ಬೆಂಗಳೂರಿನ ವಿಲ್ಸನ್ ಗಾರ್ಡನ್ ಸ್ಮಶಾನ. ಸಂಜೆ 4 ಗಂಟೆ. ಚಿತೆಗೆ ಕೊಳ್ಳಿ ಇಡೋ ಸಮಯ.
83 ವರ್ಷದ ರಾಮಪ್ಪ ಅವರು ನೆನ್ನೆ ತೀರಿ ಹೋಗಿದ್ದರು. ರಿಟೈರ್ಡ್ ಹೆಡ್‌ಮಾಸ್ಟರ್. ಊರಿಗೆಲ್ಲಾ 'ರಾಮಪ್ಪ ಮೇಷ್ಟ್ರು' ಅಂತಲೇ ಫೇಮಸ್. 38 ವರ್ಷ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ, ಸಾವಿರಾರು ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದವರು.
ಆದ್ರೆ ಇವತ್ತು ಅವರ ಅಂತ್ಯಸಂಸ್ಕಾರಕ್ಕೆ ಬಂದಿದ್ದು ಕೇವಲ 6 ಜನ. ಮಗಳು ಸುಮಾ, ಅಳಿಯ ಮೋಹನ್, ಇಬ್ಬರು ಮೊಮ್ಮಕ್ಕಳು, ಪಕ್ಕದ ಮನೆ ಶಂಕರ್, ಮತ್ತು ಪೇಪರ್ ಹಾಕೋ ಹುಡುಗ ರವಿ.
ಮಗ ವಿನಯ್? ಅವನು ಅಮೆರಿಕದಲ್ಲಿ. "ಡ್ಯಾಡ್ , ಐ ಕೆನಾಟ್ ಕಮ್ . ಪ್ರಾಜೆಕ್ಟ್ ಡೆಡ್ ಲೈನ್ . ಐ ವಿಲ್ ಅಟೆಂಡ್ ವಯಾ ಜೂಮ್ " ಅಂತ ಮೇಲ್ ಮಾಡಿದ್ದ.
ಸುಮಾ ಅಳುತ್ತಾ ಹೇಳಿದಳು: "ಅಪ್ಪ, ನಿಮ್ಮ ಮಗ ವೀಡಿಯೋ ಕಾಲ್‌ನಲ್ಲಿ ನೋಡ್ತಾನೆ. ಬೇಜಾರ್ ಮಾಡ್ಕೋಬೇಡಿ."
ಚಿತೆಗೆ ಕೊಳ್ಳಿ ಇಡೋಕೆ ಪುರೋಹಿತರು ಹೇಳಿದರು: "ಮಗ ಇಲ್ಲಾಂದ್ರೆ ಮಗಳು ಕೊಳ್ಳಿ ಇಡಬಹುದು."
ಸುಮಾ ಕೊಳ್ಳಿಯನ್ನು ಕೈಯಲ್ಲಿ ಹಿಡಿದಳು. ಕೈ ನಡುಗುತ್ತಿತ್ತು. ಆಗಲೇ ಸ್ಮಶಾನದ ಗೇಟ್ ಹತ್ರ ಗದ್ದಲ ಕೇಳಿಸಿತು.
ಸುಮಾರು 200 ಜನ ಸ್ಮಶಾನದ ಒಳಗೆ ಓಡಿ ಬಂದರು. ಎಲ್ಲರ ಕೈಯಲ್ಲಿ ಹೂವು, ಹಾರ. ಮುಂದೆ ಬಂದವನು 45 ವರ್ಷದ ವ್ಯಕ್ತಿ, ಪೋಲೀಸ್ ಯೂನಿಫಾರ್ಮ್‌ನಲ್ಲಿ - ACP ರುದ್ರ.
"ನಿಲ್ಲಿ! ಕೊಳ್ಳಿ ಇಡಬೇಡಿ!" ರುದ್ರ ಕೂಗಿದ.
ಎಲ್ಲರೂ ಶಾಕ್. ಸುಮಾ ಕೇಳಿದಳು: "ಯಾರು ನೀವು?"
ರುದ್ರ ರಾಮಪ್ಪ ಮೇಷ್ಟ್ರ ಕಾಲಿಗೆ ನಮಸ್ಕಾರ ಮಾಡಿದ. ಕಣ್ಣಲ್ಲಿ ನೀರು. "ಮೇಡಂ, ನಾನು ರುದ್ರ. 2005ನೇ ಬ್ಯಾಚ್. ನಿಮ್ಮ ಅಪ್ಪನ ಸ್ಟೂಡೆಂಟ್. ಇವರು ಇಲ್ಲಾಂದ್ರೆ ನಾನು ಇವತ್ತು ACP ಆಗ್ತಿರಲಿಲ್ಲ, ರೌಡಿ ಆಗ್ತಿದ್ದೆ."
ಹಿಂದೆ ಇದ್ದವರೆಲ್ಲ ಒಬ್ಬೊಬ್ಬರೇ ಮುಂದೆ ಬಂದರು.
ಡಾಕ್ಟರ್ ಸುಧಾ: "ನಾನು 10ನೇ ಕ್ಲಾಸಲ್ಲಿ ಫೇಲ್ ಆಗಿದ್ದೆ. ಮೇಷ್ಟ್ರು ದಿನಾ ಸಂಜೆ ಫ್ರೀ ಟ್ಯೂಷನ್ ಮಾಡಿ ಪಾಸ್ ಮಾಡಿಸಿದರು. ಇವತ್ತು ನಾನು ಸರ್ಜನ್."
IAS ಅಧಿಕಾರಿ ಮಂಜುನಾಥ್: "ನನ್ನ ತಂದೆ ಕುಡುಕ. ಸ್ಕೂಲ್ ಫೀಸ್ ಕಟ್ಟಿರಲಿಲ್ಲ. ಮೇಷ್ಟ್ರು ತಮ್ಮ ಸಂಬಳದಿಂದ ಕಟ್ಟಿದರು. 'ಮುಂದೆ ದೇಶ ಸೇವೆ ಮಾಡು' ಅಂದರು."
ಲಾಯರ್, ಇಂಜಿನಿಯರ್, ಟೀಚರ್, ಬಸ್ ಡ್ರೈವರ್, ಆಟೋ ಡ್ರೈವರ್, ಪ್ರಗತಿಪರ ರೈತ ಎಲ್ಲರೂ ಒಂದೇ ಮಾತು - "ಮೇಷ್ಟ್ರು ನಮಗೆ ದಾರಿ ತೋರಿಸಿದರು."
ರುದ್ರ ಹೇಳಿದ: "ಮೇಡಂ, ನಮಗೆ ಎರಡುವರೆಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಗೊತ್ತಾಯ್ತು. 'ರಾಮಪ್ಪ ಮೇಷ್ಟ್ರು ಇನ್ನಿಲ್ಲ' ಅಂತ. ಒಂದೂವರೆ ಗಂಟೆಯಲ್ಲಿ 200 ಜನ ಸೇರಿದ್ವಿ. ಇವರೆಲ್ಲ ಮೇಷ್ಟ್ರ ಮಕ್ಕಳು."
ಸುಮಾ ದಂಗಾದಳು. "ಅಪ್ಪ ಯಾವತ್ತೂ ಹೇಳಲಿಲ್ಲ..."
"ಹೇಳೋಲ್ಲ ಮೇಡಂ. ಮೇಷ್ಟ್ರು ಯಾವತ್ತೂ 'ನಾನು ಮಾಡಿದೆ' ಅಂತ ಹೇಳಲಿಲ್ಲ. ಸುಮ್ಮನೆ ಮಾಡ್ತಾ ಹೋದರು."
ಪುರೋಹಿತರು ಕೇಳಿದರು: "ಈಗ ಕೊಳ್ಳಿ ಯಾರು ಇಡೋದು?"





