಡಿಸಿದ ಪತ್ರ ತೆಗೆದು ರುದ್ರನಿಗೆ ಕೊಟ್ಟಳು:

ಸರ್, ನಿಮ್ಮ ಅಪ್ಪ ನಿನ್ನೆ ತೀರಿಕೊಳ್ಳುವ ಮುಂಚೆ ಒಂದು ಪತ್ರ ಬರೆದಿದ್ದಾರೆ. ‘ನನ್ನ ಮಗ ವಿನಯ್‌ಗೆ ಕೊಡಿ’ ಅಂತ. ಓದ್ತೀನಿ ಕೇಳಿ.” ರುದ್ರ ಜೋರಾಗಿ ಓದಿದ.

“ಮಗನೇ ವಿನಯ್,

ನೀನು ಬರಲ್ಲ ಅಂತ ಗೊತ್ತು. ಬೇಜಾರಿಲ್ಲ ಕಣೋ. ನೀನು ಅಮೆರಿಕದಲ್ಲಿ ದೊಡ್ಡವನಾಗಿದ್ದೀಯಾ ಅಷ್ಟೇ ಸಾಕು. ಆದ್ರೆ ಒಂದು ಸತ್ಯ ಹೇಳ್ತೀನಿ – ನಾನು ಸತ್ತ ಮೇಲೆ ಅಳಬೇಡ. ಯಾಕಂದರೆ ನಾನು ಸತ್ತಿಲ್ಲ. ಈ ಊರಿನ ಪ್ರತಿ ಡಾಕ್ಟರ್ ನನ್ನ ಕೈ, ಪ್ರತಿ ಇಂಜಿನಿಯರ್ ನನ್ನ ಮೆದುಳು, ಪ್ರತಿ ಪೋಲೀಸ್ ನನ್ನ ಧೈರ್ಯ. ನಾನು 200 ಮಕ್ಕಳಲ್ಲಿ ಬದುಕಿದ್ದೀನಿ. ನೀನು ಒಬ್ಬನೇ ನನ್ನ ಮಗ ಅಲ್ಲ ಕಣೋ, ನನಗೆ 201 ಮಕ್ಕಳು. ಆದ್ರೆ ನೀನು ಒಂದು ಕೆಲಸ ಮಾಡು – ನೀನು ಭಾರತಕ್ಕೆ ಬಂದಾಗ ಒಬ್ಬ ಅನಾಥ ಮಗುವನ್ನು ದತ್ತು ತೆಗೆದುಕೊಂಡು ಓದಿಸು. ಆಗ ನಾನು 202 ಮಕ್ಕಳ ಅಪ್ಪ ಆಗ್ತೀನಿ.

ಇದು ನನ್ನ ಕೊನೆಯ ಆಸೆ.

ಇಂತಿ ಅಪ್ಪ.

ರಾಮಪ್ಪ

ವೀಡಿಯೋ ಕಾಲ್‌ನಲ್ಲಿ ವಿನಯ್ ಕುಸಿದು ಬಿದ್ದು ಅತ್ತ. “ಅಪ್ಪಾ… ಐ ಆಮ್ ಸಾರಿ ಅಪ್ಪಾ…”

200 ಜನ ಸೈಲೆಂಟ್. ಸ್ಮಶಾನದಲ್ಲಿ ಕೇವಲ ಅಳು ಕೇಳಿಸ್ತಿತ್ತು.

ರುದ್ರ ಹೇಳಿದ: “ಸರ್, ಲೇಟ್ ಆಗಿಲ್ಲ. ಈಗ್ಲೇ ಫ್ಲೈಟ್ ಹತ್ತಿ ಬನ್ನಿ. ಅಪ್ಪನ ಚಿತೆಗೆ ಸುಮಾ ಕೊಳ್ಳಿ ಇಡುತ್ತಾರೆ, ಅಪ್ಪನ ಕನಸು ಸಾಕಾರ ಮಾಡೋಣ- 202ನೇ ಮಗುವಿನ ಭವಿಷ್ಯಕ್ಕೆ.”

ಸುಮಾ ಅಪ್ಪನ ಚಿತೆಗೆ ಕೊಳ್ಳಿ ಇಟ್ಟಳು.

ಮಾರನೆಯ ವಿನಯ್ ಬೆಂಗಳೂರು ಏರ್‌ಪೋರ್ಟ್‌ಗೆ ಬಂದ. ನೇರ ಸ್ಮಶಾನಕ್ಕೆ. ಅಪ್ಪನ ಅಸ್ಥಿ ಕಲೆಕ್ಟ್ ಮಾಡುವ ಸಮಯ.

ವಿನಯ್ ಅಸ್ಥಿ ಕಲಶ ಹಿಡಿದು 200 ಜನರ ಮುಂದೆ ನಿಂತ.

“ನಾನು ವಿನಯ್. ರಾಮಪ್ಪ ಮೇಷ್ಟ್ರ ಸತ್ತ ಮಗ. ಇವತ್ತು ನಾನು ಸತ್ತು ಹೋಗಿ, ಮತ್ತೆ ಹುಟ್ಟಿದ್ದೀನಿ. ಅಪ್ಪಾ, ನಿಮ್ಮ 202ನೇ ಮಗುವನ್ನು ನಾನು  ಹುಡುಕಿ ಓದಿಸ್ತೀನಿ. ಪ್ರಾಮಿಸ್”.

ನಂತರ ವಿನಯ್ ಮುಂದೆ ಬಂದು ಹೇಳಿದ : “ರಾಮಪ್ಪ ಮೇಷ್ಟ್ರು ಎಜುಕೇಶನ್ ಟ್ರಸ್ಟ್’ ಶುರು ಮಾಡ್ತೀನಿ. ಒಂದು ಕೋಟಿ ಹಾಕ್ತೀನಿ. ಬಡ ಮಕ್ಕಳಿಗೆ ಫ್ರೀ ಎಜುಕೇಶನ್.” ಅಪ್ಪನಿಗೆ ಮಾತು ನೀಡಿದ್ದೆ ಒಂದು ಅನಾಥ ಮಗುವನ್ನು ಓದಿಸುತ್ತೇನೆ ಅಂತ. ಆದರೆ ಈಗ 1000 ಬಡ ಮಕ್ಕಳನ್ನು ಓದಿಸುತ್ತೇನೆ.

200 ಜನ ಚಪ್ಪಾಳೆ ತಟ್ಟಿದರು. ಆಕಾಶಕ್ಕೆ ನೋಡಿ ಹೇಳಿದರು: “ಮೇಷ್ಟ್ರೇ, ನೋಡಿದ್ರಾ? ನಿಮ್ಮ ಮಗ ವಾಪಸ್ ಬಂದ.”

ಅಂದಿನಿಂದ ಪ್ರತಿ ವರ್ಷ ರಾಮಪ್ಪ ಮೇಷ್ಟ್ರ ಪುಣ್ಯತಿಥಿಗೆ 200 ಜನ ಸೇರ್ತಾರೆ. ಸ್ಮಶಾನದಲ್ಲಿ ಅಲ್ಲ, ಅವರು ಕಟ್ಟಿದ ಶಾಲೆಯಲ್ಲಿ. ಇಡೀ ಜಿಲ್ಲೆಯ ಮಕ್ಕಳಿಗೆ ಪುಸ್ತಕ ಬಟ್ಟೆ ಶೂಸ್ ಅಗತ್ಯ ವಸ್ತುಗಳನ್ನು ಹಂಚ್ತಾರೆ.

 

ಸಮಾಧಿ ಮೇಲೆ ಬರೆದಿದೆ:

“ಇಲ್ಲಿ ಮಲಗಿರುವವರು ಒಬ್ಬ ಟೀಚರ್ ಅಲ್ಲ, 1201 ಮಕ್ಕಳ ಅಪ್ಪ.

ಅವರ ಕೊನೆಯ ಪಾಠ – ‘ಸಾಯುವ ಮುಂಚೆ ಬದುಕಿ, ಸತ್ತ ಮೇಲೆ ಬದುಕಿಸಿ’.”

#ನೀತಿ:ಅಂತ್ಯಸಂಸ್ಕಾರಕ್ಕೆ ಯಾರು ಬಂದರು ಅನ್ನೋದು ಮುಖ್ಯ ಅಲ್ಲ, ಬದುಕಿದ್ದಾಗ ಎಷ್ಟು ಜನರ ಬದುಕಿಗೆ ಸಂಸ್ಕಾರ ಕೊಟ್ಟೆ ಅನ್ನೋದು ಮುಖ್ಯ. ಮಗ ಬರಲಿಲ್ಲ ಅಂತ ಅಪ್ಪ ಸಾಯಲ್ಲ, ಮಗ ಮನುಷ್ಯ ಆಗಲಿಲ್ಲ ಅಂತ ಅಪ್ಪ ಸಾಯ್ತಾನೆ.

ಕಡೆಗಾಲದಲ್ಲಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ. ಕೊನೆಗೆ ಅವರಿಗೆ ಮುಕ್ತಿಗಾಣಿಸುವುದು ಪ್ರತಿ ಮಕ್ಕಳ ಕರ್ತವ್ಯ.

ತಂದೆಯ ಪ್ರೀತಿ ‘ವಿವರಿಸಲಾಗದ್ದು’,

ಅದರ ಬೆಲೆ ವಿಶ್ವದ ಯಾವುದೇ ಕರೆನ್ಸಿಯಿಂದಲೂ ತೀರಿಸಲಾಗದು…

ನೀವು ಜಗತ್ತಿನಲ್ಲಿ ಎಷ್ಟು ದೊಡ್ಡವರಾದರೂ,

ಎಷ್ಟು ಹಣ ಗಳಿಸಿದರೂ…

ನಿಮ್ಮ ಬಾಲ್ಯವನ್ನು ಸುಂದರಗೊಳಿಸಿದ ತಾಯಿ–ತಂದೆಯರ

ಅಂತಿಮ ಪ್ರಯಾಣದಲ್ಲಿ ಜೊತೆ ನಿಲ್ಲುವುದನ್ನು ಎಂದಿಗೂ ಬಿಡಬೇಡಿ.

ಒಬ್ಬ ಒಳ್ಳೆಯ ವ್ಯಕ್ತಿ ಸತ್ತಾಗ ಒಂದು ಊರು ಅಲ್ಲ, ಒಂದು ತಲೆಮಾರು ಅಳುತ್ತೆ. ನಿಜ ಅಲ್ವಾ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ