ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ತಮ್ಮಲ್ಲಿ ಇಲ್ಲದುದರ ಬಗ್ಗೆ ವಿಪರೀತ ಅಹಂಕಾರ ಉಂಟಾಗಿ, ಒಣಪ್ರತಿಷ್ಠೆಗಾಗಿಯೋ ಅಥವಾ ಸ್ಟೇಟಸ್ ಗಾಗಿಯೋ ಬಡಿದಾಡುವ ದುಸ್ವಭಾವ ದಿನೇ ದಿನೇ ಹೆಚ್ಚಾಗುತ್ತಲಿದೆ. ತಮ್ಮಲ್ಲಿ ಜ್ಞಾನ, ತಿಳಿವಳಿಕೆ ಇಲ್ಲದಿದ್ದರೂ ಇದೆ ಎಂದು ಸಾಬೀತುಪಡಿಸುವ ಈ ಪರಿಗೆ ಏನು ಹೇಳುವುದು......?
ವಸ್ತ್ರ ಒಡವೆಗಳ ಮೂಲಕ ತಾವೇ ಶ್ರೀಮಂತರು ಎಂಬುದನ್ನು ತೋರಿಸುವ ಸ್ವಭಾವ, ಇಲ್ಲಸಲ್ಲದ ಒಣ ಪ್ರತಿಷ್ಠೆ ಮುಂದಕ್ಕೆ ದುರಂತವಾಗುತ್ತದೆ ಎನ್ನುವುದಕ್ಕೆ ಇದು ಅತ್ಯಂತ ಸೂಕ್ತ ದೃಷ್ಟಾಂತವಾಗಿದೆ. ಇಂತಹ ಋಣಾತ್ಮಕ ವಿಚಾರಗಳು ಅದೆಷ್ಟು ಮೂರ್ಖತನದಿಂದ, ಮೌಡ್ಯದಿಂದ ಅಷ್ಟೇ ಅಕ್ಕರೆ ತುಂಬಿದ ಪ್ರೀತಿಯಿಂದ ಕೂಡಿರುತ್ತವೆ ಎಂಬುದಕ್ಕೆ ಇದೊಂದು ಘನಘೋರ ಉದಾಹರಣೆ ಎಂದರೆ ತಪ್ಪಾಗಲಿಕ್ಕಿಲ್ಲ.
ರವಿ ಮತ್ತು ರಘು ಇಬ್ಬರೂ ಒಂದೇ ಶಾಲೆಯಲ್ಲಿ, ಒಂದೇ ತರಗತಿಯಲ್ಲಿಯೇ ಓದುತ್ತಿರುವ ಅಕ್ಕಪಕ್ಕದ ಮನೆಯ ಮಕ್ಕಳು. ಒಮ್ಮೆ ಶಾಲೆಯ ಪರೀಕ್ಷಾ ಫಲಿತಾಂಶಗಳು ಪ್ರಕಟಾದಾಗ ರವಿ ಎಲ್ಲಾ ವಿಷಯಗಳಲ್ಲೂ + ಶ್ರೇಣಿಯನ್ನು ಹಾಗೂ ರಘು A+ ಶ್ರೇಣಿಯನ್ನು ಪಡೆದುಕೊಳ್ಳುತ್ತಾರೆ.
ಫಲಿತಾಂಶ ಬರುತ್ತಿದ್ದಂತೆಯೇ ರವಿಯ ತಾಯಿ ಮಗನ ಪ್ರಗತಿ ಪತ್ರವನ್ನು ಓಣಿಯಲ್ಲೆಲ್ಲಾ ತೋರಿಸಿ ತುಂಬಾ ಅಹಂಕಾರ ಪಡುತ್ತಾ, ``ನನ್ನ ಮಗ ತುಂಬಾನೇ ಬುದ್ಧಿವಂತ! ಅವನು ಎಲ್ಲದರೂ + ಅಂಕ ತೊಗೊಂಡು ಪಾಸಾಗಿದ್ದಾನೆ,'' ಎಂದು ಹೇಳುತ್ತಾ ಹೋಗುತ್ತಾಳೆ.
ತದನಂತರದಲ್ಲಿ ರಘುವಿನ ತಾಯಿ ಕೂಡಾ ಅಷ್ಟೇ ಜಂಭದಿಂದ, ``ನಿನ್ನ ಮಗ A+ ಅಂಕ ಪಡೆದಿರಬಹುದೇನೋ ನಿಜ. ಆದರೆ ನನ್ನ ಮಗನ ರಕ್ತದ ಗುಂಪು ಮಾತ್ರ + ಇದೆ. ಹೀಗಾಗಿ ರವಿ ಈ ಒಂದು ಪರೀಕ್ಷೆಯಲ್ಲಿ ಮಾತ್ರ ಅದೇನೋ ಆಕಸ್ಮಿಕವಾಗಿ ಅದೃಷ್ಟಶಾತ್+ ತೊಗೊಂಡಿದ್ದಾನೆ. ಇದರಿಂದಾಗಿ ಮುಂದಿನ ಪರೀಕ್ಷೆಯಲ್ಲಿ ನನ್ನ ಮಗನೇ ಹೆಚ್ಚು ತೆಗೆದುಕೊಳ್ಳೋದು,'' ಎಂದು ರವಿಯ ತಾಯಿಗಿಂತಲೂ ಹೆಚ್ಚಾಗಿ ಪ್ರಚಾರ ಮಾಡಿ, ಆಕೆಯನ್ನು ಕಸಿವಿಸಿಗೊಳ್ಳುವಂತೆ ಮಾಡುತ್ತಾಳೆ.
ಇದರಿಂದಾಗಿ ಕೊತಕೊತ ಕುದಿಯುವ ಕೋಪದಲ್ಲಿ ತನ್ನ ಮಗ ರವಿಗೆ ಆಕ್ರೋಶವಾಗಿ, ``ಏ ರವಿ....! ಮುಂದಿನ ಸೆಮಿಸ್ಟರ್‌ಪರೀಕ್ಷೆಯಲ್ಲಿ ನೀನು ಹೇಗಾದ್ರೂ ಮಾಡಿ, ನಿನ್ನ ರಕ್ತ ಕೂಡಾ +ಗೆ ಪರಿವರ್ತನೆ ಆಗುವ ಹಾಗೆ ಪರೀಕ್ಷೆ ಬರೆಯಬೇಕು,'' ಎಂದು ಮತ್ಸರ ತುಂಬಿದ ಮೂರ್ಖತನದ ಪರಮಾವಧಿ ಮೀರಿದ ಭಾವದೊಂದಿಗೆ ರವಿಗೆ ಬಲವಾದ ಒತ್ತಡ ಹಾಕುತ್ತಾಳೆ.
ವಿಚಲಿತನಾದ ರವಿ ತನ್ನ ರಕ್ತದ ಗುಂಪು A+ ಆಗಿದೆ. ಹಾಗೆಯೇ ಪಕ್ಕದ ಮನೆ ಗೆಳೆಯನಾದ ರಘು ಕೇವಲ A+ ಶ್ರೇಣಿಯಲ್ಲಿ ಪಾಸಾಗಿದ್ದರೂ ಕೂಡ ಅವನ ರಕ್ತದ ಗುಂಪು ಮಾತ್ರ + ಆಗಿದೆ. ಇದು ಹೇಗಾಗಿರಬಹುದು ಎಂದು ಯೋಚಿಸುತ್ತಾ ಕೀಳರಿಮೆಗೆ ಜಾರುತ್ತಾನೆ.
ಸಾಕಷ್ಟು ಅಹಂಕಾರದಿಂದ ಮೆರೆಯುತ್ತಿದ್ದ ರವಿ ತಾಯಿಗೆ, ರಘುವಿನ ತಾಯಿ, ``ನಿಮ್ಮ ಮಗ ಎಷ್ಟೇ ಅಂಕ ತೊಗೊಂಡು, +ನಲ್ಲಿ ಪಾಸಾದ್ರೂ ಕೂಡ ನನ್ನ ಮಗನ ಹಾಗೆ ನಿಮ್ಮ ಮಗನ ದೇಹದಲ್ಲಿ + ರಕ್ತ ಹರಿಯುತ್ತಿಲ್ಲ. ಇದು ಆಕಸ್ಮಿಕವಾಗಿ ಬಂದಂತಹ ಫಲಿತಾಂಶ. ರಕ್ತದಲ್ಲಿ + ಇದ್ದರೆ ಜೀವನಪೂರ್ತಿ + ಶ್ರೇಣಿಯನ್ನು ಪಡೆಯಬಹುದು,'' ಎಂದು ಮಾರ್ಮಿವಾಗಿ ಟಾಂಗ್ ಕೊಟ್ಟು ಅಷ್ಟೇ ವ್ಯಂಗ್ಯವಾಗಿ ಮೂದಲಿಸುತ್ತಾಳೆ.





