ಮಂತ್ರಾಲಯದ ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ತೆರಳದ್ದ ಐದು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತುಂಗಭದ್ರಾ ನದಿಯಲ್ಲಿ ಬಲವಾದ ಪ್ರವಾಹಕ್ಕೆ ಸಿಲುಕಿ ಅವರು ಕೊಚ್ಚಿ ಹೋಗಿದ್ದಾರೆ ಎಂದು ಮಂತ್ರಾಲಯ ವೃತ್ತ ನಿರೀಕ್ಷಕ ದಸ್ತಗಿರಿ ತಿಳಿಸಿದ್ದಾರೆ. ಹೈದರಾಬಾದ್ನ ಸತೀಶ್ (35) ಯುವನ್ ಚಂದ್ರ (5), ಮಂತ್ರಾಲಯದ ರಾಘವೇಂದ್ರ (25) ಮತ್ತು ಧನು (23) ಮತ್ತು ಉರವಕೊಂಡದ ಸಂಧ್ಯಾ (22) ಮೃತಪಟ್ಟವರು ಎನ್ನಲಾಗಿದೆ.
ಕುಟುಂಬದ ಸುಮಾರು ಹತ್ತು ಸದಸ್ಯರು ಮತ್ತು ಸಂಬಂಧಿಕರು ಕುಟುಂಬದ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಸತ್ಯನಾರಾಯಣ ಪೂಜೆ ನೆರವೇರಿಸಲು ಮಂತ್ರಾಲಯಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.
ಬಾಲಕರ ಸಾವು: ಧಾರವಾಡದ ಸಿಂಗನಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಮಧ್ಯಾಹ್ನ ಮೂವರು ಬಾಲಕರು ಈಜಲು ಹೋಗಿದ್ದರು. ಈ ವೇಳೆ ಕೆರೆಯ ಮಧ್ಯಭಾಗ ಹೋಗಿದ್ದ ಬಾಲಕರು ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಅಬ್ಬಾಸ್ ವಟ್ನಾಳ್ (12), ಅಸ್ಲಂ ವಟ್ನಾಳ್ (10) ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸುಭಾನಿ ಬಾಗೋಜಿಕೊಪ್ಪ(10) ಮೃತಪಟ್ಟವರು ಎನ್ನಲಾಗಿದೆ.





